Thursday, 14 August 2014

64 ವಿದ್ಯೆಗಳಲ್ಲಿ ಪ್ರಾವೀಣ್ಯ ಘಳಿಸಿದ , 104 ಸ್ವತಂತ್ರ ಗ್ರಂಥಗಳನ್ನು ರಚಿಸಿ ಮಾಧ್ವ ವಾಂಗ್ಮಯದಲ್ಲೇ ಸುವರ್ಣ ಇತಿಹಾಸ ಬರೆದ ಶ್ರೀ ವಿಜಯೀಂದ್ರ ತೀರ್ಥರೊಡನೆ , ವಿನಾಯಕ.ರಾಮಚಂದ್ರ.ಜೋಷಿ ಎಂಬುವ ಅಭರಣ ತಯಾರಕ  "ಪದಕ ನಿರ್ಮಾಣ" ಮಾಡುವದರಲ್ಲಿ ಸ್ಪರ್ಧೆಗಿಳಿದನು. ಆಗ ಇಬ್ಬರು ಪದಕ ಮಾಡಲು ಪ್ರಾರಂಭಸಿದರು. ಶ್ರೀಗಳ ಪದಕತಯಾರಿಕಾ ಕೌಶಲ್ಯ ಕಂಡು ಶ್ರೀಗಳನ್ನು ಸೋಲಿಸಲೇ ಬೇಕು ಎಂದುಕೊಂಡು  ಬಂದವನು  ಮೊದಲನೇ ದಿನವೇ ಬೆಚ್ಚಿಬಿದ್ದ. ಅತ್ಯಂತ ಚಾಣಾಕ್ಷರಾದ ಶ್ರೀಗಳವರು ಕೇವಲ 12 ದಿನಗಳಲ್ಲಿ ಪದಕಪೂರ್ಣಗೊಳಿಸಿ ತುಂಬಿದ ಸಭೆಯಲ್ಲಿ ನಿರ್ಣಾಯಕರ ಮುಂದೆ ಇಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ 64 ವಿದ್ಯೆಗಳಲ್ಲಿಯೂ ಶ್ರೀಗಳವರನ್ನು ಮೀರಿಸುವವರು ಭಾರತ ಖಂಡದಲ್ಲೇ ಬೇರೆಯವರು ಇಲ್ಲ , ಶ್ರೀಗಳವರು ವಿಜಯಿಗಳು ಎಂದು ನಿರ್ಣಾಯಕರು ಉದ್ಘಾರ ತೆಗೆದರು.  ಸಭೆಯಲ್ಲಿ ಜನ ಶ್ರೀ ಸುರೇಂದ್ರ ತೀರ್ಥರು ಇತ್ತ " ವಿಜಯೀಂದ್ರ " ರೆಂಬ  ಅಭಿದಾನ ನಿಜವಾಗಿಯೂ ಸತ್ಯ ಎಂದು ಭಾವುಕರಾದರು. ನಂತರದಲ್ಲಿ ಆ ಕುಶಲಕರ್ಮಿಯು ತನ್ನ ಪದಕವನ್ನು ಗುರುಗಳ ಮುಂದೆ ಇತ್ತು "ಸ್ವಾಮಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ , ನಾನು ಮಡಿದ ದುಸ್ಸಾಹಾಸಕ್ಕೆ ಕ್ಷಮೆ ಇರಲಿ , ನನ್ನ ಪದಕವನ್ನು ಶ್ರೀಮೂಲರಾಮನಿಗಾಗಿ ತಾವು ಸ್ವೀಕರಿಸಬೇಕು " ಎಂದನು. ಗುರುಗಳು ಅದನ್ನು ಸ್ವೀಕರಿಸಿ , ಅವನನ್ನು ಅನುಗ್ರಹಿಸಿದರು. ಆ ಕುಶಲಕರ್ಮಿಯು ಕೊಟ್ಟ ಆ ಪದಕ ಹಾಗು ತಾವೇ ಸ್ವತಃ ನಿರ್ಮಾಣಮಾಡಿದ ಪದಕ ಎರೆಡನ್ನೂ ತಮ್ಮಉಪಾಸ್ಯಮೂರ್ತಿ ಶ್ರೀಮೂಲರಾಮದೇವರಿಗೆ ಹಾಕಿ ಆನಂದದಿಂದ ಅರ್ಚಿಸಿದರು. ಆ ಶ್ರೀ ವಿಜಯೀಂದ್ರ ಗುರುಸಾರ್ವಭೌಮರು ಮಾಡಿ ಮೂಲರಾಮನಿಗೆ ಸಮರ್ಪಸಿದ ಪದಕವನ್ನು ಶ್ರೀಮನ್ಮೂಲರಾಮದೇವರು ಅಧುನಾ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಹಾಕಿಸಿಕೊಂಡು ಆ ಶ್ರೀ  ವಿಜಯೀಂದ್ರ ಗುರುಸಾರ್ವಭೌಮರ ಪರಮಶಿಷ್ಯ ಶ್ರೀ ರಾಘವೇಂದ್ರ ತೀರ್ಥರ ಆರಾಧನಾ ದಿನದಂದು ಮೆರೆದ ಅದ್ಭುತ ಕ್ಷಣಗಳು.. ನಿಜವಾಗಿಯೂ ಇದನ್ನು ಪ್ರತ್ಯಕ್ಷ ಕಂಡ ಜನರು ಪುಣ್ಯವಂತರು. __/\__  

1 comment:

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...