Thursday 10 January 2013

ಈ ಬ್ಲಾಗಿನ ೧೦೦ ನೆ ಪೋಸ್ಟ್ ಅನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ , ರಾಯರ ಪೂರ್ವಿಕ ಗುರುಗಳಾದ ಶ್ರೀ ಜಿತಮಿತ್ರ ತೀರ್ಥ ರ ಬಗೆಗೆ ಬರೆಯುತ್ತೇನೆ ಎಂದು ಹೇಳಳು ಖುಷಿಯಾಗುತ್ತದೆ .. ಇದು ೧೦೦ ನೆ ಪೋಸ್ಟ್ .. ಒಟ್ಟು ೩೦೦೦ ಜನ ಬ್ಲಾಗ್ ಗೆ ವಿಸಿಟ್ ಮಾಡಿದ್ದಾರೆ .. :)  Thank  you one and all ..

            ಶ್ರೀ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರು 
          ಇಂದು ಶ್ರೀ ವಿಬುಧೇಂದ್ರ ಕರೋದ್ಭವ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ.. ಅದರ ಪ್ರಯುಕ್ತ ಈ ಲೇಖನ .. 

          ಶ್ರೀ ಜಿತಾಮಿತ್ರರು ರುದ್ರಾಂಶ ಸಂಭೂತರು . ಇವರ ಪವಾಡಗಳು ಅನೇಕ . ಇದಕ್ಕೆ ಇವರು ನೆಲೆಸಿದ ವೃಕ್ಷವೆ ಸಾಕ್ಷಿ ( ಶ್ರೀಗಳ ವೃಂದಾವನ ಇಲ್ಲ ) . ಶ್ರೀ ಜಿತಾಮಿತ್ರ ತೀರ್ಥ ರು ಪಾಠದಲ್ಲಿ ತೊಡಗಿದಾಗ ರುದ್ರ ದೇವರು ಜಂಗಮನ ರೂಪದಲ್ಲಿ ಬಂದು ಕೂಡುತ್ತಿದ್ದರಂತೆ. ಇದಕ್ಕೆ ಶಿಷ್ಯರ ಆಕ್ಷೇಪ ಬಂದಿತಂತೆ .ಅದಕ್ಕೆ ಶ್ರೀಗಳು "ಸಮಯ ಬಂದಾಗ ಉತ್ತರಿಸುತ್ತೇವೆ ಈಗ ಆತ ಬರಲಿ" ಎಂದರಂತೆ .ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಜಂಗಮ ತಡವಾಗಿ ಬಂದರೂ ಆತ ಬಂದ ರೀತಿ ವಿಚಿತ್ರವಾಗಿತ್ತು . ಆತ ಒಂದು ವಸ್ತ್ರವನ್ನು ಹಾಸಿ ಅದರ ಮೇಲೆ ತೇಲುತ್ತ ಶ್ರೀಗಳ ಸನ್ನಿಧಾನಕ್ಕೆ ಬಂದಿದ್ದ !! .
ಶ್ರೀ ಗಳವರು ಸನ್ಯಾಸಾಶ್ರಮ ಸ್ವೀಕರಿಸಿದ್ದೆ ವಿಚಿತ್ರ . ಅನಂತಪ್ಪ ವಿಬುಧೆಂದ್ರರ ಶಿಷ್ಯನಾಗಿದ್ದು ದೈವಬಲದಿಂದಲೇ ಸರಿ . ವಿಬುಧೆಂದ್ರ ತೀರ್ಥರು ಈತನಿಗೆ ನರಸಿಂಹ ಸಾಲಿಗ್ರಾಮದಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ನರಸಿಂಹ ಸಾಲಿಗ್ರಾಮದ ಅಗಲವಾದ ಬಾಯಿಯಲ್ಲಿ ಅನ್ನವನ್ನು ತುರುಕಿ ದೇವರು ನನ್ನ ನೆವಿದ್ಯವನ್ನು ಸ್ವೀಕರಿಸಲಿಲ್ಲ ಎಂದು ಬಹಳವಾಗಿ ಅನಂತಪ್ಪ ಕೊರಗಿದನಂತೆ . ಆಮೇಲೆ " ನೀನು ಇದನ್ನು ಸ್ವೀಕರಿಸದಿದ್ದರೆ ನಾನು ನನ್ನ ತಲೆಯನ್ನು ಗುಂಡುಕಲ್ಲಿಗೆ ಚಚ್ಚಿಕೊಳ್ಳುತ್ತೇನೆ ಎಂದು ಹೇಳಿದನಂತೆ . ಆಗ ಅಲ್ಲಿದ್ದ ಅನ್ನವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತಂತೆ .!! . ನಂತರ ಮಧ್ವರ ಶಾಸ್ತ್ರಗಳನ್ನು ಶ್ರೀ ವಿಬುಧೆಂದ್ರ ತೀರ್ಥರಲ್ಲಿ ಅಧ್ಯಯನ ಮಾಡಿ ಸನ್ಯಾಸ ಸ್ವೀಕರಿಸಿ ಶ್ರೀ ಜಿತಾಮಿತ್ರ ತೀರ್ಥರು ಎಂದು ಪ್ರಸಿದ್ಧರಾದರು .
ಶ್ರೀ ಗಳು ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಧ್ಯಾನಾಸಕ್ತರಾಗಿದ್ದರಿಂದ ಹೊರಬರದೇ ಅಲ್ಲಿಯೇ ಏಳು ದಿನಗಳ ಕಾಲ ಇದ್ದರು . ಮುಂದೆ ಶಿಷ್ಯರೆಲ್ಲರೂ ದು:ಖ ತಪ್ತರಾಗಿ ಮರಳಿದಾಗ ಶ್ರೀಗಳು ಇನ್ನು ಧ್ಯಾನಾವಸ್ಥೆಯಲ್ಲಿಯೇ ಇದ್ದದ್ದನ್ನು ನೋಡಿ ಶ್ರೀಗಳ ತಪ ಶಕ್ತಿ ಎಂತಹುದು ಎಂಬುದನ್ನು ಮನಕಂಡರಂತೆ. ಮುಂದೆ ಮತ್ತೊಮ್ಮೆ ಪ್ರವಾಹ ಬಂದಾಗ ಶ್ರೀಗಳು ಅದೃಶ್ಯರಾಗಿ " ನಾವು ಇಲ್ಲಿಯೇ ಚಿರಕಾಲ ನೆಲೆಸುತ್ತೇವೆ . ನಮ್ಮ ವೃಂದಾವನ ಕಟ್ಟುವ ಅವಶ್ಯಕತೆ ಇಲ್ಲ . ಇಲ್ಲಿಯೇ ನಾವು ಕುಳಿತುಕೊಳ್ಳುತ್ತಿದ್ದ ಗೋಂದಿನ ಮರದಲ್ಲಿಯೇ ನಿಮ್ಮ ಸನ್ನಿಧಾನ ಇರುತ್ತದೆ .ಇಲ್ಲಿಯೇ ನಮ್ಮ ಆರಾಧನಾದಿಗಳು ನೆರವೇರಲಿ ಎಂದು ಹೇಳಿದರಂತೆ . " . ಅಂದಿನಿಂದ ಇಂದಿನವರೆಗೂ ಆ ಮರಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಪೂಜೆ ನಡೆಯುತ್ತಿದೆ .
ಶ್ರೀಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ರಾಯರ ಮಠದ ಯತಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಶ್ರೀ ಜಿತಾಮಿತ್ರರ ಸನ್ನಿಧಿಗೆ ಆರಾಧಾನೆಗಾಗಿ ಹೋದಾಗ ಅಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ಭೈರಾಗಿಯ ರೂಪದಲ್ಲಿ ಜಿತಾಮಿತ್ರರ ದರ್ಶನ ವಾಯಿತೆಂದು ಅವರೇ ಮುಂದೆ ಗರ್ಭಗುಡಿಗೆ ಹೋಗಿ ಅದೃಶ್ಯರಾದರೆಂದು , ಇದನ್ನು ಶ್ರೀಗಳು ಕಂಡರೆಂದು ಹೇಳುತ್ತಾರೆ . ಇವರ ಅಸ್ತಿತ್ವದ ಮನವರಿಕೆ ಅನೇಕ ರಾಯರ ಮಠದ ಪೀಠಾಧಿಪತಿಗಳಿಗೆ ಆಗಿದೆ .
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಈ ಹಿಂದಿನ ಪೀಠಾಧಿಪತಿಗಳು , ಮಹಾ ವಿರಕ್ತರು , ತಪಸ್ವಿಗಳು , ನಡೆದಾಡುವ ರಾಯರು ಎಂದೇ ಪ್ರಸಿದ್ಧ ರಾಗಿದ್ದ ಪರಮ ಪೂಜ್ಯ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರಿಗೆ " ಅಭಿನವ ಜಿತಾಮಿತ್ರ " ತೀರ್ಥರು ಎಂಬ ಬಿರುದಿದೆ . ಒಂದು ಬಾರಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಿಗೆ ಆರಾಧನಾ ಉತ್ಸವಕ್ಕೆ ಹೋಗಿದ್ದರು. ಅಲ್ಲಿ ಶ್ರೀಗಳು ಶ್ರೀಮನ್ ಮೂಲ ರಾಮದೇವರಿಗೆ ಸಕಲವಿಧವಾದ ಪೂಜೆ ನಡೆಸಿ ಗುರುಗಳಿಗೆ ಹಸ್ತೋದಕ ನೀಡುತ್ತಿದ್ದ ಸಂದರ್ಭದಲ್ಲಿ ಅಲಂಕಾರ ಸಮೇತ ಇದ್ದ ಜಿತಾಮಿತ್ರರ ಸನ್ನಿಧಾನ ಉಳ್ಳ ಗೋಂದಿನ ಮರದಿಂದ ಒಂದು ಹೂವು ಶ್ರೀಗಳವರ ಕೊರಳಿಗೆ ತನ್ನಿಂದ ತಾನೇ ಬಿದ್ದಿತು . ಶ್ರೀಗಳವರು ಆನಂದ ಭಾಷ್ಪ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ . ಈ ಘಟನೆ ನಡೆದದ್ದು ತೀರ ಇತ್ತೀಚಿಗೆ ಅಂದರೆ 1945 ನೆಯ ಇಸವಿಯಲ್ಲಿ ..!

Saturday 5 January 2013

Sriman Madhwacharya Moola Maha Samsthana Sri Raghavendra Swamy Matha, Mantralayam is well known for encouraging scholars and conducting various programmes to provide a platform for these scholars. The Matha regularly conducts Knowledge-based programmes at Mantralaya and also at its various branches spread across the country. One such programme which is also very popular among scholars is the Srimath Sameera Samaya Samvardhini Sabha. The credit of regularizing this
as an annual programme goes to Sri Susheelendra Teertha of the Matha (1912-1926).
Sameera means Vayu (Mukhyaprana) and Samaya means The Doctrines. The title itself explains the significance of The Sabha. The most prominent task of the Sabha is to strengthen the scriptural knowledge by more discussions amongst scholars and thereby churning out of knowledge.  
The Sabha was holding programmes at Mantralaya annually from the period of Sri Susheelendra Teertha to Sri Suyameendra Teertha, however, during the period of Sri Sujayeendra Teertha (well known as the Architect of Modern Mantralaya), the Sabha started having two conferences annually, one at Mantralaya and another at any other part of the country. The highlighting factor here was that the Sabha would invite followers and scholars of other traditions and philosophies too and a more detailed discussion would take place as a result of this. All the scholars then would be handsomely rewarded with remuneration and prizes helping to preserve the Vedic tradition alive for long.  
His Holiness Sri Sushameendra Teertharu (1984-2008) bags the credit of hosting the Sabha very efficiently at Vijayawada, Hyderabad, Bangalore, Hosaritti, Raichur, Srirangam, Kumbakonam, Madurai, Hubli and Pune. Sri Suyateendra Sripadaru has taken this tradition forward by increasing the value and volume of the remuneration, thereby encouraging more young scholars to participate actively in these activities.
There is a very cordial relationship between Sri Sode Vadiraja Matha and Sri Raghavendra Swamy Matha, Mantralaya. This relation was built up right from the time of Sri Madhwacharya and was strengthened during the period of Sri Vadiraja Teertha (of Sri Vishnu Teertha’s lineage) and Sri Vijayeendra Teertha (of Sri Padmanabha Teertha’s lineage). During Sri Vijayeendra Teertha’s Udupi Yatra, the then Paryaya Swamiji Sri Vadiraja Teertha gifted him land right in front of the Sri Krishna temple to construct a Matha. In the beginning of the 19th century Sri Susheelendra Teertha Swamiji constructed Matha here and consecrated Mrittika Vrindavana with the cooperation of Sri Vibhudapriya Teertha of Admar matha.
Previously, during the Paryaya period of Sri Vishwothama Teertha of Sode Matha (1980-82), one conference of the Sabha was held at Udupi by Sri Sujayeendra Teertha. While having such a significant history now the conference is again arranged at Udupi by Sri Suyateendra Teertharu in association with the Paryaya Swamiji Sri Vishwavallabha Teertha Swamiji of Sri Sode Vadiraja Matha, Udupi, who is also the disciple of Sri Vishwothama Teertharu. Thousands of Scholars in Dwaita Vedanta from all over the country are expected to participate in this Sabha.
The Sabha will be held (Scholarly discussion based conference) from 5th Jan 2013 to 7th Jan 2013 at Rajangana, Sri Krishna Matha, Udupi in association with Paryaya Sri Sode Vadiraja Matha, Udupi.
Highlights
  1. As a token of the friendship between Sri Vadiraja Teertha and Sri Vijayeendra Teertha the Programme hall has been named as “Sri Vadiraja- Vijayeendra Vedike”
  2. With a view to encourage Nyaya Sudha Scholars the Matha plans to honor 100 Sudha Pandits of Udupi region during this Sabha. The Matha would confer Sri Vadiraja-Vijayeendra Award on them. The award consists of a silver medallion which has Sri Vadiraja and Sri Vijayeendra Swamiji, certificate,Shawl, and a cash prize of Rs 5,000 along with Phala Mantrakshathe.
  3. Leading scholars, Prof. Hayavadana Puranik (Udupi), Prof. D. Prahladacharya (Bangalore), Prof. A. Haridas Bhat (Bangalore), Dr. Atmakooru Anandateertha Acharya (Atmakooru, Andhra Pradesh), and Vidwan Subrahmanya (Mantralaya) will be honored with a golden bracelet as a recognition for their life time achievements in Dwaita philosophy.
  4. Students of Sri Guru Sarvabhouma Vidyapetha Mantralaya will enact a beautiful play titled “Historic Krishna Darshana” on 5th Jan 2013 evening in remembrance of Sri Vijayeendra Teertha getting the darshan of Lord Shri Krishna through Sri Vadiraja Swami.
  5. For the purpose of getting blessed by the Lord and for peace in the universe “ Dhanavantri Homa” will be held on 6th Jan 2013 (4.00 am to 8.30 am) with all 72 Moola mantras specified by Shri Madhwacharya.
  6. There will be a Yakshagana Thalamaddale by Sudha pundits of “Yoga Gurukula” on 6th Jan 2013 (evening) titled “Bheema Vijaya”.
Prior to this the Mantralaya Shri will be arriving to Udupi on 4th Jan 2013 at 4.30 pm and a procession has been organized to welcome Shri from Jodukatte. More than one thousand devotees are expected to participate in this procession.
The following is the schedule of the entire programme.
05.01.2013 (Morning)
10.45 am: Lord Sri Vedavyasa’s procession in the Golden Charriot on Car Street
11.30 am: Inauguration of the Sabha programme by all Madhwa Matha Peethadipathis present.
5th Jan to 7th Jan 2013  
Morning 10.45 am to 1.30 pm: First Session  
Evening 4.00 pm to 6.00 pm: Second Session  
Evening 6.00 pm Onwards: Honoring the scholars and Invitees followed by Cultural programme.
 
ಭವ್ಯ ಮೆರವಣಿಗೆ ಉಡುಪಿ

ಶ್ರೀಸೋದೆ ವಾದಿರಾಜರ ಪೀಠ ವಿರಾಜಮಾನರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ಹಾಗು ಶ್ರೀ ರಾಯರ ಪೀಠ ವಿರಾಜಮಾನರಾದ ಶ್ರೀ ಸುಯತೀಂದ್ರ ತೀರ್ಥರು ಕೃಷ್ಣನ ದರ್ಶನ ಮಾಡುತ್ತಿರುವದು .. ಪ್ರಸ್ತುತ ಸಮೀರ ಸಮಯ ಸಂವರ್ಧಿನಿ ಸಭಾ ಶ್ರೀ ವಿಜಯೀಂದ್ರ ತೀರ್ಥರ ಉಡುಪಿಯ ದಿಗ್ವಿಜಯ ಯಾತ್ರೆಯ ಸಾಂಕೇತಿಕ ದರ್ಶನ..  ಇದು ವಾದಿರಾಜ-ವಿಜಯೀಂದ್ರರ ಸ್ನೇಹ ಸಮ್ಮಿಲನ.. ಈ ಇಬ್ಬರು ಗುರುಸರಭೌಮರ ಕಾರಣದಿಂದ ವಾದಿರಾಜ-ವಿಜಯೀಂದ್ರ ಮಠಗಳ ಸ್ನೇಹ ಯಾತ್ರೆ ಇಂದಿಗೂ ಮುಂದು ವರೆದಿದೆ..  ಈ ಹಿಂದೆ ಶ್ರೀ ರಾಘವೇಂದ್ರರ ಪರಮ ಗುರುಗಳಾದ ಶ್ರೀ ವಿಜಯೀಂದ್ರ ತೀರ್ಥರು ಉಡುಪಿಗೆ ಕೃಷ್ಣ ದರ್ಶನಾರ್ಥಿಗಳಾಗಿ ಸಂಚಾರತ್ವೆನ ದಿಗ್ವಿಜಯ ಕೈಗೊಂಡಿದ್ದರು. ಅಂದು ಉಡುಪಿ ಗ್ರಾಮದ ಎಲ್ಲೆಯಿಂದ ಪ್ರಾರಂಭಿಸಿ ಉಡುಪಿಯ ಕೃಷ್ಣ ಮಠದ ವರೆಗೆ ಹಸಿರು ಚಪ್ಪರಗಳನ್ನು,ತಳಿರು ತೋರಣಗಳನ್ನೂ ಹಾಕಲಾಗಿತ್ತು ... ಉಡುಪಿಯು ಪರ್ಯಾಯ ಮಹೋತ್ಸವಕ್ಕೆ ಸಜ್ಜಾದಂತೆ ತೋರುತ್ತಿತ್ತು.. ಕಾರಣ ಶ್ರೀ ಭಾವಿಸಮೀರ ವಾದಿರಾಜ ಯತಿಶ್ವರರ ಪರಮಾಪ್ತ ಮಿತ್ರರೊಬ್ಬರು ಉಡುಪಿಗೆ ಆಗಮಿಸುತ್ತಿದ್ದರು .. ಆಗ ನಡೆದ ಮೆರವಣಿಗೆಯಲ್ಲಿ ಆನೆ , ಕುದುರೆ , ಒಂಟೆ , ಮೂಲ ರಾಮನಿಗಾಗಿ  ಸ್ವರ್ಣಮಯ ಪಲ್ಲಕ್ಕಿ , ಛತ್ರ-ಚಾಮರಗಳು ಎಲ್ಲವೂ ಇದ್ದವು .. ಇಡೀ ಉಡುಪಿಯಾ ಪಂಡಿತೊತ್ತಮರೆಲ್ಲರೂ ಶ್ರೀಗಳನ್ನು ಸ್ವಾಗತಿಸಲು ವೇದ-ಘೋಷಗಳೊಡನೆ ಹೊರಟರು.. ಉಡುಪಿ ಗ್ರಾಮಸ್ಥರೆಲ್ಲ ವಾದಿರಾಜರ ಪ್ರಿಯಮಿತ್ರ , ಶತಾಧಿಕ ಗ್ರಂಥರತ್ನ ಪ್ರಣೆತ ವಿಜಯೀಂದ್ರ ರ ದರ್ಶನ ಪಡೆಯಲು ಉತ್ಸುಕರಾಗಿದ್ದರು .. ವಿಜಯೀಂದ್ರ ಸ್ವಾಮಿಗಳು ಆಗಮಿಸಿ ಪಲ್ಲಿಕ್ಕಿ ಯಲ್ಲಿ ಆರೂಢರಾಗಿ ಹೊರಟರೆ ದೇವೇಂದ್ರ ವಿಮಾನಾರೂಢನಾಗಿ ಹೊರತಿದ್ದನೋ ಎಂಬಂತೆ ತೋರುತ್ತಿತ್ತು .. ಶ್ರೀ ವಾದಿರಾಜ ಗುರುಸಾರ್ವಭೌಮರಿಗೆ ಜಯವಾಗಲಿ , ಶ್ರೀ ವಿಜಯೀಂದ್ರ ಗುರುಸರ್ವಭೌಮರಿಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು... ಶ್ರೀ ಕೃಷ್ಣನಿಗೆ ಅರ್ಪಿಸಿದ ಹೂ ಮಾಲೆಯನ್ನು ವಾದಿರಾಜರು ,ವಿಜಯೀಂದ್ರರಿಗೆ ಹಾಕಿ , ಗಾಢವಾಗಿ ಆಲಿಂಗಿಸಿದರು..  ನೋಡುಗರಿಗೆ ಆನಂದ ಭಾಷ್ಪ ಉಂಟಾಯಿತು .. ಇಬ್ಬರು ಮಹಾತ್ಮರನ್ನು ಒಂದೇ ವೇದಿಕೆಯಲ್ಲಿ ಅಲಿಂಗನ ಮಾಡುತ್ತಿರುವದನ್ನು ನೋಡಿದ ಜನರೇ ಭಾಗ್ಯವಂತರು .. ಈ ಪ್ರೀತಿ ಪ್ರದರ್ಶನಕ್ಕೆ ಕಾರಣ ಶ್ರೀ ಮೂಲರಾಮಾರ್ಚಕರ ಹಾಗು ಶ್ರೀ ಕೃಷ್ಣನ ಅರ್ಚಕರ ಸಂದರ್ಶನವಾಗಿದ್ದು ಇಪ್ಪತ್ತೈದು ವರ್ಷಗಳ ನಂತರ .. ವಿಜಯೀಂದ್ರರು ಕೃಷ್ಣ ಮಠಕ್ಕೆ ದಯಮಾದಿಸಿದರು .. ಸ್ವತಹ ಮಹಾನುಭಾವರಾದ ವಾದಿರಾಜರು ಅವರ ಕೈ ಹಿಡಿದು ಕರೆದುಕೊಂಡು ಬಂದು ಕೃಷ್ಣನ ದರ್ಶನ ಮಾಡಿಸಿದರು .. ಶ್ರೀ ವಾದಿರಾಜರು ಮಠಾಧಿಕಾರಿಗಳಿಂದ ಪಾದಪೂಜೆಗೆ ವ್ಯವಸ್ಥೆ ಮಾಡಿಸಿದರು . . ಮರುದಿನ ಶ್ರೀ ಮೂಲರಾಮನ ಪೂಜೆ ನಡೆಯಿತು , ಅದೇ ಸಮಯದಲ್ಲಿ , ಅದೇ ಸ್ಥಳದಲ್ಲಿ , ಅಷ್ಠ ಮಠಾಧಿಪರು ಸಂಸ್ಥಾನ ಪೂಜೆ ಮುಗಿಸಿದರು .. ಎಲ್ಲರು ಪರಸ್ಪರ ದೇವತಾರ್ಚಾ ಗಳನ್ನೂ ದರ್ಶನ ಮಾಡಿಸಿದರು .. ಎಲ್ಲ ಸ್ವಾಮಿಗಳು ಮೂಲ ರಾಮನನ್ನು ದರ್ಶನ ಮಾಡಿಕೊಂಡು ಕೃತಾರ್ಥ ರಾದರು .. ಸಂಸ್ಥಾನ ಬೇರೆ ಓರಿಗೆ ಹೊರಡುವ ಸಮಯ ಬಂದಾಗ ಎಷ್ಟು ಸಂತಸದಿಂದ ಬರಮಾದಿಕೊಂಡಿದ್ದರೋ ಅಷ್ಟೇ ದುಃಖದಿಂದ ಬಿಳ್ಕೊಟ್ಟರು .. ವಿಜಯೀಂದ್ರ ರು " ಕೃಷ್ಣ ದರ್ಶನ ದಿಂದ ಕೃತಾರ್ಥನಾದೆ " ಎಂದು ಹೇಳಿದರು .. ಅದಕ್ಕೆ ವಾದಿರಾಜರು "ನಿಮ್ಮ ಈ ಉಡುಪಿಯ ಯಾತ್ರೆ ಇತಿಹಾಸ ಪ್ರಸಿದ್ಧವಾಗುವದು ಮಿತ್ರರೇ !! ಈ  ಘಟನೆ ಆಚಂದ್ರಾರ್ಕವಾಗಿ ನಿಲ್ಲುತ್ತದೆ " ಎಂದು ಉದ್ಗರಿಸಿದರು ..!!

 ಇದೆ ಸ್ನೇಹ ಮಠದ್ವಯಗಳ ಪರಂಪರೆಯಲ್ಲಿ ಬಂದಿವೆ .. ರಾಯರ ಮಠದ  ಶ್ರೀ ಸುಶೀಲೇಂದ್ರ ತೀರ್ಥರು ಉಡುಪಿಗೆ ಯಾತ್ರೆ ಕೈಗೊಂಡಾಗಳೂ ಕೂಡ ಉಡುಪಿಯ ಅಷ್ಠ ಮಠಾಧಿಪತಿಗಳು ಸಂಭ್ರಮಾದರಗಳಿಂದ ಸ್ವಾಗತಿಸಿದ್ದು ಇತಿಹಾಸ .. ಆಗಿನ ಅಷ್ಠ ಮಠಾಧೀಶರು ತಮ್ಮ ತಮ್ಮ ಮಠಗಳಿಂದ   ಶ್ರೀಯವರ ಪಾದಪೂಜೆ ವ್ಯವಸ್ಥೆ ಮಾಡಿಸಿದ್ದರು .. ಈ ಹಿಂದೆ  ವಾದಿರಾಜರು ವಿಜಯೀಂದ್ರರಿಗೆ  ಕೃಷ್ಣ ಮಠದ ಎದುರಿಗಿನ ಜಾಗೆಯನ್ನು ಮಠ ನಿರ್ಮಾಣಕ್ಕಾಗಿ ಜಾಗೆಯನ್ನು ಕೊಟ್ಟಿದ್ದರು .. ಅಲ್ಲಿ ಪ್ರಾಚೀನ ಮಠವೊಂದಿತ್ತು .. ಅಲ್ಲಿ ಸುಶೀಲೆಂದ್ರ ತೀರ್ಥರು ಉಡುಪಿ ದಿಗ್ವಿಜಯ ಕೈಗೊಂಡಾಗ ಅದಮಾರು ಮಠದ ಶ್ರೀ ವಿಬುಧಪ್ರಿಯ ಶ್ರೀಪಾದರ ಇಚ್ಚೆಯಂತೆ  ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಮೃತ್ತಿಕ ವೃಂದಾವನ ಪ್ರತಿಷ್ಥಾಪನೆ ಮಾಡಿದರು ..  ಆ ಮಠ ಅದೇ ಪರಂಪರೆಯಲ್ಲಿ ಬಂಡ ಶ್ರೀ ಸುಶಮೀಂದ್ರ ತೀರ್ಥರ ಕಾಲದಲ್ಲಿ ನವೀಕರಣಗೊಂಡು ಕೃಷ್ಣ ಮಠದ ಎದುರಿಗೆ ಕಂಗೊಳಿಸುತ್ತಿದೆ.. ಅಲ್ಲಿ ಪ್ರತಿ ವರ್ಷ ರಾಯರ ಪೂಜಾರಾಧನೆಗಳು ತಪ್ಪದೆ ನಡೆಯುತ್ತಿವೆ

 ಉಡುಪಿಯಲ್ಲಿ ಸೋದೆ ಮಠ ಪರ್ಯಾಯಕ್ಕೆ ಬಂದಾಗ , ಶ್ರೀ ಸುಶೀಲೆಂದ್ರ ತೀರ್ಥರು ಸ್ಥಾಪಿಸಿದ   ಶ್ರೀ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ಉಡುಪಿಯಲ್ಲಿಯೇ  ನಡೆಸಲಾಗಿದೆ.. ಈ ಹಿಂದೆ ಸೋದೆ ಮಠಕ್ಕೆ ಶ್ರೀ ವಿಶ್ವೋತ್ತಮ ತೀರ್ಥರು ಪೀಠಾಧಿಪರಾಗಿದಾಗ ಸಭೆ ಉಡುಪಿಯಲ್ಲಿಯೇ ನಡೆದಿತ್ತು ಆಗ ರಾಯರ ಮಠಕ್ಕೆ ಶ್ರೀ ಸುಜಯೀಂದ್ರ ತೀರ್ಥರು ಪೀಠಾಧಿಪರಾಗಿದ್ದರು.. ಆ ಸಭೆಯೂ ಕೂಡ ವಾದಿರಾಜ-ವಿಜಯೀಂದ್ರರ ಭೇಟಿಯ ಸಾಂಕೇತಿಕ ಸ್ವರೂಪವೇ ಆಗಿತ್ತು ..

Tuesday 1 January 2013

A report on श्रीमत् समीर समय संवर्धिनी सभा , उदुपि क्षेत्र- 2012 ( sameer samaya samvardhini sabha , udupi-12 )

Sriman Madhwacharya Moola Maha Samsthana Sri Raghavendra Swamy Matha, Mantralayam is well known for encouraging scholars and conducting various programmes to provide a platform for these scholars. The Matha regularly conducts Knowledge-based programmes at Mantralaya and also at its various branches spread across the country. One such programme which is also very popular among scholars is the Srimath Sameera Samaya Samvardhini Sabha. The credit of regularizing this
as an annual programme goes to Sri Susheelendra Teertha of the Matha (1912-1926).

Sameera means Vayu (Mukhyaprana) and Samaya means The Doctrines. The title itself explains the significance of The Sabha. The most prominent task of the Sabha is to strengthen the scriptural knowledge by more discussions amongst scholars and thereby churning out of knowledge.

The Sabha was holding programmes at Mantralaya annually from the period of Sri Susheelendra Teertha to Sri Suyameendra Teertha, however, during the period of Sri Sujayeendra Teertha (well known as the Architect of Modern Mantralaya), the Sabha started having two conferences annually, one at Mantralaya and another at any other part of the country. The highlighting factor here was that the Sabha would invite followers and scholars of other traditions and philosophies too and a more detailed discussion would take place as a result of this. All the scholars then would be handsomely rewarded with remuneration and prizes helping to preserve the Vedic tradition alive for long.

His Holiness Sri Sushameendra Teertharu (1984-2008) bags the credit of hosting the Sabha very efficiently at Vijayawada, Hyderabad, Bangalore, Hosaritti, Raichur, Srirangam, Kumbakonam, Madurai, Hubli and Pune. Sri Suyateendra Sripadaru has taken this tradition forward by increasing the value and volume of the remuneration, thereby encouraging more young scholars to participate actively in these activities.

There is a very cordial relationship between Sri Sode Vadiraja Matha and Sri Raghavendra Swamy Matha, Mantralaya. This relation was built up right from the time of Sri Madhwacharya and was strengthened during the period of Sri Vadiraja Teertha (of Sri Vishnu Teertha’s lineage) and Sri Vijayeendra Teertha (of Sri Padmanabha Teertha’s lineage). During Sri Vijayeendra Teertha’s Udupi Yatra, the then Paryaya Swamiji Sri Vadiraja Teertha gifted him land right in front of the Sri Krishna temple to construct a Matha. In the beginning of the 19th century Sri Susheelendra Teertha Swamiji constructed Matha here and consecrated Mrittika Vrindavana with the cooperation of Sri Vibhudapriya Teertha of Admar matha.

Previously, during the Paryaya period of Sri Vishwothama Teertha of Sode Matha (1980-82), one conference of the Sabha was held at Udupi by Sri Sujayeendra Teertha. While having such a significant history now the conference is again arranged at Udupi by Sri Suyateendra Teertharu in association with the Paryaya Swamiji Sri Vishwavallabha Teertha Swamiji of Sri Sode Vadiraja Matha, Udupi, who is also the disciple of Sri Vishwothama Teertharu. Thousands of Scholars in Dwaita Vedanta from all over the country are expected to participate in this Sabha.

The Sabha will be held (Scholarly discussion based conference) from 5th Jan 2013 to 7th Jan 2013 at Rajangana, Sri Krishna Matha, Udupi in association with Paryaya Sri Sode Vadiraja Matha, Udupi.
 Highlights
* As a token of the friendship between Sri Vadiraja Teertha and Sri Vijayeendra Teertha the Programme hall has been named as “Sri Vadiraja- Vijayeendra Vedike”
*With a view to encourage Nyaya Sudha Scholars the Matha plans to honor 100 Sudha
Pandits of Udupi region during this Sabha. The Matha would confer Sri Vadiraja-Vijayeendra Award on them. The award consists of a silver medallion which has Sri Vadiraja and Sri Vijayeendra Swamiji, certificate,Shawl, and a cash prize of Rs 5,000 along with Phala Mantrakshathe.
* Leading scholars, Prof. Hayavadana Puranik (Udupi), Prof. D. Prahladacharya (Bangalore), Prof. A. Haridas Bhat (Bangalore), Dr. Atmakooru Anandateertha Acharya (Atmakooru, Andhra Pradesh), and Vidwan Subrahmanya (Mantralaya) will be honored with a golden bracelet as a recognition for their life time achievements in Dwaita philosophy.
* Students of Sri Guru Sarvabhouma Vidyapetha Mantralaya will enact a beautiful play titled “Historic Krishna Darshana” on 5th Jan 2013 evening in remembrance of Sri Vijayeendra Teertha getting the darshan of Lord Shri Krishna through Sri Vadiraja Swami.
* For the purpose of getting blessed by the Lord and for peace in the universe “ Dhanavantri Homa” will be held on 6th Jan 2013 (4.00 am to 8.30 am) with all 72 Moola mantras specified by Shri Madhwacharya.
* There will be a Yakshagana Thalamaddale by Sudha pundits of “Yoga Gurukula” on 6th Jan 2013 (evening) titled “Bheema Vijaya”.

Prior to this the Mantralaya Shri will be arriving to Udupi on 4th Jan 2013 at 4.30 pm and a procession has been organized to welcome Shri from Jodukatte. More than one thousand devotees are expected to participate in this procession.

The following is the schedule of the entire programme.

05.01.2013 (Morning)
10.45 am: Lord Sri Vedavyasa’s procession in the Golden Charriot on Car Street
11.30 am: Inauguration of the Sabha programme by all Madhwa Matha Peethadipathis present.

5th Jan to 7th Jan 2013
Morning 10.45 am to 1.30 pm: First Session
Evening 4.00 pm to 6.00 pm: Second Session
Evening 6.00 pm Onwards: Honoring the scholars and Invitees followed by Cultural programme.
ಶ್ರೀ ಸಮೀರ ಸಮಯ ಸಂವರ್ಧಿನೀ ಸಭಾದ ಕಾರಣೀ ಕರ್ತರಾದ  ಶ್ರೀ ಸುಶೀಲೇಂದ್ರ  ತೀರ್ಥ ಶ್ರೀಪಾದರ ಸನ್ನಿಧಾನದಲ್ಲಿ ಶ್ರೀ ಸುಯತೀಂದ್ರ ತೀರ್ಥರು 
 
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...