ಶ್ರೀ ಮೂಲರಾಮೋ ವಿಜಯತೆ ಶ್ರೀ ಗುರುರಾಜೋ ವಿಜಯತೆ
ಗುರುಗುಣಸ್ತವನಂ - ೩
Gurugunastavanam- 3
ಶ್ಲೋಕ-
ಶ್ರೀವಾದೀಂದ್ರ ತೀರ್ಥರ , ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -
ಅರ್ಥ- "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.
ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.

ಶ್ರೀಮದ್ರಾಮಾಭಿರಾಮಮಿತಮಹಿಮಪದ ಪ್ರೌಢಪಾಥೋರುಹಾಲಿ:
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವೃಢಪಟಲೀಪಾಟನೈಕ ಪ್ರವೀಣಃ ।।
ವೇದವ್ಯಾಸೋಪದೇಶಾಧಿಕಸಮಧಿಗತಾನಂತ ವೇದಾಂತಭಾವೋ
ಭೂಯಾತ್ಕೀಶಾವನೀಶ ವೃತಿತನುರನಿಲಃ ಶ್ರೇಯಸೇ ಭೂಯಸೇನಃ ।।
ಅರ್ಥ- "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.
ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.
No comments:
Post a Comment