STOTRAGALU HAGU HAADUGALU

                               || हरी सर्वोत्तम: वायु: जीवोत्तम:||
                                        || श्री गुरुभ्यो नम: ||  
                                            
                             || इति श्री अप्पण्णाचार्यकृतं श्रीराघवेंद्रमंगळाष्टकं ||
श्रीमद्रामपदारविंदमधुपः श्रीमध्ववंशाधिपः
सच्छिष्योडुगणोडुपः श्रितजगद्गीर्वाणसत्पादपः ।
अत्यर्थं मनसा कृताच्युतजपः पापांधकारातपः
श्रीमत्सद्गुरुराघवेंद्रयतिराट् कुर्याद्ध्रुवं मंगलं ॥ १॥

कर्मंदींद्रसुधींद्रसद्गुरुकरांभोजोद्भव संततं
प्राज्यध्यानवशीकृताखिलजगद्वास्तव्यलक्ष्मीधवः ।
सच्छास्त्रादिविदूषकाखिलमृषावादीभकंठीरवः
श्रीमत्सद्गुरुराघवेंद्रयतिराट् कुर्याद्ध्रुवं मंगलं ॥ २॥

सालंकारककाव्यनाटककलाकाणादपातंजल
त्रय्यर्थस्मृतिजैमिनीयकवितासंगीतपारंगतः ।
विप्रक्षत्रविडंघ्रिजातमुखरानेकप्रजासेवितः
श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ३॥

रंगोत्तुंगतरंगमंगळकरश्रीतुंगभद्रातट
प्रत्यस्थद्विजपुंगवालयलसन् मंत्रालयाख्ये पुरे ।
नव्येंद्रोपलनीलभव्यकरसद्बृंदावनांतर्गतः
श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ४॥

 विद्वद्राजशिरः किरीटखचितानर्घ्योरुरत्नप्रभा
 रागाघौघहपादुकद्वयचरः पद्माक्षमालाधरः ।
 भास्वद्दंडकमंडलोज्वलकरा रक्तांबराडंबरः
 श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ५॥

 यद्बृंदावनसत्प्रदक्षिणनमस्काराभिषेकस्तुति
 ध्यानाराधन मृद्विलेपनमुखानेकोपचारान् सदा ।
 कारंकारमभिप्रयांति चतुरो लोकाः पुमर्थान् सदा
 श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ६॥

 वेदव्यासमुनीशमध्वयतिराट्टीकार्यवाख्यामृतं
 ज्ञात्वाद्वैतमतं हलाहलसमं त्यक्त्वा समाख्याप्तये ।
 संख्यावत्सुखदां दशोपनिषदां व्याख्यां समाख्यन्मुदा
 श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ७॥

 श्रीमद्वैष्णवलोकजालकगुरुः श्रीमत्परिव्राढ्भरुः
 शास्त्रे देवगुरुः श्रितामरतरुः प्रत्यूहगोत्रस्वरुः ।
 चेतोतीतशिरुस्तथा जितवरुः सत्सौख्यसंपत्करुः
 श्रीमत्सद्गुरुराघवेंद्रयतिराट् कुर्याद्ध्रुवं मंगलं ॥ ८॥

 यः संध्यास्वनिशं गुरोर्व्रतिपतेः सन्मंगलस्याष्टकं
 सद्यः पापहरं स्वसेविविदुषां भक्त्यैव बाभाषितं ।
 भक्त्या व्यक्ति सुसंपदं शुभपदं दीर्घायुरारोग्यकं
 कीर्तिं पुत्रकळत्रबांधवसुहृन्मूर्ति प्रयाति ध्रुवम् ॥ ९॥

॥ इति श्री अप्पण्णाचार्यकृतं श्रीराघवेंद्रमंगळाष्टकं संपूर्णं ॥

ಕನ್ನಡದಲ್ಲಿ
ಶ್ರೀಮದ್ರಾಮಪದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃ
ಸಚ್ಛಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ |
ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೧||

ಕರ್ಮಂದೀಂದ್ರಸುಧೀಂದ್ರಸದ್ಗುರುಕರಾಂಭೋಜೋದ್ಭವ ಸಂತತಂ
ಪ್ರಾಜ್ಯಧ್ಯಾನವಶೀಕೃತಾಖಿಲಜಗದ್ವಾಸ್ತವ್ಯಲಕ್ಷ್ಮೀಧವಃ |
ಸಚ್ಛಾಸ್ತ್ರಾದಿವಿದೂಷಕಾಖಿಲಮೃಷಾವಾದೀಭಕಂಠೀರವಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೨||

ಸಾಲಂಕಾರಕಕಾವ್ಯನಾಟಕಕಲಾಕಾಣಾದಪಾತಂಜಲ
ತ್ರಯ್ಯರ್ಥಸ್ಮೃತಿಜೈಮಿನೀಯಕವಿತಾಸಂಗೀತಪಾರಂಗತಃ |
ವಿಪ್ರಕ್ಷತ್ರವಿಡಂಘ್ರಿಜಾತಮುಖರಾನೇಕಪ್ರಜಾಸೇವಿತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೩||

ರಂಗೋತ್ತುಂಗತರಂಗಮಂಗಳಕರಶ್ರೀತುಂಗಭದ್ರಾತಟ
ಪ್ರತ್ಯಸ್ಥದ್ವಿಜಪುಂಗವಾಲಯಲಸನ್ ಮಂತ್ರಾಲಯಾಖ್ಯೇ ಪುರೇ |
ನವ್ಯೇಂದ್ರೋಪಲನೀಲಭವ್ಯಕರಸದ್ಬೃಂದಾವನಾಂತರ್ಗತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೪||

 ವಿದ್ವದ್ರಾಜಶಿರಃ ಕಿರೀಟಖಚಿತಾನರ್ಘ್ಯೋರುರತ್ನಪ್ರಭಾ
 ರಾಗಾಘೌಘಹಪಾದುಕದ್ವಯಚರಃ ಪದ್ಮಾಕ್ಷಮಾಲಾಧರಃ |
 ಭಾಸ್ವದ್ದಂಡಕಮಂಡಲೋಜ್ವಲಕರಾ ರಕ್ತಾಂಬರಾಡಂಬರಃ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೫||

 ಯದ್ಬೃಂದಾವನಸತ್ಪ್ರದಕ್ಷಿಣನಮಸ್ಕಾರಾಭಿಷೇಕಸ್ತುತಿ
 ಧ್ಯಾನಾರಾಧನ ಮೃದ್ವಿಲೇಪನಮುಖಾನೇಕೋಪಚಾರಾನ್ ಸದಾ |
 ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾಃ ಪುಮರ್ಥಾನ್ ಸದಾ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೬||

 ವೇದವ್ಯಾಸಮುನೀಶಮಧ್ವಯತಿರಾಟ್ಟೀಕಾರ್ಯವಾಖ್ಯಾಮೃತಂ
 ಜ್ಞಾತ್ವಾದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ |
 ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯನ್ಮುದಾ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೭||

 ಶ್ರೀಮದ್ವೈಷ್ಣವಲೋಕಜಾಲಕಗುರುಃ ಶ್ರೀಮತ್ಪರಿವ್ರಾಢ್ಭರುಃ
 ಶಾಸ್ತ್ರೇ ದೇವಗುರುಃ ಶ್ರಿತಾಮರತರುಃ ಪ್ರತ್ಯೂಹಗೋತ್ರಸ್ವರುಃ |
 ಚೇತೋತೀತಶಿರುಸ್ತಥಾ ಜಿತವರುಃ ಸತ್ಸೌಖ್ಯಸಂಪತ್ಕರುಃ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೮||

 ಯಃ ಸಂಧ್ಯಾಸ್ವನಿಶಂ ಗುರೋರ್ವ್ರತಿಪತೇಃ ಸನ್ಮಂಗಲಸ್ಯಾಷ್ಟಕಂ
 ಸದ್ಯಃ ಪಾಪಹರಂ ಸ್ವಸೇವಿವಿದುಷಾಂ ಭಕ್ತ್ಯೈವ ಬಾಭಾಷಿತಂ |
 ಭಕ್ತ್ಯಾ ವ್ಯಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ
 ಕೀರ್ತಿಂ ಪುತ್ರಕಳತ್ರಬಾಂಧವಸುಹೃನ್ಮೂರ್ತಿ ಪ್ರಯಾತಿ ಧ್ರುವಮ್ || ೯||

|| ಇತಿ ಶ್ರೀ ಅಪ್ಪಣ್ಣಾಚಾರ್ಯಕೃತಂ ಶ್ರೀರಾಘವೇಂದ್ರಮಂಗಳಾಷ್ಟಕಂ ಸಂಪೂರ್ಣಂ ||
SOURCE: "srsmutt.org" 

ಶ್ರೀ ಲಕ್ಷ್ಮೀನಾರಾಯಣ ಯತಿ (ಶ್ರೀ ಪಾದರಾಜರು) ವಿರಚಿತ ವಿಬುಧೇಂದ್ರ ಕರೋದ್ಭವ ಜಿತಾಮಿತ್ರರು
ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ||
ಬಂದ ದುರಿತಗಳ ಹಿಂದೆ ಆನಂದ ಪಡುವೆ ವಿಬುಧೇಂದ್ರ ಕರೋದ್ಭವರ ||ಅ.ಪ||

ರಘುಕುಲವರ ಪುತ್ರ ರಾಮನ ಚರಣ ಕರುಣಾಪಾತ್ರ|
ನಿಗಮೋಕ್ತಿಯ ಸೂತ್ರ ಪಾಠ ಪಠಿಸುವ ಸುಗುಣ ಜಿತಾಮಿತ್ರ||
ನಗಧರ ಶ್ರೀ ಪನ್ನಗಶಯನನ ಗುಣ |
ಪೊಗಳುವ ಅಪಾರ ಅಗಣಿತ ಮಹಿಮರ ||೧||

ವರಮಹಾತ್ಮೆ ತಿಳಿಸಿ ಮೊದಲಿಂದೀಪರಿಯಂದದಿ ಚರಿಸಿ|
ನಿರುತ ಮನವ ನಿಲಿಸಿ ಶ್ರೀಹರಿ ಕರಿ ವರದನ ಒಲಿಸಿ ||
ಧರೆ ಜನರಿಗೆ ಅರಿಯದೆ ಮರೆಯಾಗುತ |
ಹರುಷದಿ ಗೋನದ ತರುವಲ್ಲಿರುವರ ||೨||

ಮುದದಿ ಕೃಷ್ಣಾ ತಟಿಯ ಮಧ್ಯದಿ ಸದನದ ಈ ಪರಿಯ |
ಸತದಾಮಲ ಯತಿವರ್ಯ ತಪಮೌನದಲಿ ಇದ್ದು (ದ್ರುತ) ಕರಿಯ(ಕಾರ್ಯ) ||
ಒದಗಿ ನದಿಯು ಸೂಸುತ ಬರಲೇಳು ದಿನ-|
ಕುದಯಾದವರ ಸುಪದ ಕಮಲಂಗಳ ||೩||

ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ ಅಮಾವಾಸ್ಯ |
ದಾಸರು ಪ್ರತಿವರುಷ ಮಾಳ್ಪರು ಲೇಸೆನಲು ಶ್ರಿತಿಗೋಷ ||
ಕಾಶಿಯ ಕ್ಷೇತ್ರ ಈ ಸ್ಥಳ ಮಿಗಿಲೈ
ದಾಸರಿಗೆ ಈ ಭೂಸರಿ ಪದಂಗಳ ||೪||

ಮಧ್ವ ಶಾಸ್ತ್ರ ಗ್ರಂಥಸಾರದ ಪದ್ಧತಿ ತಿಳಿದಂಥ |
ಅದ್ವೈತ ಪಂಥ ಮುರಿದು ಮತ ಉದ್ಧರಿಸಿದಂಥ ||
ರುದ್ರವಂದ್ಯ ಮೂರುತಿ ರಂಗವಿಠಲನ ಪದ |
ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ ||೫|| 
  
|| ಶ್ರೀ ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||


ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್) 

ಧ್ಯಾನಮ್ -

 

ನೀಲಾಂಜನೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಃ ತ್ರಾಸಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮ ಸ್ಯಾತ್ ವರದಃ ಪ್ರಶಾಂತಃ || ೧ ||

ಬ್ರಹ್ಮೋವಾಚ -
ಶೃಣುಧ್ವಮೃಷಯಃ ಸರ್ವೇ ಶನೀಪೀಡಾ ಹರಂ ಮಹತ್ |
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ || ೨ ||

ಕವಚಂ ದೇವತಾವಾಸಂ ವಜ್ರಪಂಜರ ಸಂಜ್ಞಕಂ |
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ || ೩ ||

ಅಥ ಕವಚಮ್ -
ಓಂ ಶ್ರೀಶನೈಶ್ಚರಃ ಪಾತು ಭಾಲಂ ಮೇ ಸೂರ್ಯನಂದನಃ |
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ || ೪ ||

ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಿಃ ಸದಾ |
ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ || ೫ ||

ಸ್ಕಂಧೌಪಾತು ಶನಿಶ್ಚೈವ ಕರೌ ಪಾತು ಶುಭಪ್ರದಃ |
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ || ೬ ||

ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ |
ಊರೂ ಮಮಾಂತಕಃ ಪಾತು ಯಮೋ ಜಾನುಯುಗಂ ತಥಾ || ೭ ||

ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ |
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ಮೇ ಸೂರ್ಯನಂದನಃ || ೮ ||

ಫಲಶ್ರುತಿ -
ಇತ್ಯೇತತ್ಕವಚಂ ದಿವ್ಯಂ ಪಠೇತ್ ಸೂರ್ಯಸುತಸ್ಯಯಃ |
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ || ೯ ||

ವ್ಯಯ ಜನ್ಮ ದ್ವಿತೀಯಸ್ಥೋ ಮೃತ್ಯುಸ್ಥಾನಗತೋಽಪಿ ವಾ |
ಕಲತ್ರಸ್ಥೋ ಗತೋವಾಪಿ ಸುಪ್ರೀತಸ್ತು ಸದಾಶನಿಃ || ೧೦ ||

ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮ ದ್ವಿತೀಯಗೇ |
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ || ೧೧ ||

ಇತ್ಯೇತತ್ ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ |
ದ್ವಾದಶಾಷ್ಟಮ ಜನ್ಮಸ್ಥ ದೋಷಾನ್ನಾಶಯತೇ ಸದಾ |
ಜನ್ಮಲಗ್ನ ಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ || ೧೨ ||

 


|| ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದ ಸಂವಾದೇ ಶನಿವಜ್ರಪಂಜರಕವಚಮ್ ಸಂಪೂರ್ಣಮ್ || 

 

ಶ್ರೀಶನೈಶ್ಚರ ಕೃತ ನೃಸಿಂಹ ಸ್ತುತಿಃ

ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಮ್
ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ ||

ಶನೈಶ್ಚರಸ್ತತ್ರ ನೃಸಿಂಹದೇವ
ಸ್ತುತಿಂ ಚಕಾರಾಽಮಲಚಿತ್ತವೃತ್ತಿಃ |
ಪ್ರಣಮ್ಯಸಾಷ್ಟಾಂಗಮಶೇಷಲೋಕ
ಕಿರೀಟನೀರಾಜಿತಪಾದಪದ್ಮಮ್ ||

ಶ್ರೀಶನಿರುವಾಚ -
ಯತ್ಪಾದಪಂಕಜರಜಃ ಪರಮಾದರೇಣ
ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |
ಕಲ್ಯಾಣಕಾರಕಮಶೇಷನಿಜಾನುಗಾನಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧ ||

ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ
ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |
ಪಾದಾರವಿಂದಯುಗಲಂ ಪರಮಾದರೇಣ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೨ ||

ಯದ್ರೂಪಮಾಗಮಶಿರಃಪ್ರತಿಪಾದ್ಯಮಾದ್ಯ-
ಮಾಧ್ಯಾತ್ಮಿಕಾದಿಪರಿತಾಪಹರಂ ವಿಚಿಂತ್ಯಮ್ |
ಯೋಗೀಶ್ವರೈರಪಗತಾಽಖಿಲದೋಷಸಂಘೈಃ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೩ ||

ಪ್ರಹ್ಲಾದಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ |
ಊರ್ವೋರ್ನಿಧಾಯ ತದುದರೋ ನಖರೈರ್ದದಾರ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೪ ||

ಯೋ ನೈಜಭಕ್ತಮನಲಾಂಬುಧಿಭೂಧರೋಗ್ರ-
ಶೃಂಗಪ್ರಪಾತವಿಷದಂತಿಸರೀಸೃಪೇಭ್ಯಃ |
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೫ ||

ಯನ್ನಿರ್ವಿಕಾರಪರರೂಪವಿಚಿಂತನೇನ
ಯೋಗೀಶ್ವರಾ ವಿಷಯವೀತಸಮಸ್ತರಾಗಾಃ |
ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೬ ||

ಯದ್ರೂಪಮುಗ್ರಪರಿಮರ್ದನಭಾವಶಾಲಿ
ಸಂಚಿಂತನೇನ ಸಕಲಾಘವಿನಾಶಕಾರಿ |
ಭೂತಜ್ವರಗ್ರಹಸಮುದ್ಭವಭೀತಿನಾಶಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೭ ||

ಯಸ್ಯೋತ್ತಮಂ ಯಶ ಉಮಾಪತಿಪದ್ಮಜನ್ಮ-
ಶಕ್ರಾದಿದೈವತಸಭಾಸು ಸಮಸ್ತಗೀತಮ್ |
ಶಕ್ತ್ಯೈವ ಸರ್ವಶಮಲಪ್ರಶಮೈಕದಕ್ಷಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೮ ||

ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ |
ಉವಾಚ ಬ್ರಹ್ಮವೃಂದಸ್ಥಂ ಶನಿಂ ತಂ ಭಕ್ತವತ್ಸಲಃ ||

ಶ್ರೀನೃಸಿಂಹ ಉವಾಚ -
ಪ್ರಸನ್ನೋಽಹಂ ಶನೇ ತುಭ್ಯಂ ವರಂ ವರಯ ಶೋಭನಮ್ |
ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ ||

ಶ್ರಿಶನಿರುವಾಚ -
ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿ ಕರಸ್ಸ್ಯಾದ್ದೇವತಾಪತೇ ||

ಮತ್-ಕೃತಂ ತ್ವತ್ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ |
ಸರ್ವಾನ್ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ ||

ಶ್ರೀನೃಸಿಂಹ ಉವಾಚ -
ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ |
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||

ತ್ವತ್ಕೃತಂ ಮತ್ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ |
ದ್ವಾದಶಾಷ್ಟಮಜನ್ಮಸ್ಥಾತ್-ತ್ವದ್ಭಯಂ ಮಾಸ್ತು ತಸ್ಯ ವೈ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |
ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ ||

ಶ್ರೀಕೃಷ್ಣ ಉವಾಚ -
ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವ-
ಸಂವಾದಮೇತತ್-ಸ್ತವನಂ ಚ ಮಾನವಃ |
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಭೀಷ್ಟಾನಿ ಚ ವಿಂದತೇ ಧ್ರುವಮ್ ||

 

|| ಇತಿ ಶ್ರೀಭವಿಷ್ಯೋತ್ತರಪುರಾಣೇ ರಕ್ಷೋಭುವನಮಾಹಾತ್ಮ್ಯೇ ಶನೈಶ್ಚರಕೃತಂ ನೃಸಿಂಹಸ್ತೋತ್ರಂ ಸಂಪೂರ್ಣಮ್

ಯಾಕೆ ಹೀಗೆ ನುಡಿಸಿದೇ ಗುರುವೇ ? 

ಯಾಕೆ ಹೀಗೆ ನುಡಿಸಿದೆ ಗುರುವೇ

ನಿನ್ನಯ ದರುಶನ ನೀಡೋ ದೊರೆಯೇ । 

ಮೂಲರಾಮನ ಪೂಜಿಪ ಯತಿಯೇ 

ಮಂತ್ರಮಂದಿರದಲಿ ನೆಲೆಸಿಹ ಪ್ರಭುವೇ ।। 

 

                     ಪರಿ ಪರಿ ಬೇಡಿದೆ ನಿನ್ನಯ ದರುಶನ 

                     ಸಂದರುಶನಕಾಗಿ ತ್ಯಜಿಸುವೆ ಸುಖ-ಶಯನ ।

                    ಉರಗಶಯನ ಶ್ರೀಮನ್ಮೂಲರಾಮನ 

                    ದರುಶನ ಕರುಣಿಸೋ ರಾಯ-ರಾಘವೇಂದ್ರ ।। 

ಚಾತುರ್ಮಾಸ್ಯದಿ ಕುಳಿತಿಹ ಯತಿವರರು 

ಸುಯತೀಂದ್ರತೀರ್ಥರೊಡನೆ ಸುಬುಧೇಂದ್ರ ತೀರ್ಥರು । 

ವ್ಯಾಸತೀರ್ಥರ ಲಕ್ಷ್ಮೀಂದ್ರರು ಜೊತೆಗಿರಲು 

ವಿಶ್ವೇಶಗುರುಪ್ರಿಯರು ದರುಶನ ಮಾಡುತಿರಲು ।। 

                                ಚಾತುರ್ಮಾಸ್ಯದ ಪರ್ವಕಾಲದಲಿ ನಿನ್ನಯ 

                                ದರಶನಾಕಾಂಕ್ಷೆಯು ಎದೆಯೊಳಗೂರಿರಲು ।

                               ಸಪ್ತಮುನಿಗಳು ಕೈ ಬೀಸಿ ಕರೆಯುತಿರಲು 

                               ಕರೆದೊಯ್ಯೋ ಎನ್ನ ಮಧ್ವವಲ್ಲಭಪ್ರಿಯನೇ ।।

 

 

 

 

 

 

ಸುಶಮೀಂದ್ರ ಕರಕಮಲ ಸಂಜಾತ

ಸುಶಮೀಂದ್ರ ತೀರ್ಥರ  ಕರಕಮಲ ಸಂಜಾತರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠದ ಅಧಿಪತಿಗಳಾಗಿ ಹಲವು ಕಾಲ ಬ್ರಹ್ಮ ಕರಾರ್ಚಿತ ಶ್ರೀ ಮನ್ಮೂಲರಾಮನ ಪಾದ ಕಮಲಗಳನ್ನೂ ವಂದಿಸಿ ಈಗ ಪರಮ ವೈರಾಗ್ಯವನ್ನು ಹೊಂದಿದ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರ ಮೇಲೆ ನಮ್ಮ ಸ್ನೇಹಿತರಾದ ಶ್ರೀ ಶ್ರೀಕಾಂತ ಕುಲಕರ್ಣಿ ಎಂಬುವರು ಒಂದು ಸುಂದರ ಅರ್ಥಪೂರ್ಣ ಪದ್ಯ ರಚಿಸಿದ್ದಾರೆ ಅದನ್ನು ನೋಡಿ ಮಾಧ್ವ ಬಂಧುಗಳೆಲ್ಲರೂ  ಆನಂದಿಸಿ . 

|| ಶ್ರೀ ||
ಗುರು ಸುವಿದ್ಯೇಂದ್ರರ  ಸ್ಮರಿಸಿದ ನರರಿಗೆ ಪರಮಮಂಗಳವಹುದೋ ||ಪ||
ಸಿರಿರಮಣನ ಚರಣ ಸರಸಿಜದಲಿ ಮನ ಇರಿಸಿ ಎಮ್ಮನು ಪರಮ ಕರುಣೆಯಿಂದಲಿ ಪೋರೆವ ||ಅ. ಪ ||

ಶುದ್ಧ ವೈಷ್ಣವರಾದ ತುಂಗಾ ರಾಮಾರ್ಯರ ಮುದ್ದು ಮಗನಾಗಿ ಜನಿಸಿ |
ಪದ್ಧತಿ ತಿಳಿಯುತ್ತ ಶುದ್ಧ ಮನಸಿನಿಂದ ಮಧ್ವರಾಯರ ಮತ ನಿರುತದಿ  ಸ್ಮರಿಸುತ್ತ
ಉದದಿನಂದನನಂತೆ ಹೊಳೆಯುತ ಇಂದುಕ್ಷೇತ್ರದ ಮಠ ಕೆ ಪೋಗಿ
ಸುಧಾದಿ ಗ್ರಂಥಗಳನೆ ಪೇಳುತ ಮುದದಿ ಶಿಷ್ಯಾದಿವರ್ಗಕೆ || ೧ ||
ದಶಾರ್ಧ ಮುಖ ಪಿತನ ಪಿತನ ಗುಣಗಳನ್ನು ಲೇಸಾಗಿ ಸ್ಮರಿಸುತ್ತಿರಲು
ಆಸಮಯದಿ ಗುರು ಸುಶಮಿಂದ್ರ ತೀರ್ಥರು ಧಾ-
ವಿಸಿ ತಾವ್ ಬಂದು ಯತ್ಯಶ್ರಮ ನೀಡಲು
ಸಾರಸಂಸಾರವನು ಕಡೆದು ಪ್ರಿತಿಯಿಂ ರೆನುತ ಸುವಿದ್ಯೇಂದ್ರ  

  1. ದಾಶರಥಿ ಪ್ರೀತಿಗೊಸುಗ ದಾಸ್ಯವನು ನೀಡಿದರು ||೨||

    ಬೆಳಗಿನ ಜಾವದಲಿ ನಳಿನನಾಭಗೆ ಅರ್ಘ್ಯ
    ಘಳಿಗೆ ಮಿರದಲೇ ನೀಡಿ
    ಜಲಜ ಸಂಭವ ಪಿತಗೆ ಪೂಜೆಯ ಮಾಡುತ್ತ
    ಒಲುಮೆಯಿಂದಲಿ ಭಾಗವತವನ್ನು ಪೇಳುತ್ತ
    ನೀಲವರ್ನನಾದ ಹರಿಯ ಮಹಿಮೆಯನ್ನು ತಿಳಿಸಿಹೇಳಿ ಭವದ
    ಜಾಲವ ದೂರ ಮಾಡುವ ಅಭಿನವ ಶುಕಾಚಾರ್ಯರಿವರು||೩||

    ವೇಣಿಭೆಷಪುರಧಿಷರ ಅನುಗ್ರಹದಿ ದಿನಮಣಿ ವಂದ್ಯನ ಪೂಜಿಸಿದರು
    ತನುಭವ ನಂದದಿ ಶಿಷ್ಯ ವರ್ಗವ ಸಲುಹಿ
    ಮಾಣದೆ ಪೂರೆಯುತ್ತ ದೀನವತ್ಸಲರಾಗಿ
    ಕ್ಷೋಣಿಯೊಳಗೆ ಚರಿಸಿ ಹರುಷದಿ ಪಾವನ ಮತವನ್ನು ಸಾರಿ
    ಕ್ಷೋಣಿಜಾತೆಯಪತಿಯ ಮೂರ್ತಿಯ ಕಾಣುತ ಸಂತೋಷ ಪಡುವ||೪||

    ಗುರುರಾಘವೇಂದ್ರರ ಕರುಣಾ  ಪಾತ್ರರು ಎನಿಸಿ
    ಎರಡೊಂದು ಮಾರ್ಗವ ಹಿಡಿದುಕೊಂಡು
    ಕೊರಿದವರ ಬಳಿಗೆ ಧಾವಿಸಿ ತಾವ್ ಬಂದು
    ವರಗಳ ಗೆರೆವರು ಬಾಧೆಯ ಕಳೆವರು
    ಸಿರಿವರ ಶ್ರೀಕಾಂತವಿಠಲ ನ ಚರಣ ಕಮಲಕೆ ಶಿರವ ಬಾಗಿ
    ಕರುಣದಿಂದ ಎಮ್ಮ ಪೋರೆಯಲು ಧರೆಗೆ ಬಂದ ಮಹಾಮಹಿಮರಿವರು||೫||

    - ಯಥಾಶಕ್ತಿ ರಚಿತ

 

 

 

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...