Friday 24 January 2014

ಶ್ರೀ ರಾಘವೇಂದ್ರ ಗುರುಗಳ ವಿದ್ಯಾ ಮಠದಲ್ಲಿ ನಿತ್ಯವೂ ವೈಭವದಿಂದ ಪೂಜೆಗೊಳ್ಳುವ ಶ್ರೀ ನರಹರಿ ತೀರ್ಥರು ತಾವೇ ತಂದು ಶ್ರೀಮದಾಚಾರ್ಯರಿಗೆ ತಂದೊಪ್ಪಿಸಿದ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮಚಂದ್ರ ದೇವರ ಬಗ್ಗೆ  ಶ್ರೀ  ರಾಘವೇಂದ್ರ ಗುರುಗಳ ದಿವ್ಯ ಚರಿತ್ರೆಯಾದ , ರಾಯರಿಂದಲೇ ಅಂಕಿತ ಹಾಕಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾದ "ರಾಘವೇಂದ್ರ ವಿಜಯ" ದಲ್ಲಿನ ಮಾತುಗಳು.

ಗುರೊರ್ನಿಯೊಗಾದಧಿಗಮ್ಯ ರಾಜ್ಯಂ ಶಿಷ್ಯಸ್ತದೀಯೋ ನೃಹರಿವ್ರುತೀಂದ್ರ: ।
ಗಜೇಶ ಕೋಶಸ್ಥಿತ ರಾಮಮೂರ್ತಿಮ್ ಪೂರ್ಣಪ್ರಬೊಧಾಯ ಸಮಾರ್ಪಯತ್ತಾಂ।। 

ಸಾ ಯತ್ರ ರಾಮಪ್ರತಿಮಾಸ್ತಿ ತತ್ರ ಚತು: ಪುಮರ್ಥೀ ಸತತಂ ಚಕಾಸ್ತಿ । 
ಆದಿತ್ಯ ಚೈವಂ ಗುರುಣೇವ ದತ್ತಾ ಮಾನರ್ಚಯತ್ತಾ ಮನಿಶಂ ಯಮೀಂದ್ರಃ ।।

ಅಂತೇ ವಸಂಸ್ತಸ್ಯ ಗುರೋರನೇನಾಸಭಾಜಯತ್ತಾಂ ಪ್ರತಿಮಾಂ ವಿತೀರ್ಣಾಂ ।
ಸಂವರ್ಧಯನ್ನಾದಿಮ ಸಂಪ್ರದಾಯಮನ್ಯೋಭವನ್ಮಾಧವ ಸಂಯಮೀಂದ್ರಃ ।। 
..................................................  
.................................................. 

ಸಾ ರಾಮಚಂದ್ರ ಪ್ರತಿಮಾ ಜಯೀಂದ್ರಾತ್ ಸುಧೀಂದ್ರಯೋಗೀಂದ್ರಮಗಾತ್ಕ್ರಮೇಣ ।
ವಿಸ್ತೀರ್ಣ ಕೀರ್ತಿರ್ವಿಬಭಾವವನ್ಯಾಮ್ ವಿಖ್ಯಾತವಿದ್ವಜ್ಜನವಂದ್ಯಪಾದ: ।। 



"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...