ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Wednesday, 23 April 2014
Monday, 14 April 2014
ಶ್ರೀ ಮೂಲರಾಮೋ ವಿಜಯತೆ ಶ್ರೀ ಗುರುರಾಜೋ ವಿಜಯತೆ
ಗುರುಗುಣಸ್ತವನಂ - ೩
Gurugunastavanam- 3
ಶ್ಲೋಕ-
ಶ್ರೀವಾದೀಂದ್ರ ತೀರ್ಥರ , ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -
ಅರ್ಥ- "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.
ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.
ಗುರುಗುಣಸ್ತವನಂ - ೩
Gurugunastavanam- 3
ಶ್ಲೋಕ-
ಶ್ರೀವಾದೀಂದ್ರ ತೀರ್ಥರ , ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -
ಶ್ರೀಮದ್ರಾಮಾಭಿರಾಮಮಿತಮಹಿಮಪದ ಪ್ರೌಢಪಾಥೋರುಹಾಲಿ:
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವೃಢಪಟಲೀಪಾಟನೈಕ ಪ್ರವೀಣಃ ।।
ವೇದವ್ಯಾಸೋಪದೇಶಾಧಿಕಸಮಧಿಗತಾನಂತ ವೇದಾಂತಭಾವೋ
ಭೂಯಾತ್ಕೀಶಾವನೀಶ ವೃತಿತನುರನಿಲಃ ಶ್ರೇಯಸೇ ಭೂಯಸೇನಃ ।।
ಅರ್ಥ- "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.
ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.
ಗುರುರಾಯರ ಕರುಣೆಗೆ ಪಾತ್ರರಾಗಿ , ಅವರ ಪೂರ್ಣಾನುಗ್ರಹ ಪಡೆದಿದ್ದ ಶ್ರೀ ಅಪ್ಪಣ್ಣಾಚಾರ್ಯರು , ಸಾಕ್ಷಾತ್ ಶ್ರೀ ರಾಘವೇಂದ್ರ ವ್ರುತೀಂದ್ರರ ವಿದ್ಯಾಶಿಷ್ಯರು. ಅವರ ಹತ್ತಿರವೇ ಅಧ್ಯಯನ ಮಾಡಿದಂಥವರು. ಮಾಧ್ವರ ಶ್ರೀ ರಾಘವೇಂದ್ರ ಸ್ತೋತ್ರದಂತಹ ವೇದತುಲ್ಯ ಸ್ತೋತ್ರವನ್ನು ಮಾಡಿದ ಕೀರ್ತಿ ಅಪ್ಪಣ್ಣಾಚಾರ್ಯರದ್ದು. ರಾಯರ ಅಗಮ್ಯ ಮಹಿಮೆಯನ್ನು ಸಾಕ್ಷಾತ್ ಕಂಡು , ವೇದಾಂತ ಸಾಮ್ರಾಜ್ಯದಲ್ಲಿ ಅವರು ವಿರಾಜಿಸಿದ ಪರಿ ನೋಡಿ , ವೈಭವವನ್ನು ದೃಷ್ಟಿಸಿ , ರಾಯರನ್ನು ತಮ್ಮ ವಿಶಿಷ್ಟ ಶೈಲಿಯಲ್ಲೇ ಸ್ತುತಿಸಿದವರು ಅಪ್ಪಣ್ಣಾಚಾರ್ಯರು. ಶ್ರೀಗುರುಸಾರ್ವಭೌಮರ ಅಂತರಂಗ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಮತ್ತೊಂದು ರಾಯರ ಕುರಿತು ಇರುವ ಕೃತಿಯೇ ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ. ಅವರ ಪ್ರಮುಖ ಕೃತಿ ರಾಯರ ೧೦೮ ವಿಶೇಷಗಳಿಂದ ಸ್ತೋತ್ರಮಾಡುವ ಪುಣ್ಯಪ್ರದವಾದ ಕೃತಿ.
Friday, 21 March 2014
ಯಾಕೆ ಮೂಕನಾದ್ಯೋ ಗುರುವೇ ನೀ ?? ಸುದ್ದಿ ತಿಳಿದೊಡನೆಯೇ ದುಃಖದಲ್ಲಿ ಇದನ್ನು ಬರೆಯುತ್ತಿದ್ದೇನೆ. ಹೇಳಿಕೊಳ್ಳ ಬೇಕು ಎನಿಸಿದ್ದನ್ನ ಹೇಳಿಕೊಳ್ಳುತ್ತಿದ್ದೇನೆ. ಶ್ರೀರಾಘವೇಂದ್ರ ತೀರ್ಥ ಕರುಣಾಪಾತ್ರರೆ ಶ್ರೀ ಧೀರೇಂದ್ರ ತೀರ್ಥ ಸಂಪ್ರದಾಯ ರಕ್ಷಕರೇ ಶ್ರೀ ಸುಶೀಲೆಂದ್ರ ತೀರ್ಥ ಕೃಪಾ ಪಾತ್ರರೆ.. ಶ್ರೀ ಸುಯಮೀಂದ್ರ ತೀರ್ಥ ಕೃಪಾಪೋಷಿತರೆ.. ಶ್ರೀ ಸುಶಮೀಂದ್ರ ತೀರ್ಥ ಕರಕಮಲ ಸಂಜಾತರೇ , ನವಮಂತ್ರಾಲಯದ ಶಿಲ್ಪಿಗಳೇ .. ಶ್ರೀ ಸುಬುಧೇಂದ್ರ ತೀರ್ಥ ಸ್ವರೂಪೋದ್ಧಾರಕರೇ .. ಸ್ವಾಮಿ ನಿಮ್ಮಲ್ಲಿ ಅದೆಷ್ಟು ಸದ್ಗುಣಗಳು ರಾರಾಜಿಸುವವು !! ಶ್ರೀ ಸುಶಮೀಂದ್ರ ತೀರ್ಥರಿಂದ ಆಶ್ರಮ ಪಡೆದು ಗುರುಗಳ ಸೇವೆಯನ್ನು ನಿರಂತರ ಮಾಡಿದಿರಿ .. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಚಾಚೂ ತಪ್ಪದೆ ನಡೆದಿರೀ. ಸುಶಮೀಂದ್ರ ಗುರುಗಳು ಕಾಲವಾದ ಕಠಿಣ ಪರಿಸ್ಥಿತಿಯಾ ಬೆನ್ನಲ್ಲೇ ಮಂತ್ರಾಲಯ ಪ್ರವಾಹಕ್ಕೆ ಸಿಲುಕಿಕೊಂಡಿತ್ತು.. ಆದರೆ ಪ್ರವಾಹ ನಿಂತ ಕ್ಷಣದಿಂದಲೇ ಮಂತ್ರಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ರಾಯರೆದುರು ಸಂಕಲ್ಪ ಮಾಡಿ ಧುಮುಕಿದಿರಿ.. ಯಾವುದೇ ಕ್ಷಣದಲ್ಲೂ ಎದೆ ಗುಂದಲೇ ಇಲ್ಲ . ನಿಮ್ಮ ಪೂರ್ವಾಶ್ರಮ ಪುತ್ರರಾದ ಶ್ರೀ ಸುಯಮೀಂದ್ರ ಆಚಾರ್ಯರಲ್ಲಿ ನಿಂತು ಎಲ್ಲ ಕಾರ್ಯವನ್ನು ಮಾಡಿಸಿದಿರಿ.. ಸಮಸ್ತ ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಕೊರೆದೊಯ್ದಿರಿ.. ಇಂದು ಅನೇಕ ಪೀಠಾಧಿಪತಿಗಳು , ಅನೇಕ ಸಜ್ಜನ ಭಕ್ತರು ರಾಯರ ಸನ್ನಿಧಿಯನ್ನು ಇಂದ್ರನ ಅಮರಾವತಿಗೆ ಹೊಲಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ತಾವಲ್ಲದೆ ಇನ್ನಾರು ಸ್ವಾಮಿ ? ಸುಶಮೀಂದ್ರ ತೀರ್ಥರ ಪ್ರಥಮ ಮಹಾಸಾಮಾರಧನೆ ಬರುವಷ್ಟರಲ್ಲೇ ಅನೇಕ ಯೋಜನೆಗಳು ಸಿದ್ಧಗೊಂದಿದ್ದವು. ಶ್ರೀಮಠವನ್ನ ನಂಬಲೂ ಅಸಾಧ್ಯ ಎಂಬ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಮೂಲರಾಮನ ಕೃಪೆ , ರಾಯರ ಕೃಪೆ ನಿಮ್ಮ ಮೇಲೆ ಎಷ್ಟಿತ್ತು ಅನ್ನೋದನ್ನ ತೋರಿಸುತ್ತದೆ.. ಸ್ವಾಮಿ ಈ ಸಾಧನೆ ಮಾಡಲು , ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಒಯ್ಯಲು ತಾವು ನೆಚ್ಚಿಕೊಂಡಿದ್ದ ತಪಸ್ಸು ಅಸಾಧಾರಣವೇ !! ದಿನಕ್ಕೆ ಹತ್ತಾರು ಘಂಟೆ ಕೇವಲ ಜಪ-ತಪದಲ್ಲೇ ಇದ್ದು ಯಾವಾಗಲೂ ರಾಯರನ್ನೇ ನೆನೆದ ನಿಮ್ಮ ಕರೆಗೆ ಓ ಕೊಟ್ಟೇ ರಾಯರು ಅಷ್ಟು ಭರದಲ್ಲಿ , ಸುಸಜ್ಜಿತವಾಗಿ ತಮ್ಮ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಿಸಿಕೊಂಡಿದ್ದಾರೆ.
ಶ್ರೀ ಧೀರಸಿಂಹರ ಸನ್ನಿಧಿಯಲ್ಲಿ ದೇವೇಂದ್ರನನ್ನೇ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೆರೆಸಿದಿರಿ. ನಿಮ್ಮ ಆ ಸುಧಾಮಂಗಳವನ್ನು ಪೇಜಾವರ ಶ್ರೀಗಳು ಸಹ ಬಹಳವಾಗಿ ಮೆಚ್ಚಿಕೊಂಡಿದ್ದರು. ಅದಲ್ಲದೆ ತಾವು ಮಂತ್ರಾಲಯ ಕ್ಷೇತ್ರದಲ್ಲಿ ನಡೆಸಿದ ಮತ್ತೊಂದು ಸುಧಾಮಂಗಲವೂ ಅದ್ಭುತ ರೀತಿಯಲ್ಲಿ ನಡೆದದ್ದು ಇತಿಹಾಸ. ಶ್ರೀ ರಾಯರ ಸೇವೆ ಮಾಡ ರಾಯರ ಪೀಠ ಏರಿದ ನಿಮ್ಮ ಜೀವನ ಸಾರ್ಥಕ ಪ್ರಭು..
ಇನ್ನು ಸುಂಕಾಪುರದಲ್ಲಿ ಶ್ರೀಮಠದ ಅಂಗಸಂಸ್ಥೆಯಾದ ಪ್ರಹ್ಲಾದ ಯುವಕ ಮಂಡಳದ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮ ಸಂದರ್ಭದಲ್ಲಿ ತೊಂದರೆ ತಂದೊಡ್ಡಲು ತಯಾರಾಗಿ ನಿಂತಿದ್ದ ಮಳೆರಾಯನನ್ನು ಕೇವಲ ತಮ್ಮ ಮಂತ್ರ ಬಲದಿಂದ ನಿಲ್ಲಿಸಿದ್ದು.. ಕೇವಲ ಸುಂಕಾಪುರ ಗ್ರಾಮ ಬಿಟ್ಟು ಉಳಿದ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಜೋರಾಗಿ ಮಳೆಯಾಗಿ ಅಲ್ಲಿ ಮಾತ್ರ ಆಗದೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದಿರಿ.. ಹೀಗೆ ಬೇಕೆಂದಾಗ ಮಳೆಯನ್ನೂ ಬರೆಸಿ , ಬೇಡವಾದಾಗ ಮಳೆಯನ್ನು ನಿಲ್ಲಿಸಿ ಪವಾಡಗಳನ್ನೂ ತೋರಿಸಿದಿರಿ..
ಬಳ್ಳಾರಿಯ ದಿಗ್ವಿಜಯ ಸಂದರ್ಭದಲ್ಲಿ ಅಲ್ಲಿನ ಭಕ್ತರು ಬರಗಾಲದ ಬಗ್ಗೆ ನಿವೆದಿಸಿದಾಗ ನೀವು ಶ್ರೀ ರಾಯರಲ್ಲಿ ನಿವೆದಿಸುತ್ತೇವೆ ಎಂದಾಗ ಯಾರಿಗೂ ಏನೂ ತಿಳಿಯದಾಯಿತು. ಆಮೇಲೆ ನೀವು ರಾಯರನ್ನು ಸಂಪರ್ಕಿಸಿ " ರಾಯರು ಅಭಯ ನೀಡಿದ್ದಾರೆ " ಎಂದು ಘಂಟಾಘೋಷವಾಗಿ ಹೇಳಿ , ಅದರಂತೆ ಆಗಿ ಎಲ್ಲರನ್ನು ಸಂತೋಷ ಗೊಳಿಸಿ.. ನಿಮ್ಮ ವಿನಂತಿಯ ಪ್ರಕಾರ ರಾಯರು ತೋರಿದ ಅದ್ಭುತ ಪವಾಡ.
ನೀವು ಪೀಠಾಧಿಪತ್ಯ ವಹಿಸಿಕೊಂಡ ನಂತರದಲ್ಲೇ ನಡೆದ ಜ್ಞಾನಕಾರ್ಯ ನಿಮ್ಮ ಗುರುಗಳನ್ನು ನೆನೆಸುತ್ತವೆ. ವರ್ಷಕ್ಕೆ ಎರೆಡು ಬಾರೆ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ತಪ್ಪದೆ ನಡೆಸಿದಿರಿ.. ವಿದ್ವಜ್ಜನರ ಪೋಷಣೆಯಲ್ಲಿ ಸದಾ ರಾಯರ ಮಠ ಸನ್ನದ್ಧ ಎಂದು ತೋರಿಸಿದಿರಿ. ಶ್ರೀರಂಗಂ , ಉಡುಪಿ ಹೀಗೆ ಅನೇಕ ಕಡೆ ನಡೆಸಿದಿರಿ. ಶ್ರೀ ರಾಯರ ಮಠಕ್ಕೆ ಇದ್ದ ವಿದ್ಯಾ ಮಠ ಎಂಬ ಬಿರುದನ್ನು ಸಾರ್ಥಕ ಗೊಳಿಸಿದಿರಿ..
ಇನ್ನು ನಿಮ್ಮ ಕಾಲದಲ್ಲೇ ಆದ ಸೋದೆ ಮಠದ ಶ್ರೀಗಳಾದ ಪರಮಪುಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಸಹಯೋಗದೊಂದಿಗೆ ತಾವೇ ಆಚಾರ್ಯ ಮಧ್ವರ ಕಾರ್ಯಕ್ಷೇತ್ರ ಉಡುಪಿಯಲ್ಲಿ ಏರ್ಪಡಿಸಿದ ಸಮೀರ ಸಮಯ ಸಂವರ್ಧಿನಿ ಸಭೆಯಂತೂ ಎಲ್ಲರ ಮನೆಮಾತಾಗಿದೆ. ನೀವು ನಡೆಸಿದ ಈ ಸಭೆ ಪದ್ಮನಾಭ ತೀರ್ಥರು ಹಾಗು ವಿಷ್ಣು ತೀರ್ಥರ ಕಾಲದಿಂದಲೂ ಇದ್ದ ಉಭಯ ಮಠಗಳ ಸ್ನೇಹಯಾತ್ರೆಯನ್ನು ಮುಂದುವರೆಸಿ ಇನ್ನು ಹೆಚ್ಚಾಗುವಂತೆ ಮಾಡಿ ಶ್ರೀ ವಾದಿರಾಜ-ವಿಜಯೀಂದ್ರ-ರಾಘವೇಂದ್ರ ರಾಯರ ಸೇವೆಯನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ.
ಇದರ ಜೊತೆ ಜೊತೆಗೇನೆ ಅನಾರೋಗ್ಯ ವಿದ್ದರೂ ಅನೇಕ ಕಡೆ ಸಂಚರಿಸಿ , ಸಂಪರ್ಕಿಸಲು ಆಗದೇ ಇದ್ದ ಕ್ಷೇತ್ರಗಳ ಶಿಷ್ಯರು ಶ್ರೀಮಠಕ್ಕೆ ಬಂದಾಗ ಅತೀ ಪ್ರೀತಿ ಇಂದ ಅನುಗ್ರಹಿಸಿ ಸನ್ಮಾರ್ಗ ಪ್ರೇರಕರಾಗಿದ್ದಿರಿ..
ಯಾಕೋ ಮೂಕನಾದ್ಯೋ ಗುರುವೇ ನೀ ?? ಸುಯತೀಂದ್ರ ತೀರ್ಥ ಎಂಬ ಯತಿಗಳಲ್ಲಿ ಒಳ್ಳೆಯವರಾದ " ಸುಯತಿ" ಎಂಬ "ಅನರ್ಘ್ಯ ರತ್ನ " ಒಂದು ನಮ್ಮನ್ನಗಿದೆ.. ಶ್ರೀ ಸುಶಮೀಂದ್ರರು ದಯಪಾಲಿಸಿದ ಕಣ್ಣು ನಮಗೆ ಕಾಣದಾಗಿದೆ. ಶ್ರೀ ಸುಭುಧೇಂದ್ರ ತೀರ್ಥರಲ್ಲಿ ಸದಾ ಇದ್ದು ಅವರಿಗ್ಗೋ ಪ್ರೆರಕರಾಗಿ ಶ್ರೀ ಮಠದ ಭವ್ಯ ಪರಂಪರೆಯನ್ನು ಮುಂದೇ " ಪೀಠಾಧಿಪತಿಗಳಾಗಿ" ಬೆಳಗುವಂತೆ ಆಶೀರ್ವದಿಸಿ , ನಮ್ಮನ್ನು ಉದ್ಧರಿಸಬೇಕು ಪ್ರಭು ಅಂತ ಪ್ರಾರ್ಥಿಸುವೆ..
Friday, 14 March 2014
ಶ್ರೀ ಧೀರೇಂದ್ರ ತೀರ್ಥರ ಸಂಕ್ಷಿಪ್ತ ಚರಿತ್ರೆ - ಸಂಗ್ರಹ- ಶ್ರೀಪಾದಸೇವಕ ಸಮೀರ ಜೋಷಿ
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ
ಪೂರ್ವಾಶ್ರಮ-
ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್ ಶ್ರೀಮದಾಚಾರ್ಯರ ಪೀಠವನ್ನು ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ ವಿದ್ಯಾಭ್ಯಾಸ ಮಾಡುವ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ " 'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' , ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀ ರಾಯರ ಮೂಲಬೃಂದಾವನವು ರಾಯರ ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಈ ಘಟನೆ ತಿಳಿದು ಶ್ರೀ ಜಯರಾಮಚಾರ್ಯರು ಉತ್ಸುಕರಾಗಿ ಅದನ್ನು ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) . ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅಂತ ಅಂದುಕೊಂಡು ಆಚರ್ಯರಿಗೆ ಸೂಕ್ಷ್ಮವಾಗಿ " ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.
ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ ಮತ್ತೆ ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಈ ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯ ವೃದ್ದಿಗೆ ಇದು ಕಾರಣವಾಯಿತು .
ಶ್ರೀ ವಾದೀಂದ್ರ ತೀರ್ಥರ ಹೃದ್ಗತ ವಿಷಯವನ್ನು ಅರಿತಿದ್ದ ಶ್ರೀ ವಸುಧೇಂದ್ರ ತೀರ್ಥರು , ಶ್ರೀ ಜಯರಾಮಚಾರ್ಯರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು . ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು . ಶ್ರೀ ವಸುಧೇಂದ್ರ ತೀರ್ಥರು ಕೆಂಚನಗುಡ್ಡ ದ ಪ್ರದೇಶದಲ್ಲಿ ಸಂಚಾರದಲ್ಲಿ ಇದ್ದಾಗ ದೇಹಾಲಸ್ಯವಾಗಿ ಶ್ರೀ ವರದೇಂದ್ರ ತೀರ್ಥರಿಗೆ ತುರ್ತಾಗಿ ಆಶ್ರಮ ಪ್ರದಾನ ಮಾಡಿಸಿ ಅಲ್ಲಿಯೇ ವೃಂದಾವನಸ್ಥರಾದರು. ಮಹಾ ತಪಸ್ವಿಗಳಾಗಿದ್ದ ಶ್ರೀಗಳು ಇಂದಿಗೂ ಅಲ್ಲಿಯೇ ಸನ್ನಿಹಿತರಾಗಿ ಭಕ್ತರ ಅಭೀಷ್ಟ ಪೂರೈಸುತ್ತಿದ್ದಾರೆ. ಅಲ್ಲಿ ಯಾರಾದರೋ ದೇಹ ಶುದ್ಧಿ ಇಲ್ಲದೆ ಹೋದಲ್ಲಿ ಶಿಕ್ಷೆ ಮಾತ್ರ ಖಂಡಿತ . ಅಷ್ಟು ಜಾಗ್ರತ ಶ್ರೀ ವಸುಧೇಂದ್ರರ ಪುಣ್ಯ ಕ್ಷೇತ್ರ.
ಇತ್ತ ಶ್ರೀ ವಸುಧೇಂದ್ರ ತೀರ್ಥರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವರದೇಂದ್ರ ತೀರ್ಥರು ಮಹಾ ತಪಸ್ವಿಗಳು , ದಾಸಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರಿಗೆ ವಿದ್ಯೆ ಕೊಟ್ಟು ಸಲುಹಿದ ಮಹಾ ಗುರುಗಳು. ಶ್ರೀ ಜಯರಾಮಾಚಾರ್ಯರು ನೂತನ ಯತಿಗಳನ್ನು ಸಂಧಿಸಲು ಆಗಮಿಸಿದರು . ಒಮ್ಮೆ ಪುಣ್ಯನಗರಿ ( ಈಗಿನ ಪುಣೆಯಲ್ಲಿ) ಯಲ್ಲಿ ಪೇಶ್ವೆಗಳ ಪ್ರಧಾನ ನ್ಯಾಯಾಧೀಶನಾಗಿದ್ದ ಅದ್ವೈತಿ ಪಂಡಿತನೊಬ್ಬ ಶ್ರೀ ವರದೇಂದ್ರ ತೀರ್ಥರಿಗೆ ಬಹಿರಂಗವಾಗಿ ವಾದಿ ದಿಗ್ವಿಜಯಕ್ಕೆ ಆಹ್ವಾನ ನೀಡಿದ . ವಾದಕ್ಕೆ ವೇದಿಕೆ ಸಜ್ಜಾಯಿತು. ಶ್ರೀಯವರು ಗಾಂಭೀರ್ಯದಿಂದ ವಿರಾಜಮಾನರಾಗಿ ಪೇಶ್ವೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಿದ್ದ ಮರ್ಯಾದೆಗಳನ್ನೆಲ್ಲ ಸ್ವೀಕರಿಸಿದರು. ಆಮೇಲೆ ಪಣ ನಿರ್ಧಾರದ ಸಮಯ. ಆಗ ಪೆಶ್ವೆಯಾ ನ್ಯಾಯಾಧೀಶ ಗೆದ್ದೇ ಗೆಲ್ಲುವೆ ಎಂಬ ಅಹಂಕಾರದಿಂದ " ಶ್ರೀಗಳವರ ಬಣ ವಾದದಲ್ಲಿ ಸೋತರೆ ಸಂಸ್ಥಾನವನ್ನು ಬಿಟ್ಟು ಬಿಡಿ ಸನ್ಯಾಸಿಗಳಂತೆ ಅಡ್ದಾಡಬೇಕು" ಎಂದು ಹೇಳಿದ. ಅದಕ್ಕೆ ಶ್ರೀಯವರು ಮಂದಹಾಸ ಬೀರಿ " ಆಗಲಿ , ನೀವೇನಾದರೂ ಸೋತರೆ ಈ ಭವ್ಯವಾದ ಮನೆಯನ್ನು ನಮಗೆ ಬಿಟ್ಟುಕೊಟ್ಟು, ಗಡಿಪಾರು ಹೊಂದಬೇಕು " ಎಂದು ಹೇಳಿದರು . ಆಗ ಇಬ್ಬರ ಬಣಗಳೂ ಇದನ್ನೋಪ್ಪಿ ವಾದ ಪ್ರಾರಂಭಕ್ಕೆ ಚಾಲನೆ ದೊರಕಿತು. ಬಹು ಕ್ಲಿಷ್ಟಕರ ವಾದ ವಿಷಯ ಎತ್ತಿಕೊಂಡು ಮಹಾ ಮೇಧಾವಿಯಾದ ಪಂಡಿತನು ತನ್ನ ವಾದ ಹೂಡಿದನು. ಆಗ ಅದಕ್ಕೆ ಶ್ರೀಯವರ ಬಣದಿಂದ ಶ್ರೀ ಜಯರಾಮಾಚಾರ್ಯರು ಎದ್ದು ನಿಂತು " ಇದಕ್ಕೆ ಶ್ರೀಗಳವರ ಅವಶ್ಯಕತೆ ಇಲ್ಲವೇ ಇಲ್ಲ " ಎಂದು ಹೇಳಿ ತಾವೇ ಎಲ್ಲ ಪೂರ್ವಪಕ್ಷಗಳನ್ನು ಧ್ವಂಸ ಮಾಡಿ ಪರವಾದಿಗಳಿಗೆ ಸಿಂಹಸ್ವಪ್ನರಾದರು. ಆಗ ಶಾಸ್ತ್ರಿಗೆ ತನ್ನ ಸೋಲು ಸನಿಹ ಬರುತ್ತಿದೆ ಎಂದು ತಿಳಿದು , ಶ್ರೀ ಜಯರಮಾಚಾರ್ಯರ ಮಾತನ್ನು ಎದುರಿಸಲಾಗದೆ " ಶ್ರೀಗಳವರೊಂದಿಗೆ ಮಾತ್ರ ನಾನು ವಾದ ಮಾಡುವೆ ಇತರರೊಡನೆ ಮಾಡುವದಿಲ್ಲ" ಎಂದು ನುಡಿದ. ಆಗ ಶ್ರೀಗಳವರು ನುಸು ನಕ್ಕು ತಮ್ಮದೇ ಶೈಲಿಯಲ್ಲಿ ವಾದಿಯನ್ನು ಮಣಿಸಿದರು. ಇದು ಐತಿಹ್ಯ. ಈ ಘಟನೆಯನ್ನು ಶ್ರೀ ವರದೇಶ ವಿಠಲದಾಸರು ಬಹು ಸುಂದರವಾಗಿ ವರ್ಣಿಸಿದ್ದಾರೆ. ಇಲ್ಲಿ ಆಚಾರ್ಯರ ಪಾತ್ರ ಬಹು ಮುಖ್ಯವಾಗಿತ್ತು. ಆಗ ಶ್ರೀಗಳವರು ಜಯರಾಮಚಾರ್ಯರನ್ನು ಬಹುವಾಗಿ ಪ್ರಶಂಸಿಸಿ , ಸನ್ಮಾನಾದರಾದಿಗಳನ್ನೂ ಮಾಡಿಸಿ ಆಶೀರ್ವದಿಸಿ ಕಳುಹಿಸಿದರು.
ಸನ್ಯಾಸ-
ಒಮ್ಮೆ ಶ್ರೀ ಜಯರಾಮಚಾರ್ಯರು ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಕುಂಭಕೋಣ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಆಗ ವೃಂದಾವನದ ಎದುರಿಗೆ ಸಂಜೆ ಕುಳಿತಿದ್ದರು. ಆಗ ಶ್ರೀ ವಿಜಯೀಂದ್ರ ತೀರ್ಥರ ವೃಂದಾವನವನ್ನು ಅನುಸಂಧಾನ ಪೂರ್ವಕವಾಗಿ ನಮಸ್ಕರಿಸಿ ಅಲ್ಲಿಯೇ ಕುಳಿತಾಗ ಶ್ರೀ ಮಠದ ಗುರು ಪರಂಪರೆಯನ್ನು ಸ್ಮರಿಸುವಾಗ ತಮ್ಮ ಪೂರ್ವಾಶ್ರಮದ ಜನ್ಮದಾತರು , ವಿದ್ಯಾಗುರುಗಳೂ ಆದ ಶ್ರೀ ವಾದೀಂದ್ರ ಗುರುಗಳ ಸ್ಮರಣೆ ಬಂದಾಗ ಆಚರ್ಯರಿಗೆ ಮತ್ತೆ ಏನೋ ಭಾಸವಗುತ್ತಲಿತ್ತು. ಅವರು ಹೇಳಿದ ' ಇಷ್ಟಾದರೆ ಸಾಲದು ಜಯರಾಮ ! ನಿಜವಾದ ವೈರಾಗ್ಯ ಬೇಕು " ಅನ್ನೋ ಮಾತು ನಿರಂತರ ಕಿವಿಯಲ್ಲಿ ಹರಿದಾಡುತ್ತಿತ್ತು. ಸಂಜೆ ಕಳೆದು ರಾತ್ರಿಯಾಯಿತು ಆಚಾರ್ಯರು ಮಾತ್ರ ಅಲ್ಲೇ ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದರು , ಬೆಳಗಿನ ಜಾವ ಸ್ವಲ್ಪ ಜ್ಹೊಂಪು ಹತ್ತಿದಾಗ ಆಚರ್ಯರಿಗೆ ಸಾಕ್ಷಾತ್ ಶ್ರೀ ವಿಜಯೀಂದ್ರ ತೀರ್ಥ ಗುರುಸರ್ವಭೌಮರೆ ಬಂದು ನಿಂತು ಸನ್ಯಾಸ ದೀಕ್ಷೆಗೆ ಆದೇಶ ಮಾಡಿ , ದೀಕ್ಷೆ ನೀಡಿದರು . ಮರುದಿನವೇ ಶ್ರೀ ಆಚಾರ್ಯರು ವೃಂದಾವನದ ಸಾಕ್ಷಿಯಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವರದೇಂದ್ರ ತೀರ್ಥರ ಸನ್ನಿಧಾನಕ್ಕೆ ಹೊರಟರು. ಆಗ ಅಲ್ಲಿ ಶ್ರೀ ವರದೇಂದ್ರ ತೀರ್ಥರು ದೇಹಾಲಸ್ಯವಾಗಿದ್ದರಿಂದ ಜಯರಾಮಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಆಚಾರ್ಯರು ಅಲ್ಲಿ ಇರದ ಕಾರಣ , ಯಾವುದೇ ಕಾರಣಕ್ಕೂ ಸಂಸ್ಥಾನದ ಉಪಾಸ್ಯಮೂರ್ತಿ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಗೆ ವ್ಯತ್ಯಯ ಬರಬಾರದೆಂದು ನಿರ್ಧರಿಸಿ ಶ್ರೀ ಜಯರಾಮಚಾರ್ಯರ ಶಿಷ್ಯರೇ ಆದ ಶ್ರೀ ಭುವನೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆನೀಡಿ ಮೂಲರಾಮ ಪೂಜಾ ಕೈಂಕರ್ಯ ನೆರವೇರಿಸಲು ಆದೇಶಿಸಿದರು. ಶ್ರೀ ವರದೇಂದ್ರ ತೀರ್ಥರು "ಜಯರಾಮಚರ್ಯರಿಗೆ ಸಂಸ್ಥಾನ ಒಪ್ಪಿಸತಕ್ಕದ್ದು" ಎಂದು ಹೇಳಿ ಕಾಲವಾದ ಮೇಲೆ ಶ್ರೀ ಭುವನೆಂದ್ರ ತೀರ್ಥರು ಶ್ರೀ ಧೀರೇಂದ್ರ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ , ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಒಪ್ಪಿಸಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀ ಧೀರೇಂದ್ರ ತೀರ್ಥರು ಅನೇಕ ವರ್ಷಗಳ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ಮಾಡಿ ಸಂಸ್ಥಾನದ ಸಕಲ ರೀತಿಯ ಜವಾಬ್ದಾರಿಯನ್ನು ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರಿಗೆ ವಹಿಸಿಕೊಟ್ಟು , ತಾವು ಜಪ-ತಪಗಳನ್ನಾಚರಿಸಲು ಹೊಸರಿತ್ತಿ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಶ್ರೀ ವರದೇಂದ್ರ
ತೀರ್ಥರ ಶಿಷ್ಯರಾದ ಜಗನ್ನಾಥದಾಸರು ಬಂದು "ಶ್ರೀ ಹರಿಕಥಾಮೃತ ಸರಾವನ್ನು" ಶ್ರೀ ಧೀರೇಂದ್ರ ತೀರ್ಥರ ಸನ್ನಿಧಾನದಲ್ಲೇ ಬರೆದು ಅವರಿಗೆ ಸಮರ್ಪಿಸಿದರು.
Subscribe to:
Posts (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
source : http://www.facebook.com/pages/ Sri-Madhwacharya/ 146259025401528 The 24 Mathas (Along With Their Presiding Deites) Of The Dvai...
Subscribe Us
Popular Posts
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
|| श्री मन्मूल रामो विजयते || ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮ...
-
source : http://www.facebook.com/pages/ Sri-Madhwacharya/ 146259025401528 The 24 Mathas (Along With Their Presiding Deites) Of The Dvai...

