Friday, 12 October 2012

ವಿಶ್ವೇಶತೀರ್ಥರು ನಿಜ ಧರ್ಮ ರಕ್ಷಕರು  
ಮುನ್ನುಡಿ -
ಉಡುಪಿ  ಪೇಜಾವರ ಮಠ  ಶ್ರೀ ವಿಶ್ವೇಶ ತೀರ್ಥರು ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವದು ಹಿಂದೂ ಸಮಾಜೋದ್ಧಾರ. ಶ್ರೀಗಳು ಹಿಂದೂ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ , ನೀಡುತ್ತಲಿದ್ದಾರೆ . ಕೇವಲ 8ನೆಯ ವಯಸ್ಸಿಗೆ ಯತ್ಯಾಶ್ರಮ ಸ್ವೀಕರಿಸಿ ತಮ್ಮ ಜೀವನವನ್ನೇ ಕೇವಲ ಅಧ್ಯಯನ , ಧರ್ಮ ರಕ್ಷಣಾ , ಸಾಮಾಜಿಕ ಜಾಗ್ರತೆ , ದಲಿತರ ಉದ್ಧಾರ ಮುಂತಾದ ಸತ್ಕಾರ್ಯಗಳಿಗೊಸ್ಕರವೇ ಮುಡಿಪಾಗಿ ಇಟ್ಟಿದ್ದಾರೆ. ಪರಪೂಜ್ಯರ ಹೆಸರು ಎಲ್ಲ ಸಜ್ಜನರಿಗೂ ಚಿರ ಪರಿಚಿತ.ಇಂದಿನ ಎಡರು ತೊಡರು  ಸಮಾಜಕ್ಕೆ, ಬ್ರಷ್ಠ ರಾಜಕೀಯ ಸುಧಾರಣೆಗೆ  ಶ್ರೀಗಳ ಸಂದೇಶಗಳು ಅನಂತ. ತರುಣ ವಯಸ್ಸಿನಿಂದಲೂ  ರಾಜಕೀಯ-ಸಾಮಾಜಿಕ ಎಡರು ತೊಡರುಗಳಾದರೆ  ಅದನ್ನು ಸಹಿಸುವ ಪ್ರವೃತ್ತಿ ಶ್ರೀಗಳದ್ದಲ್ಲ.ತಾವೇ ಮುಂದೆ ನಿಂದು ಹಂಗು ತೊರೆದು ಸಮಾಜಕ್ಕೆ ತೊಂದರೆ ಯಾಗ ಬಾರದೆಂದು ಕಳಕಳಿಯಿಂದ ಸಮಸ್ಯೆ.ಪರಿಹರಿಸುವ ಸಮಾಜ ಸುಧಾರಕ ಮಹಾಸ್ವಾಮಿಗಳು.ದೀನ-ದಲಿತರ ಬಗ್ಗೆ ಶ್ರೀಗಲಿಗಿರುವ ಕರುಣೆ ಅಪಾರ.
ಜಾತ್ಯತೀತ ಸಂಘಟಿತ ಭಾರತ ಶ್ರೀಗಳ ಕನಸು.ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಪ್ರಚಾರದಲ್ಲಿಯು ಶ್ರೀಗಳುಲೋಪವೆಸಗಿಲ್ಲ. ಸದಾ ಜಿಜ್ಞಾಸೆಯಲ್ಲಿ ತೊಡಗುವ ಶ್ರೀಗಳು ಮಧ್ವರ ಸಿದ್ಧಾಂತದ ಸುವಾಸನೆಯನ್ನು ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೂ 
ಸೂಸಿದ್ದಾರೆ  .ಜಗದ್ಗುರು ಆಚಾರ್ಯ ಪ್ರತಿಷ್ಠಿತ ಶ್ರೀ ಕೃಷ್ಣ ಆರಾಧಕ ಶ್ರೀಗಳ ಚರಣಾರವಿಂದಗಳಲ್ಲಿ  ಗಳಲ್ಲಿ ಈ ಚಿಕ್ಕ ಕಾಣಿಕೆ ಸಮರ್ಪಿಸುತ್ತಿದ್ದೇನೆ.
                                                                                                                            
         
                                                 ||  ಶ್ರೀ ಗುರುಭ್ಯೋ ನಮಃ ||
ವಿಶ್ವೇಶ ತೀರ್ಥರ ಪೂರ್ವಾಶ್ರಮ - 
                                ಉಡುಪಿಯ ಸಮೀಪದಲ್ಲಿರುವ ರಾಮಕುಂಜದ ಶ್ರೀ ನಾರಾಯಣಾಚಾರ್ಯ  ಮತ್ತು ಕಮಲಮ್ಮ  ದಂಪತಿಗಳಿಗೆ ದೊರೆತ ಪುತ್ರ ರತ್ನಕ್ಕೆ ವೆಂಕಟರಮಣ ಎಂದು ಹೆಸರಿಟ್ಟರು. ವೆಂಕಟರಮಣ ಬಾಲ್ಯದಲ್ಲಿ ಅಸಾಮಾನ್ಯ ಗುಣಗಳನ್ನು ಹೊಂದಿದ ಬಾಲಕ . ಬಾಲಕ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಾತ್ವಿಕ ಗುಣಗಳನ್ನು ಹೊಂದಿದ್ದ.
ಇದು ಎಲ್ಲರನ್ನು ಅಚ್ಚರಿಗೋಳಿಸಿತ್ತು.ಈತನ ಈ ಅಸಾಮಾನ್ಯ ವ್ಯಕ್ತಿತ್ವವನ್ನು ಗುರುತಿಸಿದ ಅಂದಿನ ಶ್ರೀ ಪೇಜಾವರ ಮಠಾಧೀಶಶ್ರೀ 1008ವಿಶ್ವಮಾನ್ಯ ತೀರ್ಥರು ಗುರುತಿಸಿದರು.ರಾಮಕುಂಜ ವೆಂಕಟರಮಣನ ಜೀವನದ ಅತ್ಯಂತ ಶುಭ ಸಂದರ್ಭ ಸಮೀಪಿಸಿತು.
ವೆಂಕಟರಮಣನ 8ನೆ ವಯಸ್ಸಿನಲ್ಲಿ ಡಿಸೆಂಬರ್ 3 1938ರಲ್ಲಿ ಶ್ರೀ ವಿಶ್ವಮಾನ್ಯ ತೀರ್ಥರು ಆತನ ಅಸಾಧಾರಣ ಪಾಂಡಿತ್ಯ,ವ್ಯಕ್ತಿತ್ವವನ್ನು ಹೊರಹಾಕಲು ಅನುವು ಮಾಡಿಕೊಟ್ಟು ಚಕ್ರತೀರ್ಥದಲ್ಲಿ  ಆತನನ್ನು ಸಾಂಸಾರಿಕ ಜಂಜಾಟದಿಂದ  ಮೊದಲೇ ದೂರ ಮಾಡಿಬಿಟ್ಟರು. ರಾಮಕುಂಜ ವೆಂಕಟರಮಣ ಶ್ರೀ ವಿಶ್ವೇಶ ತೀರ್ಥರಾದ ಸುದಿನ ಅದು. ಇಂತಹ ಯತಿ ವರ್ಯರನ್ನು ಸಮಾಜಕ್ಕೆ ಕೊಟ್ಟ ಶ್ರೀ ವಿಶ್ವಮಾನ್ಯ ತೀರ್ಥರು ನಿಜಕ್ಕೂ ವಿಶ್ವ ಮಾನ್ಯರು. 
                   

ಶ್ರೀಗಳವರ  ಅಧ್ಯಯನ - 
ಶ್ರೀಗಳವರ ಅಧ್ಯನ ಮೊದಲು ಅವರ ಕಾರ್ಯ ಕ್ಷೇತ್ರ ಉಡುಪಿಯಲ್ಲೇ ಆಯಿತು. ಆಗಿನ ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರು , ನೂತನ ಬಾಲ ಯತಿ ಶ್ರೀ ವಿಶ್ವೇಶ ತೀರ್ಥರಿಗೆ  ಶಾಸ್ತ್ರ-ಯತಿ ಧರ್ಮ ಇತ್ಯಾದಿಗಳನ್ನು 8 ವರ್ಷಗಳ ಕಾಲ ಭೋಧಿಸಿದರು. ಶ್ರೀ ವಿಶ್ವೇಶ ತೀರ್ಥರನ್ನು ಶ್ರೀ ವಿದ್ಯಾ ಮಾನ್ಯರಿಂದ ಅನೇಕ 'ವಿದ್ಯೆ'ಗಳನ್ನು ಕಲಿತು ಅತೀ ಚಿಕ್ಕ ವಯಸ್ಸಿನಲ್ಲೇ ನ್ಯಾಯ-ವೇದಾಂತ-ತರ್ಕ -ಮೀಮಾಂಸಾದಿ ಶಾಸ್ತ್ರಗಳಲ್ಲಿ ಪಾರಂಗತರಾಗಿ ಎಲ್ಲರಿಂದಲೂ' ಮಾನ್ಯ'ರಾದರು. 

                                          Sanyasa from Sri Vidyamanya Swamiji

                      ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಅನುಗ್ರಹ ಪಡೆಯುತ್ತಿರುವ  ಬಾಲಕ ರಾಮಕುಂಜ ವೆಂಕಟರಮಣ \ 
    
         ಇಂದಿನ ಕಾಲದಲ್ಲಿ ಬ್ರಾಹ್ಮಣರು ಸ್ವಲ್ಪ ಎಡವಿದರು ಅವಮಾನ - ಅಪಮಾನಕ್ಕೆ ತುತ್ತಾಗುತ್ತಾರೆ . ಇಂತಹ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀಗಳವರು ಬ್ರಾಹ್ಮಣರ ಅದರಲ್ಲೂ ವಿಶೇಷವಾಗಿ ಮಾಧ್ವರ ಬಗ್ಗೆ ಜನ ಮಾನಸದಲ್ಲಿ ವಿಶಿಷ್ಟ ಸ್ಥಾನ ಮೂಡುವಂತೆ ಮಾಡಿದ್ದಾರೆ.  ಇಂದು ಬ್ರಾಹ್ಮಣರಲ್ಲಿಯ ಯತಿಗಳು ಎಂದರೆ ಜಗದಲ್ಲಿನ ಜನರು ಶ್ರೀ ವಿಶ್ವೇಶ ತೀರ್ಥರ ಎದೆಗೆ ಬೊಟ್ಟು ಮಾಡಿಸುವಂತಾಗಿದೆ . ಶ್ರೀ ಗಳು ತಮ್ಮ ತಾರುಣ್ಯದ ಕಾಲದಿಂದಲೇ  ನ್ಯಾಯಕ್ಕಾಗಿ ಹೋರಾಟ , ಸಮಾಜದ ಅಸಮಾನತೆಯ ವಿರುದ್ಧ ಹೋರಾಟ , ಮಾಧ್ವರ ಕಲ್ಯಾಣ , ಸಮಸ್ತ ಬ್ರಾಹ್ಮಣರ ಹಿತಾಸಕ್ತಿ , ದಲಿತರ ಉದ್ಧಾರ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಮಸ್ತವಾಗಿ ತೊಡಗಿಸಿಕೊಂಡಿದ್ದರೂ ಜಗದ್ಗುರು ಆಚಾರ್ಯ ಮಧ್ವರ ಶಾಸ್ತ್ರ ಅಧ್ಯಯನ ಹಾಗು ಸಂಶೋಧನೆ , ಪಂಡಿತರುಗಳ  ನಿರ್ಮಾಣ ಮುಂತಾದ ಕಾರ್ಯಗಳಲ್ಲಿ ಯಾವುದೇ ಲೋಪವೆಸಗಿಲ್ಲ . ಶ್ರೀಗಳ ವ್ಯಕ್ತಿತ್ವ ಅತ್ಯಂತ ಉದಾರ . ಮಗುವಿನಂತೆ ಶುದ್ಧ ಮನಸ್ಸು . ಶ್ರೀ ಗಳನ್ನೂ ಎಷ್ಟು ಕೊಂಡಾಡಿದರು ಸಾಲದು . ಶ್ರೀಗಳಿಗೆ  ಮಾಧ್ವರು ಮಾತ್ರ ಕೃತಜ್ಞರಾಗಬೇಕಿಲ್ಲ ಸಮಸ್ತ ಜನರು ಇವರ ಸೇವೆಗೆ ಅರ್ಹರು . ಶ್ರೀಗಳು 20 ನೆ ಶತಮಾನದ ಶಕಪುರುಷ .
             ಆದರು ಇತ್ತೀಚಿಗೆ ಶ್ರೀಗಳ ವಿರುದ್ಧ ಕೆಲವು ಅವಿವೇಕಿ-ಮೂಢ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವದು ಬಹಳ ಖೇದಕರ ಸಂಗತಿ . ಇದರಲ್ಲಿ ಪ್ರಮುಖ " ಪ್ರತಾಪ ಸಿಂಹ ಅವರ ಲೇಖನ " ಈ ಬಗ್ಗೆ ಕನ್ನಡ ಪ್ರಭಾ ದಲ್ಲಿ ನಮ್ಮ ಪ್ರತ್ಯುತ್ತರ ನೀಡಿದ ಲೇಖನ ನೀಡಿದ್ದಾರೂ ಕಪಟಿ ಪ್ರತ್ರಿಕೆಯ ಸಿಬ್ಬಂದಿ ಅದನ್ನು ಮುದ್ರಿಸಲಿಲ್ಲ . ಅದು ಹಾಗೆ ಇರಲಿ . ಶ್ರೀಗಳು ದಲಿತರ ಬಗೆ ಅದೆಷ್ಟೋ ಹೋರಾಟ ಮಾಡಿದ್ದಾರೆ . ಆದರೆ ಅದೆಷ್ಟೋ ದಲಿತರು ಶ್ರೀಗಳ ವಿರುದ್ಧವೇ " ಸಂವಿಧಾನ ವಿರೋಧಿ ಪೇಜಾವರ ಶ್ರೀ " ಎಂದು ಹೆಳಿಕೆಗಳನ್ನಿತ್ತು ತಮ್ಮ ಉದ್ಧಾರಕ್ಕಾಗಿ ಬಂದ ಮಹಾನುಭಾವರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ . ಎಲ್ಲ ದಲಿತರಿಗೂ ಹೇಳುವದು ಏನೆಂದರೆ " ಪೇಜಾವರ ಸ್ವಾಮಿಗಳಿಗೆ ಯಾರಿಂದಲೂ ಶಭಾಶ್ ಎನಿಸಿಕೊಳ್ಳಬೇಕಿಲ್ಲ . ಯಾರಿಂದಲೂ ಪ್ರಶಂಸೆ ಅಗತ್ಯವಿಲ್ಲ . ಅವರು ಕೇವಲ ಒಬ್ಬ ಹರಕು ಶಾತಿಯ ಸನ್ಯಾಸಿ . ಮಧ್ವರ ಅನುಯಾಯಿ . ಅವರ ಮನಸ್ಸು ಶುದ್ಧ . ಅವರು ನಿಮ್ಮ ರಕ್ಷಣೆಗಾಗಿ ಬಂದದ್ದು ವಾಜಪೇಯಿ-ಅದ್ವಾನಿ-ಇಂದಿರಾ-ಸೋನಿಯಾ ಇಂತವರ ಮನ ವೋಲೈಸಲು ಅಲ್ಲ . ಹಣಕ್ಕೆ ಆಸೆ ಪಡುವ ಅಗತ್ಯವಿಲ್ಲ . ಮಾಧ್ವ ಶಿಷ್ಯರ ಪ್ರೀತಿಯ ಆರೈಕೆಯೇ ಶ್ರೀಗಳಿಗೆ ಕಟಾಕ್ಷ . ನಮಗೆ ಅವರ ಅನುಗ್ರಹವೇ ಕಟಾಕ್ಷ . ಶ್ರೀಗಳು ನಿಮ್ಮ ಪರವಾಗಿ ಇದ್ದಾರೆ ಎಂದರೆ ಅವರ ಬೆಂಬಲ ಪಡೆದು ಒಳ್ಳೆಯ ಕಾರ್ಯಗಳ ಸಫಲತೆ ಪಡೆಯಬೇಕು ಎಂಬುದೇ ನಮ್ಮೆಲ್ಲರ ಆಶಯ . ಮತ್ತು ಶ್ರೀಗಳ ವಿರುದ್ಧ ಅನವಶ್ಯಕವಾಗಿ ಮಾತನಾಡುವವರ ಸಾಲಿನಲ್ಲಿ ಅನೇಕ ಬ್ರಾಹ್ಮಣರು ಇರುವುದು ಅತ್ಯಂತ ಖೇದ ಸಂಗತಿ . ನಮ್ಮವರನ್ನು ನಮ್ಮವರೇ ಎಳೆದರೆ ಹೇಗೆ ? " 
            ಇರಲಿ ಇಷ್ಟೆಲ್ಲಾ ಆದರು ಪೇಜಾವರ ಶ್ರೀಗಳಿಗೆ ಕಳಂಕ ತರುವವರ ಪ್ರಯತ್ನ ವಿಫಲ ಪ್ರಯತ್ನ . ಪೇಜಾವರ ಶ್ರೀಗಳಂತಹ ಧೀಮಂತ ಯತಿ ಸಾರ್ವಭೌಮ ಮಾಧ್ವ ಸಮಾಜಕ್ಕೆ ದೊರೆತದ್ದು ನಮ್ಮೆಲ್ಲರ ಮಹೋನ್ನತ ಸೌಭಾಗ್ಯ .

   

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...