ಈ ಬ್ಲಾಗಿನ ೧೦೦ ನೆ ಪೋಸ್ಟ್ ಅನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ , ರಾಯರ ಪೂರ್ವಿಕ ಗುರುಗಳಾದ ಶ್ರೀ ಜಿತಮಿತ್ರ ತೀರ್ಥ ರ ಬಗೆಗೆ ಬರೆಯುತ್ತೇನೆ ಎಂದು ಹೇಳಳು ಖುಷಿಯಾಗುತ್ತದೆ .. ಇದು ೧೦೦ ನೆ ಪೋಸ್ಟ್ .. ಒಟ್ಟು ೩೦೦೦ ಜನ ಬ್ಲಾಗ್ ಗೆ ವಿಸಿಟ್ ಮಾಡಿದ್ದಾರೆ .. :) Thank you one and all ..
ಶ್ರೀ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರು
ಶ್ರೀ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರು
ಇಂದು ಶ್ರೀ ವಿಬುಧೇಂದ್ರ ಕರೋದ್ಭವ ಜಿತಾಮಿತ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ.. ಅದರ ಪ್ರಯುಕ್ತ ಈ ಲೇಖನ ..
ಶ್ರೀ ಜಿತಾಮಿತ್ರರು ರುದ್ರಾಂಶ ಸಂಭೂತರು . ಇವರ
ಪವಾಡಗಳು ಅನೇಕ . ಇದಕ್ಕೆ ಇವರು ನೆಲೆಸಿದ ವೃಕ್ಷವೆ ಸಾಕ್ಷಿ ( ಶ್ರೀಗಳ ವೃಂದಾವನ ಇಲ್ಲ )
. ಶ್ರೀ ಜಿತಾಮಿತ್ರ ತೀರ್ಥ ರು ಪಾಠದಲ್ಲಿ ತೊಡಗಿದಾಗ ರುದ್ರ ದೇವರು ಜಂಗಮನ ರೂಪದಲ್ಲಿ
ಬಂದು ಕೂಡುತ್ತಿದ್ದರಂತೆ. ಇದಕ್ಕೆ ಶಿಷ್ಯರ ಆಕ್ಷೇಪ ಬಂದಿತಂತೆ .ಅದಕ್ಕೆ
ಶ್ರೀಗಳು "ಸಮಯ ಬಂದಾಗ ಉತ್ತರಿಸುತ್ತೇವೆ ಈಗ ಆತ ಬರಲಿ" ಎಂದರಂತೆ .ಒಮ್ಮೆ ಕೃಷ್ಣೆಗೆ
ಪ್ರವಾಹ ಬಂದಾಗ ಜಂಗಮ ತಡವಾಗಿ ಬಂದರೂ ಆತ ಬಂದ ರೀತಿ ವಿಚಿತ್ರವಾಗಿತ್ತು . ಆತ ಒಂದು
ವಸ್ತ್ರವನ್ನು ಹಾಸಿ ಅದರ ಮೇಲೆ ತೇಲುತ್ತ ಶ್ರೀಗಳ ಸನ್ನಿಧಾನಕ್ಕೆ ಬಂದಿದ್ದ !! .
ಶ್ರೀ ಗಳವರು ಸನ್ಯಾಸಾಶ್ರಮ ಸ್ವೀಕರಿಸಿದ್ದೆ ವಿಚಿತ್ರ . ಅನಂತಪ್ಪ ವಿಬುಧೆಂದ್ರರ ಶಿಷ್ಯನಾಗಿದ್ದು ದೈವಬಲದಿಂದಲೇ ಸರಿ . ವಿಬುಧೆಂದ್ರ ತೀರ್ಥರು ಈತನಿಗೆ ನರಸಿಂಹ ಸಾಲಿಗ್ರಾಮದಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ನರಸಿಂಹ ಸಾಲಿಗ್ರಾಮದ ಅಗಲವಾದ ಬಾಯಿಯಲ್ಲಿ ಅನ್ನವನ್ನು ತುರುಕಿ ದೇವರು ನನ್ನ ನೆವಿದ್ಯವನ್ನು ಸ್ವೀಕರಿಸಲಿಲ್ಲ ಎಂದು ಬಹಳವಾಗಿ ಅನಂತಪ್ಪ ಕೊರಗಿದನಂತೆ . ಆಮೇಲೆ " ನೀನು ಇದನ್ನು ಸ್ವೀಕರಿಸದಿದ್ದರೆ ನಾನು ನನ್ನ ತಲೆಯನ್ನು ಗುಂಡುಕಲ್ಲಿಗೆ ಚಚ್ಚಿಕೊಳ್ಳುತ್ತೇನೆ ಎಂದು ಹೇಳಿದನಂತೆ . ಆಗ ಅಲ್ಲಿದ್ದ ಅನ್ನವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತಂತೆ .!! . ನಂತರ ಮಧ್ವರ ಶಾಸ್ತ್ರಗಳನ್ನು ಶ್ರೀ ವಿಬುಧೆಂದ್ರ ತೀರ್ಥರಲ್ಲಿ ಅಧ್ಯಯನ ಮಾಡಿ ಸನ್ಯಾಸ ಸ್ವೀಕರಿಸಿ ಶ್ರೀ ಜಿತಾಮಿತ್ರ ತೀರ್ಥರು ಎಂದು ಪ್ರಸಿದ್ಧರಾದರು .
ಶ್ರೀ ಗಳು ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಧ್ಯಾನಾಸಕ್ತರಾಗಿದ್ದರಿಂದ ಹೊರಬರದೇ ಅಲ್ಲಿಯೇ ಏಳು ದಿನಗಳ ಕಾಲ ಇದ್ದರು . ಮುಂದೆ ಶಿಷ್ಯರೆಲ್ಲರೂ ದು:ಖ ತಪ್ತರಾಗಿ ಮರಳಿದಾಗ ಶ್ರೀಗಳು ಇನ್ನು ಧ್ಯಾನಾವಸ್ಥೆಯಲ್ಲಿಯೇ ಇದ್ದದ್ದನ್ನು ನೋಡಿ ಶ್ರೀಗಳ ತಪ ಶಕ್ತಿ ಎಂತಹುದು ಎಂಬುದನ್ನು ಮನಕಂಡರಂತೆ. ಮುಂದೆ ಮತ್ತೊಮ್ಮೆ ಪ್ರವಾಹ ಬಂದಾಗ ಶ್ರೀಗಳು ಅದೃಶ್ಯರಾಗಿ " ನಾವು ಇಲ್ಲಿಯೇ ಚಿರಕಾಲ ನೆಲೆಸುತ್ತೇವೆ . ನಮ್ಮ ವೃಂದಾವನ ಕಟ್ಟುವ ಅವಶ್ಯಕತೆ ಇಲ್ಲ . ಇಲ್ಲಿಯೇ ನಾವು ಕುಳಿತುಕೊಳ್ಳುತ್ತಿದ್ದ ಗೋಂದಿನ ಮರದಲ್ಲಿಯೇ ನಿಮ್ಮ ಸನ್ನಿಧಾನ ಇರುತ್ತದೆ .ಇಲ್ಲಿಯೇ ನಮ್ಮ ಆರಾಧನಾದಿಗಳು ನೆರವೇರಲಿ ಎಂದು ಹೇಳಿದರಂತೆ . " . ಅಂದಿನಿಂದ ಇಂದಿನವರೆಗೂ ಆ ಮರಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಪೂಜೆ ನಡೆಯುತ್ತಿದೆ .
ಶ್ರೀಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ರಾಯರ ಮಠದ ಯತಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಶ್ರೀ ಜಿತಾಮಿತ್ರರ ಸನ್ನಿಧಿಗೆ ಆರಾಧಾನೆಗಾಗಿ ಹೋದಾಗ ಅಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ಭೈರಾಗಿಯ ರೂಪದಲ್ಲಿ ಜಿತಾಮಿತ್ರರ ದರ್ಶನ ವಾಯಿತೆಂದು ಅವರೇ ಮುಂದೆ ಗರ್ಭಗುಡಿಗೆ ಹೋಗಿ ಅದೃಶ್ಯರಾದರೆಂದು , ಇದನ್ನು ಶ್ರೀಗಳು ಕಂಡರೆಂದು ಹೇಳುತ್ತಾರೆ . ಇವರ ಅಸ್ತಿತ್ವದ ಮನವರಿಕೆ ಅನೇಕ ರಾಯರ ಮಠದ ಪೀಠಾಧಿಪತಿಗಳಿಗೆ ಆಗಿದೆ .
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಈ ಹಿಂದಿನ ಪೀಠಾಧಿಪತಿಗಳು , ಮಹಾ ವಿರಕ್ತರು , ತಪಸ್ವಿಗಳು , ನಡೆದಾಡುವ ರಾಯರು ಎಂದೇ ಪ್ರಸಿದ್ಧ ರಾಗಿದ್ದ ಪರಮ ಪೂಜ್ಯ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರಿಗೆ " ಅಭಿನವ ಜಿತಾಮಿತ್ರ " ತೀರ್ಥರು ಎಂಬ ಬಿರುದಿದೆ . ಒಂದು ಬಾರಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಿಗೆ ಆರಾಧನಾ ಉತ್ಸವಕ್ಕೆ ಹೋಗಿದ್ದರು. ಅಲ್ಲಿ ಶ್ರೀಗಳು ಶ್ರೀಮನ್ ಮೂಲ ರಾಮದೇವರಿಗೆ ಸಕಲವಿಧವಾದ ಪೂಜೆ ನಡೆಸಿ ಗುರುಗಳಿಗೆ ಹಸ್ತೋದಕ ನೀಡುತ್ತಿದ್ದ ಸಂದರ್ಭದಲ್ಲಿ ಅಲಂಕಾರ ಸಮೇತ ಇದ್ದ ಜಿತಾಮಿತ್ರರ ಸನ್ನಿಧಾನ ಉಳ್ಳ ಗೋಂದಿನ ಮರದಿಂದ ಒಂದು ಹೂವು ಶ್ರೀಗಳವರ ಕೊರಳಿಗೆ ತನ್ನಿಂದ ತಾನೇ ಬಿದ್ದಿತು . ಶ್ರೀಗಳವರು ಆನಂದ ಭಾಷ್ಪ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ . ಈ ಘಟನೆ ನಡೆದದ್ದು ತೀರ ಇತ್ತೀಚಿಗೆ ಅಂದರೆ 1945 ನೆಯ ಇಸವಿಯಲ್ಲಿ ..!