ದಲಿತರ ನಾಯಕ ನಿಡುಮಾಮಿಡಿ ಶ್ರೀಗಳು ಮಡೆ ಸ್ನಾನವನ್ನು ಕೇವಲ ನೆಪ ಮಾತ್ರವಾಗಿಸಿದ್ದಾರೆ. ಅವರ ಮೂಲ ಉದ್ದೇಶ ಬ್ರಾಹ್ಮಣರ ಮೇಲೆ ಗೂಬೆ ಕೂರಿಸುವದು. ಮೊದಲಿನಿಂದಲೂ ತಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ಬ್ರಾಹ್ಮಣವಿರೋಧಿ ಕಾರ್ಯದಲ್ಲಿ ತೊಡಗಿದ್ದಾರೆ.ಯಾರು , ಯಾವುದೇ ವಿಷಯ ಬಂದರು ಕೂಡ ಉಡುಪಿ ಶ್ರೀ ಕೃಷ್ಣ ಮಠದ ಸುತ್ತಲೇ ಹೋಗುತ್ತಾರೆ, ಮಹಾನುಭಾವರಾದ, ದಲಿತರ ರಕ್ಷಣೆಗಾಗಿ ಹೋರಾಡುತ್ತಿರುವ ಶ್ರೀ ೧೦೦೮ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವಿರುದ್ಧ ವಾದಿಸುವದನ್ನೇ ತಮ್ಮ ದಿನಚರಿಯನ್ನಾಗಿಸಿಕೊಂಡಿದ್ದಾರೆ. ಈ ಮಡೆ ಸ್ನಾನದ ವಿಷಯದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪೇಜಾವರ ಶ್ರೀಗಳ ಮಾತು,ಚಿಂತನೆಯನ್ನು ಅರ್ಥ ಮಾಡಿಕೊಳ್ಳಲಾಗದ ನಿಡುಮಾಮಿಡಿ ಶ್ರೀ ಏನೇನೋ ಮನ ಬಂದಂತೆ ನಿಷೇಧದ ಸುತ್ತಲೇ ಹೋಗುತ್ತಾರೆ.ಅದರ ಜೊತೆಗೆ ಸಂವಿಧಾನ ವಿರೋಧಿ ಎಂದು ಪೇಜಾವರ ಶ್ರೀಗಳ ಮೇಲೆ ಆರೋಪ ಕೂರಿಸುವ ಪ್ರಯತ್ನ ಮಾಡಿದ್ದರೆ. ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್.ಎಲ್.ಭೈರಪ್ಪನವರ ವಿರುದ್ಧವೂ ಮಾನಸಿಕ ಅಸ್ವಸ್ಥರಂತೆ ಮಾತನಾಡಿದ್ದರು.ಆಗಲೂ ಸಹ " ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣನನ್ನು ಪೂಜಸಿಲು ಬಿಟ್ಟರೆ ನಾನು ಸಿದ್ಧ" ಎಂದರು. ಶ್ರೀ ಕೃಷ್ಣ ಪರಮಾತ್ಮನನ್ನು ಪೂಜಿಸುವದಕ್ಕು , ಕಂಬಾರರಿಗೆ ಪ್ರಶಸ್ತಿ ದೊರೆತ್ದಕ್ಕು , ಭೈರಪ್ಪನವರ ವಿರುದ್ಧ ಮಾತನಡುವದಕ್ಕೂ , ಇವೆರಡರ ನಡುವೆ ಪೇಜಾವರ ಮಠ ಸ್ವಾಮೀಜಿವಿರುದ್ಧ ಮಾತನಾಡುವದಕ್ಕೂ-ಕೃಷ್ಣ ಮಠಕ್ಕೂ ಏನು ಸಂಬಂಧ . ಭೈರಪ್ಪನವರ ವಿಚಾರ ಬಿಡಿ ಸತತವಾಗಿ ಪೇಜಾವರ ಮಠ ಸ್ವಾಮೀಜಿ ವಿರುದ್ಧವಾಗಲಿ, ಶ್ರೀ ಕೃಷ್ಣ ಮಠದ ಬಗ್ಗೆ ಮಾತನಾಡಲು ಅಧಿಕಾರ ಈ ಸ್ವಾಮಿಜಿಗಿಲ್ಲ .ಹೇಗೆ ಅಪ್ಪನ ಆಸ್ತಿ ಮಗನಿಗೆ ಸೇರಬೇಕೋ ಅದರಂತೆ ಮಧ್ವ ಪ್ರತಿಷ್ಟಪಿತ ಮೂರ್ತಿ ಚೆಂದದ ಕೃಷ್ಣನು ಕೂಡ ಮಾಧ್ವರಿಗೆ ಸೇರಿದ್ದು.ಅಸ್ತು ಕೃಷ್ಣನನ್ನು ಪುಜಿಸಬೆಕೆಂದಿದ್ದರೆ ಸ್ವತಹ ನಿಡುಮಾಮಿಡಿ ಶ್ರೀಗಳೇ ಕೃಷ್ಣನನ್ನು ಪ್ರತಿಷ್ಥಾಪಿಸಲಿ ಅದನ್ನೇ ಪುಜಿಸಲಿ. ಅದು ಬಿಟ್ಟು ನಾನು ಪೇಜಾವರ ಶ್ರೀಗಳ ಉತ್ತರಾಧಿಕಾರಿಯಾಗಲು ಸಿದ್ಧ ಎಂದು ಹೇಳುವದು ಎಷ್ಟು ಉಚಿತ ? ಈಗಲೂ ಕೂಡ ಪೇಜಾವರ ಸ್ವಾಮಿಗಳ ಚಿಂತನೆಯನ್ನೇ ಅರಿಯದೆ ಮಡೆ ಸ್ನಾನ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದರೆ. ಇನ್ನು ಒಂದು ಹೇಳ ಬೇಕಾದ ಸಂಗತಿಯೆಂದರೆ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಧಾರ್ಮಿಕವಾಗಿ ಮಾಡುವ ಆಚರಣೆಗಳಲ್ಲಿ ಸ್ವಾತಂತ್ರ್ಯವಿದೆ. ಪೇಜಾವರ ಸ್ವಾಮಿಗಳು ಹೇಳುತ್ತಿರುವದು ಇದನ್ನೇ. ನಾವು ಯಾರು ಮಾಡು ಎಂದು ಹೇಳಿಲ್ಲ, ಅದು ಜನರ ನಂಬಿಕೆ , ಅದು ನಿನ್ನೆಯ, ಮೊನ್ನೆಯದಲ್ಲ . ಬಹಳ ಪುರಾತನವಾದ ಆಚರಣೆ. ಪೇಜಾವರ ಸ್ವಾಮಿಗಳು ಇದನ್ನು ಸಮರ್ಥಿಸಿಕೊಲ್ಲುವದಿಲ್ಲ. ಆದರೆ ಅವರು ಹೇಳುವದು ಹೋರಾಟದಿಂದ ಪ್ರೋಯೋಜನವಾಗದು ಎಂದು . ಈ ನಿಟ್ಟಿನಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವದು ಅಗತ್ಯ ಎಂದು. ಓದುಗರೇ ನೀವೇ ನಿರ್ಧಾರಕ್ಕೆ ಬನ್ನಿ ಅನೇಕ ವರ್ಷಗಳಿಂದ ನಂಬಿಕೆ ಇಟ್ಟಿರುವ ಪದ್ಧತಿಯನ್ನು(ಅದು ಸರಿಯೇ ಆಗಿರಲಿ ತಪ್ಪೇ ಆಗಿರಲಿ) ಬಲವಂತವಾಗಿ ನಿಷೆಧಿಸುವದು ಸರಿಯೇ ಅಥವಾ ಆ ರೀತಿ ಮಾಡದೇ ಜನರಲ್ಲಿ ಜಾಗೃತಿ ಮೂಡಿಸಿ ಮುಂದುನದಿನಗಳಲ್ಲಿ ಸರಿಪಡಿಸಬೇಕೆ ಎಂಬುದನ್ನು.
ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Monday, 9 January 2012
Tuesday, 27 December 2011
ಮಹಾನ್ ಮಾಧ್ವ ಯತಿಗಳು
"ಮಹಾನ್ ಮಾಧ್ವ ಯತಿಗಳು" ಎಂಬ ಮಧ್ವಾಚಾರ್ಯರ ನಂತರ ಬಂದ ಮಹಾನ್ ಯತಿಗಳ ಚರಿತ್ರೆ , ಪವಾಡಗಳು ಇತ್ಯಾದಿ ಗಳನ್ನೂ ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಪ್ರಥಮ ಸಂಚಿಕೆ ಆಚಾರ್ಯರ ಕರಕಮಲ ಸಂಜಾತರದ ಶ್ರೀ ಪದ್ಮನಾಭ ತೀರ್ಥ ರಿಂದಲೇ ಇದನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಾರಕ್ಕೆ ಒಬ್ಬ ಮಾಧ್ವ ಯತಿಯ ಬಗ್ಗೆ ಲೇಖನವನ್ನು ಆಯಾ ಮೂಲ ಸಂಸ್ಥಾನಗಳ ಸಹಾಯದಿಂದ ಇಲ್ಲಿ ಅವರ ಚರಿತ್ರೆಯನ್ನು ಕೊಡಲಾಗುವದು. ಎಲ್ಲರು ಮಹಾನ್ ಮಧ್ವ ಯತಿವರ್ಯರ ಬಗ್ಗೆ ತಿಳಿದುಕೊಂಡು ಕೃತಾರ್ಥರಾಗಿರಿ. ಹರಿ-ವಾಯು ಗುರುಗಳ ಆಶೀರ್ವಾದವು ಸದಾ ನಿಮ್ಮ ಮೇಲಿರುತ್ತದೆ ಧನ್ಯರಾಗಿ .
- द्वैत दर्शन
- द्वैत दर्शन
Sunday, 25 December 2011
श्री १००८ सुयमीन्द्र तीर्था: आराधना महोत्सवं ( Dec 25 )
|| श्री १००८ सुयमीन्द्र तीर्था: ||
आश्रम शिष्य: - श्री १००८ सुजयीन्द्र तीर्था:
आराधना तिथि: - पुष्य शुक्ल द्वितीया
मूल वृन्दावन स्थलं - मन्त्रालय क्षेत्रं
चरम श्लोकं -
सुखतीर्थमताब्धींदुं सुधींद्र सुतसॆवकं ।
सुधापरिमळासक्तं सुयमींद्र गुरुं भजॆ ॥
ಸುಖತೀರ್ಥಮತಾಬ್ಧೀಂದುಂ ಸುಧೀಂದ್ರ ಸುತಸೇವಕಮ್ |
ಸುಧಾಪರಿಮಳಾಸಕ್ತಂ ಸುಯಮೀಂದ್ರ ಗುರುಂ ಭಜೇ ||
समय: - १९३३-१९६७( 1933 - 1967 )
आश्रम गुरु: - श्री १००८ सुवृतीन्द्र तीर्था:आश्रम शिष्य: - श्री १००८ सुजयीन्द्र तीर्था:
आराधना तिथि: - पुष्य शुक्ल द्वितीया
मूल वृन्दावन स्थलं - मन्त्रालय क्षेत्रं
चरम श्लोकं -
सुखतीर्थमताब्धींदुं सुधींद्र सुतसॆवकं ।
सुधापरिमळासक्तं सुयमींद्र गुरुं भजॆ ॥
ಸುಖತೀರ್ಥಮತಾಬ್ಧೀಂದುಂ ಸುಧೀಂದ್ರ ಸುತಸೇವಕಮ್ |
ಸುಧಾಪರಿಮಳಾಸಕ್ತಂ ಸುಯಮೀಂದ್ರ ಗುರುಂ ಭಜೇ ||
Friday, 23 December 2011
ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ
ಮಹಾ ಮಹಿಮ ಶ್ರೀ ರಾಘವೇಂದ್ರ ಸ್ವಾಮಿ ಮಠದ, ಶ್ರೀ ರಾಯರ ಪೂರ್ವಜರಾದ ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ ಸುದಿನ ಇಂದು.ದಿ.೨೩ ಪೂರ್ವರಾಧನೆಯಾದರೆ ದಿ.೨೪ ರಂದು ಮಧ್ಯರಾಧನೆ ದಿ.೨೫ ರಂದು ಉತ್ತರರಾಧನೆ ಶ್ರೀಗಳವರ ಮೂಲಸ್ಥಳವಾದ ಶ್ರೀ ಜಿತಮಿತ್ರ ಗಡ್ಡೆ ಎಂದೇ ಪ್ರಸಿದ್ಧವಾದ ದ್ವೀಪ ಪ್ರದೇಶದಲ್ಲಿ ಶ್ರೀಗಳವರ ಪರಮ ಸನ್ನಿಧಾನವುಳ್ಳ ವೃಕ್ಷಕ್ಕೆ ಶ್ರೀ ಸುಯತೀಂದ್ರ ತೀರ್ಥರು ಪೂಜೆ ಸಲ್ಲಿಸಿದರು . ಶ್ರೀ ಜಿತಮಿತ್ರ ತೀರ್ಥರ ಪರಮ ಪವಿತ್ರ ಸ್ಥಳವಾದ ಈ ಪ್ರದೆಶದಲ್ಲಿ ಶ್ರೀ ಸುಯತೀಂದ್ರ ತೀರ್ಥರು ಶ್ರೀ ಬ್ರಹ್ಮ ಕರರ್ಚಿತ ಪ್ರತಿಮೆ ಶ್ರೀಮನ್ಮೂಲ ರಾಮ ಪ್ರತಿಮೆ ಹಾಗು ಇತರೆ ಪ್ರತಿಮೆಗಳನ್ನು ಅರ್ಚಿಸಿದರು. ಶ್ರೀ ಜಿತಮಿತ್ರ ತೀರ್ಥರು ಮಹಿಮನ್ವಿತರಾಗಿದ್ದು ಅವರು ೭ ದಿನಗಳ ಕಾಲ ಪ್ರವಾಹದಲ್ಲಿ ಮುಳುಗಿದ್ದರು ಸಹ ದಿವ್ಯ ಶಕ್ತಿ ಹಾಗು ಆರಾಧ್ಯ ದೈವವಾದ ಶ್ರೀಮನ್ಮೂಲ ರಾಮನ ಅನುಗ್ರಹದಿಂದ ಮೆತ್ತೆ ಎದ್ದು ಬಂದು ಪವಾಡ ಮಾಡಿದರು . [ ಶ್ರೀ ಜಿತಾಮಿತ್ರರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ವೆಬ್ ವಿಳಾಸವನ್ನು ಸಂದರ್ಶಿಸಿ.]
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಶ್ರೀ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ [ ನವ ವೃಂದಾವನ ] ೨೦೧೧
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಶ್ರೀ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ [ ನವ ವೃಂದಾವನ ] ದಲ್ಲಿ ಆಚರಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಸ್ತುತ ಪೀಠಾಧಿಪತಿ ಶ್ರೀ ೧೦೦೮ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ವೃಂದಾವನ ಸ್ಥಳದಲ್ಲಿ ಶ್ರೀ ಮಠದ ಮೂಲ ಪುರುಷರು , ಶ್ರೀ ಮಧ್ವರ ಕರಕಮಲ ಸಂಜಾತರದ ಶ್ರೀ ಪದ್ಮನಾಭ ತೀರ್ಥರ ಮೂಲ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಸಂಸ್ಥಾನದ ಎಲ್ಲ ವಿದ್ವನ್ಮಣಿಗಳು ಹಾಜರಿದ್ದರು. ಇದೆ ಸಂದರ್ಭದಲ್ಲಿ ಶ್ರೀ ಚತುರ್ಮುಖ ಬ್ರಹ್ಮ ಕರರ್ಚಿತ ಶ್ರೀಮನ್ಮೂಲ ರಾಮ ದೇವರ ಹಾಗು ದಿಗ್ವಿಜಯ-ಜಯರಾಮಾದಿ ಸಂಸ್ಥಾನ ಪ್ರತಿಮೆಗಳನ್ನೂ ಕ್ಷೇತ್ರದಲ್ಲಿ ಶ್ರೀಗಳವರು ಅರ್ಚಿಸಿದರು. ಶ್ರೀ ಮಠದಲ್ಲಿ ಸೇವೆ ಸಲ್ಲಿಸಿದ ವಿದ್ವನ್ಮಣಿಗಳಿಗೆ ಶ್ರೀಗಳಿಂದ ಸಮ್ಮಾನ ಮಾಡಲಾಯಿತು.
Subscribe to:
Posts (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
source : http://www.facebook.com/pages/ Sri-Madhwacharya/ 146259025401528 The 24 Mathas (Along With Their Presiding Deites) Of The Dvai...
Subscribe Us
Popular Posts
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
|| श्री मन्मूल रामो विजयते || ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮ...
-
source : http://www.facebook.com/pages/ Sri-Madhwacharya/ 146259025401528 The 24 Mathas (Along With Their Presiding Deites) Of The Dvai...
































