ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಯತಿವರ್ಯ ಹಾಗು ಶ್ರೀ ವಿಬುಧೇಂದ್ರ ತೀರ್ಥರ ಶಿಷ್ಯರಾದ , ಶ್ರೀ ರಾಘವೇಂದ್ರ ಸ್ವಾಮಿಗಳ - ಶ್ರೀ ವಿಜಯೀಂದ್ರ ಸ್ವಾಮಿಗಳ ಪೂರ್ವಿಕ ಗುರುಗಳಾದ ಶ್ರೀ ಶ್ರೀ ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿರುವ ಶ್ರೀಗಳ ಉತ್ಸವ ಮೂರ್ತಿ ಹಾಗು ಶ್ರೀ ಗಳವರ ಪಾದುಕೆಗಳು .
ಶ್ರೀ ಜಿತಾಮಿತ್ರರ ಸನ್ನಿಧಿಯಲ್ಲಿ ತಪೋ ನಿರತರಾಗಿರುವ ಶ್ರೀ ಅಭಿನವ ಜಿತಾಮಿತ್ರರು
ಶ್ರೀ ಜಿತಾಮಿತ್ರರು ರುದ್ರಾಂಶ ಸಂಭೂತರು . ಇವರ ಪವಾಡಗಳು ಅನೇಕ . ಇದಕ್ಕೆ ಇವರು ನೆಲೆಸಿದ ವೃಕ್ಷವೆ ಸಾಕ್ಷಿ ( ಶ್ರೀಗಳ ವೃಂದಾವನ ಇಲ್ಲ ) . ಶ್ರೀ ಜಿತಾಮಿತ್ರ ತೀರ್ಥ ರು ಪಾಠದಲ್ಲಿ ತೊಡಗಿದಾಗ ರುದ್ರ ದೇವರು ಜಂಗಮನ ರೂಪದಲ್ಲಿ ಬಂದು ಕೂಡುತ್ತಿದ್ದರಂತೆ. ಇದಕ್ಕೆ ಶಿಷ್ಯರ ಆಕ್ಷೇಪ ಬಂದಿತಂತೆ .ಅದಕ್ಕೆ ಶ್ರೀಗಳು "ಸಮಯ ಬಂದಾಗ ಉತ್ತರಿಸುತ್ತೇವೆ ಈಗ ಆತ ಬರಲಿ" ಎಂದರಂತೆ .ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಜಂಗಮ ತಡವಾಗಿ ಬಂದರೂ ಆತ ಬಂದ ರೀತಿ ವಿಚಿತ್ರವಾಗಿತ್ತು . ಆತ ಒಂದು ವಸ್ತ್ರವನ್ನು ಹಾಸಿ ಅದರ ಮೇಲೆ ತೇಲುತ್ತ ಶ್ರೀಗಳ ಸನ್ನಿಧಾನಕ್ಕೆ ಬಂದಿದ್ದ !! .
ಶ್ರೀ ಗಳವರು ಸನ್ಯಾಸಾಶ್ರಮ ಸ್ವೀಕರಿಸಿದ್ದೆ ವಿಚಿತ್ರ . ಅನಂತಪ್ಪ ವಿಬುಧೆಂದ್ರರ ಶಿಷ್ಯನಾಗಿದ್ದು ದೈವಬಲದಿಂದಲೇ ಸರಿ . ವಿಬುಧೆಂದ್ರ ತೀರ್ಥರು ಈತನಿಗೆ ನರಸಿಂಹ ಸಾಲಿಗ್ರಾಮದಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ನರಸಿಂಹ ಸಾಲಿಗ್ರಾಮದ ಅಗಲವಾದ ಬಾಯಿಯಲ್ಲಿ ಅನ್ನವನ್ನು ತುರುಕಿ ದೇವರು ನನ್ನ ನೆವಿದ್ಯವನ್ನು ಸ್ವೀಕರಿಸಲಿಲ್ಲ ಎಂದು ಬಹಳವಾಗಿ ಅನಂತಪ್ಪ ಕೊರಗಿದನಂತೆ . ಆಮೇಲೆ " ನೀನು ಇದನ್ನು ಸ್ವೀಕರಿಸದಿದ್ದರೆ ನಾನು ನನ್ನ ತಲೆಯನ್ನು ಗುಂಡುಕಲ್ಲಿಗೆ ಚಚ್ಚಿಕೊಳ್ಳುತ್ತೇನೆ ಎಂದು ಹೇಳಿದನಂತೆ . ಆಗ ಅಲ್ಲಿದ್ದ ಅನ್ನವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತಂತೆ .!! . ನಂತರ ಮಧ್ವರ ಶಾಸ್ತ್ರಗಳನ್ನು ಶ್ರೀ ವಿಬುಧೆಂದ್ರ ತೀರ್ಥರಲ್ಲಿ ಅಧ್ಯಯನ ಮಾಡಿ ಸನ್ಯಾಸ ಸ್ವೀಕರಿಸಿ ಶ್ರೀ ಜಿತಾಮಿತ್ರ ತೀರ್ಥರು ಎಂದು ಪ್ರಸಿದ್ಧರಾದರು .
ಶ್ರೀ ಗಳು ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಧ್ಯಾನಾಸಕ್ತರಾಗಿದ್ದರಿಂದ ಹೊರಬರದೇ ಅಲ್ಲಿಯೇ ಏಳು ದಿನಗಳ ಕಾಲ ಇದ್ದರು . ಮುಂದೆ ಶಿಷ್ಯರೆಲ್ಲರೂ ದು:ಖ ತಪ್ತರಾಗಿ ಮರಳಿದಾಗ ಶ್ರೀಗಳು ಇನ್ನು ಧ್ಯಾನಾವಸ್ಥೆಯಲ್ಲಿಯೇ ಇದ್ದದ್ದನ್ನು ನೋಡಿ ಶ್ರೀಗಳ ತಪ ಶಕ್ತಿ ಎಂತಹುದು ಎಂಬುದನ್ನು ಮನಕಂಡರಂತೆ. ಮುಂದೆ ಮತ್ತೊಮ್ಮೆ ಪ್ರವಾಹ ಬಂದಾಗ ಶ್ರೀಗಳು ಅದೃಶ್ಯರಾಗಿ " ನಾವು ಇಲ್ಲಿಯೇ ಚಿರಕಾಲ ನೆಲೆಸುತ್ತೇವೆ . ನಮ್ಮ ವೃಂದಾವನ ಕಟ್ಟುವ ಅವಶ್ಯಕತೆ ಇಲ್ಲ . ಇಲ್ಲಿಯೇ ನಾವು ಕುಳಿತುಕೊಳ್ಳುತ್ತಿದ್ದ ಗೋಂದಿನ ಮರದಲ್ಲಿಯೇ ನಿಮ್ಮ ಸನ್ನಿಧಾನ ಇರುತ್ತದೆ .ಇಲ್ಲಿಯೇ ನಮ್ಮ ಆರಾಧನಾದಿಗಳು ನೆರವೇರಲಿ ಎಂದು ಹೇಳಿದರಂತೆ . " . ಅಂದಿನಿಂದ ಇಂದಿನವರೆಗೂ ಆ ಮರಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಪೂಜೆ ನಡೆಯುತ್ತಿದೆ .
ಶ್ರೀಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ರಾಯರ ಮಠದ ಯತಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಶ್ರೀ ಜಿತಾಮಿತ್ರರ ಸನ್ನಿಧಿಗೆ ಆರಾಧಾನೆಗಾಗಿ ಹೋದಾಗ ಅಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ಭೈರಾಗಿಯ ರೂಪದಲ್ಲಿ ಜಿತಾಮಿತ್ರರ ದರ್ಶನ ವಾಯಿತೆಂದು ಅವರೇ ಮುಂದೆ ಗರ್ಭಗುಡಿಗೆ ಹೋಗಿ ಅದೃಶ್ಯರಾದರೆಂದು , ಇದನ್ನು ಶ್ರೀಗಳು ಕಂಡರೆಂದು ಹೇಳುತ್ತಾರೆ . ಇವರ ಅಸ್ತಿತ್ವದ ಮನವರಿಕೆ ಅನೇಕ ರಾಯರ ಮಠದ ಪೀಠಾಧಿಪತಿಗಳಿಗೆ ಆಗಿದೆ .
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಈ ಹಿಂದಿನ ಪೀಠಾಧಿಪತಿಗಳು , ಮಹಾ ವಿರಕ್ತರು , ತಪಸ್ವಿಗಳು , ನಡೆದಾಡುವ ರಾಯರು ಎಂದೇ ಪ್ರಸಿದ್ಧ ರಾಗಿದ್ದ ಪರಮ ಪೂಜ್ಯ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರಿಗೆ " ಅಭಿನವ ಜಿತಾಮಿತ್ರ " ತೀರ್ಥರು ಎಂಬ ಬಿರುದಿದೆ . ಇವರು ಶ್ರೀ ಜಿತಾಮಿತ್ರ ಅಂಶ ( ರುದ್ರಾಂಶ) ಎಂದು ಶ್ರೀಗಳನ್ನು ಹತ್ತಿರದಿಂದ ಬಲ್ಲ ಶಿಷ್ಯ ವರ್ಗದವರು ಹೇಳುತ್ತಾರೆ . ಇದನ್ನು ಮನಗಂಡವರೂ ಬಹಳ ಜನ. ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಗುರುಗಳ ಅಂಶ ಹೊಂದಿದ್ದಾರೆ ಅಂತಲೋ ಏನೋ ಶ್ರೀ ಸುಶಮೀಂದ್ರ ತೀರ್ಥರ ಮೇಲೆ ಅಪಾರ ಕರುಣೆ , ಅನುಗ್ರಹ ಇಟ್ಟಿದ್ದರು . ಶ್ರೀಗಳ ಹತ್ತಿರ ಯಾರೇ ಬಂದರೂ "ರಾಯರಿಗೆ ಹೇಳುತ್ತೇವೆ ಇವರು ನೋಡಿಕೊಳ್ಳುತ್ತಾರೆ " ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟಾಗ ಅದೆಷ್ಟೋ ಜನ ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದಾರೆ . ರಾಯರ ಅನನ್ಯ ಭಕ್ತರು ಮತ್ತು ಅವರ ಪ್ರತಿನಿಧಿಗಳು ಶ್ರೀ ಸುಶಮಿಂದ್ರ ತೀರ್ಥರು ಆಗಿದ್ದರು . ಶ್ರೀ ಗಳವರ ವೃಂದಾವನ ಕಳಾಕರ್ಷಣ ಸಂದರ್ಭದಲ್ಲಿ ಮಂತ್ರಾಲಯ ಕ್ಷೇತ್ರ ಹಿಂದೆ ಕೇಳರಿಯದ ಪ್ರವಾಹಕ್ಕೆ ತುತ್ತಾಯಿತು . ಆಗಿನ್ನೂ ಸುಶಮೀಂದ್ರ ತೀರ್ಥರ ವೃಂದಾವನ ಪ್ರತಿಷ್ಠೆ ಆಗಿದ್ದಿಲ್ಲ . ಅದರಿಂದ ಅವರ ಭಕ್ತರು ಶ್ರೀ ಮಠದ ಪದಾಧಿಕಾರಿಗಳು , ಶ್ರೀ ಸುಯತೀಂದ್ರ ತೀರ್ಥರು ಬಹಳ ಚಿಂತೆಗೀಡಾಗಿದ್ದರು . ಆ ಸಂದರ್ಭದಲ್ಲಿ ಜಗತ್ತನ್ನೇ ಕಾಪಾಡುವ ಶ್ರೀ ರಾಯರು ತಮ್ಮ ಕಂದನ ವೃಂದಾವನಕ್ಕೆ ಧಕ್ಕೆಯಾಗಲು ಬಿಡುತ್ತಾರಾ ?? ಇಲ್ಲವೇ ಇಲ್ಲ . ಶ್ರೀಗಳವರ ದೇಹಕ್ಕೆ ಸ್ವಲ್ಪವೂ ಹಾನಿಯಾಗಿದ್ದಿಲ್ಲ , ಯಾವ ವಿಕಾರಕ್ಕೂ ಒಳಗಾಗಿದ್ದಿಲ್ಲ . ಶ್ರೀ ಜಿತಾಮಿತ್ರರು ಹೇಗೆ ಶ್ರೀ ವಿಜಯೀಂದ್ರ ತೀರ್ಥರಂತಹ ಜ್ಞಾನಿಗಳನ್ನು ತಯಾರುಮಾಡುವ ಸಾಮರ್ಥ್ಯವುಳ್ಳ ಶ್ರೀ ಸುರೇಂದ್ರರಿಗೆಸಂಸ್ಥಾದ ಹೊರೆ ಹಾಕಿದರೋ ಅದೇ ರೀತಿ ಶ್ರೀ ಸುಶಮೀಂದ್ರ ತೀರ್ಥರು " ಶ್ರೀ ಸುವಿದ್ಯೇಂದ್ರ ತೀರ್ಥರು " ಹಾಗು " ಶ್ರೀ ಸುಯತೀಂದ್ರ ತೀರ್ಥರು " ಎಂಬ ಎರೆದು ವಿದ್ವತ್ ರತ್ನಗಳನ್ನು ಲೋಕಕ್ಕೆ ನೀಡಿದ್ದಾರೆ .
ಶ್ರೀ ಜಿತಾಮಿತ್ರರು ರುದ್ರಾಂಶರು . ಹಾಗು ಶ್ರೀ ಸುಶಮೀಂದ್ರ ತೀರ್ಥರು ಜಿತಾಮಿತ್ರ ಅಂಶವನ್ನು ಹೊಂದಿದವರು . ಶ್ರೀ ರುದ್ರದೇವರಿಗೆ ಹಾಗೆ ಶ್ರೀ ಜಿತಾಮಿತ್ರರಿಗೆ ಹಾಗೂ ಶ್ರೀ ಸುಶಮೀಂದ್ರ ತೀರ್ಥರಿಗೆ " ನದಿ " ಯ ಸಂಬಂಧ ತುಂಬಾ ಉಂಟು . ಶ್ರೀ ರುದ್ರ ದೇವರಿಗೆ "ಗಂಗಾ ನದಿ " ತಲೆಯಲ್ಲಿ ನೆಲೆಸಿದ ಹಾಗೆ ಶ್ರೀ ಜಿತಾಮಿತ್ರರ ಅವತಾರ ಸಂದರ್ಭದಲ್ಲೂ "ಕೃಷ್ಣಾನದಿ" ಅವರ ಮೇಲೆ ಹರಿದಳು . ಅದೇರೀತಿ ಶ್ರೀ ಸುಶಮೀಂದ್ರ ತೀರ್ಥರ ಕಾಲದಲ್ಲೂ "ತುಂಗಾ ನದಿ" ಅವರ ಮೇಲೆ ಹರಿದಳು .
ಮತ್ತು ಶ್ರೀ ರುದ್ರ ದೇವರು ಗಂಗೆಯನ್ನು ಜಟೆಯಲ್ಲಿ ಕಟ್ಟಿ ಭುವಿಗೆ ತಂದರೋ ಅದೇ ರೀತಿ 7 ದಿನಗಳ ಕಾಲ ಕೃಷ್ಣೆಯ ಪ್ರವಾಹವನ್ನು ತಡೆದು ಮತ್ತೆ ಶ್ರೀ ಜಿತಾಮಿತ್ರ ತೀರ್ಥರು ಮರಳಿದರು . ಹಾಗೆಯೆ ಶ್ರೀ ಸುಶಮೀಂದ್ರ ತೀರ್ಥರ ವೃಂದಾವನ ಕಲಾಕರ್ಷಿತ ವಾಗಿಲ್ಲದಂತ ಸಂದರ್ಭದಲ್ಲಿಯೂ ಅವರ ದೇಹಕ್ಕೆ ಏನು ವಿಕಾರಗಳು ಆಗಿರಲಿಲ್ಲ , ಸ್ಥಾನ ಪಲ್ಲಟ ಸಹಿತ ಹೊಂದಿರಲಿಲ್ಲಾ. ಇಲ್ಲಿ ಕಾಣ ಸಿಗುವ ವಿಷಯ ಏನೆಂದರೆ ರುದ್ರ ದೇವರು ಆ ಕಾಲದಲ್ಲಿ ಹೇಗೆ ಪ್ರಕಟಗೊಂಡರೋ , ಅದೇ ರೀತಿ ಜಿತಾಮಿತ್ರರ ಕಾಲದಲ್ಲಿ ಪ್ರಕಟಗೊಂಡಿಲ್ಲ . ಜಿತಾಮಿತ್ರರ ಕಾಲದಲ್ಲಿ ಹೇಗೆ ಪ್ರಕಟಗೊಂಡಿದ್ದರೋ ಅದೇ ರೀತಿ ಶ್ರೀ ಸುಶಮೀಂದ್ರರ ಕಾಲದಲ್ಲಿ ಪ್ರಕಟಗೊಳ್ಳಲಿಲ್ಲ . ಎಲ್ಲ ಕಾಲದ ಪ್ರಭಾವ . ಹೀಗೆ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದೇ ಸಾಕಷ್ಟು ಸಿಗುತ್ತವೆ .
ಒಂದು ಬಾರಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಿಗೆ ಆರಾಧನಾ ಉತ್ಸವಕ್ಕೆ ಹೋಗಿದ್ದರು. ಅಲ್ಲಿ ಶ್ರೀಗಳು ಶ್ರೀಮನ್ ಮೂಲ ರಾಮದೇವರಿಗೆ ಸಕಲವಿಧವಾದ ಪೂಜೆ ನಡೆಸಿ ಗುರುಗಳಿಗೆ ಹಸ್ತೋದಕ ನೀಡುತ್ತಿದ್ದ ಸಂದರ್ಭದಲ್ಲಿ ಅಲಂಕಾರ ಸಮೇತ ಇದ್ದ ಜಿತಾಮಿತ್ರರ ಸನ್ನಿಧಾನ ಉಳ್ಳ ಗೋಂದಿನ ಮರದಿಂದ ಒಂದು ಹೂವು ಶ್ರೀಗಳವರ ಕೊರಳಿಗೆ ತನ್ನಿಂದ ತಾನೇ ಬಿದ್ದಿತು . ಶ್ರೀಗಳವರು ಆನಂದ ಭಾಷ್ಪ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ . ಈ ಘಟನೆ ನಡೆದದ್ದು ತೀರ ಇತ್ತೀಚಿಗೆ ಅಂದರೆ 1945 ನೆಯ ಇಸವಿಯಲ್ಲಿ ..!
ಸಪ್ತರಾತ್ರಂ ಕೃಷ್ಣವೇಣ್ಯಾಮುಷಿತ್ವಾ ಪುನರುತ್ಥಿತಮ್ |
ಜಿತಾಮಿತ್ರಗುರುಂ ವಂದೇ ವಿಬುಧೇಂದ್ರ ಕರೋದ್ಭವಂ ||
ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಮ್ |
ಸುಶಮೀಂದ್ರಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ ||
- ಸಮೀರ ಜೋಷಿ