Tuesday 27 December 2011

ಮಹಾನ್ ಮಾಧ್ವ ಯತಿಗಳು

"ಮಹಾನ್ ಮಾಧ್ವ ಯತಿಗಳು" ಎಂಬ ಮಧ್ವಾಚಾರ್ಯರ ನಂತರ ಬಂದ ಮಹಾನ್ ಯತಿಗಳ ಚರಿತ್ರೆ , ಪವಾಡಗಳು ಇತ್ಯಾದಿ ಗಳನ್ನೂ ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಪ್ರಥಮ ಸಂಚಿಕೆ ಆಚಾರ್ಯರ ಕರಕಮಲ ಸಂಜಾತರದ ಶ್ರೀ ಪದ್ಮನಾಭ ತೀರ್ಥ ರಿಂದಲೇ ಇದನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಾರಕ್ಕೆ ಒಬ್ಬ ಮಾಧ್ವ ಯತಿಯ ಬಗ್ಗೆ ಲೇಖನವನ್ನು ಆಯಾ ಮೂಲ ಸಂಸ್ಥಾನಗಳ ಸಹಾಯದಿಂದ ಇಲ್ಲಿ ಅವರ ಚರಿತ್ರೆಯನ್ನು ಕೊಡಲಾಗುವದು. ಎಲ್ಲರು ಮಹಾನ್ ಮಧ್ವ ಯತಿವರ್ಯರ ಬಗ್ಗೆ ತಿಳಿದುಕೊಂಡು ಕೃತಾರ್ಥರಾಗಿರಿ. ಹರಿ-ವಾಯು ಗುರುಗಳ ಆಶೀರ್ವಾದವು ಸದಾ ನಿಮ್ಮ ಮೇಲಿರುತ್ತದೆ ಧನ್ಯರಾಗಿ .
                                                           - द्वैत दर्शन 
                                      

Sunday 25 December 2011

श्री १००८ सुयमीन्द्र तीर्था: आराधना महोत्सवं ( Dec 25 )

                                                         || श्री १००८ सुयमीन्द्र तीर्था: ||


    समय: - १९३३-१९६७( 1933 - 1967 )
     आश्रम गुरु: - श्री १००८ सुवृतीन्द्र तीर्था:
    आश्रम शिष्य: - श्री १००८ सुजयीन्द्र तीर्था:
    आराधना तिथि: - पुष्य शुक्ल द्वितीया 
    मूल वृन्दावन स्थलं - मन्त्रालय क्षेत्रं   
    चरम श्लोकं - 
                            सुखतीर्थमताब्धींदुं सुधींद्र सुतसॆवकं ।
                      सुधापरिमळासक्तं सुयमींद्र गुरुं भजॆ ॥ 

                           
                          ಸುಖತೀರ್ಥಮತಾಬ್ಧೀಂದುಂ ಸುಧೀಂದ್ರ ಸುತಸೇವಕಮ್ |
                  ಸುಧಾಪರಿಮಳಾಸಕ್ತಂ ಸುಯಮೀಂದ್ರ ಗುರುಂ ಭಜೇ ||

Friday 23 December 2011

ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ

ಮಹಾ ಮಹಿಮ ಶ್ರೀ ರಾಘವೇಂದ್ರ ಸ್ವಾಮಿ ಮಠದ, ಶ್ರೀ ರಾಯರ ಪೂರ್ವಜರಾದ ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ ಸುದಿನ ಇಂದು.ದಿ.೨೩ ಪೂರ್ವರಾಧನೆಯಾದರೆ ದಿ.೨೪ ರಂದು ಮಧ್ಯರಾಧನೆ ದಿ.೨೫ ರಂದು ಉತ್ತರರಾಧನೆ ಶ್ರೀಗಳವರ ಮೂಲಸ್ಥಳವಾದ ಶ್ರೀ ಜಿತಮಿತ್ರ ಗಡ್ಡೆ ಎಂದೇ ಪ್ರಸಿದ್ಧವಾದ ದ್ವೀಪ ಪ್ರದೇಶದಲ್ಲಿ ಶ್ರೀಗಳವರ ಪರಮ ಸನ್ನಿಧಾನವುಳ್ಳ ವೃಕ್ಷಕ್ಕೆ ಶ್ರೀ ಸುಯತೀಂದ್ರ ತೀರ್ಥರು ಪೂಜೆ ಸಲ್ಲಿಸಿದರು . ಶ್ರೀ ಜಿತಮಿತ್ರ ತೀರ್ಥರ ಪರಮ ಪವಿತ್ರ ಸ್ಥಳವಾದ ಈ ಪ್ರದೆಶದಲ್ಲಿ ಶ್ರೀ ಸುಯತೀಂದ್ರ ತೀರ್ಥರು ಶ್ರೀ ಬ್ರಹ್ಮ ಕರರ್ಚಿತ ಪ್ರತಿಮೆ ಶ್ರೀಮನ್ಮೂಲ ರಾಮ ಪ್ರತಿಮೆ ಹಾಗು ಇತರೆ ಪ್ರತಿಮೆಗಳನ್ನು ಅರ್ಚಿಸಿದರು. ಶ್ರೀ ಜಿತಮಿತ್ರ ತೀರ್ಥರು ಮಹಿಮನ್ವಿತರಾಗಿದ್ದು ಅವರು ೭ ದಿನಗಳ ಕಾಲ ಪ್ರವಾಹದಲ್ಲಿ ಮುಳುಗಿದ್ದರು ಸಹ ದಿವ್ಯ ಶಕ್ತಿ ಹಾಗು  ಆರಾಧ್ಯ ದೈವವಾದ ಶ್ರೀಮನ್ಮೂಲ ರಾಮನ ಅನುಗ್ರಹದಿಂದ ಮೆತ್ತೆ ಎದ್ದು ಬಂದು ಪವಾಡ ಮಾಡಿದರು . [ ಶ್ರೀ ಜಿತಾಮಿತ್ರರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ವೆಬ್ ವಿಳಾಸವನ್ನು ಸಂದರ್ಶಿಸಿ.]


    

ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಶ್ರೀ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ [ ನವ ವೃಂದಾವನ ] ೨೦೧೧

ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ  ಶ್ರೀ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ [ ನವ ವೃಂದಾವನ ] ದಲ್ಲಿ ಆಚರಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಸ್ತುತ ಪೀಠಾಧಿಪತಿ ಶ್ರೀ ೧೦೦೮ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ವೃಂದಾವನ ಸ್ಥಳದಲ್ಲಿ ಶ್ರೀ ಮಠದ ಮೂಲ ಪುರುಷರು , ಶ್ರೀ ಮಧ್ವರ ಕರಕಮಲ ಸಂಜಾತರದ ಶ್ರೀ ಪದ್ಮನಾಭ ತೀರ್ಥರ ಮೂಲ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಸಂಸ್ಥಾನದ ಎಲ್ಲ ವಿದ್ವನ್ಮಣಿಗಳು ಹಾಜರಿದ್ದರು. ಇದೆ ಸಂದರ್ಭದಲ್ಲಿ ಶ್ರೀ ಚತುರ್ಮುಖ ಬ್ರಹ್ಮ ಕರರ್ಚಿತ ಶ್ರೀಮನ್ಮೂಲ ರಾಮ ದೇವರ ಹಾಗು ದಿಗ್ವಿಜಯ-ಜಯರಾಮಾದಿ ಸಂಸ್ಥಾನ ಪ್ರತಿಮೆಗಳನ್ನೂ ಕ್ಷೇತ್ರದಲ್ಲಿ ಶ್ರೀಗಳವರು ಅರ್ಚಿಸಿದರು. ಶ್ರೀ ಮಠದಲ್ಲಿ ಸೇವೆ ಸಲ್ಲಿಸಿದ ವಿದ್ವನ್ಮಣಿಗಳಿಗೆ ಶ್ರೀಗಳಿಂದ ಸಮ್ಮಾನ ಮಾಡಲಾಯಿತು.




























"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...