।। ಶ್ರೀಮನ್ಮೂಲರಾಮೋ ವಿಜಯತೆ ।। ।। ಶ್ರೀ ಗುರುರಾಜೋ ವಿಜಯತೆ ।।
ಶ್ರೀ ಸುಜ್ಞಾನೇಂದ್ರ ತೀರ್ಥಗುರುಭ್ಯೋ ನಮಃ
ಸುಧಾಸಾರಾರ್ಥ ತತ್ವಜ್ಞಮ್ ಸುರದ್ರುಮಸಮಂ ಸತಾಂ ।
ಸುರಾಧಿಪ ಗುರುಪ್ರಖ್ಯಂ ಸುಜ್ಞಾನೇಂದ್ರಗುರುಂ ಭಜೆ ।।
ಶ್ರೀ ಹಂಸನಮಕ ಪರಮಾತ್ಮನಿಂದ 44 ನೇಯ ಯತಿಗಳು ,
ಜಗದ್ಗುರು ಶ್ರೀಮಧ್ವಾಚಾರ್ಯರಿಂದ 28 ನೇಯ ಯತಿಗಳು ,
ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಂದ 12 ನೇಯ ಯತಿಗಳು ,
ಮಹಾತಪಸ್ವಿಗಳು ,
ಅನೇಕ ಬರಿ ಸುಧಾಮಂಗಳವನ್ನು ಮಾಡಿ ಶ್ರೀಮಠದ ಇತಿಹಾಸದಲ್ಲಿ ಮಹತ್ತರ ಘಟ್ಟಕ್ಕೆ ಶ್ರೀಮಠವನ್ನು ಕೊಂಡೊಯ್ದವರು , ಬ್ರಿಟೀಷರ ಉಪಟಳ ಹೆಚ್ಚಗುತ್ತಿದ್ದಂತೆಯೇ ತಮ್ಮ ಪ್ರಬಲ ತಪಶ್ಶಕ್ತಿಯನ್ನು ತೋರಿಸಿ ಪ್ರಾಚೀನ ಸಂಪ್ರದಾಯವಾದಿಗಳೆನಿಸಿದವರು ,
ಮಂತ್ರಾಲಯ ನಿವಾಸಿ ಶ್ರೀ ಸುಧರ್ಮೆಂದ್ರ ತೀರ್ಥರ ಗುರುಗಳು ,
ನಂಜನಗೂಡಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಬಂದು ನೆಲೆಸುವಂತೆ ಮಾಡಿದವರು ,
'ಸ್ಥಾನ' ಕೇಳಿದ್ದಕ್ಕೆ ರಾಯರು ತಮ್ಮ 'ದಿನ'ವನ್ನೇ ಇವರಿಗೆ ಕೊಟ್ಟು ಕರುಣಿಸಿದರು ,
ಆಂಗ್ಲ ಅಧಿಕಾರಿಯೊಡನೆ ತಮ್ಮ ದರ್ಶನವಾಗದ ಹಾಗೆಯೇ ವ್ಯವಹರಿಸಿದ ಮಹಾ ತಪಸ್ವಿಗಳು ,
ಅದ್ವೈತಿಗಳಿಂದ ಚಂದ್ರಿಕೆಯ ಬಗ್ಗೆ ಆಕ್ಷೇಪ ಬಂದಾಗ "ಚಂದ್ರಿಕಾಮಂಡನ" ಎಂಬ ಗ್ರಂಥರತ್ನವನ್ನು ರಚಿಸಿ ದುರ್ವಾದಿಗಳನ್ನು ಖಂಡಿಸಿದ ಪಂಡಿತ ಚಕ್ರವರ್ತಿ.
ಮಂತ್ರಾಲಯದಲ್ಲಿ ನೆಲೆಸಲು ಇಚ್ಚಿಸಿದ ಶ್ರೀಗಳಿಗೆ ರಾಯರು ಸ್ವಪ್ನದ್ವಾರಾ ಸೂಚಿಸಿ "ನೀನಿದ್ದಲ್ಲಿಗೆ ನಾನು ಬರುವೆ " ಎಂದು ನುಡಿದು ನಂಜನಗೂಡಿಗೆ ಬಂದು ನೆಲೆಸಿದರು. ಅಂತಹ ಮಹಾತಪಸ್ವಿ , ತೇಜೋಮೂರ್ತಿ , ವಿರಕ್ತರು, ಶ್ರೀ ಸುಜ್ಞಾನೇಂದ್ರ ತೀರ್ಥರ ( ನಂಜನಗೂಡು) ಆರಾಧನಾ ಮಹೋತ್ಸವದಂದು ಅವರನ್ನು ನೆನೆದು ಕೃತಾರ್ಥರಾಗೋಣ.
No comments:
Post a Comment