ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ ।।
ಉಪಾಸ್ಯಾ ರಾಘವೇಂದ್ರಾರ್ಯೈಃ ಅಘನಾಶನಕೀರ್ತಿಭಿಃ ।।
ಸಂತಾನಕೃಷ್ಣಪ್ರತಿಮೆಯು ಸುವರ್ಣಮಯವಾದ ಪ್ರತಿಮೆಯಾಗಿದ್ದು, ಸರ್ವಸಿದ್ಧಿಯನ್ನು ಕೊಡುವಂತಹ ಪ್ರತಿಮೆ.
ಶ್ರೀರಾಘವೇಂದ್ರಗುರುಸಾರ್ವಭೌಮರಿಂದ ವಿಶೇಷವಾಗಿ ಉಪಾಸನೆಗೊಂಡ ಪ್ರತಿಮೆ. ಬಂದ ಪಾಪಗಳನ್ನು, ತತ್ಸಂಬಂಧಿ ಕಷ್ಟಗಳನ್ನು ನಾಶಮಾಡಬಲ್ಲ ಮಹಾಸನ್ನಿಧಾನೋಪೇತ ಪ್ರತಿಮೆ.
ಶ್ರೀರಾಘವೇಂದ್ರಗುರುಸಾರ್ವಭೌಮರು ವಿಶೇಷವಾಗಿ ಉಡುಪಿಯಲ್ಲಿ ಶ್ರೀಕೃಷ್ಣನ ಉಪಾಸನೆಯನ್ನು ಮಾಡಿ, ಅಲ್ಲಿ ಚಂದ್ರಿಕಾಗ್ರಂಥಕ್ಕೆ ಪ್ರಕಾಶ ಎಂಬ ವ್ಹಯಾಖ್ಯಾನವನ್ನು ಮಾಡಿ, ಇನ್ನೂ ಕೆಲವು ಟಿಪ್ಪಣಿಗಳನ್ನು ರಚಿಸಿ, ಶ್ರೀಕೃಷ್ಣನ ಸನ್ನಿಧಾನದಲ್ಲಿ ತಾವೇ ಒಂದು ಸುರ್ವಣಮಾಯವಾದ ಪ್ರತಿಮೆಯನ್ನು ನಿರ್ಮಾಣ ಮಾಡಿ, ಶ್ರೀಕೃಷ್ಣನ ಸನ್ನಿಧಾನದಲ್ಲಿಟ್ಟು ಪೂಜಿಸಿ ತೆಗೆದುಕೊಂಡು ಬಂದು ತಾವು ಉಪಾಸನೆಯನ್ನು ಮಾಡುತ್ತಿದ್ದರು. ಅದೇ ಕೃಷ್ಣನ ಉಪಾಸನಾಬಲದಿಂದ ಸನ್ನಿಧಾನದಲ್ಲಿ ಸಂತಾನಯಂತ್ರ, ಭೀತಿಯಂತ್ರ ಹಾಗೂ ಅಭಿಷ್ಟಯಂತ್ರದ ಸಿದ್ಧಿ ಇದ್ದು, ಇಂದಿಗೂ ಸಂಸ್ಥಾನದಲ್ಲಿ ಇದರ ಜಾಗೃತ ಫಲಗಳನ್ನು ಪ್ರತ್ಯಕ್ಷವಾಗಿ ನೋಡಬಹುದು.