Saturday, 11 May 2013

ಗುರುಸಾರ್ವಭೌಮರೆ !

ಗುರುಸಾರ್ವಭೌಮರೆ ! ಅದೆಂತು ಬಣ್ಣಿಸಲಿ ನಿಮ್ಮ ಕರುಣೆಯನ್ನು ?? ನೀವು ಕರುಣೆಯ ಸಾಗರ , ಭಕ್ತ ವತ್ಸಲರು , ಅಭೀಷ್ಟಪ್ರದರು .. ಸ್ವಾಮಿ ಧನ್ಯನಾದೆ ನಿಮ್ಮ ಕಂಡು , ಧನ್ಯನಾದೆ .. ಮಂತ್ರಾಲಯಕ್ಕೆ ಹೋಗಬೇಕಾದರೆ ಹೆಚ್ಚಿನ ಪ್ರಯಾಸ ಬೇಕಾಗಿಲ್ಲ , ಕೇವಲ ರಾಯರೇ ನಾನು ನಿಮ್ಮ ದರ್ಶನಾಕಾಂಕ್ಷಿ ದಯವಿಟ್ಟು  ನಿಮ್ಮ ದರ್ಶನವಿತ್ತು ಸಲಹಿ ತಂದೆ ಎಂದು ಬೇಡಿಕೊಂಡರೆ ಸಾಕು ಆ ಕರುಣಾ ಮೂರ್ತಿ ರಾಯರು ಕರೆಸಿಕೊಂಡೆ ಬಿಡುತ್ತಾರೆ .. ೩ ದಿನ ನಮ್ಮ ಕುಲಗುರು ರಾಘವೇಂದ್ರ ತೀರ್ಥ ಗುರುಸರ್ವಭೌಮರ ಸನ್ನಿಧಿಗೆ ಹೋಗಲು ಇಂತಹುದೆ ಸಂಕಲ್ಪ ಕಾರಣ .. ಪರಮ ಕರುಣಾ ಮೂರ್ತಿ ರಾಯರು ಕರೆಸಿಕೊಂಡದ್ದಲ್ಲದೆ ಹಿಡಿ ತುಂಬಾ ಅನುಗ್ರಹ ಮಾಡಿಯೇ ಕಳಿಸಿದರು .. ನಾನು ಮಂತ್ರಾಲಯದಲ್ಲಿ ಇದ್ದಷ್ಟು ದಿನ ಗುರುಗಳು ತಾವು ಸಾಕ್ಷಾತ್ ವಿರಾಜಿಸಿರುವ ಗರ್ಭ  ಗುಡಿಗೆ ಈ ಪಾಮರನನ್ನು ಕರೆಸಿಕೊಂಡು , ದಿನವೂ ತಾವು ಧರಿಸಿದ್ದ ಹೂವು , ಅವರ ಪಾದೋದಕಗಳನ್ನೂ ಅನುಗ್ರಹಿಸಿದರು.. ಇದು ಸುವರ್ಣ ಅನುಭವ :) .. ಧನ್ಯ ಭಾವ .. ಅವರ ಮುಂದೆ ನಾನು ಕಲಿತಿರುವ ಅತ್ಯಲ್ಪ , ಸಣ್ಣ ಪುಟ್ಟ ಸ್ತೋತ್ರಗಳನ್ನೂ ಹಾಗು ಅಪ್ಪಣ್ಣಾಚಾರ್ಯ ಕೃತ ರಾಘವೇಂದ್ರ ಸ್ತೋತ್ರಗಳನ್ನೂ ಅವರ ಮುಂದೆ ಅವರ ಗರ್ಭ ಗುಡಿಯಲ್ಲಿ , ಮೂಲ ವೃಂದಾವನದ ಮುಂದೆ ಒಪ್ಪಿಸಲು ಆಶೀರ್ವದಿಸಿದರು .. ಇದು ನನ್ನ ಪಾಲಿಗೆ ಸ್ವರ್ಗದ ಬಾಗಿಲು ತೆಗೆದಷ್ಟೇ ಸಂತಸ ಸಿಕ್ಕಿದೆ..  ಇದಲ್ಲದೆ ನಿತ್ಯವೂ ನಡೆಯುವ ರಥೋತ್ಸವದ ನಂತರ ಗುರುರಾಜರ ಪಲ್ಲಕ್ಕಿ ಎತ್ತಿ ಹಿಡಿಯುವ ಸೌಭಾಗ್ಯವನ್ನು ಕರುಣಿಸಿದರು .. ಇವೆಲ್ಲವೂ ಜ್ಞಾನಿಗಳಿಗೆ ನಿತ್ಯ ಸಿಗುವ ಅವಕಾಶಗಳು , ಇವುಗಳನ್ನು ಒಂದು ದಿನವಾದರೂ ನನಗೆ ದೊರಕಿಸಿಕೊಟ್ಟಿರುವ ರಾಘವೇಂದ್ರ ಗುರುಗಳ ಕರುಣೆ ವರ್ಣಿಸಲಸಾಧ್ಯ .. ಇದಲ್ಲದೆ ಮರಳಿ ಊರಿಗೆ ಬರಬೇಕಾದರೆ ನಾವು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಒಬ್ಬ ಹೆಂಗಸು ಅವಳ ತಾಯಿ ಹಾಗೂ ಆಕೆಯ ಹಸುಗೂಸಿ ನೊಂದಿಗೆ ರಾಯಚೂರಿ[ನಿಂದ ಪ್ರಯಾನಿಸುತ್ತಿದ್ದಳು.. ಆ  ಮಗುವಿಗೆ ಸುಮಾರು ೫ ತಿಂಗಳು .. ರಾತ್ರಿ 11.30 ಗಂಟೆಗೆ ಆಕೆಯ ಮಗುವಿಗೆ ಜ್ವರ ತುಂಬಾ ಹೆಚ್ಚಾಗಿ ಆದು ನರಳಲು ಶುರು ಮಾಡಿತು.. ಸ್ವಲ್ಪ ಹೊತ್ತಿನಲ್ಲೇ ಪರಿಸ್ಥಿತಿ ಇನ್ನು ಬಿಗಡಾಯಿಸಿತು , ಮಗು ನಡುಗಲು ಶುರು ಮಾಡಿತು .. ಆಗ ನನ್ನೊಂದಿಗೆ ಇದ್ದ ಗೆಳೆಯನಿಗೆ , ಮಗುವಿನ ಮೇಲೆ ರಾಯರ ಮಂತ್ರಾಕ್ಷತೆ ಹಾಕಲು ಹೇಳಿದೆ .. ಅವನು ತನ್ನ ಬಳಿ  ಇದ್ದ ಮಂತ್ರಾಕ್ಷತೆ ಕೊಟ್ಟ .. ಸ್ವಲ್ಪ ಹೊತ್ತಿನಲ್ಲೇ ನರುಳುತ್ತಿದ್ದ ಮಗು , ತನ್ನ ನರಳಾಟವನ್ನು ನಿಲ್ಲಿಸಿತು , ಮಗುವಿನ ನಡುಕವೂ ನಿಂತಿತ್ತು .. :) :) .. ಹೀಗೆ 3  ದಿನಗಳಲ್ಲಿ ರಾಯರ ಪರಮ ಕಾರುಣ್ಯ ಕಂಡು ಅವರ ಭಕ್ತ , ಅವರ ಮಠದ ಶಿಷ್ಯ ನಾಗಿದ್ದು ಸಾರ್ಥಕ ಎನಿಸಿತು .. :)

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...