Saturday 13 October 2012

               ಗುರುಗಳ  ಮಂತ್ರಾಕ್ಷತೆ ಮಹಿಮೆ .- ವಿದ್ವಾನ್  ರಾಜ ಎಸ್ ಪವಮಾನಾಚಾರ್ಯರು , (  ರಾಯರ ಮಠದ ಶ್ರೀ ಸುಜಯೀಂದ್ರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಪ್ರಪೌತ್ರರು) 

* "ಹರಿದ್ರಾಚೂರ್ಣಸಂಯುಕ್ತಂ ಅಕ್ಷತಂ" ಎಂಬುವಲ್ಲಿ . ಹರಿದ್ರಾ ಚ ಚೂರ್ಣo ಚ = ಹರಿದ್ರಾ ಚೂರ್ಣೆ , ಹರಿದ್ರಾ ಚೂರ್ಣಾಭ್ಯಾಂ ಸಂಯುಕ್ತಂ = ಹರಿದ್ರಾಚೂರ್ಣಸಂಯುಕ್ತಂ ಎಂಬ ವ್ಯುತ್ಪತ್ತಿಯನ್ನಾಶ್ರಯಿಸಿ , ಹರಿದ್ರಾ ಎಂದರೆ ಅರಿಶಿನ , ಚೂರ್ಣವೆಂದರೆ ಸುಣ್ಣ . ಇವುಗಳಿಂದ ಕೂಡಿರುವ ಅಂದರೆ ಅರಿಶಿನ ಮತ್ತು ಸುಣ್ಣ ಇವೆರಡನ್ನೂ ಬಳಸಿ ಕಳಿಸಿರುವ ಅಕ್ಷತೆಯೇ " ಮಂತ್ರಾಕ್ಷತೆ" . ಈ ತರಹದ ಮಂತ್ರಾಕ್ಷತೆಯನ್ನು ಶ್ರೀಮಾನ್ ಮಧ್ವಾಚಾರ್ಯ ಸಂಸ್ಥಾನ  ಶ್ರೀ ರಾಯರ ಮಠದಲ್ಲಿ , ಪೇಜಾವರ ಮಠದಲ್ಲಿ ಇನ್ನು ಕೆಲವು ಮಾಧ್ವ ಮಠಗಳಲ್ಲಿ ಬಳಸಲಾಗುತ್ತದೆ . 
* " ವೃಂದಾರಕಮಣಿಯೋಳೀಪ್ಸಿತವ ನೀವುದಿ | ನ್ನೆಂತು ಬಣ್ಣಿಸಲಿ ಮಂತ್ರಾಕ್ಷತೆಯ ಮಹಿಮೆಯ ನಾ ? " ಎಂಬ ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯು ನಾವು ಬಯಸಿದ ವಸ್ತುಗಳನ್ನು ಚಿಂತಮಣಿಯಂತೆ ಕೊಡುತ್ತದೆ ಎಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಂತ್ರಾಕ್ಷತೆಯನ್ನು ಮನೋಹರ ವಿಠಲದಾಸರು ಕೊಂಡಾಡಿದ್ದಾರೆ . 
* ಅಭಿನವ ಜನಾರ್ದನ ವಿಠಲರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮೇಲೆ ರಚಿಸಿರುವ "ನೋಡಿದೆನು ಗುರು ರಾಘವೇಂದ್ರರ " ಎಂಬ ಕೃತಿಯಲ್ಲಿ , ಸುಕ್ಷೇತ್ರ ಮಂತ್ರಾಲಯಕ್ಕೆ ಹೋಗಿದ್ದ ಸುಸಂದರ್ಭದಲ್ಲಿ ಭಕ್ತಸಾಗರ ಶ್ರೀಶ್ರೀ ವಾದೀಂದ್ರತೀರ್ಥ ಗುರುಗಳಿಂದ  ಮಂತ್ರಾಕ್ಷತೆಯನ್ನು ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನು ಕಣ್ಣಾರೆ ಕಂಡು , ಅದನ್ನು " ಮಂತ್ರ ಅಕ್ಷತಿ ಕೊಳುತಲಿ | ಸಂತ ಗುರು ವಾದೀಂದ್ರ ರಾಯರ " ಎಂಬ ಮಾತಿನಿಂದ ಶ್ರೀ ಮದ್ವಾದೀಂದ್ರರ ಮಂತ್ರಾಕ್ಷತೆ ಮಹಿಮೆಯನ್ನು ವರ್ಣಿಸುತ್ತಾರೆ .ಇದು ಒಟ್ಟಾರೆ ಗುರುಗಳು ನೀಡಿದ ಮಂತ್ರಾಕ್ಷತೆಯ ಮಹಿಮೆಯೇ ಆಯಿತು . 
*ಶ್ರೀಪತಿ ವಿಠಲ ದಾಸರು , ತಮ್ಮ ' ವೃಂದಾವನದಿ ವಿರಾಜಿಪ ಯತಿವರ ನ್ಯಾರೆ | ಪೇಳಮ್ಮಯ್ಯ ' ಎಂಬ ಕೃತಿಯಲ್ಲಿ ' ತಾ ಸುಕರದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ " ಎಂಬ  ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯ ಮಹಿಮೆ ವರ್ಣಿಸಿದ್ದಾರೆ . ಇದು ಕೂಡ ಗುರುಗಳು ನೀಡುವ ಮಂತ್ರಾಕ್ಷತೆಯಾ ಮಹಿಮೆಯೇ ಸರೀ .
*ಭೀಮೇಶ ಕೃಷ್ಣರು ರಾಯರ ಮೇಲೆ ಬರೆದ ಕೃತಿಯಲ್ಲಿ " ಮಂತ್ರಾಕ್ಷತೆ ಫಲ ನೀಡಿ |ಸಂತಾನ ಸಂಪತ್ತು ಕೊಡುವರ " ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆಯಿಂದ ಏನೇನು ಲಭ್ಯ ಎಂಬುದನ್ನು ತಿಳಿಸಿದ್ದಾರೆ . 
*ಇಂದಿರೇಶರು ರಾಯರ ಬಗ್ಗೆ ರಚಿಸಿದ ' ಮಂಗಳಂ ಜಯ ಮಂಗಳಂ ' ಎಂಬ ಕ್ರುತಿಯಲ್ಲಿ ' ತಂದ ಮಂತ್ರಾಕ್ಷತೆ ಕೊಟ್ಟವಗೆ ' ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆ ಮಂಗಳಕರ ಎಂಬುದನ್ನು ಸಾರಿದ್ದಾರೆ .
*ಕನಕಾದ್ರಿ ವಿಠಲ ವಿರಚಿತ ರಾಯರ ಮೇಲಿನ ಗ್ರಂಥದಲ್ಲಿ " ಮಂತ್ರಾಕ್ಷತಿ ಫಲ ಕೈವಲ್ಯವು ಇವರ ಅಂತರ್ಯಾಮಿ ಶ್ರೀ ರಘುಪತಿಕನಕಾದ್ರಿವಿಠಲ ನಿರಂತರ ವಿವರಿಸಿ ಕೈಗೊಂಡು ಇವರಿಂದಲಿ ಕೊಡುವ" ಎಂಬ ಮಾತುಗಳಿಂದ ಗುರುಗಳ ಮಂತ್ರಾಕ್ಷತೆಯಿಂದ ಮೊಕ್ಷಾದಿ ಪುರುಷಾರ್ಥಗಳು ದೊರೆಯುವವು ಎಂದು ಹೇಳಿದ್ದಾರೆ .  

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...