ಶ್ರೀಸೋದೆ ವಾದಿರಾಜರ ಪೀಠ ವಿರಾಜಮಾನರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ಹಾಗು ಶ್ರೀ ರಾಯರ ಪೀಠ ವಿರಾಜಮಾನರಾದ ಶ್ರೀ ಸುಯತೀಂದ್ರ ತೀರ್ಥರು ಕೃಷ್ಣನ ದರ್ಶನ ಮಾಡುತ್ತಿರುವದು .. ಪ್ರಸ್ತುತ ಸಮೀರ ಸಮಯ ಸಂವರ್ಧಿನಿ ಸಭಾ ಶ್ರೀ ವಿಜಯೀಂದ್ರ ತೀರ್ಥರ ಉಡುಪಿಯ ದಿಗ್ವಿಜಯ ಯಾತ್ರೆಯ ಸಾಂಕೇತಿಕ ದರ್ಶನ.. ಇದು ವಾದಿರಾಜ-ವಿಜಯೀಂದ್ರರ ಸ್ನೇಹ ಸಮ್ಮಿಲನ.. ಈ ಇಬ್ಬರು ಗುರುಸರಭೌಮರ ಕಾರಣದಿಂದ ವಾದಿರಾಜ-ವಿಜಯೀಂದ್ರ ಮಠಗಳ ಸ್ನೇಹ ಯಾತ್ರೆ ಇಂದಿಗೂ ಮುಂದು ವರೆದಿದೆ.. ಈ ಹಿಂದೆ ಶ್ರೀ ರಾಘವೇಂದ್ರರ ಪರಮ ಗುರುಗಳಾದ ಶ್ರೀ ವಿಜಯೀಂದ್ರ ತೀರ್ಥರು ಉಡುಪಿಗೆ ಕೃಷ್ಣ ದರ್ಶನಾರ್ಥಿಗಳಾಗಿ ಸಂಚಾರತ್ವೆನ ದಿಗ್ವಿಜಯ ಕೈಗೊಂಡಿದ್ದರು. ಅಂದು ಉಡುಪಿ ಗ್ರಾಮದ ಎಲ್ಲೆಯಿಂದ ಪ್ರಾರಂಭಿಸಿ ಉಡುಪಿಯ ಕೃಷ್ಣ ಮಠದ ವರೆಗೆ ಹಸಿರು ಚಪ್ಪರಗಳನ್ನು,ತಳಿರು ತೋರಣಗಳನ್ನೂ ಹಾಕಲಾಗಿತ್ತು ... ಉಡುಪಿಯು ಪರ್ಯಾಯ ಮಹೋತ್ಸವಕ್ಕೆ ಸಜ್ಜಾದಂತೆ ತೋರುತ್ತಿತ್ತು.. ಕಾರಣ ಶ್ರೀ ಭಾವಿಸಮೀರ ವಾದಿರಾಜ ಯತಿಶ್ವರರ ಪರಮಾಪ್ತ ಮಿತ್ರರೊಬ್ಬರು ಉಡುಪಿಗೆ ಆಗಮಿಸುತ್ತಿದ್ದರು .. ಆಗ ನಡೆದ ಮೆರವಣಿಗೆಯಲ್ಲಿ ಆನೆ , ಕುದುರೆ , ಒಂಟೆ , ಮೂಲ ರಾಮನಿಗಾಗಿ ಸ್ವರ್ಣಮಯ ಪಲ್ಲಕ್ಕಿ , ಛತ್ರ-ಚಾಮರಗಳು ಎಲ್ಲವೂ ಇದ್ದವು .. ಇಡೀ ಉಡುಪಿಯಾ ಪಂಡಿತೊತ್ತಮರೆಲ್ಲರೂ ಶ್ರೀಗಳನ್ನು ಸ್ವಾಗತಿಸಲು ವೇದ-ಘೋಷಗಳೊಡನೆ ಹೊರಟರು.. ಉಡುಪಿ ಗ್ರಾಮಸ್ಥರೆಲ್ಲ ವಾದಿರಾಜರ ಪ್ರಿಯಮಿತ್ರ , ಶತಾಧಿಕ ಗ್ರಂಥರತ್ನ ಪ್ರಣೆತ ವಿಜಯೀಂದ್ರ ರ ದರ್ಶನ ಪಡೆಯಲು ಉತ್ಸುಕರಾಗಿದ್ದರು .. ವಿಜಯೀಂದ್ರ ಸ್ವಾಮಿಗಳು ಆಗಮಿಸಿ ಪಲ್ಲಿಕ್ಕಿ ಯಲ್ಲಿ ಆರೂಢರಾಗಿ ಹೊರಟರೆ ದೇವೇಂದ್ರ ವಿಮಾನಾರೂಢನಾಗಿ ಹೊರತಿದ್ದನೋ ಎಂಬಂತೆ ತೋರುತ್ತಿತ್ತು .. ಶ್ರೀ ವಾದಿರಾಜ ಗುರುಸಾರ್ವಭೌಮರಿಗೆ ಜಯವಾಗಲಿ , ಶ್ರೀ ವಿಜಯೀಂದ್ರ ಗುರುಸರ್ವಭೌಮರಿಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು... ಶ್ರೀ ಕೃಷ್ಣನಿಗೆ ಅರ್ಪಿಸಿದ ಹೂ ಮಾಲೆಯನ್ನು ವಾದಿರಾಜರು ,ವಿಜಯೀಂದ್ರರಿಗೆ ಹಾಕಿ , ಗಾಢವಾಗಿ ಆಲಿಂಗಿಸಿದರು.. ನೋಡುಗರಿಗೆ ಆನಂದ ಭಾಷ್ಪ ಉಂಟಾಯಿತು .. ಇಬ್ಬರು ಮಹಾತ್ಮರನ್ನು ಒಂದೇ ವೇದಿಕೆಯಲ್ಲಿ ಅಲಿಂಗನ ಮಾಡುತ್ತಿರುವದನ್ನು ನೋಡಿದ ಜನರೇ ಭಾಗ್ಯವಂತರು .. ಈ ಪ್ರೀತಿ ಪ್ರದರ್ಶನಕ್ಕೆ ಕಾರಣ ಶ್ರೀ ಮೂಲರಾಮಾರ್ಚಕರ ಹಾಗು ಶ್ರೀ ಕೃಷ್ಣನ ಅರ್ಚಕರ ಸಂದರ್ಶನವಾಗಿದ್ದು ಇಪ್ಪತ್ತೈದು ವರ್ಷಗಳ ನಂತರ .. ವಿಜಯೀಂದ್ರರು ಕೃಷ್ಣ ಮಠಕ್ಕೆ ದಯಮಾದಿಸಿದರು .. ಸ್ವತಹ ಮಹಾನುಭಾವರಾದ ವಾದಿರಾಜರು ಅವರ ಕೈ ಹಿಡಿದು ಕರೆದುಕೊಂಡು ಬಂದು ಕೃಷ್ಣನ ದರ್ಶನ ಮಾಡಿಸಿದರು .. ಶ್ರೀ ವಾದಿರಾಜರು ಮಠಾಧಿಕಾರಿಗಳಿಂದ ಪಾದಪೂಜೆಗೆ ವ್ಯವಸ್ಥೆ ಮಾಡಿಸಿದರು . . ಮರುದಿನ ಶ್ರೀ ಮೂಲರಾಮನ ಪೂಜೆ ನಡೆಯಿತು , ಅದೇ ಸಮಯದಲ್ಲಿ , ಅದೇ ಸ್ಥಳದಲ್ಲಿ , ಅಷ್ಠ ಮಠಾಧಿಪರು ಸಂಸ್ಥಾನ ಪೂಜೆ ಮುಗಿಸಿದರು .. ಎಲ್ಲರು ಪರಸ್ಪರ ದೇವತಾರ್ಚಾ ಗಳನ್ನೂ ದರ್ಶನ ಮಾಡಿಸಿದರು .. ಎಲ್ಲ ಸ್ವಾಮಿಗಳು ಮೂಲ ರಾಮನನ್ನು ದರ್ಶನ ಮಾಡಿಕೊಂಡು ಕೃತಾರ್ಥ ರಾದರು .. ಸಂಸ್ಥಾನ ಬೇರೆ ಓರಿಗೆ ಹೊರಡುವ ಸಮಯ ಬಂದಾಗ ಎಷ್ಟು ಸಂತಸದಿಂದ ಬರಮಾದಿಕೊಂಡಿದ್ದರೋ ಅಷ್ಟೇ ದುಃಖದಿಂದ ಬಿಳ್ಕೊಟ್ಟರು .. ವಿಜಯೀಂದ್ರ ರು " ಕೃಷ್ಣ ದರ್ಶನ ದಿಂದ ಕೃತಾರ್ಥನಾದೆ " ಎಂದು ಹೇಳಿದರು .. ಅದಕ್ಕೆ ವಾದಿರಾಜರು "ನಿಮ್ಮ ಈ ಉಡುಪಿಯ ಯಾತ್ರೆ ಇತಿಹಾಸ ಪ್ರಸಿದ್ಧವಾಗುವದು ಮಿತ್ರರೇ !! ಈ ಘಟನೆ ಆಚಂದ್ರಾರ್ಕವಾಗಿ ನಿಲ್ಲುತ್ತದೆ " ಎಂದು ಉದ್ಗರಿಸಿದರು ..!!
ಇದೆ ಸ್ನೇಹ ಮಠದ್ವಯಗಳ ಪರಂಪರೆಯಲ್ಲಿ ಬಂದಿವೆ .. ರಾಯರ ಮಠದ ಶ್ರೀ ಸುಶೀಲೇಂದ್ರ ತೀರ್ಥರು ಉಡುಪಿಗೆ ಯಾತ್ರೆ ಕೈಗೊಂಡಾಗಳೂ ಕೂಡ ಉಡುಪಿಯ ಅಷ್ಠ ಮಠಾಧಿಪತಿಗಳು ಸಂಭ್ರಮಾದರಗಳಿಂದ ಸ್ವಾಗತಿಸಿದ್ದು ಇತಿಹಾಸ .. ಆಗಿನ ಅಷ್ಠ ಮಠಾಧೀಶರು ತಮ್ಮ ತಮ್ಮ ಮಠಗಳಿಂದ ಶ್ರೀಯವರ ಪಾದಪೂಜೆ ವ್ಯವಸ್ಥೆ ಮಾಡಿಸಿದ್ದರು .. ಈ ಹಿಂದೆ ವಾದಿರಾಜರು ವಿಜಯೀಂದ್ರರಿಗೆ ಕೃಷ್ಣ ಮಠದ ಎದುರಿಗಿನ ಜಾಗೆಯನ್ನು ಮಠ ನಿರ್ಮಾಣಕ್ಕಾಗಿ ಜಾಗೆಯನ್ನು ಕೊಟ್ಟಿದ್ದರು .. ಅಲ್ಲಿ ಪ್ರಾಚೀನ ಮಠವೊಂದಿತ್ತು .. ಅಲ್ಲಿ ಸುಶೀಲೆಂದ್ರ ತೀರ್ಥರು ಉಡುಪಿ ದಿಗ್ವಿಜಯ ಕೈಗೊಂಡಾಗ ಅದಮಾರು ಮಠದ ಶ್ರೀ ವಿಬುಧಪ್ರಿಯ ಶ್ರೀಪಾದರ ಇಚ್ಚೆಯಂತೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಮೃತ್ತಿಕ ವೃಂದಾವನ ಪ್ರತಿಷ್ಥಾಪನೆ ಮಾಡಿದರು .. ಆ ಮಠ ಅದೇ ಪರಂಪರೆಯಲ್ಲಿ ಬಂಡ ಶ್ರೀ ಸುಶಮೀಂದ್ರ ತೀರ್ಥರ ಕಾಲದಲ್ಲಿ ನವೀಕರಣಗೊಂಡು ಕೃಷ್ಣ ಮಠದ ಎದುರಿಗೆ ಕಂಗೊಳಿಸುತ್ತಿದೆ.. ಅಲ್ಲಿ ಪ್ರತಿ ವರ್ಷ ರಾಯರ ಪೂಜಾರಾಧನೆಗಳು ತಪ್ಪದೆ ನಡೆಯುತ್ತಿವೆ
ಉಡುಪಿಯಲ್ಲಿ ಸೋದೆ ಮಠ ಪರ್ಯಾಯಕ್ಕೆ ಬಂದಾಗ , ಶ್ರೀ ಸುಶೀಲೆಂದ್ರ ತೀರ್ಥರು ಸ್ಥಾಪಿಸಿದ ಶ್ರೀ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ಉಡುಪಿಯಲ್ಲಿಯೇ ನಡೆಸಲಾಗಿದೆ.. ಈ ಹಿಂದೆ ಸೋದೆ ಮಠಕ್ಕೆ ಶ್ರೀ ವಿಶ್ವೋತ್ತಮ ತೀರ್ಥರು ಪೀಠಾಧಿಪರಾಗಿದಾಗ ಸಭೆ ಉಡುಪಿಯಲ್ಲಿಯೇ ನಡೆದಿತ್ತು ಆಗ ರಾಯರ ಮಠಕ್ಕೆ ಶ್ರೀ ಸುಜಯೀಂದ್ರ ತೀರ್ಥರು ಪೀಠಾಧಿಪರಾಗಿದ್ದರು.. ಆ ಸಭೆಯೂ ಕೂಡ ವಾದಿರಾಜ-ವಿಜಯೀಂದ್ರರ ಭೇಟಿಯ ಸಾಂಕೇತಿಕ ಸ್ವರೂಪವೇ ಆಗಿತ್ತು ..
No comments:
Post a Comment