ಇಂದಿನ ದಿನ ಸುದಿನವಾಯಿತು. ಉಡುಪಿ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಧಾರವಾಡ ದಿಗ್ವಿಜಯದಲ್ಲಿದ್ದಾರೆ. ನಮ್ಮ ಮನೆಗೆ ಆಗಮಿಸಿ ಪಾದಪೂಜೆಯನ್ನು ಸ್ವೀಕರಿಸಿ ಸ್ವಲ್ಪ ಹೊತ್ತು ರಮಣೀಯವಾಗಿ ಕಳೆದರು. ಗುರುಗಳು ದ್ವೈತದರ್ಶನ ಬ್ಲಾಗ್ ಅನ್ನು ವೀಕ್ಷಿಸಿ ಪ್ರಶಂಸಿದರು. ಮತ್ತು ಅವರ ಬಗೆಗಿನ ಲೇಖನವಾದ "ವಿಶ್ವೇಶ ತೀರ್ಥರು ನಿಜ ಧರ್ಮ ರಕ್ಷಕರು" ಅದನ್ನು ಓದಿ ಸಂತುಷ್ಟರಾಗಿ ಈ ಪಾಮರನನ್ನು ಅನುಗ್ರಹಿಸಿದರು.. ಅದಲ್ಲದೆ ನನ್ನ ಸಂಗ್ರಹದಲ್ಲಿರುವ ಅನೇಕ ಚಿತ್ರಗಳನ್ನು ಮುಂದಿಟ್ಟಾಗ ತಮ್ಮ ಆಶ್ರಮ ದಿನದಿಂದ ಹಿಡಿದು ಮೊನ್ನೆ ಮೊನ್ನೆಯ ಕಾರ್ಯಕ್ರಮಗಳ ಅಪರೂಪದ ದೃಶ್ಯಗಳನ್ನೂ ನೆನೆಸಿಕೊಂಡರು..ವಿಶ್ವಮಾನ್ಯರಿಂದ ಆಶ್ರಮ , ವಿದ್ಯಾಮಾನ್ಯ ರಿಂದ ವಿದ್ಯಾದಾನ, ಅನೇಕ ಮಠಾಧಿಪತಿಗಳೊಡನೆ ಸಂಗಮ, ಬಲು ಅಪರೂಪ ವೆನ್ನಿಸುವ ಸನ್ನಿವೇಶಗಳ ಚಿತ್ರಗಳನ್ನೆಲ್ಲ ಶ್ರೀಗಳು ಸಂತೋಷದಿಂದ ವೀಕ್ಷಿಸಿದರು.. "ಇದನ್ನೆಲ್ಲ ನಾವೂ ನೋಡಿಯೇ ಇರಲಿಲ್ಲ ! , ಅದ್ಭುತ ಸಂಗ್ರಹ " ಎಂದು ಬಹಳ ಸಂತೋಷ ಪಟ್ಟರು..ಇದರೊಂದಿಗೆ ತಾವು ಮೈಸೂರು ಮಹಾರಾಜರ ಜೊತೆಗೆ ಕುಳಿತ ಸಂದರ್ಭ , ವಿದ್ಯಾಮಾನ್ಯರೊಡನೆ ಸೋದೆಯಲ್ಲಿ ಶ್ರಮಾದಾನ , ವಿಶ್ವ ಪ್ರಸನ್ನರ ಆಶ್ರಮ ಪ್ರಸಂಗ ಇತ್ಯಾದಿಯಾಗಿ ವಿವರಿಸಿ ಹೇಳಿದರು.. ಕೊನೆಗೆ ನಾನು ಚಿಕ್ಕವನಿದ್ದಾಗ ರೋಗಬಾಧೆ ಇಂದ ಪರಿಹಾರ ಹೊಂದಲು ವಿಶ್ವೇಶ ತೀರ್ಥರ ಮಂತ್ರಕ್ಷತೆಯೇ ಕಾರಣ ಎಂದು ತಿಳಿದು ಸಂತೋಷಗೊಂಡು ಅನುಗ್ರಹ ಮಾಡಿದರು.. ಅವರ ನಿರಂತರ ಕಾರ್ಯ ಕೆಲಸ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವದು ಯಾರಿಗೂ ಅಪರಿಚಿತವಲ್ಲ.. ಎಲಾರಿಗೂ ಅವರ ಕಾರ್ಯಕ್ಷಮತೆಯಾ ಬಗ್ಗೆ ಗೊತ್ತೇ ಇದೆ. ಅಂತಹ ಬಿಡುವಿನಲ್ಲೂ ಅವರು ಇಷ್ಟೊಂದು ಉಲ್ಲಸಿತರಾಗಿ ನಮ್ಮೊಡನೆ ಕಾಲ ಕಳೆದದ್ದು ತುಂಬಾ ಮುದವುಂಟು ಮಾಡಿದೆ.
ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Tuesday 26 November 2013
Subscribe to:
Post Comments (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। ಸನ್ಯಾಸಿಗಳ ಕರ್ತವ್ಯ ಪರಮತಖಂ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
No comments:
Post a Comment