Friday, 23 December 2011

ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ

ಮಹಾ ಮಹಿಮ ಶ್ರೀ ರಾಘವೇಂದ್ರ ಸ್ವಾಮಿ ಮಠದ, ಶ್ರೀ ರಾಯರ ಪೂರ್ವಜರಾದ ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ ಸುದಿನ ಇಂದು.ದಿ.೨೩ ಪೂರ್ವರಾಧನೆಯಾದರೆ ದಿ.೨೪ ರಂದು ಮಧ್ಯರಾಧನೆ ದಿ.೨೫ ರಂದು ಉತ್ತರರಾಧನೆ ಶ್ರೀಗಳವರ ಮೂಲಸ್ಥಳವಾದ ಶ್ರೀ ಜಿತಮಿತ್ರ ಗಡ್ಡೆ ಎಂದೇ ಪ್ರಸಿದ್ಧವಾದ ದ್ವೀಪ ಪ್ರದೇಶದಲ್ಲಿ ಶ್ರೀಗಳವರ ಪರಮ ಸನ್ನಿಧಾನವುಳ್ಳ ವೃಕ್ಷಕ್ಕೆ ಶ್ರೀ ಸುಯತೀಂದ್ರ ತೀರ್ಥರು ಪೂಜೆ ಸಲ್ಲಿಸಿದರು . ಶ್ರೀ ಜಿತಮಿತ್ರ ತೀರ್ಥರ ಪರಮ ಪವಿತ್ರ ಸ್ಥಳವಾದ ಈ ಪ್ರದೆಶದಲ್ಲಿ ಶ್ರೀ ಸುಯತೀಂದ್ರ ತೀರ್ಥರು ಶ್ರೀ ಬ್ರಹ್ಮ ಕರರ್ಚಿತ ಪ್ರತಿಮೆ ಶ್ರೀಮನ್ಮೂಲ ರಾಮ ಪ್ರತಿಮೆ ಹಾಗು ಇತರೆ ಪ್ರತಿಮೆಗಳನ್ನು ಅರ್ಚಿಸಿದರು. ಶ್ರೀ ಜಿತಮಿತ್ರ ತೀರ್ಥರು ಮಹಿಮನ್ವಿತರಾಗಿದ್ದು ಅವರು ೭ ದಿನಗಳ ಕಾಲ ಪ್ರವಾಹದಲ್ಲಿ ಮುಳುಗಿದ್ದರು ಸಹ ದಿವ್ಯ ಶಕ್ತಿ ಹಾಗು  ಆರಾಧ್ಯ ದೈವವಾದ ಶ್ರೀಮನ್ಮೂಲ ರಾಮನ ಅನುಗ್ರಹದಿಂದ ಮೆತ್ತೆ ಎದ್ದು ಬಂದು ಪವಾಡ ಮಾಡಿದರು . [ ಶ್ರೀ ಜಿತಾಮಿತ್ರರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ವೆಬ್ ವಿಳಾಸವನ್ನು ಸಂದರ್ಶಿಸಿ.]


    

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...