ಶ್ರೀ ರಾಮಲಿಂಗೇಶ್ವರ ದೇವಾಲಯ , ಹುನಗುಂದ ಗ್ರಾಮ , ಬಾಗಲಕೋಟೆ .
ವಿಶೇಷತೆ - ಇದರ ವಿಶೇಷತೆ ಏನು ಅಂದ್ರೆ ಇದು ಪುರಾತನ ಚಾಲುಕ್ಯ ಶೈಲಿಯಲ್ಲಿ ಕ್ರಿ.ಶ 1074ರಲ್ಲಿ ಎರಡನೇ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿತವಾದ ವಿಶಾಲ ಪ್ರಾಂಗಣ 16 ಚೌರಾಸ ಸ್ಥಂಭಗಳು ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ರಾಮಲಿಂಗೇಶ್ವರ ಇಂದಿಗೂ ಹುನಗುಂದದ ಮಾಧ್ವ ಕುಟುಂಬದಿಂದ ಪೂಜೆಗೊಳ್ಳುತ್ತಿದ್ದಾನೆ . ಇದರ ಅರ್ಚಕರು ರಾಘವೇಂದ್ರ ಸ್ವಾಮಿಗಳವರ ಮಠದ ಶಿಷ್ಯರಾದ ಹುನಗುಂದಗ್ರಾಮದ ಜೋಷಿ ಮನೆತನದವರು . ಈಗ ಸಧ್ಯ ಮೂರು ಜೋಷಿ ಮನೆತನಗಳು ಪೂಜಾ ಹೊಣೆ ಹೊತ್ತುಕೊಂಡಿವೆ . ಮತ್ತು ರುದ್ರದೇವರು ಪರಮವೈಷ್ಣವರು . ಇಲ್ಲಿ ಪರಮವೈಷ್ಣವನಿಗೆ ವೈಷ್ಣವರಿಂದಲೇ ಪೂಜೆ ಇದೆ . ಇಲ್ಲಿ ಅನೇಕ ಯತಿಗಳು,ಸಾಧು ಸಂತರು ಬಂದು ಹೋಗಿದ್ದಾರೆ ಎಂದು ನಂಬಿಕೆ ಇದೆ . ಇತಿಹಾಸ -ಇದು ರಾಮಾಯಣದ ಕಾಲದಲ್ಲಿ ಶ್ರೀರಾಮದೇವರು ರಾವಣನನ್ನು ಸಂಹಾರ ಮಾಡಿದಾಗ ಬ್ರಹ್ಮ ಹತ್ಯಾ ದೋಷ ಬರಬಾರದು ಎಂದು ಪ್ರಯಶ್ಚಿತ್ತಕ್ಕಾಗಿ ದಂಡಕಾರಣ್ಯ ಪ್ರದೇಶದಲ್ಲಿ ರುದ್ರದೇವರ ಲಿಂಗಗಳನ್ನು ಪ್ರತಿಷ್ಠಾಪಾನೆ ಮಾಡಿದನಂತೆ .ಈ ರಾಮಪೂಜಿತ ರುದ್ರದೇವರ ಲಿಂಗಗಳೇ ಶ್ರೀರಾಮಲಿಂಗ ಎಂದು ಪ್ರಸಿದ್ಧವಾದವು. ರಾಮೇಶ್ವರದ ಲಿಂಗವೂ ಇದಕ್ಕೆ ಉದಾಹರಣೆಯಾಗಿರಬಹುದು . ಈ ರಾಮಲಿಂಗೇಶ್ವರ ದೇವಾಲಯಗಳನ್ನು ಬಹಳ ಕಡೆ ನೋಡಬಹುದು . ಕಾಲ ಕ್ರಮೇಣ ಕೆಲವು ಪೂಜೆ ಇಲ್ಲದೆ ಹಾಗೆ ಇದ್ದರೆ ಇನ್ನು ಕೆಲವು ಶೈವರ(ಒಕ್ಕಲಿಗರು ಹಾಗು ಇನ್ನಿತರರು) ಪಾಲಾಗಿವೆ. ಮತ್ತು ಬ್ರೀಟಿಷರ ಕಾಲದಲ್ಲಿ ಇದು ಒಮ್ಮೆ ಜೀರ್ಣ ಗೊಂಡಿತ್ತಂತೆ ಇದನ್ನು ಆಗಿನ ಸ್ವಾತಂತ್ರ್ಯ ಹೋರಾಟಗಾರರು ಈ ದೇವಸ್ಥಾನವನ್ನು( ಹುನಗುಂದದ ದೇವಸ್ಥಾನವನ್ನು) ಸ್ವಾತಂತ್ರ್ಯ ಸಂಗ್ರಾಮದ ರಹಸ್ಯ ಸಂದೇಶ ಹಾಗೂ ಸುರಂಗ ಮಾರ್ಗ ಸೂಚಿಯಾಗಿ ಬಳಸುತ್ತಿದ್ದರಂತೆ. ಬಾಗಲಕೋಟೆಯ ಇತರ ದೇವಸ್ಥಾನಗಳಿಗೆ ಸುರಂಗ ಇದೆ ಎಂದು ಇಲ್ಲಿನ ಕೆತ್ತನೆ ಸೂಕ್ಷ್ಮವಾಗಿ ಹೇಳುತ್ತದೆಯಂತೆ. ಇಲ್ಲಿ ಅನೇಕ ಕುರುಹುಗಳನ್ನು ಇಂದಿಗೂ ಕಾಣಬಹುದು . ಆದರೆ ಸಂಪೂರ್ಣ ಅರ್ಥ ತಿಳಿಯುವದು ಸಾಧ್ಯವಾಗಿಲ್ಲ . ಕಾಲಾಂತರದಲ್ಲಿ ಅನೇಕ ರಾಜರುಗಳಿಂದ ಇರ್ಲಕ್ಷ್ಯಗೊಂಡು ಈಗ ಶಿಥಿಲ ಹಂತದಲ್ಲಿದ್ದ ಇದನ್ನು ಶ್ರೀ ವೇ.ಮೂ ಮಧ್ವಾಚಾರ್ಯ ಜೋಷಿಯವರ ಕುಟುಂಬ ಜೀರ್ಣಗೊಳಿಸಿದೆ. ಈಗ ಇದರ ಇತಿಹಾಸ ಕರ್ನಾಟಕ ಗ್ಯಾಜೆಟ್ ನಲ್ಲಿ ಲಭ್ಯವಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬುದೇ ಹುನಗುಂದ ನಿವಾಸಿಗಳ ಆಶಯ.
ದೇವಸ್ಥಾನದ ಕೆಲವು ಚಿತ್ರಗಳು-
ರಾಮಲಿಂಗೇಶ್ವರ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಪಂಡಿತ್. ದಿ . ವೇ ಮೂ ಮಧ್ವಾಚಾರ್ಯ ಜೋಶಿಯವರು ( ನಿವೃತ್ತ ಡಿಡಿಪಿಆಯ್ ಬಿಜಾಪುರ , ಕರ್ನಾಟಕ )
No comments:
Post a Comment