ಅಭಿಪ್ರಾಯ :
ಭಕ್ತಾನಾಂ ಮಾನಸಾಂಭೋಜ.... ಪುಸ್ತಕಗಳ ಲೋಕದಲ್ಲಿ ವಿಶಿಷ್ಟ ಛಾಪು ಮುಡಿಸಿದ ಪುಸ್ತಕ.. ಎರೆಡು ಸಂಪುಟಗಳು.. ಪುಸ್ತಕ ಕೊಂಡಾಕ್ಷಣ ದೇವರ ಮುಂದೆ ಇಟ್ಟು ಆ ಭಗವಂತನಲ್ಲಿ , ವಾಯುದೇವರಲ್ಲಿ , ಶ್ರೀವಿಜಯೀಂದ್ರ-ರಾಘವೇಂದ್ರಗುರುಸಾರ್ವಭೌಮರಲ್ಲಿ ಜ್ಞಾನ ವೃದ್ಧಿಗಾಗಿ ಕೇಳಿಕೊಂಡೆ.. ನಂತರ ಎರೆಡು ಸಂಪುಟಗಳ ಪರಿವಿಡಿಯತ್ತ ಗಮನ ಹರಿಸಿದಾಗ ಅದ್ಭುತ , ಅಪೂರ್ವ, ಅತ್ಯುತ್ತಮ ವಿಷಯಗಳ ಬಗ್ಗೆ ಇರುವ ಲೇಖನಗಳ ಸರಮಾಲೆಯನ್ನು ನೋಡಿ ಸಂತೋಷವಾಯಿತು.. ವಿಷಯಾನುಕ್ರಮಣಿಕಾ ಕುತೂಹಲ ಹುಟ್ಟಿಸುವಂಥದ್ದು.. " ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮ"ರ ಬಗ್ಗೆ ವಿಶೇಷ ಕೈಪಿಡಿಯಂತೆ ಇದೆ ಈ ಪುಸ್ತಕ.. ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು .. ಹೇಗೆ ರಾಜಾ ಗುರುರಾಜಾಚಾರ್ಯರ "ಅಜಯ್ಯ ವಿಜಯೀಂದ್ರರು " ಅವರ ಪುಣ್ಯತಮ ಚರಿತ್ರೆಗೆ ಹಿಡಿದ ಕೈಗನ್ನಡಿ ಯಾಗಿದೆಯೋ , ಹಾಗೆ " ಭಕ್ತಾನಾಂ ಮಾನಸಾಂಭೋಜ " ಎಂಬೀ ಪುಸ್ತಕವು ಅವರ ಗ್ರಂಥಗಳ ಅದ್ಭುತ ಜಗತ್ತಿಗೆ , ಅವರ ಸ್ವರೂಪಕ್ಕೆ ಹಿಡಿದ ಕೈಗನ್ನಡಿ ಎನಿಸಿದೆ.. "ಅಜಯ್ಯ ವಿಜಯೀಂದ್ರರು " ಶ್ರೀಮದ್ವಿಜಯೀಂದ್ರ ತೀರ್ಥರ ಕಾಲಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ , ಆ 'ವಿಜಯೀಂದ್ರ ವಿಜಯದ' ಆ ದಿನಗಳಲ್ಲಿ ನಮ್ಮನ್ನು ತೇಲಿಬಿಡುವದೋ , ಅದೇ ರೀತಿ ನಾಡಿನ ಅನೇಕ ಜನ ವಿದ್ವಾಂಸರುಗಳು ತಮ್ಮ ಜ್ಞಾನವನ್ನು ಒರೆಗಲ್ಲಿಗೆ ಹಚ್ಚಿ ರೂಪು ಕೊಟ್ಟ "ಭಕ್ತಾನಾಂ ಮಾನಸಾಂಭೋಜ" ಶ್ರೀಮದ್ವಿಜಯೀಂದ್ರ ಶ್ರೀಮಚ್ಚರಣರ ಗ್ರಂಥಸಾಗರದಲ್ಲಿ ಆಸಕ್ತರಾಗುವಂತೆ ನಮ್ಮಂತಹ ಸಾಮಾನ್ಯ ಜನರಿಗೂ ಪ್ರೇರೇಪಿಸುವದರಲ್ಲಿ ಸಂಶಯವೇ ಇಲ್ಲ... ನಮ್ಮಂತಹ ಸಾಮಾನ್ಯ ಜನಾರಾ ಅಭಿರುಚಿಗೆ ತಕ್ಕಂತೆ ಚೊಕ್ಕದಾದ ಪುಸ್ತಕಗಳನ್ನು ಪ್ರಕಟಿಸುತ್ತಿರುವ , ನಡೆದಾಡುವ ರಾಯರು , ಮಂತ್ರಾಲಯ ಮಠಾಧೀಶರಾದ ಶ್ರಿಮತ್ಸುಶಮೀಂದ್ರ ತೀರ್ಥರ ಅನುಗ್ರಹಬಲದಿಂದ ಇರುವ " ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನ"ಕ್ಕೆ ನಾನು ಚಿರಋಣಿ.. ಇದರ ಬೆನ್ನುಲುಬಾಗಿ ಇದ್ದ , ಈ ಯೋಜನೆಯ ಮುಖ್ಯ ಕಾರಣರಾದ , ಪುಸ್ತಕ ಪ್ರಕಟಣೆಯಲ್ಲಿ ಎತ್ತಿದ ಕೈ ಇದ್ದ ಶ್ರೀಪಾದಪುತ್ರ ಶ್ರೀ ರಾಜ ಎಸ್ ರಾಜಗೋಪಾಲಾಚಾರ್ಯರು ಇರಬೇಕಿತ್ತು ಈಗ.. ಈ ಗ್ರಂಥಕ್ಕಾಗಿ ಹಾಗು ಪ್ರತಿಷ್ಠಾನದ ಪರವಾಗಿ ದುಡಿದ ಎಲ್ಲ ಸಜ್ಜನರಿಗೂ ನಾವು ಅಭಿನಂದನೆ ಸಲ್ಲಿಸಲೇ ಬೇಕು.. ಇದರಿಂದ " ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನ"ದ ಪುಸ್ತಕಗಳನ್ನು ಕೊಳ್ಳುವ ಒದಗನಿಗೆ ಯಾವುದೇ ನಿರಾಶೆಯಾಗುವದಿಲ್ಲ ಎನ್ನುವದನ್ನ ಪ್ರತಿಷ್ಠಾನ ಸಬೀತು ಪಡಿಸಿದೆ.. ಈ ಗ್ರಂಥದ ನಿರ್ಮಾಣಕ್ಕೆ ಸಂಪೂರ್ಣ ಅನುಗ್ರಹ ಮಾಡಿ ಫಲ ಮಂತ್ರಾಕ್ಷತೆ ಇತ್ತ ಶ್ರೀ ೧೦೦೮ ಶ್ರೀಸುಬುಧೇಂದ್ರ ತೀರ್ಥರಿಗೂ ನಮಸ್ಕಾರಗಳು.