Sunday 15 June 2014

ಏಕಾದಶೀ ವೃತಾಚರಣೆಯ ಮಹತ್ವ-  
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ತಮ್ಮ " ಸ್ಮೃತಿ ಮುಕ್ತಾವಳಿ " ಎಂಬ ಗ್ರಂಥದಲ್ಲಿ ಏಕಾದಶಿ ವೃತದ ಮಹಿಮೆ ಯನ್ನು ಈ ರೀತಿ ತಿಳಿಸುತ್ತಾರೆ..  
ಕಂತು 1
ಹರಿಃ ಓಂ ಶ್ರೀ ಗುರುಭ್ಯೋ ನಮಃ . 

ಅಥ ಎತಾದೃಶೈಕಾದಶೀಮಹಿಮಾ - ಪಾದ್ಮೇ-

ಏಕಾದಶೀಸಮಮ್  ಕಿಂಚಿದ್ ವೃತಮ್ ನಾಸ್ತಿ ಶುಭ ಕ್ಷಣೇ ।
ಏಕಾದಶೀ ಪರಿತ್ಯಜ್ಯ ವ್ರುತಂ ಯೋsನ್ಯತ್ ಸಮಾಚರೇತ್ ।। 

ಸ್ವಕರಸ್ಥಂ ಮಹಾರಾಜ್ಯಂ ತ್ಯಕ್ತ್ವಾ ಭೈಕ್ಷ್ಯಂ ತು ಯಾಚಯೇತ್ ।
ಏಕಾದಶ್ಯಾಮ್ ತು ಪಾಪೀಯಾನ್ಸಮುಪೋಷ್ಯ ತು ಮಾನವಃ ।। 
ಸರ್ವಪಾಪವಿನಿರ್ಮುಕ್ತೋ ಯಾತಿ ವಿಷ್ಣೋ: ಪರಮ್ ಪದಮ್ ।। ಇತಿ ।। 

ಏಕಾದಶಿಯ ನಿರೂಪಣೆಯೂ ಪಾದ್ಮಪುರಾಣದಲ್ಲಿ ಹೀಗೆ ಹೇಳಿದೆ - ಎಲೈ ಮಂಗಳನೇತ್ರೆಯೇ ! ಏಕಾದಶಿಗೆ ಸಮಾನವಾದ ವ್ರುತವು ಮತ್ತವದೂ ಇಲ್ಲ . ಯಾವನು ಏಕಾದಶಿಯನ್ನು ಬಿಟ್ಟು ಬೇರೆ ವೃತವನ್ನು ಆಚರಿಸುತ್ತಾನೋ ಅವನು ತನ್ನ ಕೈಯಲ್ಲಿದ್ದ ಮಹಾರಜ್ಯವನ್ನು ಬಿಟ್ಟು ಭಿಕ್ಷೆ ಬೇಡುವನಂತೆ ಆಗುತ್ತಾನೆ. ಯಾವ ಮಹಾಪಾಪಿಯಾದ ಮಾನವನೇ ಆಗಲಿ ಏಕಾದಶಿ ದಿನ ಉಪವಾಸ ಮಾಡಿದರೆ ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದಿ ಶ್ರೇಷ್ಠವಾದ ವಿಷ್ಣುವಿನ ವೈಕುಂಠಸ್ಥಾನವನ್ನು ಪಡೆಯುತ್ತಾನೆ ಎಂದು. 




Thursday 12 June 2014

ಮಹಾಮೇಧಾವಿ, ಧ್ರುವಾಂಶ ಸಂಭೂತ,ಆಗಿನ ಕಾಲದ ವಿದ್ವತ್ತಿಮಿಂಗಲ , ಪಾಂಡಿತ್ಯಕ್ಕೆ ಪರ್ಯಾಯ ಹೆಸರಾಗಿದ್ದ ಶ್ರೀ ವಿಬುಧೇಂದ್ರ ತೀರ್ಥರ ಹತ್ತಿರ ಸಮಸ್ತ ದ್ವೈತ ವೇದಾಂತ ವ್ಯಾಸಾಂಗ ಮಾಡಿದ , ಶ್ರೀ ವ್ಯಾಸರಾಜ ಶ್ರೀಚರಣರಿಗೆ ಸಮಸ್ತ ದ್ವೈತವೇದಾಂತ ಅಧ್ಯಯನ ಮಾಡಿಸಿ ರಾಜಗುರುಗಳನ್ನಾಗಿ ಮಾಡಿ ಅನುಗ್ರಹಿಸಿದ, ದಿನವೂ ಶ್ರೀಹರಿಯ ಕರುನಾರಸದಲ್ಲಿ ಮಿಂದು ಪುನೀತರಾಗಿ ೬೦ ವಿಧ ಭಕ್ಷ್ಯಗಳನ್ನೂ ದೇವರಿಗೆ " ಸುಖಪ್ರಾರಬ್ಧ"ಬಲದಿಂದ ನಿವೆದಿಸುತ್ತಿದ್ದ , ೩೦ ಕ್ಕೂ ಅಧಿಕ ವ್ಯಾಖ್ಯಾನಗಳಿರುವ ಶ್ರೀಕರ ಗ್ರಂಥ ಶ್ರೀಮಜ್ಜಯತೀರ್ಥರ "ನ್ಯಾಯಸುಧೆಗೆ" ಮೊಟ್ಟ ಮೊದಲ ವ್ಯಾಖ್ಯಾನ ರಚಿಸಿದ ಕೀರ್ತಿಗೆ ಭಾಜನರಾದ, ಜಗದ್ಗುರು ಮಧ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಪರಂಪರೆಗೆ ಸೇರಿದವರಾದ , ಶ್ರೀ ಸ್ವರ್ಣವರ್ಣ ತೀರ್ಥ ಕರಕಮಲ ಸಂಜಾತರಾದ , ಶ್ರೀ ವಿಬುಧೇಂದ್ರ ತೀರ್ಥ ಕರುಣಾರಸ ಪೋಷಿತ ಶ್ರೀ ಶ್ರೀ ಶ್ರೀ  ಶ್ರೀಪಾದರಾಜರೆಂಬೋ ಅಭಿಧಾನದಿಂದ ನಮ್ಮೆಲ್ಲರನ್ನು ಸಲುಹಿ ಚಿರಪರಿಚಿತರಾಗಿರುವ , ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ಶ್ರೀ ಲಕ್ಷ್ಮಿನಾರಾಯಣ ತೀರ್ಥರ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಅವರನ್ನು ನೆನೆದು ಕೃತಾರ್ಥರಾಗೋಣ.

                       ಪದವಾಕ್ಯ ಪ್ರಮಾಣಾಬ್ದಿ ವಿಕ್ರೀಡನ ವಿಶಾರದಾನ್
                        ಲಕ್ಷ್ಮೀನಾರಾಯಣ ಮುನೀನ್ ವ೦ದೇ ಮಮ ವಿದ್ಯಾ ಗುರೂನ್ಸದಾ ||

                         ತಂ ವಂದೇ ನರಸಿಂಹ ತೀರ್ಥ ನಿಲಯಂ ಶ್ರೀ ವ್ಯಾಸರಾಜ ಪೂಜಿತಂ
                         ಧ್ಯಾಯಂಥಾಂ ಮನಸಾ ನೃಸಿಂಹ ಚರಣಂ ಶ್ರೀಪಾದರಾಜ ಗುರುಂ॥ .

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...