Sunday 13 April 2014

ಶ್ರೀ ಮೂಲರಾಮೋ ವಿಜಯತೆ                                                                       ಶ್ರೀ ಗುರುರಾಜೋ ವಿಜಯತೆ
ಗುರುಗುಣಸ್ತವನಂ - ೩
Gurugunastavanam- 3
ಶ್ಲೋಕ-

ಶ್ರೀವಾದೀಂದ್ರ ತೀರ್ಥರ ,  ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -


ಶ್ರೀಮದ್ರಾಮಾಭಿರಾಮಮಿತಮಹಿಮಪದ ಪ್ರೌಢಪಾಥೋರುಹಾಲಿ: 
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವೃಢಪಟಲೀಪಾಟನೈಕ ಪ್ರವೀಣಃ ।।
ವೇದವ್ಯಾಸೋಪದೇಶಾಧಿಕಸಮಧಿಗತಾನಂತ ವೇದಾಂತಭಾವೋ 
ಭೂಯಾತ್ಕೀಶಾವನೀಶ ವೃತಿತನುರನಿಲಃ ಶ್ರೇಯಸೇ ಭೂಯಸೇನಃ ।। 

ಅರ್ಥ-  "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.

ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.  
ಗುರುರಾಯರ ಕರುಣೆಗೆ ಪಾತ್ರರಾಗಿ , ಅವರ ಪೂರ್ಣಾನುಗ್ರಹ ಪಡೆದಿದ್ದ ಶ್ರೀ ಅಪ್ಪಣ್ಣಾಚಾರ್ಯರು , ಸಾಕ್ಷಾತ್ ಶ್ರೀ ರಾಘವೇಂದ್ರ ವ್ರುತೀಂದ್ರರ ವಿದ್ಯಾಶಿಷ್ಯರು. ಅವರ ಹತ್ತಿರವೇ ಅಧ್ಯಯನ ಮಾಡಿದಂಥವರು. ಮಾಧ್ವರ  ಶ್ರೀ ರಾಘವೇಂದ್ರ ಸ್ತೋತ್ರದಂತಹ ವೇದತುಲ್ಯ ಸ್ತೋತ್ರವನ್ನು ಮಾಡಿದ ಕೀರ್ತಿ ಅಪ್ಪಣ್ಣಾಚಾರ್ಯರದ್ದು. ರಾಯರ ಅಗಮ್ಯ ಮಹಿಮೆಯನ್ನು ಸಾಕ್ಷಾತ್ ಕಂಡು , ವೇದಾಂತ ಸಾಮ್ರಾಜ್ಯದಲ್ಲಿ ಅವರು ವಿರಾಜಿಸಿದ ಪರಿ ನೋಡಿ , ವೈಭವವನ್ನು ದೃಷ್ಟಿಸಿ , ರಾಯರನ್ನು ತಮ್ಮ ವಿಶಿಷ್ಟ ಶೈಲಿಯಲ್ಲೇ ಸ್ತುತಿಸಿದವರು ಅಪ್ಪಣ್ಣಾಚಾರ್ಯರು. ಶ್ರೀಗುರುಸಾರ್ವಭೌಮರ ಅಂತರಂಗ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಮತ್ತೊಂದು ರಾಯರ ಕುರಿತು ಇರುವ ಕೃತಿಯೇ ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ. ಅವರ ಪ್ರಮುಖ ಕೃತಿ ರಾಯರ ೧೦೮ ವಿಶೇಷಗಳಿಂದ ಸ್ತೋತ್ರಮಾಡುವ ಪುಣ್ಯಪ್ರದವಾದ ಕೃತಿ.

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...