Sunday 17 August 2014

ಶ್ರೀ ವ್ಯಾಸತತ್ವಜ್ಞ ತೀರ್ಥರು

 ಶ್ರೀ ವ್ಯಾಸತತ್ವಜ್ಞ ತೀರ್ಥ ಗುರುಭ್ಯೋ ನಮಃ
ಪ್ರಕಟೀಕೃತಟೀಕೋಕ್ತಿರ್ಮರ್ಕಟೀಕೃತಮಾಯಿರಾಟ್|
ಚಕೃತಾವ್ಯಾಸತತ್ವಜ್ಞಮಸ್ಕರೀಂದ್ರಕೃಪಾಮಯಿ||
ಪೂರ್ವಾಶ್ರಮ ನಾಮ -
 ಐಜಿ ವೆಂಕಟರಾಮಾಚಾರ್ಯರು .
 ಗುರುಗಳು -
  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಭುವನೇಂದ್ರ ತೀರ್ಥರು
ಶಿಷ್ಯರು -
ಶ್ರೀ ಜಯತೀರ್ಥಚಾರ್ಯರೇ( ಇವರೇ ಮುಂದೆ ಶ್ರೀ ವಿಷ್ಣುತೀರ್ಥರೆಂದು ಖ್ಯಾತರಾಗಿ , ಮಾದಿನೂರಿನಲ್ಲಿ ನೆಲೆಸಿರುವರು. ) ಮೊದಲಾದ ೩೦೦ ಕ್ಕೂ ಹೆಚ್ಚು ಜನ ಶಿಷ್ಯರು.
ಗ್ರಂಥಗಳು -
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ  ಎಂಬ ವ್ಯಾಖ್ಯಾನ 
*  ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
*  ಯತಿಪ್ರಣವಕಲ್ಪ ವ್ಯಾಖ್ಯಾನ

ವೃಂದಾವನ ಸ್ಥಳ _ ಮಂತ್ರಾಲಯದ ಹತ್ತಿರದಲ್ಲೆ ಇದೆ . ಗದ್ವಾಲಿ ಪ್ರಾಂತ್ಯದ , ಅಯಿಜ ( ಐಜಿ ) ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ವೇಣಿಸೋಮಪುರ  ಗ್ರಾಮ.

 ವಿಶೇಷತೆಗಳು -
* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು.
*  ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.

ಪವಾಡಗಳು-
* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು.
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
*  ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು .
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ  ಅಷ್ಟಮಿ  ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು.
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು..
ಮೂಲವೃಂದಾವನ

Thursday 14 August 2014

64 ವಿದ್ಯೆಗಳಲ್ಲಿ ಪ್ರಾವೀಣ್ಯ ಘಳಿಸಿದ , 104 ಸ್ವತಂತ್ರ ಗ್ರಂಥಗಳನ್ನು ರಚಿಸಿ ಮಾಧ್ವ ವಾಂಗ್ಮಯದಲ್ಲೇ ಸುವರ್ಣ ಇತಿಹಾಸ ಬರೆದ ಶ್ರೀ ವಿಜಯೀಂದ್ರ ತೀರ್ಥರೊಡನೆ , ವಿನಾಯಕ.ರಾಮಚಂದ್ರ.ಜೋಷಿ ಎಂಬುವ ಅಭರಣ ತಯಾರಕ  "ಪದಕ ನಿರ್ಮಾಣ" ಮಾಡುವದರಲ್ಲಿ ಸ್ಪರ್ಧೆಗಿಳಿದನು. ಆಗ ಇಬ್ಬರು ಪದಕ ಮಾಡಲು ಪ್ರಾರಂಭಸಿದರು. ಶ್ರೀಗಳ ಪದಕತಯಾರಿಕಾ ಕೌಶಲ್ಯ ಕಂಡು ಶ್ರೀಗಳನ್ನು ಸೋಲಿಸಲೇ ಬೇಕು ಎಂದುಕೊಂಡು  ಬಂದವನು  ಮೊದಲನೇ ದಿನವೇ ಬೆಚ್ಚಿಬಿದ್ದ. ಅತ್ಯಂತ ಚಾಣಾಕ್ಷರಾದ ಶ್ರೀಗಳವರು ಕೇವಲ 12 ದಿನಗಳಲ್ಲಿ ಪದಕಪೂರ್ಣಗೊಳಿಸಿ ತುಂಬಿದ ಸಭೆಯಲ್ಲಿ ನಿರ್ಣಾಯಕರ ಮುಂದೆ ಇಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ 64 ವಿದ್ಯೆಗಳಲ್ಲಿಯೂ ಶ್ರೀಗಳವರನ್ನು ಮೀರಿಸುವವರು ಭಾರತ ಖಂಡದಲ್ಲೇ ಬೇರೆಯವರು ಇಲ್ಲ , ಶ್ರೀಗಳವರು ವಿಜಯಿಗಳು ಎಂದು ನಿರ್ಣಾಯಕರು ಉದ್ಘಾರ ತೆಗೆದರು.  ಸಭೆಯಲ್ಲಿ ಜನ ಶ್ರೀ ಸುರೇಂದ್ರ ತೀರ್ಥರು ಇತ್ತ " ವಿಜಯೀಂದ್ರ " ರೆಂಬ  ಅಭಿದಾನ ನಿಜವಾಗಿಯೂ ಸತ್ಯ ಎಂದು ಭಾವುಕರಾದರು. ನಂತರದಲ್ಲಿ ಆ ಕುಶಲಕರ್ಮಿಯು ತನ್ನ ಪದಕವನ್ನು ಗುರುಗಳ ಮುಂದೆ ಇತ್ತು "ಸ್ವಾಮಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ , ನಾನು ಮಡಿದ ದುಸ್ಸಾಹಾಸಕ್ಕೆ ಕ್ಷಮೆ ಇರಲಿ , ನನ್ನ ಪದಕವನ್ನು ಶ್ರೀಮೂಲರಾಮನಿಗಾಗಿ ತಾವು ಸ್ವೀಕರಿಸಬೇಕು " ಎಂದನು. ಗುರುಗಳು ಅದನ್ನು ಸ್ವೀಕರಿಸಿ , ಅವನನ್ನು ಅನುಗ್ರಹಿಸಿದರು. ಆ ಕುಶಲಕರ್ಮಿಯು ಕೊಟ್ಟ ಆ ಪದಕ ಹಾಗು ತಾವೇ ಸ್ವತಃ ನಿರ್ಮಾಣಮಾಡಿದ ಪದಕ ಎರೆಡನ್ನೂ ತಮ್ಮಉಪಾಸ್ಯಮೂರ್ತಿ ಶ್ರೀಮೂಲರಾಮದೇವರಿಗೆ ಹಾಕಿ ಆನಂದದಿಂದ ಅರ್ಚಿಸಿದರು. ಆ ಶ್ರೀ ವಿಜಯೀಂದ್ರ ಗುರುಸಾರ್ವಭೌಮರು ಮಾಡಿ ಮೂಲರಾಮನಿಗೆ ಸಮರ್ಪಸಿದ ಪದಕವನ್ನು ಶ್ರೀಮನ್ಮೂಲರಾಮದೇವರು ಅಧುನಾ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಹಾಕಿಸಿಕೊಂಡು ಆ ಶ್ರೀ  ವಿಜಯೀಂದ್ರ ಗುರುಸಾರ್ವಭೌಮರ ಪರಮಶಿಷ್ಯ ಶ್ರೀ ರಾಘವೇಂದ್ರ ತೀರ್ಥರ ಆರಾಧನಾ ದಿನದಂದು ಮೆರೆದ ಅದ್ಭುತ ಕ್ಷಣಗಳು.. ನಿಜವಾಗಿಯೂ ಇದನ್ನು ಪ್ರತ್ಯಕ್ಷ ಕಂಡ ಜನರು ಪುಣ್ಯವಂತರು. __/\__  

ಶ್ರೀ ಸುಜ್ಞಾನೇಂದ್ರ ತೀರ್ಥರು

।। ಶ್ರೀಮನ್ಮೂಲರಾಮೋ ವಿಜಯತೆ ।। ।। ಶ್ರೀ ಗುರುರಾಜೋ ವಿಜಯತೆ ।।
ಶ್ರೀ ಸುಜ್ಞಾನೇಂದ್ರ ತೀರ್ಥಗುರುಭ್ಯೋ ನಮಃ

ಸುಧಾಸಾರಾರ್ಥ ತತ್ವಜ್ಞಮ್ ಸುರದ್ರುಮಸಮಂ ಸತಾಂ ।
ಸುರಾಧಿಪ ಗುರುಪ್ರಖ್ಯಂ ಸುಜ್ಞಾನೇಂದ್ರಗುರುಂ ಭಜೆ ।। 



ಶ್ರೀ ಹಂಸನಮಕ ಪರಮಾತ್ಮನಿಂದ 44 ನೇಯ ಯತಿಗಳು ,
ಜಗದ್ಗುರು ಶ್ರೀಮಧ್ವಾಚಾರ್ಯರಿಂದ 28 ನೇಯ ಯತಿಗಳು ,
ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಂದ 12 ನೇಯ ಯತಿಗಳು  ,
 ಮಹಾತಪಸ್ವಿಗಳು  ,
ಅನೇಕ ಬರಿ ಸುಧಾಮಂಗಳವನ್ನು ಮಾಡಿ ಶ್ರೀಮಠದ ಇತಿಹಾಸದಲ್ಲಿ ಮಹತ್ತರ ಘಟ್ಟಕ್ಕೆ ಶ್ರೀಮಠವನ್ನು ಕೊಂಡೊಯ್ದವರು  , ಬ್ರಿಟೀಷರ ಉಪಟಳ ಹೆಚ್ಚಗುತ್ತಿದ್ದಂತೆಯೇ ತಮ್ಮ ಪ್ರಬಲ ತಪಶ್ಶಕ್ತಿಯನ್ನು ತೋರಿಸಿ ಪ್ರಾಚೀನ ಸಂಪ್ರದಾಯವಾದಿಗಳೆನಿಸಿದವರು  ,
 ಮಂತ್ರಾಲಯ ನಿವಾಸಿ ಶ್ರೀ ಸುಧರ್ಮೆಂದ್ರ ತೀರ್ಥರ ಗುರುಗಳು  ,
ನಂಜನಗೂಡಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಬಂದು ನೆಲೆಸುವಂತೆ ಮಾಡಿದವರು  ,
'ಸ್ಥಾನ'  ಕೇಳಿದ್ದಕ್ಕೆ ರಾಯರು ತಮ್ಮ 'ದಿನ'ವನ್ನೇ ಇವರಿಗೆ ಕೊಟ್ಟು ಕರುಣಿಸಿದರು  ,
ಆಂಗ್ಲ ಅಧಿಕಾರಿಯೊಡನೆ ತಮ್ಮ ದರ್ಶನವಾಗದ ಹಾಗೆಯೇ ವ್ಯವಹರಿಸಿದ ಮಹಾ ತಪಸ್ವಿಗಳು ,
ಅದ್ವೈತಿಗಳಿಂದ ಚಂದ್ರಿಕೆಯ ಬಗ್ಗೆ  ಆಕ್ಷೇಪ ಬಂದಾಗ "ಚಂದ್ರಿಕಾಮಂಡನ" ಎಂಬ ಗ್ರಂಥರತ್ನವನ್ನು ರಚಿಸಿ ದುರ್ವಾದಿಗಳನ್ನು ಖಂಡಿಸಿದ ಪಂಡಿತ ಚಕ್ರವರ್ತಿ.
ಮಂತ್ರಾಲಯದಲ್ಲಿ ನೆಲೆಸಲು ಇಚ್ಚಿಸಿದ ಶ್ರೀಗಳಿಗೆ ರಾಯರು ಸ್ವಪ್ನದ್ವಾರಾ ಸೂಚಿಸಿ "ನೀನಿದ್ದಲ್ಲಿಗೆ ನಾನು ಬರುವೆ " ಎಂದು ನುಡಿದು  ನಂಜನಗೂಡಿಗೆ ಬಂದು ನೆಲೆಸಿದರು. ಅಂತಹ ಮಹಾತಪಸ್ವಿ , ತೇಜೋಮೂರ್ತಿ , ವಿರಕ್ತರು,  ಶ್ರೀ ಸುಜ್ಞಾನೇಂದ್ರ ತೀರ್ಥರ  ( ನಂಜನಗೂಡು) ಆರಾಧನಾ ಮಹೋತ್ಸವದಂದು ಅವರನ್ನು ನೆನೆದು ಕೃತಾರ್ಥರಾಗೋಣ.
 

Sunday 10 August 2014

।। ಶ್ರೀರಾಘವೇಂದ್ರ ಗುರವೇ ನಮಃ ಕಾರುಣ್ಯ ಸಿಧಂವೇ ।।

ಬಂತು ಬಂತು ನಮ್ಮ ರಾಯರ ಆರಾಧನೆ.. ಪ್ರತಿ ವರುಷ ಬರುವ ಈ ಮೂರು ದಿನಗಳು ಆಸ್ತಿಕತೆಯನ್ನು ಬಡೆದೆಬ್ಬಿಸುತ್ತವೆ.. ಎ ರಾಯರ ಆರಾಧನಾ ದಿನಗಳಲ್ಲಿ ಜಗತ್ತಿನಾದ್ಯಂತ ಅವರ ಗುಣಗಾನ , ಗ್ರಂಥಗಳ ಅನುವಾದ , ಅವರ ಪವಾಡ , ಅವರ ಗ್ರಂಥ ವೈಶಿಷ್ಟ್ಯ , ಅವರ ವ್ಯಕ್ತಿತ್ವ , ಅವರ ವಾತ್ಸಲ್ಯ , ಅವರ ಚರಿತ್ರೆ  , ಅವರನ್ನು ಕುರಿತು ಇರುವ ರಾಘವೇಂದ್ರ ವಿಜಯದ ಪ್ರವಚನ , ಒಂದು ಕಡೆ ಯತಿಶ್ರೇಷ್ಠ ಶ್ರೀ ವಾದೀಂದ್ರತೀರ್ಥ ವಿರಚಿತ  ಗುರುಗುಣಸ್ತವನದ ಪ್ರವಚನ-ಪಾರಾಯಣ , ಗ್ರಹಸ್ತಾಶ್ರಮಿಗಳಾದ ಅಪ್ಪಣ್ಣಾಚಾರ್ಯರು ರಚಿಸಿದ ಶ್ರೀ ರಾಘವೇಂದ್ರ ಸ್ತೋತ್ರದ ಪರಾಯಣ ಮತ್ತೊಂದು ಕಡೆ   , ಶ್ರೀ ವಿಜಯದಾಸ-ಜಗನ್ನಾಥದಾಸ-ಗೋಪಾಲದಾಸರೇ ಮೊದಲಾದ ದಾಸಶ್ರೇಷ್ಠರ ಪದಗಳ ಪಾರಾಯಣ ,  ಇತ್ಯಾದಿ  ವೈಭವಗಳನ್ನ ನೋಡಿದರೆ , ಯಾಕೆ ಕೇಳಿದರೆ ಸಾಕು ಮೈ ರೋಮಾಂಚನಗೊಂಡು ಎಂತಹ ನಾಸ್ತಿಕನೂ ಆಸ್ತಿಕನಾಗಬಲ್ಲ.  ಅಂತಹ ಅದ್ಭುತ ಶಿಕ್ತಿಯೇ ಶ್ರೀ ರಾಘವೇಂದ್ರ ಗುರುಸರ್ವಭೌಮರು. ಹೆಸರಿನಲ್ಲಿಯೇ ದೇವರು-ವಾಯುದೇವರ ಸಂಪೂರ್ಣ ಸನ್ನಿಧಾನ. ಇನ್ನು ಮೂಲಸ್ವರೂಪವಂತೂ ಕರ್ಮಜದೇವತೆಯಾದ ಶಂಕುಕರ್ಣ. ಪ್ರಹ್ಲಾದರಾಜ-ಬಾಹ್ಲಿಕರಾಜ  ಅವತರಿಸಿ ಪ್ರತಿ ಅವತಾರದಲ್ಲೂ ಶ್ರೀಹರಿಯನ್ನೇ ಆರಾಧಿಸಿದವರು. ಶ್ರೀ ವ್ಯಾಸರಾಜರಾಗಿ ಅವತರಿಸಿ "ವ್ಯಾಸತ್ರಯ"ಗಳ ಕರ್ತೃಗಳಾಗಿ , ಮಧ್ವಸಿದ್ಧಾಂತ ಪತಾಕೆ ಹರಿಸಿದವರು , ಪುರಂದರ-ಕನಕದಾಸಾದಿಗಳಿಗೆ ಅಶ್ರಯದಾತರು , ಶ್ರೀಕೃಷ್ಣದೇವರಾಯನಿಗೆ ರಾಜಗುರುಗಳಾಗಿ ಮೆರೆದವರು.  ಸಮಾಜಕ್ಕೆ ಶ್ರೀ ವಾದಿರಾಜ-ಶ್ರೀ ವಿಜಯೀಂದ್ರ ತೀರ್ಥರಂತಹ ೨೧ ಮಹಾ ಮೇಧಾವಿ ಮೂರ್ಧನ್ಯರನ್ನು ಕೊಟ್ಟು  , ಶ್ರೀ ಮೂಲಗೋಪಾಲಕೃಷ್ಣ ದೇವರನ್ನುಬಿಡದೇ  ಅರ್ಚಿಸಿ ಕೃತಾರ್ಥರಾದವರು. ಶ್ರೀ ನರಸಿಂಹ ದೇವರ ಅನುಗ್ರಹ ಪ್ರಸಾದ ಪಡೆದು ಮುಕ್ತಿಗೆ ಕರೆ ಸಿಕ್ಕರೂ "ನನ್ನ ಭಕ್ತರನ್ನು ಬಿಟ್ಟು ಬರಲಾರೆ " ಎಂದು ಹೇಳಿ  ಭಕ್ತಾಭಿಮಾನಿಯಾದವರು. ಸಾಕ್ಷಾತ್ ನರಸಿಂಹರೂಪಿ ಪರಮಾತ್ಮನೇ ವರ ಬೇಡು ಎಂದಾಗ " ನಿನಗೆ ವರ ಬೇಡದಂತೆ ವರ ಕೊಡು " ಎಂದು  ಕೇಳಿದ ಮಹಾನುಭಾವರು. ಆ ಶ್ರೀನರಸಿಂಹರೂಪಿ ಪರಮಾತ್ಮ "ನೀನು ಬ್ರಹ್ಮಸಂಬಂಧಿಯಾದ ನನ್ನನ್ನು ಅರ್ಚಿಸುವಿ" ಎಂದು ಅನುಗ್ರಹಿಸಿದ್ದಕ್ಕಾಗಿ ಚತುರ್ಯುಗ ಮೂರ್ತಿ ಶ್ರೀ ಬ್ರಹ್ಮದೇವರ ಕರಾರ್ಚಿತ ಪ್ರತಿಮೆಯಾದ , ಶ್ರೀಸೀತಾ ಸಮೇತ ರಾಮಚಂದ್ರ ದೇವರು ಮುಟ್ಟಿ ಪೂಜಿಸಿದ ದಿವ್ಯ ಸನ್ನಿಧಾನೋಪೆತ ಪ್ರತಿಮೆಯಾದ "ಶ್ರೀಮೂಲರಾಮ"ದೇವರನ್ನು ಅರ್ಚಿಸಲು ಆ ರಾಮಚಂದ್ರನ ಹೆಸರನ್ನೇ ಇಟ್ಟುಕೊಂಡು , ಶ್ರೀ ಸುಧೀಂದ್ರ ತೀರ್ಥರಿಂದ ಅನುಗ್ರಹೀತರಾಗಿ ಹಂಸನಾಮಕನ ಪರಂಪರೆಯಲ್ಲಿ "ಶ್ರೀ ರಾಘವೇಂದ್ರ ತೀರ್ಥ" ಎಂಬ ಅಭಿದಾನದಿನ ಅವತರಿಸಿದ ಮಹಾಪುರುಷರು. ಸಜ್ಜನರ ಉದ್ಧಾರವನ್ನೇ ತಮ್ಮ ಧ್ಯೇಯವನಿಗಿಟ್ಟುಕೊಂಡು ಶ್ರೀಮನ್ಯಾಯಸುಧಾ ಪರಿಮಳವೆ ಮೊದಲಾದ ಟಿಪ್ಪಣಿ ಗ್ರಂಥಗಳು , ದಶೋಪನಿಶತ್ತುಗಳಿಗೆ ವ್ಯಾಖ್ಯಾನ ಇತ್ಯಾದಿಯಾಗಿ ಮಾಡಿ ಜಗದ್ಗುರುಗಳು ಎನ್ನಿಸಿದ ಸಿದ್ಧಪುರುಷರು." ಹನುಮನ ಮತವೆ ಹರಿಯ ಮತವು , ಹರಿಯ ಮತವೆ ಹನುಮನ ಮತವು " ಎಂಬ ಮಾತನ್ನು ಸತ್ಯಪಡಿಸಿ ತೊರಿಸಿದವರು. ನಾಡಿನಾದ್ಯಂತ ಸಂಚರಿಸಿ ಮಧ್ವಮತದ ಕೀರ್ತಿ ಪತಾಕೆ ಹಾರಿಸಿದವರು. ತಪ್ತಮುದ್ರಾದಿಧಾರಣೆಯೇ ಮೊದಲಾದ ಸದ್ವೈಷ್ಣವ ಆಚರಣೆಗಳಿಗೆ ಆಕ್ಷೇಪ ಬಂದಾಗ ಸರಿಯಾದ ಉತ್ತರ ಕೊಟ್ಟು "ದುರ್ವಾದಿಧ್ವಾಂತರವಿಃ " ಎನ್ನಿಸಿಕೊಂಡು , ಸತ್ಪರಂಪರೆ ಉಳಿಯುವಂತೆ ಮಾಡಿ ವೈಷ್ಣವವರಿಗೆ "ವೈಷ್ಣವೇಂದೀವರೆಂದುಃ"ಗಳೆನಿಸಿದವರು. ಅಶೇಷ ಸಜ್ಜನರಿಗೆಲ್ಲ ಕಲ್ಪತರು-ಕಾಮಧೇನುಗಳೆನಿಸಿ " ಅತ್ಯಂತದಯಾಲುಃ" ಎಂದೇ ಖ್ಯಾತನಾಮರಾದವರು. ಮುಕ್ತಿಗೆ ಭಕ್ತಿಯೇ ಪ್ರಧಾನಮಾರ್ಗ ಎಂದು ತಿಳಿ ಹೇಳಿ ಆ ಭಕ್ತಿಯನ್ನು ಶ್ರೀಹರಿಯಲ್ಲಿ ಬರುವಂತೆ ಮಾಡಲು "ಕರೆದಲ್ಲಿ ಬರುವಾತ"ಎಂದೇ ಸುಪ್ರಸಿದ್ಧರಾದವರು.ಶ್ರೀ ಸುಮತೀಂದ್ರ ತೀರ್ಥರ ಕೈಯ್ಯಲ್ಲಿ ಮಧ್ವರ ಸೇವೆ ಮಾಡಿಸಿ , ಶ್ರೇಷ್ಠ ಗ್ರಂಥಗಳನ್ನು ಬರೆಯಲು ಅನುಗ್ರಹಿಸಿದರು. ತಮ್ಮ ನಂತರ ಮಧ್ವರ ಸೇವೆಗೆ ಶ್ರೇಷ್ಠ ಯತಿಗಳು ಬರಲಿದ್ದಾರೆ ಎಂದು ಅಭಯವನ್ನಿತ್ತು , ಆಯಾ ಯತಿಗಳ ಕಾಲದಲ್ಲಿ ಅವರಲ್ಲಿ ನಿಂತು ಸಂಪೂರ್ಣ ಅನುಗ್ರಹ ಮಾಡಿದವರು ( ಶೇಷಚಂದ್ರಿಕಾಚಾರ್ಯರ ಬಗ್ಗೆ ವ್ಯಸರಜಾರ ಭವಿಷ್ಯ ವಾಣಿ , ಶ್ರೀ ವರದೇಂದ್ರ ತೀರ್ಥರ ಬಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಭವಿಷ್ಯವಾಣಿ) . ಇಂತಹ ಮಹಾನುಭಾವರು ಪ್ರಹ್ಲಾದಾವತಾರಿ ಶ್ರೀ ರಾಘವೇಂದ್ರ ಸ್ವಾಮಿಗಳು. ಅಂತಹ ರಾಘವೇಂದ್ರ ಗುರುಗಳು ಇಂದಿಗೂ ತಮ್ಮ ಭಕ್ತರನ್ನು ಮತಬೇಧ-ಮಠಬೇಧವಿಲ್ಲದೆ ಪೊರೆಯುತ್ತಿದ್ದಾರೆ. ಅನೇಕರು ಇವರ ಬಗ್ಗೆ ಇಲ್ಲ ಸಲ್ಲದನ್ನು ಮಾತಾಡಿದರೂ ಹಂತವರಿಗೂ ಕೂಡ ಅನುಗ್ರಹ ಮಾಡುವ ದೊಡ್ಡತನ ರಾಯರು. "ಶಾಪಾನುಗ್ರಹಶಕ್ತರು" " ಗುರುಸರ್ವಭೌಮರು" " ಯತಿಕುಲತಿಲಕರು" "ಶ್ರೀಮೂಲರಾಮನ ಉಪಾಸಕರು" "ಶ್ರೀಮೂಲಗೋಪಾಲಕೃಷ್ಣನ ಉಪಾಸಕರು" " ದಿಗ್ವಿಜಯರಾಮನ ಉಪಾಸಕರು" " ಶ್ರೀಮನ್ಯಾಯಸುಧಾಕಾರ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮದೇವರ ಉಪಾಸಕರು". ನನ್ನ ಸ್ವರೂಪೋದ್ಧಾರಕರು. ಸ್ವಾಮಿ ! ನಿಮ್ಮಂತಹ ಭಾಗವತಶಿಖಾಮಣಿಗಳ ಬಗ್ಗೆ ಮಾತನಾಡುವದು ನಮ್ಮ ಯೋಗ್ಯತೆಯೇ ? ಸಾಧ್ಯವೇ ಇಲ್ಲ. ಇದು ನಿಮ್ಮ ಪವಾಡವೇ. ಸುಮಧ್ವವಿಜಯಕಾರರು "ಮುಕುಂದಭಕ್ತ್ಯೈ ಗುರುಭಕ್ತಿ ಜಾಯೈ " , " ಮನೋವಿಶುಧ್ಧ್ಯೈ ಚರಿತಾನುವಾದಃ" ಎಂದು  ಹೇಳಿರುವಂತೆ ನನ್ನ ಮೇಲೆ ನಿಮ್ಮಅನುಗ್ರಹವನ್ನು ಗುರುಗಳಾದಂತಹ ಶ್ರೀ ಸುಬುಧೇಂದ್ರ ತೀರ್ಥರ ಮೂಲಕ ಮಾಡಿರಿ ಎಂದು ಬೇಡಿಕೊಳ್ಳುತ್ತ ನಿಮ್ಮಯ ಪಾದಾರವಿಂದಗಳಲ್ಲಿ ನನ್ನ ಈ ಚಿಕ್ಕ ಗುರುಕಾಣಿಕೆ. 

                                       ।।  ಶ್ರೀರಾಘವೇಂದ್ರ ಗುರವೇ ನಮಃ  ಕಾರುಣ್ಯ ಸಿಧಂವೇ ।।  
ತಪ್ಪುಗಳಿದ್ದರೆ ಕ್ಷಮೆ ಇರಲಿ. ಬಾಲನ ಮಾತುಗಳು. 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...