ಏಕಾದಶೀ ವೃತಾಚರಣೆಯ ಮಹತ್ವ-
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ತಮ್ಮ " ಸ್ಮೃತಿ ಮುಕ್ತಾವಳಿ " ಎಂಬ ಗ್ರಂಥದಲ್ಲಿ ಏಕಾದಶಿ ವೃತದ ಮಹಿಮೆ ಯನ್ನು ಈ ರೀತಿ ತಿಳಿಸುತ್ತಾರೆ..
ಕಂತು 1
ಹರಿಃ ಓಂ ಶ್ರೀ ಗುರುಭ್ಯೋ ನಮಃ .
ಅಥ ಎತಾದೃಶೈಕಾದಶೀಮಹಿಮಾ - ಪಾದ್ಮೇ-
ಏಕಾದಶೀಸಮಮ್ ಕಿಂಚಿದ್ ವೃತಮ್ ನಾಸ್ತಿ ಶುಭ ಕ್ಷಣೇ ।
ಏಕಾದಶೀ ಪರಿತ್ಯಜ್ಯ ವ್ರುತಂ ಯೋsನ್ಯತ್ ಸಮಾಚರೇತ್ ।।
ಸ್ವಕರಸ್ಥಂ ಮಹಾರಾಜ್ಯಂ ತ್ಯಕ್ತ್ವಾ ಭೈಕ್ಷ್ಯಂ ತು ಯಾಚಯೇತ್ ।
ಏಕಾದಶ್ಯಾಮ್ ತು ಪಾಪೀಯಾನ್ಸಮುಪೋಷ್ಯ ತು ಮಾನವಃ ।।
ಸರ್ವಪಾಪವಿನಿರ್ಮುಕ್ತೋ ಯಾತಿ ವಿಷ್ಣೋ: ಪರಮ್ ಪದಮ್ ।। ಇತಿ ।।
ಏಕಾದಶಿಯ ನಿರೂಪಣೆಯೂ ಪಾದ್ಮಪುರಾಣದಲ್ಲಿ ಹೀಗೆ ಹೇಳಿದೆ - ಎಲೈ ಮಂಗಳನೇತ್ರೆಯೇ ! ಏಕಾದಶಿಗೆ ಸಮಾನವಾದ ವ್ರುತವು ಮತ್ತವದೂ ಇಲ್ಲ . ಯಾವನು ಏಕಾದಶಿಯನ್ನು ಬಿಟ್ಟು ಬೇರೆ ವೃತವನ್ನು ಆಚರಿಸುತ್ತಾನೋ ಅವನು ತನ್ನ ಕೈಯಲ್ಲಿದ್ದ ಮಹಾರಜ್ಯವನ್ನು ಬಿಟ್ಟು ಭಿಕ್ಷೆ ಬೇಡುವನಂತೆ ಆಗುತ್ತಾನೆ. ಯಾವ ಮಹಾಪಾಪಿಯಾದ ಮಾನವನೇ ಆಗಲಿ ಏಕಾದಶಿ ದಿನ ಉಪವಾಸ ಮಾಡಿದರೆ ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದಿ ಶ್ರೇಷ್ಠವಾದ ವಿಷ್ಣುವಿನ ವೈಕುಂಠಸ್ಥಾನವನ್ನು ಪಡೆಯುತ್ತಾನೆ ಎಂದು.
No comments:
Post a Comment