64 ವಿದ್ಯೆಗಳಲ್ಲಿ ಪ್ರಾವೀಣ್ಯ ಘಳಿಸಿದ , 104 ಸ್ವತಂತ್ರ ಗ್ರಂಥಗಳನ್ನು ರಚಿಸಿ ಮಾಧ್ವ ವಾಂಗ್ಮಯದಲ್ಲೇ ಸುವರ್ಣ ಇತಿಹಾಸ ಬರೆದ ಶ್ರೀ ವಿಜಯೀಂದ್ರ ತೀರ್ಥರೊಡನೆ , ವಿನಾಯಕ.ರಾಮಚಂದ್ರ.ಜೋಷಿ ಎಂಬುವ ಅಭರಣ ತಯಾರಕ "ಪದಕ ನಿರ್ಮಾಣ" ಮಾಡುವದರಲ್ಲಿ ಸ್ಪರ್ಧೆಗಿಳಿದನು. ಆಗ ಇಬ್ಬರು ಪದಕ ಮಾಡಲು ಪ್ರಾರಂಭಸಿದರು. ಶ್ರೀಗಳ ಪದಕತಯಾರಿಕಾ ಕೌಶಲ್ಯ ಕಂಡು ಶ್ರೀಗಳನ್ನು ಸೋಲಿಸಲೇ ಬೇಕು ಎಂದುಕೊಂಡು ಬಂದವನು ಮೊದಲನೇ ದಿನವೇ ಬೆಚ್ಚಿಬಿದ್ದ. ಅತ್ಯಂತ ಚಾಣಾಕ್ಷರಾದ ಶ್ರೀಗಳವರು ಕೇವಲ 12 ದಿನಗಳಲ್ಲಿ ಪದಕಪೂರ್ಣಗೊಳಿಸಿ ತುಂಬಿದ ಸಭೆಯಲ್ಲಿ ನಿರ್ಣಾಯಕರ ಮುಂದೆ ಇಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ 64 ವಿದ್ಯೆಗಳಲ್ಲಿಯೂ ಶ್ರೀಗಳವರನ್ನು ಮೀರಿಸುವವರು ಭಾರತ ಖಂಡದಲ್ಲೇ ಬೇರೆಯವರು ಇಲ್ಲ , ಶ್ರೀಗಳವರು ವಿಜಯಿಗಳು ಎಂದು ನಿರ್ಣಾಯಕರು ಉದ್ಘಾರ ತೆಗೆದರು. ಸಭೆಯಲ್ಲಿ ಜನ ಶ್ರೀ ಸುರೇಂದ್ರ ತೀರ್ಥರು ಇತ್ತ " ವಿಜಯೀಂದ್ರ " ರೆಂಬ ಅಭಿದಾನ ನಿಜವಾಗಿಯೂ ಸತ್ಯ ಎಂದು ಭಾವುಕರಾದರು. ನಂತರದಲ್ಲಿ ಆ ಕುಶಲಕರ್ಮಿಯು ತನ್ನ ಪದಕವನ್ನು ಗುರುಗಳ ಮುಂದೆ ಇತ್ತು "ಸ್ವಾಮಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ , ನಾನು ಮಡಿದ ದುಸ್ಸಾಹಾಸಕ್ಕೆ ಕ್ಷಮೆ ಇರಲಿ , ನನ್ನ ಪದಕವನ್ನು ಶ್ರೀಮೂಲರಾಮನಿಗಾಗಿ ತಾವು ಸ್ವೀಕರಿಸಬೇಕು " ಎಂದನು. ಗುರುಗಳು ಅದನ್ನು ಸ್ವೀಕರಿಸಿ , ಅವನನ್ನು ಅನುಗ್ರಹಿಸಿದರು. ಆ ಕುಶಲಕರ್ಮಿಯು ಕೊಟ್ಟ ಆ ಪದಕ ಹಾಗು ತಾವೇ ಸ್ವತಃ ನಿರ್ಮಾಣಮಾಡಿದ ಪದಕ ಎರೆಡನ್ನೂ ತಮ್ಮಉಪಾಸ್ಯಮೂರ್ತಿ ಶ್ರೀಮೂಲರಾಮದೇವರಿಗೆ ಹಾಕಿ ಆನಂದದಿಂದ ಅರ್ಚಿಸಿದರು. ಆ ಶ್ರೀ ವಿಜಯೀಂದ್ರ ಗುರುಸಾರ್ವಭೌಮರು ಮಾಡಿ ಮೂಲರಾಮನಿಗೆ ಸಮರ್ಪಸಿದ ಪದಕವನ್ನು ಶ್ರೀಮನ್ಮೂಲರಾಮದೇವರು ಅಧುನಾ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಹಾಕಿಸಿಕೊಂಡು ಆ ಶ್ರೀ ವಿಜಯೀಂದ್ರ ಗುರುಸಾರ್ವಭೌಮರ ಪರಮಶಿಷ್ಯ ಶ್ರೀ ರಾಘವೇಂದ್ರ ತೀರ್ಥರ ಆರಾಧನಾ ದಿನದಂದು ಮೆರೆದ ಅದ್ಭುತ ಕ್ಷಣಗಳು.. ನಿಜವಾಗಿಯೂ ಇದನ್ನು ಪ್ರತ್ಯಕ್ಷ ಕಂಡ ಜನರು ಪುಣ್ಯವಂತರು. __/\__
ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Thursday, 14 August 2014
Subscribe to:
Post Comments (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। ಸನ್ಯಾಸಿಗಳ ಕರ್ತವ್ಯ ಪರಮತಖಂ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
Subscribe Us
Popular Posts
-
PLEASE SEND YOUR OPINION ABOUT THIS BLOG . PLEASE EXPRESS YOUR FEELINGS TOWARDS THIS .
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
-
ಶ್ರೀಮದಾಚಾರ್ಯರ ಪೀಠದ ಮೇಲೆ ವಿರಾಜಮಾನರಾದ ಶ್ರೀಧೀರೇಂದ್ರತೀರ್ಥರ ವಿದ್ಯಾಶಿಷ್ಯರಾದವರು ಶ್ರೀಭುವನೇಂದ್ರತೀರ್ಥರು.. ಹೆಸರಿಗೆ ತಕ್ಕಂತೆ ಭೂಮಂಡಲದಲ್ಲೇ ಶ್ರೇಷ್ಠವಿದ್...
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDelete