ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Saturday, 25 May 2013
Saturday, 11 May 2013
ಗುರುಸಾರ್ವಭೌಮರೆ !
ಗುರುಸಾರ್ವಭೌಮರೆ ! ಅದೆಂತು ಬಣ್ಣಿಸಲಿ ನಿಮ್ಮ ಕರುಣೆಯನ್ನು ?? ನೀವು ಕರುಣೆಯ ಸಾಗರ , ಭಕ್ತ ವತ್ಸಲರು , ಅಭೀಷ್ಟಪ್ರದರು .. ಸ್ವಾಮಿ ಧನ್ಯನಾದೆ ನಿಮ್ಮ ಕಂಡು , ಧನ್ಯನಾದೆ .. ಮಂತ್ರಾಲಯಕ್ಕೆ ಹೋಗಬೇಕಾದರೆ ಹೆಚ್ಚಿನ ಪ್ರಯಾಸ ಬೇಕಾಗಿಲ್ಲ , ಕೇವಲ ರಾಯರೇ ನಾನು ನಿಮ್ಮ ದರ್ಶನಾಕಾಂಕ್ಷಿ ದಯವಿಟ್ಟು ನಿಮ್ಮ ದರ್ಶನವಿತ್ತು ಸಲಹಿ ತಂದೆ ಎಂದು ಬೇಡಿಕೊಂಡರೆ ಸಾಕು ಆ ಕರುಣಾ ಮೂರ್ತಿ ರಾಯರು ಕರೆಸಿಕೊಂಡೆ ಬಿಡುತ್ತಾರೆ .. ೩ ದಿನ ನಮ್ಮ ಕುಲಗುರು ರಾಘವೇಂದ್ರ ತೀರ್ಥ ಗುರುಸರ್ವಭೌಮರ ಸನ್ನಿಧಿಗೆ ಹೋಗಲು ಇಂತಹುದೆ ಸಂಕಲ್ಪ ಕಾರಣ .. ಪರಮ ಕರುಣಾ ಮೂರ್ತಿ ರಾಯರು ಕರೆಸಿಕೊಂಡದ್ದಲ್ಲದೆ ಹಿಡಿ ತುಂಬಾ ಅನುಗ್ರಹ ಮಾಡಿಯೇ ಕಳಿಸಿದರು .. ನಾನು ಮಂತ್ರಾಲಯದಲ್ಲಿ ಇದ್ದಷ್ಟು ದಿನ ಗುರುಗಳು ತಾವು ಸಾಕ್ಷಾತ್ ವಿರಾಜಿಸಿರುವ ಗರ್ಭ ಗುಡಿಗೆ ಈ ಪಾಮರನನ್ನು ಕರೆಸಿಕೊಂಡು , ದಿನವೂ ತಾವು ಧರಿಸಿದ್ದ ಹೂವು , ಅವರ ಪಾದೋದಕಗಳನ್ನೂ ಅನುಗ್ರಹಿಸಿದರು.. ಇದು ಸುವರ್ಣ ಅನುಭವ :) .. ಧನ್ಯ ಭಾವ .. ಅವರ ಮುಂದೆ ನಾನು ಕಲಿತಿರುವ ಅತ್ಯಲ್ಪ , ಸಣ್ಣ ಪುಟ್ಟ ಸ್ತೋತ್ರಗಳನ್ನೂ ಹಾಗು ಅಪ್ಪಣ್ಣಾಚಾರ್ಯ ಕೃತ ರಾಘವೇಂದ್ರ ಸ್ತೋತ್ರಗಳನ್ನೂ ಅವರ ಮುಂದೆ ಅವರ ಗರ್ಭ ಗುಡಿಯಲ್ಲಿ , ಮೂಲ ವೃಂದಾವನದ ಮುಂದೆ ಒಪ್ಪಿಸಲು ಆಶೀರ್ವದಿಸಿದರು .. ಇದು ನನ್ನ ಪಾಲಿಗೆ ಸ್ವರ್ಗದ ಬಾಗಿಲು ತೆಗೆದಷ್ಟೇ ಸಂತಸ ಸಿಕ್ಕಿದೆ.. ಇದಲ್ಲದೆ ನಿತ್ಯವೂ ನಡೆಯುವ ರಥೋತ್ಸವದ ನಂತರ ಗುರುರಾಜರ ಪಲ್ಲಕ್ಕಿ ಎತ್ತಿ ಹಿಡಿಯುವ ಸೌಭಾಗ್ಯವನ್ನು ಕರುಣಿಸಿದರು .. ಇವೆಲ್ಲವೂ ಜ್ಞಾನಿಗಳಿಗೆ ನಿತ್ಯ ಸಿಗುವ ಅವಕಾಶಗಳು , ಇವುಗಳನ್ನು ಒಂದು ದಿನವಾದರೂ ನನಗೆ ದೊರಕಿಸಿಕೊಟ್ಟಿರುವ ರಾಘವೇಂದ್ರ ಗುರುಗಳ ಕರುಣೆ ವರ್ಣಿಸಲಸಾಧ್ಯ .. ಇದಲ್ಲದೆ ಮರಳಿ ಊರಿಗೆ ಬರಬೇಕಾದರೆ ನಾವು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಒಬ್ಬ ಹೆಂಗಸು ಅವಳ ತಾಯಿ ಹಾಗೂ ಆಕೆಯ ಹಸುಗೂಸಿ ನೊಂದಿಗೆ ರಾಯಚೂರಿ[ನಿಂದ ಪ್ರಯಾನಿಸುತ್ತಿದ್ದಳು.. ಆ ಮಗುವಿಗೆ ಸುಮಾರು ೫ ತಿಂಗಳು .. ರಾತ್ರಿ 11.30 ಗಂಟೆಗೆ ಆಕೆಯ ಮಗುವಿಗೆ ಜ್ವರ ತುಂಬಾ ಹೆಚ್ಚಾಗಿ ಆದು ನರಳಲು ಶುರು ಮಾಡಿತು.. ಸ್ವಲ್ಪ ಹೊತ್ತಿನಲ್ಲೇ ಪರಿಸ್ಥಿತಿ ಇನ್ನು ಬಿಗಡಾಯಿಸಿತು , ಮಗು ನಡುಗಲು ಶುರು ಮಾಡಿತು .. ಆಗ ನನ್ನೊಂದಿಗೆ ಇದ್ದ ಗೆಳೆಯನಿಗೆ , ಮಗುವಿನ ಮೇಲೆ ರಾಯರ ಮಂತ್ರಾಕ್ಷತೆ ಹಾಕಲು ಹೇಳಿದೆ .. ಅವನು ತನ್ನ ಬಳಿ ಇದ್ದ ಮಂತ್ರಾಕ್ಷತೆ ಕೊಟ್ಟ .. ಸ್ವಲ್ಪ ಹೊತ್ತಿನಲ್ಲೇ ನರುಳುತ್ತಿದ್ದ ಮಗು , ತನ್ನ ನರಳಾಟವನ್ನು ನಿಲ್ಲಿಸಿತು , ಮಗುವಿನ ನಡುಕವೂ ನಿಂತಿತ್ತು .. :) :) .. ಹೀಗೆ 3 ದಿನಗಳಲ್ಲಿ ರಾಯರ ಪರಮ ಕಾರುಣ್ಯ ಕಂಡು ಅವರ ಭಕ್ತ , ಅವರ ಮಠದ ಶಿಷ್ಯ ನಾಗಿದ್ದು ಸಾರ್ಥಕ ಎನಿಸಿತು .. :)
Wednesday, 10 April 2013
ಶ್ರೀ ಮದ್ವಾದಿರಾಜೋಪಿ ಜೀವೊತ್ತಮಃ . ಶ್ರೀ ಸ್ವಾಪ್ನವೃಂದಾವನಾಖ್ಯಾನ ದಂತಹ ಸ್ವಾಪ್ನ ಗ್ರಂಥ ಜಗತ್ತಿನಲ್ಲಿ ಇನ್ನೊಂದಿಲ್ಲ . ಶ್ರೀ ವಾದಿರಾಜರ ನಿಜ ಸ್ವರೂಪ ದರ್ಶನ ಮಾಡಿಸುವ ಗ್ರಂಥ ರತ್ನವದು. ಇದರಲ್ಲಿ ತಿಳಿಸಿರುವ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ . ಅನೇಕ ಘಟನೆಗಳು ನಡೆದುಹೋಗಿವೆ .
ಶ್ಲೋಕ ೭೯.ಅ.೧೩
ವಿಪ್ರ ತೇ ಮತ್ಸುತೇನೈವ ದಾಪಯಿಶ್ಯೇsನ್ನಮುತ್ತಮಂ ।
ತದಂತಃ ಪ್ರೇರಯಿತ್ವಾಹಂ ಮದಂತರ್ಯಾಮಿತಾಂ ಸ್ಮರ ॥
ಹೇ ವಿಪ್ರ ! ನನ್ನ ಭಕ್ತನೋಬ್ಬನಿಂದಲೇ , ಅವನ ಮನಸ್ಸಿನಲ್ಲಿದ್ದು ಅವನಿಗೆ ಪ್ರೇರಣೆ ಮಾಡಿ ನಾನು ( ಪರ್ಯಾಯ ಕಾಲದಲ್ಲಿ ಅನ್ನ ಕಾಲಕ್ಕೆ ಅನುಕೂಲವನ್ನು ) ಕೊಡಿಸುತ್ತೇನೆ . ನೀನು ನನ್ನ ಅಂತರ್ಯಾಮಿತ್ವ ಮಹಾತ್ಮೆಯನ್ನು ಭಕ್ತಿಯಿಂದ ತಿಳಿಸು.
೧ ಪರ್ಯಾಯ ಕಾಲಕ್ಕೆ ಭಕ್ತನೋಬ್ಬನಿಂದ ಧನ ಪ್ರಾಪ್ತಿಯಾಗುವದು ಎಂಬ ಭವಿಷ್ಯವಾಣಿ ಹೇಳಲ್ಪಟ್ಟಿದೆ. ಮೈಸೂರು ಮಹಾರಾಜರು ಬಹಳವಾಗಿ ಕೊಟ್ಟಿದ್ದಾರೆ .
ಹೀಗೆ ಆಖ್ಯಾನದಲ್ಲಿ ಬಹಳ ವಿಚಾರಗಳು ಪ್ರಸ್ತುತವಾಗಿವೆ . ಆದ್ದರಿಂದಲೇ ರಾಜರು ಇದನ್ನು ಕಲ್ಲಿನಿಂದ ಕೆತ್ತಿಡಬೇಕು ಎಂದು ಹೇಳಿದ್ದಾರೆ . ಅಂತಹ ಪವಿತ್ರತಮ ಗ್ರಂಥ ಈ ಆಖ್ಯಾನ.

Wednesday, 20 February 2013
SHri Raghavendra kumara SHri Yogeendra Teertha shreepadangalavaru , SHrirangam TN
Shri Yogeendra teertha is direct disciple of Shri Raghavendra
teertharu ( Gurusarvabhoumaru ) . He was grandson of Shri
Gururajacharya ( Porvashrama Brother of SHri Raghavendra teertharu) .
His poorvashrama name is Venkannacharya . Yogeendra was a great scholar,
intellectual . After his guru entered the Brindavan, Yogeendra made
proper arrangements for regular poojas of Brindavan, stayed there for
sometime and left on a tour. He defeated Kakashastri of Bhagya nagara .
As Gururaja had moved away from Southern region, the swamiji went
towards that region. After having a darshan of Sri Vijayeendra swamiji
at Kumbhakonam, he came to Srirangam.Muddalagadrinayaka, son of
Vishwanathanayaka and grandson of Thirumalanayaka was ruling at Madurai
then. In keeping with the tradition of the reverence, his ancestors had
towards Mahasamsthana, he gifted a village ‘Arambhanna’
on the banks of the river Tamraparni and Kalla Mutt lying to the west
of Chitra street in Srirangam on the most sacred day of Akshaya
Thritheeya in Siddharthi Samvatsara (1679) dedicating it to Lord
Krishna.
Having got a suitable place to reside at the most
sacred place like Srirangam, Yogeendratheertha settled down there itself
and reached eternal abode on the tenth day of Magha Shuddha in Vibhava
Samvatsara.
Period : 1671 - 1688
Ashrama Gurugalu : Sri Raghavendra Swamy
Ashrama Shishyaru : Sri Sooreendra Teertharu
History : http:// www.raghavendramutt.org/about/ sri-yogeendra-teertharu
Aradhana Tithi : MaaghaShukla Dashami (Jan - Feb)
Vrindavana Situated at : Sriranga | Map
Sloka :
Sanskrit :
सांद्रबॊधाय शास्त्रॆषु निस्तंद्रमनसॆ हरौ ।
राघवॆंद्रकुमाराय नमॊ यॊगींद्रयॊगीनॆ ॥
Kannada :
ಸಾಂದ್ರಬೋಧಾಯ ಶಾಸ್ತ್ರೇಷು ನಿಸ್ತಂದ್ರಮನಸೇ ಹರೌ |
ರಾಘವೇಂದ್ರ ಕುಮಾರಾಯ ನಮೋ ಯೋಗೀಂದ್ರಯೋಗಿನೇ |
Friday, 11 January 2013
ಈ ಬ್ಲಾಗಿನ ೧೦೦ ನೆ ಪೋಸ್ಟ್ ಅನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ , ರಾಯರ ಪೂರ್ವಿಕ ಗುರುಗಳಾದ ಶ್ರೀ ಜಿತಮಿತ್ರ ತೀರ್ಥ ರ ಬಗೆಗೆ ಬರೆಯುತ್ತೇನೆ ಎಂದು ಹೇಳಳು ಖುಷಿಯಾಗುತ್ತದೆ .. ಇದು ೧೦೦ ನೆ ಪೋಸ್ಟ್ .. ಒಟ್ಟು ೩೦೦೦ ಜನ ಬ್ಲಾಗ್ ಗೆ ವಿಸಿಟ್ ಮಾಡಿದ್ದಾರೆ .. :) Thank you one and all ..
ಶ್ರೀ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರು
ಶ್ರೀ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರು
ಇಂದು ಶ್ರೀ ವಿಬುಧೇಂದ್ರ ಕರೋದ್ಭವ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ.. ಅದರ ಪ್ರಯುಕ್ತ ಈ ಲೇಖನ ..
ಶ್ರೀ ಜಿತಾಮಿತ್ರರು ರುದ್ರಾಂಶ ಸಂಭೂತರು . ಇವರ
ಪವಾಡಗಳು ಅನೇಕ . ಇದಕ್ಕೆ ಇವರು ನೆಲೆಸಿದ ವೃಕ್ಷವೆ ಸಾಕ್ಷಿ ( ಶ್ರೀಗಳ ವೃಂದಾವನ ಇಲ್ಲ )
. ಶ್ರೀ ಜಿತಾಮಿತ್ರ ತೀರ್ಥ ರು ಪಾಠದಲ್ಲಿ ತೊಡಗಿದಾಗ ರುದ್ರ ದೇವರು ಜಂಗಮನ ರೂಪದಲ್ಲಿ
ಬಂದು ಕೂಡುತ್ತಿದ್ದರಂತೆ. ಇದಕ್ಕೆ ಶಿಷ್ಯರ ಆಕ್ಷೇಪ ಬಂದಿತಂತೆ .ಅದಕ್ಕೆ
ಶ್ರೀಗಳು "ಸಮಯ ಬಂದಾಗ ಉತ್ತರಿಸುತ್ತೇವೆ ಈಗ ಆತ ಬರಲಿ" ಎಂದರಂತೆ .ಒಮ್ಮೆ ಕೃಷ್ಣೆಗೆ
ಪ್ರವಾಹ ಬಂದಾಗ ಜಂಗಮ ತಡವಾಗಿ ಬಂದರೂ ಆತ ಬಂದ ರೀತಿ ವಿಚಿತ್ರವಾಗಿತ್ತು . ಆತ ಒಂದು
ವಸ್ತ್ರವನ್ನು ಹಾಸಿ ಅದರ ಮೇಲೆ ತೇಲುತ್ತ ಶ್ರೀಗಳ ಸನ್ನಿಧಾನಕ್ಕೆ ಬಂದಿದ್ದ !! .
ಶ್ರೀ ಗಳವರು ಸನ್ಯಾಸಾಶ್ರಮ ಸ್ವೀಕರಿಸಿದ್ದೆ ವಿಚಿತ್ರ . ಅನಂತಪ್ಪ ವಿಬುಧೆಂದ್ರರ ಶಿಷ್ಯನಾಗಿದ್ದು ದೈವಬಲದಿಂದಲೇ ಸರಿ . ವಿಬುಧೆಂದ್ರ ತೀರ್ಥರು ಈತನಿಗೆ ನರಸಿಂಹ ಸಾಲಿಗ್ರಾಮದಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ನರಸಿಂಹ ಸಾಲಿಗ್ರಾಮದ ಅಗಲವಾದ ಬಾಯಿಯಲ್ಲಿ ಅನ್ನವನ್ನು ತುರುಕಿ ದೇವರು ನನ್ನ ನೆವಿದ್ಯವನ್ನು ಸ್ವೀಕರಿಸಲಿಲ್ಲ ಎಂದು ಬಹಳವಾಗಿ ಅನಂತಪ್ಪ ಕೊರಗಿದನಂತೆ . ಆಮೇಲೆ " ನೀನು ಇದನ್ನು ಸ್ವೀಕರಿಸದಿದ್ದರೆ ನಾನು ನನ್ನ ತಲೆಯನ್ನು ಗುಂಡುಕಲ್ಲಿಗೆ ಚಚ್ಚಿಕೊಳ್ಳುತ್ತೇನೆ ಎಂದು ಹೇಳಿದನಂತೆ . ಆಗ ಅಲ್ಲಿದ್ದ ಅನ್ನವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತಂತೆ .!! . ನಂತರ ಮಧ್ವರ ಶಾಸ್ತ್ರಗಳನ್ನು ಶ್ರೀ ವಿಬುಧೆಂದ್ರ ತೀರ್ಥರಲ್ಲಿ ಅಧ್ಯಯನ ಮಾಡಿ ಸನ್ಯಾಸ ಸ್ವೀಕರಿಸಿ ಶ್ರೀ ಜಿತಾಮಿತ್ರ ತೀರ್ಥರು ಎಂದು ಪ್ರಸಿದ್ಧರಾದರು .
ಶ್ರೀ ಗಳು ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಧ್ಯಾನಾಸಕ್ತರಾಗಿದ್ದರಿಂದ ಹೊರಬರದೇ ಅಲ್ಲಿಯೇ ಏಳು ದಿನಗಳ ಕಾಲ ಇದ್ದರು . ಮುಂದೆ ಶಿಷ್ಯರೆಲ್ಲರೂ ದು:ಖ ತಪ್ತರಾಗಿ ಮರಳಿದಾಗ ಶ್ರೀಗಳು ಇನ್ನು ಧ್ಯಾನಾವಸ್ಥೆಯಲ್ಲಿಯೇ ಇದ್ದದ್ದನ್ನು ನೋಡಿ ಶ್ರೀಗಳ ತಪ ಶಕ್ತಿ ಎಂತಹುದು ಎಂಬುದನ್ನು ಮನಕಂಡರಂತೆ. ಮುಂದೆ ಮತ್ತೊಮ್ಮೆ ಪ್ರವಾಹ ಬಂದಾಗ ಶ್ರೀಗಳು ಅದೃಶ್ಯರಾಗಿ " ನಾವು ಇಲ್ಲಿಯೇ ಚಿರಕಾಲ ನೆಲೆಸುತ್ತೇವೆ . ನಮ್ಮ ವೃಂದಾವನ ಕಟ್ಟುವ ಅವಶ್ಯಕತೆ ಇಲ್ಲ . ಇಲ್ಲಿಯೇ ನಾವು ಕುಳಿತುಕೊಳ್ಳುತ್ತಿದ್ದ ಗೋಂದಿನ ಮರದಲ್ಲಿಯೇ ನಿಮ್ಮ ಸನ್ನಿಧಾನ ಇರುತ್ತದೆ .ಇಲ್ಲಿಯೇ ನಮ್ಮ ಆರಾಧನಾದಿಗಳು ನೆರವೇರಲಿ ಎಂದು ಹೇಳಿದರಂತೆ . " . ಅಂದಿನಿಂದ ಇಂದಿನವರೆಗೂ ಆ ಮರಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಪೂಜೆ ನಡೆಯುತ್ತಿದೆ .
ಶ್ರೀಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ರಾಯರ ಮಠದ ಯತಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಶ್ರೀ ಜಿತಾಮಿತ್ರರ ಸನ್ನಿಧಿಗೆ ಆರಾಧಾನೆಗಾಗಿ ಹೋದಾಗ ಅಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ಭೈರಾಗಿಯ ರೂಪದಲ್ಲಿ ಜಿತಾಮಿತ್ರರ ದರ್ಶನ ವಾಯಿತೆಂದು ಅವರೇ ಮುಂದೆ ಗರ್ಭಗುಡಿಗೆ ಹೋಗಿ ಅದೃಶ್ಯರಾದರೆಂದು , ಇದನ್ನು ಶ್ರೀಗಳು ಕಂಡರೆಂದು ಹೇಳುತ್ತಾರೆ . ಇವರ ಅಸ್ತಿತ್ವದ ಮನವರಿಕೆ ಅನೇಕ ರಾಯರ ಮಠದ ಪೀಠಾಧಿಪತಿಗಳಿಗೆ ಆಗಿದೆ .
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಈ ಹಿಂದಿನ ಪೀಠಾಧಿಪತಿಗಳು , ಮಹಾ ವಿರಕ್ತರು , ತಪಸ್ವಿಗಳು , ನಡೆದಾಡುವ ರಾಯರು ಎಂದೇ ಪ್ರಸಿದ್ಧ ರಾಗಿದ್ದ ಪರಮ ಪೂಜ್ಯ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರಿಗೆ " ಅಭಿನವ ಜಿತಾಮಿತ್ರ " ತೀರ್ಥರು ಎಂಬ ಬಿರುದಿದೆ . ಒಂದು ಬಾರಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಿಗೆ ಆರಾಧನಾ ಉತ್ಸವಕ್ಕೆ ಹೋಗಿದ್ದರು. ಅಲ್ಲಿ ಶ್ರೀಗಳು ಶ್ರೀಮನ್ ಮೂಲ ರಾಮದೇವರಿಗೆ ಸಕಲವಿಧವಾದ ಪೂಜೆ ನಡೆಸಿ ಗುರುಗಳಿಗೆ ಹಸ್ತೋದಕ ನೀಡುತ್ತಿದ್ದ ಸಂದರ್ಭದಲ್ಲಿ ಅಲಂಕಾರ ಸಮೇತ ಇದ್ದ ಜಿತಾಮಿತ್ರರ ಸನ್ನಿಧಾನ ಉಳ್ಳ ಗೋಂದಿನ ಮರದಿಂದ ಒಂದು ಹೂವು ಶ್ರೀಗಳವರ ಕೊರಳಿಗೆ ತನ್ನಿಂದ ತಾನೇ ಬಿದ್ದಿತು . ಶ್ರೀಗಳವರು ಆನಂದ ಭಾಷ್ಪ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ . ಈ ಘಟನೆ ನಡೆದದ್ದು ತೀರ ಇತ್ತೀಚಿಗೆ ಅಂದರೆ 1945 ನೆಯ ಇಸವಿಯಲ್ಲಿ ..!

Subscribe to:
Posts (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। ಸನ್ಯಾಸಿಗಳ ಕರ್ತವ್ಯ ಪರಮತಖಂ...
Subscribe Us
Popular Posts
-
|| श्री मन्मूल रामो विजयते || ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮ...
-
ಸಕಲವಿದಜನಕುಮುದವನ ಕೌಮುದೀಶರು ಶ್ರೀಸುರೇಂದ್ರತೀರ್ಥರು ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ । ತಸ...