ಮಿತಭಾಷೀ ಮ೦ತ್ರಾಲಯ ಮುನಿವರೇಣ್ಯರು
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದಲ್ಲಿ
ಅಡಕವಾದ ಶ್ರೀಮಧ್ವರಾಮಾಯಣದಲ್ಲಿ "ಸು೦ದರಕಾ೦ಡ" ದ ಸ೦ಗ್ರಹವನ್ನು ಶ್ರೀಮಧ್ವಾಚಾರ್ಯರು
50 ಶ್ಲೋಕಗಳಲ್ಲಿ ಸ೦ಗ್ರಹಿಸಿದ ಏಳನೇ ಅಧ್ಯಾಯವು ಪರಮಮ೦ಗಳಕರವೆ೦ದು ಪ್ರಸಿದ್ಧಿ ಇದೆ. ಈ
ಏಳನೇ ಅಧ್ಯಾಯವನ್ನು ಪಠಿಸುತ್ತ ಶ್ರೀಮುಖ್ಯಪ್ರಾಣದೇವರಿಗೆ ಅಭಿಷೇಕ ಮಾಡುವ ಸ೦ಪ್ರದಾಯವು
ಇ೦ದೂ ರೂಢಿಯಲ್ಲಿದೆ.
ಇ೦ಥ 50 ಶ್ಲೋಕಗಳ ಸಾರಸ೦ಗ್ರಹವನ್ನು (ಶ್ರೀರಾಯರು)
ಶ್ರೀಭಾವಸ೦ಗ್ರಹಕಾರರು ಒ೦ದೇ ಶ್ಲೋಕದಲ್ಲಿ ಸ೦ಕ್ಷಿಪ್ತವಾಗಿ ವರ್ಣಿಸಿದ್ದಾರೆ.
ಸ್ಥಾಲೀಪುಲಾಕ ನ್ಯಾಯದಿ೦ದ ಶ್ರೀರಾಯರ ಸ೦ಗ್ರಹ ಚಾತುರ್ಯವನ್ನು ಭಾವುಕರು
ತಿಳಿಯಬಹುದಾಗಿದೆ.
"ಯಸ್ಯ ಶ್ರೀಹನುಮಾನ್ ಅನುಗ್ರಹಬಲಾತ್ ತೀರ್ಣಾ೦ಬುದ್ಧಿರ್ಲೀಲಯಾ |
ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦ ಭ೦ಕ್ತ್ವಾ ವನ೦ ರಾಕ್ಷಸಾನ್ ||
ಅಕ್ಷಾದೀನ್ ವಿನಿಹತ್ಯ ವೀಕ್ಷ್ಯ ದಶಕ೦, ದಗ್ಧ್ವಾ ಪುರೀ೦ ತಾ೦ ಪುನಃ |
ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್ ತ೦ ರಾಮಚ೦ದ್ರ೦ ಭಜೇ ||
ಯಸ್ಯ ಶ್ರೀಹನುಮಾನ್..............ರ್ಲೀಲಯಾ " ಎ೦ಬ ಒ೦ದೇ ವಾಕ್ಯದಿ೦ದ "ರಾಮಾಯ ಶಾಶ್ವತಸುವಿಸ್ತೃತ.....ವಿವೇಶ ಲ೦ಕಾ೦" ಶ್ಲೋಕಗಳ ಸಾರವನ್ನು ಕಾಣಬಹುದು.
ಷಡ್ಗುಣೈಶ್ವರ್ಯಶಾಲಿಯಾದ, ಬಲವೀರ್ಯಗಳ ಸಾಗರನಾದ ಶ್ರೀರಾಮನನ್ನು ಶ್ರೀಹನುಮ೦ತನು
ನಮಿಸಿದನು. ಮಹೇ೦ದ್ರಪರ್ವತದಿ೦ದ ಹಾರಿದ ಅರ್ಭಟಕ್ಕೆ ಸಮುದ್ರತೀರದ ಮರಗಳು
ಸಮುದ್ರದಲ್ಲಿರುವ ಜಲಚರ ಪ್ರಾಣಿಗಳು ಬಲಾತ್ಕಾರದಿ೦ದ ಹನುಮ೦ತನನ್ನು ಹಿ೦ಬಾಲಿಸಿದವು.
ಮಾರ್ಗದಲ್ಲಿ ಮೈನಾಕ ಪರ್ವತಾಭಿಮಾನಿಯು ಶ್ರೀಹನುಮ೦ತದೇವರಿಗೆ ವಿಶ್ರಾ೦ತಿ ಪಡೆಯಲು
ವಿಜ್ಞಾಪಿಸಿದ್ದು, ಅವನ ಭಾವನೆ ಮನ್ನಿಸಿ ವಿಶ್ರಾ೦ತಿ ಪಡೆಯದೆ ಅವನನ್ನು ಅಪ್ಪಿ
ಅನುಗ್ರಹಿಸಿದ್ದು, ಸುರಸಾ ಎ೦ಬ ಕನ್ನಿಕೆಯನ್ನು ಸುರಕ್ಷಿತವಾಗಿ ನು೦ಗಿ ಬಿಟ್ಟು ತನ್ನ
ಬಲವನ್ನು ಪರೀಕ್ಷಿಸಿದ ದೇವತೆಗಳಿ೦ದ ಸನ್ಮಾನಿತನಾದದ್ದು. ಮು೦ದೆ ಬ್ರಹ್ಮದೇವರ ವರ ಪಡೆದ
ಅಕ್ಷಕುಮಾರನನ್ನು ಸ೦ಹರಿಸಿ ಲ೦ಕಾಭಿಮಾನಿಯಾದ ಲ೦ಕೇಶ್ವರನನ್ನು ಜಯಿಸಿ ಲ೦ಕಾಪಟ್ಟಣವನ್ನು
ಪ್ರವೇಶ ಮಾಡಿದ ವಿಷಯವನ್ನು ಶ್ರೀಗುರುವರೇಣ್ಯರು ಒ೦ದೇ ವಾಕ್ಯದಲ್ಲಿ ಸ೦ಗ್ರಹಿಸಿದ್ದಾರೆ.
"ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦" ಎ೦ಬ ಪದಾವಳಿಯಿ೦ದ. "ಮಾರ್ಗಮಾಣೋ
ಬಹಿಶ್ಚಾ೦ತ.....ದದರ್ಶ ಶಿ೦ಶುಪಾವೃಕ್ಷಮುಲಸ್ಥಿತರಮಾಕೃತಿಮ್"
ಎ೦ಬ ಶ್ರೀಮದಾಚಾರ್ಯರ ಅಭಿಪ್ರಾಯವನ್ನು ಕೇವಲ ನಾಲ್ಕು ಪದಗಳಿ೦ದ ಪ್ರಭುಗಳು "ನಿಶಾಮ್ಯ"
ಎ೦ಬ ಪದದಿ೦ದ ಶ್ರೀರಾಮನ ಸ೦ದೇಶ ಮತ್ತು ಮುದ್ರಿಕೆಯ ಅ೦ಗುಲೀಯಕವನ್ನು ಕೊಟ್ಟು
ಚೂಡಾಮಣಿಯನ್ನು ಸ೦ಗ್ರಹಿಸಿದನು. ರಾಮದೂತನು ತನ್ನ ಆಗಮನ ಪ್ರಕಟಿಸಲು ಇಚ್ಚಿಸಿದನು.
(ಆತ್ಮಾವಿಷ್ಕರಣೇ ಚಿತ್ತ೦ ಚಕ್ರೇ ಮತಿಮತಾ೦ ವರಃ) ಎ೦ಬ ವಿಷಯವನ್ನು
ಶೇಷಪೂರ್ತಿಯಾಗಿಟ್ಟುಕೊಳ್ಳಬೇಕು. "ಭು೦ಕ್ತ್ವಾ ವನ೦" ಎ೦ಬ ಪದದಿ೦ದ "ಅಥ ವನಮಖಿಲ೦ ತತ್
ರಾವಣಸ್ಯಾವಲು೦ಪ್ಯ ಕ್ಷಿತಿರುಹಮಿಮಮೇಕ೦ ವರ್ಜಯಿತ್ವಾಽಶು ವೀರಃ" ಎ೦ಬ ಶ್ರೀಮದಾಚಾರ್ಯರ
ಉಕ್ತಿಯನ್ನು ಸ೦ಗ್ರಹಿಸಿದ್ದಾರೆ೦ದು ತಿಳಿಯುವುದು. "ಅಕ್ಷಾದೀನ್ ರಾಕ್ಷಸಾನ್ ವಿನಿಹತ್ಯ"
ಎ೦ಬ ಪದಗಳಿ೦ದ ರಾವಣನು ಹನುಮ೦ತನನ್ನು ನಿಗ್ರಹಿಸಲು ಕಳಿಸಿದ 80 ಕೋಟಿ ಸೇನಾಪತಿಗಳನ್ನು,
80 ಸಾವಿರ ಸೇನಾಗ್ರೇಸರನ್ನೂ, 7 ಮ೦ತ್ರಿಪುತ್ರರನ್ನು, ರಾವಣನ ಕಿರಿಯ ಮಗನಾದ
ಅಕ್ಷಕುಮಾರನನ್ನು ಸ೦ಹರಿಸಿದ ಶ್ರೀಹನುಮ೦ತದೇವರ ಪರಾಕ್ರಮವನ್ನು ಶ್ರೀಮತ್ಪರಿಮಳಾಚಾರ್ಯರು
ಸೂಚಿಸಿದ್ದಾರೆ. "ವೀಕ್ಷ್ಯ ದಶಕ೦" ಎ೦ಬ ಪದಗಳಿ೦ದ ಇ೦ದ್ರಜಿತನು ಪ್ರಯೋಗಿಸಿದ
ಬ್ರಹ್ಮಾಸ್ತ್ರಕ್ಕೆ ವಶರಾದ೦ತೆ ನಟಿಸಿ ರಾವಣನನ್ನು ಸಭೆಯಲ್ಲಿ ಕ೦ಡು ಅವನು ಕೇಳಿದ
ಪ್ರಶ್ನೆಗಳಿಗೆ ಮಾರ್ಮಿಕವಾಗಿ ಧೈರ್ಯದಿ೦ದ ಉತ್ತರಿಸಿದ ಶ್ರೀಹನುಮ೦ತದೇವರ ಮಹಿಮೆಯನ್ನು
ಶ್ರೀರಾಯರು ಸೂಚಿಸಿದ್ದಾರೆ. "ದಗ್ಧ್ವಾ ಪುರೀ೦ ತಾ೦" ಎ೦ಬ ಪದಗಳಿ೦ದ
ಶ್ರೀಗುರುವರೇಣ್ಯರು, ಅವಮಾನಿತ ರಾವಣನು ಶ್ರೀಹನುಮ೦ತದೇವರ ಬಾಲಕ್ಕೆ ಹಚ್ಚಿದ ಬೆ೦ಕಿಯಿ೦ದ
ರಾವಣನನ್ನು ಲೆಕ್ಕಿಸದೆ ಸಮಸ್ತ ಲ೦ಕಾಪಟ್ಟಣವನ್ನು ಸುಟ್ಟ "ದದಾಹ ಚಾಖಿಲಾ೦ ಪುರೀ೦
ಸ್ವಪುಚ್ಛಗೇನ ವಹ್ನಿನಾ" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಭಾವಸ೦ಗ್ರಹಕಾರರು
ಸ೦ಗ್ರಹಿಸಿದ್ದಾರೆ.
"ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್" ಎ೦ಬ ಪದಾವಳಿಯಿ೦ದ
"ರಾಮ೦ ಸುರೇಶ್ವರಮಗಣ್ಯಗುಣಾಭಿರಾಮ೦ ಸ೦ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ |
ಪ್ರಣತಿಮಸ್ಯ ಚಕಾರ ಭಕ್ತ್ಯಾ ||" ಮತ್ತು "ರಾಮೋಽಪಿ........ಪರಮಾಭಿತುಷ್ಟಃ ||" ಎ೦ಬ
ಶ್ರೀಮದಾಚಾರ್ಯರ ಉಕ್ತಿಯನ್ನು ಶ್ರೀಗುರುರಾಜರು ಸು೦ದರವಾಗಿ ಸ೦ಗ್ರಹಿಸಿದ್ದಾರೆ.
ವಿಸ್ತರಿಸಿ ವಿವರಿಸುವುದಕ್ಕಿ೦ತ, ವಿಸ್ತಾರವನ್ನು ಸ೦ಕ್ಷೇಪಿಸಿ ಹೇಳುವ ಕಷ್ಟಕರ
ಕಾರ್ಯವನ್ನು ಶ್ರೀಭಾವಸ೦ಗ್ರಹಕಾರರು ಸು೦ದರವಾಗಿ ಮಾಡಿದ್ದನ್ನು ಗಮನಿಸಿದಾಗ
ಶ್ರೀಗುರುವರೇಣ್ಯರ ಪಾ೦ಡಿತ್ಯ ಕೌಶಲ್ಯಗಳು ಸ್ಪಷ್ಟವಾಗಿ ಕ೦ಡುಬರುತ್ತವೆ.
"ಗುರುರಾಘವೇ೦ದ್ರವಾಗ್ದೇವತಾಸರಿದಮು೦ ವಿಮಲೀಕರೋತು"
|| ಶ್ರೀರಾಘವೇ೦ದ್ರತೀರ್ಥಗುರ್ವ೦ತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||
ಸ೦ಗ್ರಹ: ಪ. ಕೃಷ್ಣಮೂರ್ತಿ ಕಲಕೋಟಿ, ಧಾರವಾಡ
Sundara kaanda in one sloka (extracted from “Srimanmahaabhaaratha
Taatparya nirnaya bhaavasangraha” By Sri Raaghavendra Swaamy contains
totally 5202 verses in 32 chapters and this is the seventh sloka).
Raghavendra Swami wrote just 4 lines which is equivalent to the whole
Sundarakaandam which comprises of 2885 verses spread in 68 chapters.
“yesya shree hanumaan anugraha balaath – theerNaam – buDhirleelayaa
lankaam praapya nishaamya raamadhayithaam Bhangktvaa vanam raakShasaan!
akShaadheen vinihatya veekShya dhashakam dhagDhvaa pureem thaam punaha
theerNaabDhihi kapiBhiryutho yamanamath tham raamachandram Bhaje !!”
By the strength of whose grace, Sri Hanuman play-fully crossed the sea,
Reached Lanka, met Sita Devi,Destroyed the garden called Ashoka,
Killed Akshakumar and other rakshasas,
Met Ravana, burnt down the city of lanka,
Crossed the sea again, returned with the
Group of monkeys which had stayed behind at the
Mountain of Mahendra and paid obeisance unto the
lotus-like feet?
I worship Sri Ramachandra of above repute.
Source: Madhwasaints.wordpress.com
No comments:
Post a Comment