Monday, 9 January 2012

"ಮಡೆ ಸ್ನಾನ" ಕೇವಲ ನೆಪ ಮಾತ್ರ

ದಲಿತರ ನಾಯಕ ನಿಡುಮಾಮಿಡಿ ಶ್ರೀಗಳು  ಮಡೆ ಸ್ನಾನವನ್ನು ಕೇವಲ ನೆಪ ಮಾತ್ರವಾಗಿಸಿದ್ದಾರೆ. ಅವರ ಮೂಲ ಉದ್ದೇಶ ಬ್ರಾಹ್ಮಣರ ಮೇಲೆ ಗೂಬೆ ಕೂರಿಸುವದು. ಮೊದಲಿನಿಂದಲೂ ತಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ಬ್ರಾಹ್ಮಣವಿರೋಧಿ ಕಾರ್ಯದಲ್ಲಿ ತೊಡಗಿದ್ದಾರೆ.ಯಾರು , ಯಾವುದೇ ವಿಷಯ ಬಂದರು ಕೂಡ ಉಡುಪಿ ಶ್ರೀ ಕೃಷ್ಣ ಮಠದ ಸುತ್ತಲೇ ಹೋಗುತ್ತಾರೆ, ಮಹಾನುಭಾವರಾದ, ದಲಿತರ ರಕ್ಷಣೆಗಾಗಿ ಹೋರಾಡುತ್ತಿರುವ  ಶ್ರೀ ೧೦೦೮ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವಿರುದ್ಧ ವಾದಿಸುವದನ್ನೇ ತಮ್ಮ ದಿನಚರಿಯನ್ನಾಗಿಸಿಕೊಂಡಿದ್ದಾರೆ. ಈ ಮಡೆ ಸ್ನಾನದ ವಿಷಯದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪೇಜಾವರ ಶ್ರೀಗಳ ಮಾತು,ಚಿಂತನೆಯನ್ನು ಅರ್ಥ ಮಾಡಿಕೊಳ್ಳಲಾಗದ ನಿಡುಮಾಮಿಡಿ ಶ್ರೀ ಏನೇನೋ ಮನ ಬಂದಂತೆ ನಿಷೇಧದ ಸುತ್ತಲೇ ಹೋಗುತ್ತಾರೆ.ಅದರ ಜೊತೆಗೆ ಸಂವಿಧಾನ ವಿರೋಧಿ ಎಂದು ಪೇಜಾವರ ಶ್ರೀಗಳ ಮೇಲೆ ಆರೋಪ ಕೂರಿಸುವ ಪ್ರಯತ್ನ ಮಾಡಿದ್ದರೆ. ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್.ಎಲ್.ಭೈರಪ್ಪನವರ ವಿರುದ್ಧವೂ ಮಾನಸಿಕ ಅಸ್ವಸ್ಥರಂತೆ ಮಾತನಾಡಿದ್ದರು.ಆಗಲೂ ಸಹ " ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣನನ್ನು ಪೂಜಸಿಲು ಬಿಟ್ಟರೆ ನಾನು ಸಿದ್ಧ" ಎಂದರು. ಶ್ರೀ ಕೃಷ್ಣ ಪರಮಾತ್ಮನನ್ನು ಪೂಜಿಸುವದಕ್ಕು , ಕಂಬಾರರಿಗೆ ಪ್ರಶಸ್ತಿ ದೊರೆತ್ದಕ್ಕು , ಭೈರಪ್ಪನವರ ವಿರುದ್ಧ ಮಾತನಡುವದಕ್ಕೂ , ಇವೆರಡರ ನಡುವೆ ಪೇಜಾವರ ಮಠ ಸ್ವಾಮೀಜಿವಿರುದ್ಧ ಮಾತನಾಡುವದಕ್ಕೂ-ಕೃಷ್ಣ ಮಠಕ್ಕೂ ಏನು ಸಂಬಂಧ . ಭೈರಪ್ಪನವರ ವಿಚಾರ ಬಿಡಿ ಸತತವಾಗಿ ಪೇಜಾವರ ಮಠ ಸ್ವಾಮೀಜಿ ವಿರುದ್ಧವಾಗಲಿ, ಶ್ರೀ ಕೃಷ್ಣ ಮಠದ ಬಗ್ಗೆ ಮಾತನಾಡಲು ಅಧಿಕಾರ ಈ ಸ್ವಾಮಿಜಿಗಿಲ್ಲ .ಹೇಗೆ ಅಪ್ಪನ ಆಸ್ತಿ ಮಗನಿಗೆ ಸೇರಬೇಕೋ ಅದರಂತೆ ಮಧ್ವ ಪ್ರತಿಷ್ಟಪಿತ ಮೂರ್ತಿ ಚೆಂದದ ಕೃಷ್ಣನು ಕೂಡ ಮಾಧ್ವರಿಗೆ ಸೇರಿದ್ದು.ಅಸ್ತು ಕೃಷ್ಣನನ್ನು ಪುಜಿಸಬೆಕೆಂದಿದ್ದರೆ ಸ್ವತಹ ನಿಡುಮಾಮಿಡಿ ಶ್ರೀಗಳೇ ಕೃಷ್ಣನನ್ನು ಪ್ರತಿಷ್ಥಾಪಿಸಲಿ ಅದನ್ನೇ ಪುಜಿಸಲಿ. ಅದು ಬಿಟ್ಟು ನಾನು ಪೇಜಾವರ ಶ್ರೀಗಳ ಉತ್ತರಾಧಿಕಾರಿಯಾಗಲು ಸಿದ್ಧ ಎಂದು ಹೇಳುವದು ಎಷ್ಟು ಉಚಿತ ? ಈಗಲೂ ಕೂಡ ಪೇಜಾವರ ಸ್ವಾಮಿಗಳ ಚಿಂತನೆಯನ್ನೇ ಅರಿಯದೆ ಮಡೆ ಸ್ನಾನ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದರೆ. ಇನ್ನು ಒಂದು ಹೇಳ ಬೇಕಾದ ಸಂಗತಿಯೆಂದರೆ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಧಾರ್ಮಿಕವಾಗಿ ಮಾಡುವ ಆಚರಣೆಗಳಲ್ಲಿ ಸ್ವಾತಂತ್ರ್ಯವಿದೆ. ಪೇಜಾವರ ಸ್ವಾಮಿಗಳು ಹೇಳುತ್ತಿರುವದು ಇದನ್ನೇ. ನಾವು ಯಾರು ಮಾಡು ಎಂದು ಹೇಳಿಲ್ಲ, ಅದು ಜನರ ನಂಬಿಕೆ , ಅದು ನಿನ್ನೆಯ, ಮೊನ್ನೆಯದಲ್ಲ . ಬಹಳ ಪುರಾತನವಾದ ಆಚರಣೆ. ಪೇಜಾವರ ಸ್ವಾಮಿಗಳು ಇದನ್ನು ಸಮರ್ಥಿಸಿಕೊಲ್ಲುವದಿಲ್ಲ. ಆದರೆ ಅವರು ಹೇಳುವದು ಹೋರಾಟದಿಂದ ಪ್ರೋಯೋಜನವಾಗದು ಎಂದು . ಈ ನಿಟ್ಟಿನಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವದು ಅಗತ್ಯ ಎಂದು. ಓದುಗರೇ ನೀವೇ ನಿರ್ಧಾರಕ್ಕೆ ಬನ್ನಿ ಅನೇಕ ವರ್ಷಗಳಿಂದ ನಂಬಿಕೆ ಇಟ್ಟಿರುವ ಪದ್ಧತಿಯನ್ನು(ಅದು ಸರಿಯೇ ಆಗಿರಲಿ ತಪ್ಪೇ ಆಗಿರಲಿ) ಬಲವಂತವಾಗಿ ನಿಷೆಧಿಸುವದು ಸರಿಯೇ ಅಥವಾ ಆ ರೀತಿ ಮಾಡದೇ ಜನರಲ್ಲಿ ಜಾಗೃತಿ ಮೂಡಿಸಿ ಮುಂದುನದಿನಗಳಲ್ಲಿ ಸರಿಪಡಿಸಬೇಕೆ ಎಂಬುದನ್ನು.



No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...