Sunday, 23 December 2012

ಸರ್ವತಂತ್ರ ಸ್ವತಂತ್ರ

ಸರ್ವತಂತ್ರ ಸ್ವತಂತ್ರ  , ಶ್ರೀಮತ್ಸುರೇಂದ್ರ ಕರಕಮಲ ಸಂಜಾತ , ಶ್ರೀ ಮದ್ವ್ಯಾಸರಾಜೇನ ಪರಿಪಾಲಿತಾ , ಶತಾಧಿಕ ಗ್ರಂಥರತ್ನ ಪ್ರಣೆತಾ, ಚತುಷ್ಷಷ್ಠಿ ಕಲಾಪ್ರವೀಣ , ಸಕಲ ಶಾಸ್ತ್ರ ಪಾರಂಗತ ಶ್ರೀ ಶ್ರೀ ವಿಜಯೀಂದ್ರ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನ ಸನ್ನಿಧಾನದಲ್ಲಿ ತಮ್ಮ ನಮನಗಳನ್ನು ಅರ್ಪಿಸುತ್ತಿರುವ ಶ್ರೀ ಶ್ರೀ ಸತ್ಯಪ್ರಮೋದ ಕರಕಮಲ ಸಂಜಾತ ಶ್ರೀ ಶ್ರೀ ಸತ್ಯಾತ್ಮ ತೀರ್ಥರು.

Thursday, 20 December 2012

                                                        || श्री विबुधेन्द्र तीर्थ गुरुभ्यो नमः ||

         ಶ್ರೀ ವಿಬುಧೆಂದ್ರ ತೀರ್ಥ ಶ್ರೀಪಾದಂಗಳವರ ಮೂಲ ವೃಂದಾವನ , ತಾಮ್ರ ಪರ್ಣಿ ನದಿ ತೀರ , ತಿರುನಲ್ವೇಲಿ , 

ಕಾಲ-1435 - 1490
ಆಶ್ರಮ ಗುರುಗಳು - ಶ್ರೀ ರಾಮಚಂದ್ರ ತೀರ್ಥರು 
ಆಶ್ರಮ ಶಿಷ್ಯರು - ಶ್ರೀ ಜಿತಾಮಿತ್ರ ತೀರ್ಥರು 
ವಿದ್ಯಾ ಗುರುಗಳು- ಶ್ರೀ ರಾಜೇಂದ್ರ ತೀರ್ಥರು 
ವಿದ್ಯಾ ಶಿಷ್ಯರು - ಶ್ರೀ ಲಕ್ಶ್ಮಿನಾರಾಯಣ ತೀರ್ಥರು ( ಶ್ರೀ ಶ್ರೀಪಾದರಾಜರು )
ಶ್ರೀಮಠ- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ 
ಆರಾಧನಾ ತಿಥಿ - ಮಾರ್ಗಶಿರ ಶುಕ್ಲ ದಶಮಿ 
ವೃಂದಾವನ ಸ್ಥಳ -ತಾಮ್ರ ಪರ್ಣಿ ನದಿ ತೀರ , ತಿರುನಲ್ವೇಲಿ ತಮಿಳುನಾಡು.
ಚರಮ ಶ್ಲೊಕ -
 आकॆरलं तथा सॆतुमागंगं चा हिमालयम् ।
निराकृताद्वैतशैवं विबुधॆंद्रगुरुं भजॆ ॥


 ಆಕೇರಲಂ  ತಥಾ ಸೇತುಮಾಗಂಗಂ ಚಾ ಹಿಮಾಲಯಮ್ |
ನಿರಾಕೃತಾದ್ವೈತಶೈವಂ ವಿಬುಧೇಂದ್ರಗುರುಂ ಭಜೇ ||


 ಇತಿಹಾಸ - 
 ಶ್ರೀ ವಿಬುಧೆಂದ್ರ ತೀರ್ಥರು ಶ್ರೀ ಜಯತೀರ್ಥ - ವಿದ್ಯಾಧಿರಾಜ -ಕವಿಂದ್ರ - ವಾಗೀಶ - ರಾಮಚಂದ್ರ ತೀರ್ಥರ ನಂತರ ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಯಾದರು . ಶ್ರೀ ವಿಬುಧೆಂದ್ರ ತೀರ್ಥರು  ಶ್ರೀ ರಾಮಚಂದ್ರ ತೀರ್ಥರ ಹಿರಿಯ(ಜ್ಯೇಷ್ಠ) ಪೀಠಾಧಿಪತಿಗಳು . ಇವರು ಪ್ರಕಾಂಡ ಪಂಡಿತರು ಆಗಿದ್ದರು ಅಂತ ಇವರ ಚರಮ ಶ್ಲೋಕದಿಂದ ತಿಳಿಯಬಹುದು. ಅಂತಲೇ ಇವರ  ಗುರುಗಳಾದ ಶ್ರೀ ರಾಮಚಂದ್ರ ತೀರ್ಥರು ಇವರನ್ನು ಉತ್ತರ ಭಾರತದ  ದಿಗ್ವಿಜಯಕ್ಕೆ ಕಳುಹಿಸಿದ್ದರು.ಇವರು ಶ್ರೀಪಾದರಾಜರ ವಿದ್ಯಾಗುರುಗಳು . ಇಡಿಯದಾದ ವೈದಿಕ ಸಾಮ್ರಾಜ್ಯದಲ್ಲಿ ಒಂದು ಸ್ವಾರಸ್ಯಕರವಾದ ಮಾತಿದೆ " विबुधेन्द्रोच्चिष्टं जगत्सर्वं " ಎಂಬ ಮಾತು ಇದೆ . ಇದಕ್ಕೆ ಕಾರಣ ಇಂದಿಗೆ ಮಧ್ವ ಸಾಮ್ರಾಜ್ಯದಲ್ಲಿ ನೆಲೆಸಿದ ಜ್ಞಾನಕ್ಕೆ , ಸಾಮ್ರಾಜ್ಯದ ಉಳಿವಿಗೆ ಶ್ರೀ ವಿಬುಧೆಂದ್ರ ತೀರ್ಥರೆ ಕಾರಣ. ಇವರು ಶ್ರೀಪಾದರಾಜರ ಗುರುಗಳು , ಶ್ರೀಪಾದರಾಜರು ವ್ಯಾಸರಾಜರ ಗುರುಗಳು , ವ್ಯಾಸರಾಜರು ರಾಯರ ಮಠದ  ಶ್ರೀ ವಿಜಯೀಂದ್ರ ತೀರ್ಥರ , ಸೋದೆ ಮಠದ  ವಾದಿರಾಜರ ,  ಉತ್ತರಾದಿ ಮಠದ ರಘೋತ್ತಮ ತೀರ್ಥರ ವಿದ್ಯಾ ಗುರುಗಳು . ಇವತ್ತಿಗೂ ಇರುವ ಮಧ್ವ ಪ್ರಜ್ಞೆಯಾ ಮೂಲ ಶ್ರೀ ವಿಬುಧೆಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ನೃಸಿಂಹ ದೇವರ ಆರಾಧಕರು . ಶ್ರೀಮನ್ಮೂಲ ರಾಮಚಂದ್ರ ದೇವರ ಪೂಜೆಗಾಗಿಯೇ ಶ್ರೀ ವಿಜಯೀಂದ್ರ ತೀರ್ಥರಾಗಿ ಅವತಾರ ಮಾಡಿದರು.  ಅಂತಹ ಮಾಹ ಜ್ಞಾನಿಗಳಾದ ವಿಬುಧೆಂದ್ರ ತೀರ್ಥರಿಗೆ ಪ್ರಸಕ್ತ ಮಾಧ್ವ ಸ್ವಾಮಾಜ ಬಹಳ ಋಣವನ್ನು ತೀರಿಸಬೇಕಿದೆ . ಅದು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಗುರುದಕ್ಷಿಣ ರೂಪವಾಗಿ ಮಧ್ವ ಶಾಸ್ತ್ರಗಳನ್ನು ಅಧ್ಯಯನ ಮಾಡೋಣ . ಶ್ರೀ ಕೃಷ್ಣಾರ್ಪಣ ಮಸ್ತು.

Saturday, 8 December 2012

                             || ಶ್ರೀಮನ್ಮೂಲರಾಮೋ ವಿಜಯತೇ ||                 
                               || ಶ್ರೀಗುರುರಾಜೋವಿಜಯತೇ ||
 ಶ್ರೀರಾಘವೇ೦ದ್ರಗುರುಸಾರ್ವಭೌಮರ ಅವತಾರ            ವೈಶಿಷ್ಟ್ಯ(ಶಾಸ್ತ್ರಾಧಾರಿತವಾದ ಪ್ರಮಾಣಗಳಿ೦ದ)

ಪುಣ್ಯ ಮತ್ತು ಕರ್ಮಭೂಮಿ ಎ೦ದು ಪ್ರಸಿದ್ದವಾದ ಭಾರತದೇಶದಲ್ಲಿ ಪರಮಾತ್ಮನ ಅವತಾರಗಳೂ, ಸಾಧು-ಸ೦ತರ, ದೈವಾ೦ಶಸ೦ಭೂತರಾದ ಯೋಗಿಗಳ ಜನ್ಮಗಳೂ ಜಗತ್ಕಲ್ಯಾಣಕ್ಕಾಗಿಯೂ, ಭಕ್ತರುಗಳ ಉದ್ಧಾರಕ್ಕಾಗಿಯೂ ಆಗುತ್ತಲಿವೆ ಎ೦ಬುದು ವಿದಿತ ವಿಚಾರವೇ. ಸದ್ಯದಲ್ಲಿ ದೈವಾ೦ಶಸ೦ಭೂತರೆ೦ದೂ, ಕಾಮಧೇನು-ಕಲ್ಪವೃಕ್ಷವೆ೦ದೂ, ಜಗದ್ಗುರುಗಳೆ೦ದೂ, ಕಾಮಿತಾರ್ಥಪ್ರದರೂ, ಪ್ರಹ್ಲಾದ-ಬಾಹ್ಲೀಕ-ಶ್ರೀವ್ಯಾಸರಾಜ ಮತ್ತು ಶ್ರೀರಾಘವೇ೦ದ್ರಸ್ವಾಮಿಗಳೆ೦ದು ಕೊನೆಯ ಅವತಾರವೆತ್ತಿ, ಸಶರೀರವಾಗಿ ಬೃ೦ದಾವನ ಪ್ರವೇಶಿಸಿ, ಜಗದುದ್ಧಾರ ಮಾಡುತ್ತಿರುವುದು ಜಗದ್ವಿದಿತವಾಗಿದೆ. ಮ೦ತ್ರಾಲಯದ ಮೂ ಲಬೃ೦ದಾವನವಲ್ಲದೇ, ಭಾರತಾದ್ಯ೦ತ ಹೊರದೇಶದಲ್ಲೂ ಮೃತಿಕಾ ಬೃ೦ದಾವನಗಳ ಪ್ರತಿಷ್ಠಾಪನೆಯಾಗಿ ಭಕ್ತರುಗಳು ಉದ್ಧಾರವಾಗುತ್ತಿದ್ದಾರೆ. ಇದಲ್ಲದೆ ಕೆಲವಡೆಯಲ್ಲಿ ಅವರ ಭಾವ ಮತ್ತು ತೈಲಚಿತ್ರವಿರುವ ಪ್ರಾರ್ಥನಾಮ೦ದಿರಗಳಿದ್ದು ಭಕ್ತರುಗಳು ಪ್ರಾರ್ಥನೆಯ ಮೂ ಲಕ ಇಷ್ಟಸಿದ್ಧಿಯನ್ನು ಹೂ೦ದುತ್ತಿದ್ದಾರೆ. ಈ ಕಾರಣದಿ೦ದಲೇ ಏಕೈಕ ಮತ್ತು ಅನನ್ಯ ಜಗದ್ಗುರುಗಳೆ೦ದರೆ ಶ್ರೀರಾಘವೇ೦ದ್ರಸ್ವಾಮಿಗಳು ಒಬ್ಬರೇ ಎ೦ಬ ಅ೦ಶ ಸರ್ವಸಮ್ಮತವಾಗಿದೆ. ಈ ವಿಧವಾದ ಅಸಾಧಾರಣವಾದ ಶಕ್ತಿ ಶ್ರೀಗುರುರಾಜರಿಗೆ ಪರಮಾತ್ಮನಿ೦ದ ಲಭ್ಯವಾಗಿದೆ.

ಇವರು ದೈವಾ೦ಶಸ೦ಭೂತರು ಹೇಗೆ ಅನ್ನುವುದನ್ನು ಶಾಸ್ತ್ರಾಧಾರಿತವಾದ ಪ್ರಮಾಣಗಳಿ೦ದ ತಿಳಿಸುವುದೇ ಈ ಲೇಖನದ ಉದ್ದೇಶ.



ಶ್ರೀನೃಸಿ೦ಹದೇವರು ಭಾಗವತದಲ್ಲಿ ಹೇಳುತ್ತಾರೆ (ಸಪ್ತಮ ಸ್ಕ೦ದ)

ಭವ೦ತಿ ಪೂರುಷಾ ಲೋಕೇ ಮದ್ಭಕ್ತಾಸ್ತ್ವಾಮನುವ್ರತಾಃ |

ಭವಾನ್ ಮೇ ಖಲು ಭಕ್ತಾನಾ೦ ಸರ್ವೇಷಾ೦ ಪ್ರತಿರೂಪಧೃಕ್ ||

"ನನ್ನೆಲ್ಲಾ ಭಕ್ತರಿಗೂ ನೀನು ಬಿ೦ಬನಾಗಿದ್ದೀಯೆ ನನ್ನೆಲ್ಲಾ ಭಕ್ತರೂ ನಿನ್ನನ್ನೇ ಅನುಸರಿಸುತ್ತಾರೆ". ಸಾಕ್ಷಾತ್ ಪರಮಾತ್ಮನಿ೦ದಲೇ ಪ್ರಶ೦ಸೆಗೊಳಗಾದ ಪ್ರಹ್ಲಾದರಾಜರು ಎಲ್ಲರಿಗೂ ಬಿ೦ಬರಾಗಿ ಎಲ್ಲರೂ ಮುಕ್ತಿ ಪಡೆಯಲು ಬೇಕಾದ ಮಾರ್ಗದರ್ಶನವನ್ನು ಮಾಡುವ ಸಾಮರ್ಥ್ಯ ಉಳ್ಳವರಾಗಿದ್ದಾರೆ. ನಾವು ಆ ಪರಮಾತ್ಮನ ಅತಿ ಸಾಮೀಪ್ಯವನ್ನು ಪಡೆದಿರುವ ಪ್ರಹ್ಲಾದರಾಜರನ್ನು ಬಿಟ್ಟು ಮುಕ್ತಿಗಾಗಿ ಅನ್ಯಮಾರ್ಗವನ್ನರಸಿ ಹೋಗುವುದಷ್ಟು ಸಮ೦ಜಸವಾಗಲಾರದು. ನಮ್ಮನ್ನುದ್ಧರಿಪ ತ೦ದೆ-ತಾಯಿ-ಗುರುಗಳನೇಕರು ಈ ಅವನಿಯಲ್ಲಿದ್ದರೂ ಅವರು ಕ್ಷಣಿಕವಾದ ಜ್ಞಾನ, ಸುಖಾದಿಗಳನ್ನು ಕೊಟ್ಟು ನಮ್ಮನ್ನನುಗ್ರಹಿಸುವರೇ ಹೂರತು ನಮ್ಮ ಪ್ರಾರಬ್ಧವನ್ನೆಲ್ಲಾ ನಾಶಮಾಡಿ, ನಮಗೆ ಮುಕ್ತಿ ಕೊಡಿಸುವ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಏಕ೦ದರೆ, ಅವರಾರೂ ಅಪರೋಕ್ಷಜ್ಞಾನಿಗಳಲ್ಲ. ಇ೦ತಹ ಸ೦ದರ್ಭದಲ್ಲಿ ನಮಗೆ ಮಾರ್ಗದರ್ಶನ ಮಾಡಲು ನಮ್ಮನ್ನುದ್ಧರಿಸಲು ಅಪರೋಕ್ಷಜ್ಞಾನಿಗಳು ಬೇಕೇ ಬೇಕು. ಆದ್ದರಿ೦ದಲೇ ದೈತ್ಯಬಾಲಕರು ಸಹ ಪ್ರಹ್ಲಾದರಿ೦ದಲೇ ಉದ್ಧೃತರಾದರು.

ಇನ್ನೊ೦ದೆಡೆ ಸ್ಕಾ೦ದಪುರಾಣದಲ್ಲಿ


"ಋತೇ ತು ತಾತ್ವಿಕಾನ್ದೇವಾನ್ನಾರದಾದೀ೦ಸ್ತಥೈವ ಚ |
ಪ್ರಹ್ಲಾದಾದುತ್ತಮಃ ಕೋ ನು ವಿಷ್ಣುಭಕ್ತೌ ಜಗತ್ತ್ರಯೇ ||"


"ಅಗ್ನಿ, ನಾರದಾದಿಗಳನ್ನು ಹೂರತುಪಡಿಸಿದರೆ ಪ್ರಹ್ಲಾದನ೦ತಹ ವಿಷ್ಣುಭಕ್ತರು ಜಗತ್ತಿನಲ್ಲಾರಿರುವರು?" ಎ೦ದು ಹೇಳಲ್ಪಟ್ಟಿದೆ, ಇದರಿ೦ದ ಶ್ರೀಪ್ರಹ್ಲಾದರಾಜರ ಶ್ರೇಷ್ಠತೆಯ ಅರಿವು ನಮಗಾಗುತ್ತದೆ, ಅಷ್ಟೇ ಅಲ್ಲದೇ ಆ ಸ್ವಾಮಿಯೇ ಹೇಳುತ್ತಾನೆ

"ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ "


ಯಾವ ಶ್ರೇಷ್ಠ ವ್ಯಕ್ತಿಗಳ ನಡೆ-ನುಡಿಗಳನ್ನು ಗಮನಿಸುವ ಜನರು ಆ ವ್ಯಕ್ತಿಯು ಸಭ್ಯನಾದ್ದರಿ೦ದ ಅವನ ನಡೆ-ನುಡಿಗಳನ್ನೇ ಸರಿ ಎ೦ದು ನ೦ಬಿ ಅವುಗಳ ಆಚರಣೆಯಲ್ಲೇ ಮನವಿಡುತ್ತಾರೆ.  ಇಲ್ಲಿ ದೈತ್ಯಬಾಲಕರಿಗೂ "ನಾರಾಯಣ" ನಾಮಸ್ಮರಣೆ ಮಾಡುವ ಚಾಳಿಯನ್ನು ಶ್ರೀಪ್ರಹ್ಲಾದರಾಜರೇ ಹಾಕಿಕೊಟ್ಟರು.  ಆ ನರಹರಿಭಕ್ತರಾದ ಶ್ರೀಪ್ರಹ್ಲಾದರಾಜರೇ ಶ್ರೀರಾಘವೇ೦ದ್ರಗುರುಸಾರ್ವಭೌಮರಾಗಿ ಈ ವೈದಿಕಪ್ರಪ೦ಚಕ್ಕೆ ನೀಡಿರುವ ಕೂಡುಗೆ ಅಪಾರವಾದುದು.


ಆಧಾರ ವಾಕ್ಯಗಳು : ಗುರುರಾಜರ ಅವತಾರಗಳ ಬಗ್ಗೆ

1. ಶ೦ಖುಕರ್ಣಾಖ್ಯದೇವಸ್ತು ಬ್ರಹ್ಮಶಾಪಾಚ್ಚ ಭೂತಲೇ |

   ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರಕ್ಷಪಣೇ ರತಃ ||


2. ಪ್ರಹ್ಲಾದರಾಜಃ ಪ್ರಥಮೋ ವ್ಯಾಸರಾಜ ಸ ಏವ ಚ |

   ಸ ಏವ ರಾಘವೇ೦ದ್ರಾಖ್ಯಯತಿರೂಪೇಣ ಸರ್ವದಾ ||

   ಕಲೌಯುಗೇ ರಾಮಸೇವಾ೦ ಕುರ್ವನ್ಮ೦ತ್ರಾಲಯೇಭವತ್ |
3. ದೇವಸ್ವಭಾವೋ ದಿವಜದ್ರುಮೋಽಯಮಿಷ್ಟಪ್ರದೋ ಮೇ ಸ೦ತತ೦ ಸ ಭೂಯಾತ್ |


ಪ್ರಹ್ಲಾದರಾಜರೇ ಶ್ರೀರಾಘವೇ೦ದ್ರಾಸ್ವಾಮಿಗಳಾದ್ದರಿ೦ದ ಪ್ರಹ್ಲಾದರ ವೈಶಿಷ್ಟ್ಯಗಳನ್ನು ಶಾಸ್ತ್ರೋಕ್ತ ಆಧಾರವಾಕ್ಯಗಳಿ೦ದ ತಿಳಿಸಿದರೆ ಶ್ರೀಗುರುರಾಜರ ವೈಶಿಷ್ಟ್ಯಗಳನ್ನು  ತಿಳಿಸಿದ೦ತಾಗುತ್ತದೆ.
1. ದೇವಾಃ ಶಾಪಬಲಾದೇವ ಪ್ರಹ್ಲಾದಾದಿತ್ವಮಾಗತಾಃ | (ಬ್ರಹ್ಮವೈವರ್ತಪುರಾಣ)

2. ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯಾ ಬಭೂವಿರೇ |(ಆಧ್ಯಾತ್ಮ ಗ್ರ೦ಥ)

3. ಪ್ರಹ್ಲಾದೋಽಪಿ ಮಹಾಭಾಗಃ ಕರ್ಮದೇವಸಮಃ ಸ್ಮೃತಃ |

   ಪ್ರಹ್ಲಾದರಾಜರು ಕರ್ಮಜದೇವತೆಗಳಲ್ಲಿ ಸೇರಿದವರು.(ಸ್ಕಾ೦ದಪುರಾಣ)

4. ಋತೇ ತು ತಾತ್ವಿಕಾನ್  ದೇವಾನ್ ನಾರದಾದೀ೦ಸ್ತಥೈವ ಚ |

ಪ್ರಹ್ಲಾದಾದುತ್ತಮಃ ಕೋ ನು ವಿಷ್ಣುಭಕ್ತೌ ಜಗತ್ತ್ರಯೇ (ಸ್ಕಾ೦ದಪುರಾಣ)

5. ವಾಯ್ವಾವೇಶಾಚ್ಚ ಪ್ರಹ್ಲಾದೋ ನಾರದಾದಧಮಃ ಸ್ಮೃತಃ |

   ವಾಯ್ವಾವೇಶದಿ೦ದ ಕೂಡಿರುವ ಪ್ರಹ್ಲಾದರಾಜರು 19 ರಿ೦ದ 15 ನೇ ಕಕ್ಷೆಗೆ ಬ೦ದರೂ ನಾರದಾದಿಗಳಿಗಿ೦ತ ಕಡಿಮೆ ಸ್ಥಾನದಲ್ಲಿರುತ್ತಾರೆ.


ಪ್ರಹ್ಲಾದರು ವ್ಯಾಸರಾಜರಾಗಿ, ಶ್ರೀರಾಘವೇ೦ದ್ರಸ್ವಾಮಿಗಳಾಗಿ ಅವತರಿಸಿರುವವರು ಎ೦ಬುದು ದಾಸರ ಪದಗಳಿ೦ದ ಸ್ಪಷ್ಟವಾಗುವುದು.

1. ಪ್ರಹ್ಲಾದಸ್ಯಾವತಾರೋಽಯ೦ | (ವಿಜಯೀ೦ದ್ರಕೃತ ವ್ಯಾಸರಾಜ ಸ್ತೋತ್ರ )

2. ಪ್ರಹ್ಲಾದನವತಾರವೆನಿಸಿದೆ. ( ಶ್ರೀಪುರ೦ದರದಾಸರು)

3. ತರಳ ಪ್ರಹ್ಲಾದನವತಾರ ಶ್ರೀಗುರುವ್ಯಾಸ (ಶ್ರೀಮಧ್ವಪತಿದಾಸರು)

   ಪ್ರಹ್ಲಾದರಾಜರೇ ವ್ಯಾಸರಾಜರಾಗಿ ಮತ್ತು ಶ್ರೀರಾಘವೇ೦ದ್ರಸ್ವಾಮಿಗಳಾಗಿ ಕಲಿಯುಗದಲ್ಲವತರಿಸಿದರು.


ಶುದ್ಧ ಸ್ವರೂಪರು ಪ್ರಹ್ಲಾದರಾಜರು

ಬಲಿರಪ್ಯಸುರಾವೇಶಾತ್ ಸ್ತುವನ್ನಪಿ ಜನಾರ್ದನಮ್ |

ಆಕ್ಷಿಪತ್ಯ೦ತರಾ ಕ್ವಾಪಿ ಪ್ರಹ್ಲಾದೋ ನಿತ್ಯಭಕ್ತಿಮಾನ್ ||

ಹರಿಭಕ್ತನಾದ ಬಲಿಚಕ್ರವರ್ತಿಯು ಹರಿಯಲ್ಲಿ ಭಕ್ತಿಯುಳ್ಳವನಾದರೂ ಅಸುರಾವೇಶವುಳ್ಳವನಾದ್ದರಿ೦ದ ಮಧ್ಯೆ ಮಧ್ಯೆ ಹರಿಯನ್ನು ನಿ೦ದಿಸುವ ಮಾತನ್ನಾಡುವನು. ಆದರೆ ಪ್ರಹ್ಲಾದರಾಜರು ಸದಾ ಹರಿಭಕ್ತಿಯುಳ್ಳವರು, ಆದ್ದರಿ೦ದಲೇ ನಿತ್ಯಭಕ್ತಿಮಾನ್ ವಾಯುದೇವರನ್ನು ಆಖಣಾಶ್ಮ ಸಮ ಎ೦ದು ಹೊಗಳಿದ್ದಾರೆ.



ಆಧಾರ ವಾಕ್ಯಗಳು:

1. ಅಥೋ ಶುಚಿಷ್ಮತೀದೇವೀ ಸುಷಾವ ಪುತ್ರಮುತ್ತಮ೦ |

2. ವಾಯುನಾ ಚ ಸಮಾವಿಷ್ಟ೦ ಹರಿಪಾದಾಬ್ಜಸ೦ಶ್ರಯ೦ | (ಬ್ರಹ್ಮಾ೦ಡಪುರಾಣ)

3. ವಾಯ್ವಾವೇಶಾಚ್ಚ ಪ್ರಹ್ಲಾದೋ ಹರಿಣಾ ತತ್ವಮ೦ಜಸಾ |

   ಉಪವಿಷ್ಟೋ ಹ್ಯಭೂದ್ವೀ೦ದ್ರ ಹರಿಭಕ್ತೋ ಮಹಾಪ್ರಭುಃ |

4. ಹಿರಣ್ಯಕಶಿಪೋಃ ಪುತ್ರಃ ಪ್ರಹ್ಲಾದೋ ಭಗವತ್ಪ್ರಿಯಃ |

    ವಾಯುನಾ ಚ ಸಮಾವಿಷ್ಟೋ ಮಹಾಬಲಸಮನ್ವಿತಃ || ( ಮ.ಭಾ.ತಾ.ನಿ. ಅ-11)

5. ಪದಸ್ಥೇಷು ಸುರೇಷ್ವೇವಮಾವೇಶೋ ನೈವ ಮುಕ್ತಿಗಃ | (ಪ್ರಕಾಶಸ೦ಹಿತ)

   ಮುಕ್ತಿಯವರೆಗೂ ವಾಯ್ವಾವೇಶ ಶ್ರೀಪ್ರಹ್ಲಾದರಲ್ಲಿ ಅ೦ದರೆ ಗುರುರಾಜರಲ್ಲಿರುತ್ತದೆ. ಆದ್ದರಿ೦ದ ಪ್ರಹ್ಲಾದರಾಜರು ವಿಶಿಷ್ಟದೇವತೆ.


ತಾರತಮ್ಯ ವಿಷಯ:  ಸ್ವಾಭಾವಿಕವಾಗಿ ಪ್ರಹ್ಲಾದರಾಜರು 19 ನೇ ಕಕ್ಷೆಯಲ್ಲಿರುವವರು ಮತ್ತು ಕರ್ಮಜದೇವತೆ. ವಾಯ್ವಾವೇಶ ಸದಾ ಇರುವುದರಿ೦ದ ಇವರು 15 ನೇ ಕಕ್ಷೆಗೆ ಸೇರ್ಪಡೆಯಾಗಿದ್ದಾರೆ.


ಆಧಾರ ವಾಕ್ಯಗಳು:

1. ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವಸಮಃ ಸ್ಮೃತಃ | (ಬ್ರಹ್ಮಕಾ೦ಡ)

2. ಜನಪಕರ್ಮಜರೊಳಗೆ ನಾರದಮುನಿಯನುಗ್ರಹಬಲದಿ ಪ್ರಹ್ಲಾದನು ಭೃಗುಮುನಿ ರಕ್ಷಣೆಗೆ ಪತ್ನಿಗೆ ಸಮನೆನಿಸಿಕೊ೦ಬ | (ಹರಿಕಥಾಮೃತಸಾರ)

ಸ೦ಖ್ಯಾನ್ಯಥಾತ್ವ೦ ಯತ್ರ ಸ್ಯಾತ್ತತ್ರಾವೇಶ ವಿಶೇಷತಃ |

ಅವರಾಣಾ೦ ಗುಣಸ್ಯಾಪಿ ಪರಮೀಯತ್ವತಸ್ತಥಾ || (ತತ್ವವಿವೇಕ)

ಉತ್ತಮರ ಆವೇಶವಿದ್ದಾಗ್ಗೆ ಹೆಚ್ಚು ಗುಣವುಳ್ಳವರಾದ್ದರಿ೦ದ ಪ್ರಹ್ಲಾದರಾಜರು 15 ನೇ ಕಕ್ಷೆಗೆ ಏರಿದರು.



ವಾಯ್ವಾವೇಶದ ಹೆಚ್ಚುಗಾರಿಕೆ:

ದೇವೇಷು ಬಲಿನಾಮೇವ ಭಕ್ತಿಜ್ಞಾನೇನ ಚಾನ್ಯಥಾ |

ಸ ಏವ ಚ ಪ್ರಿಯೋ ವಿಷ್ಣುರ್ನಾನ್ಯಥಾ ತು ಕಥ೦ಚನ | (ಮ.ಭಾ.ತಾ. ನಿ)


ಜ್ಞಾನಾದಯೋ ಗುಣಾ ಯಸ್ಮಾತ್ ಜ್ಞಾಯತೇ ಸೂಕ್ಷ್ಮದೃಷ್ಟಿಭಿಃ |

ತಸ್ಮಾದ್ಯತ್ರ ಬಲ೦ ತತ್ರ ವಿಜ್ಞಾತವ್ಯಾ ಗುಣಾಃ ಪರೇ || (ಮ.ಭಾ.ತಾ. ನಿ)


ಜೀವಕೋಟಿಯಲ್ಲಿ ವಾಯುದೇವರೊಬ್ಬರೇ ಬಲದಲ್ಲಿ ಶ್ರೇಷ್ಠರು. ಇವರ ಆವೇಶ ಪ್ರಹ್ಲಾದರಲ್ಲಿ ಸದಾ ಇರುವ ಕಾರಣ ಅವರು ಬಲಿಷ್ಠರಾಗುವರು. ಇದನ್ನು ಹಿರಣ್ಯಕಶ್ಯಪು ಪ್ರಹ್ಲಾದರಿಗೆ ಕೊಟ್ಟ ಹಿ೦ಸೆ ಪರಿಶೀಲಿಸಿದಾಗ ಮನದಟ್ಟಾಗುವುದು. ಭಕ್ತಿ ಮತ್ತು ಜ್ಞಾನ ಸ್ವರೂಪಭೂತಗಳೇ ಪ್ರಹ್ಲಾದರಾಜರಲ್ಲಿ ಪ್ರಕಾಶಮಾನವಾಗಿವೆ.


ಅವತಾರದಲ್ಲಿ ಶ್ರೀವ್ಯಾಸರಾಜರಾಗಿರುವಾಗ ಆಚಾರ್ಯರ ಮತ್ತು ಟೀಕಾಚಾರ್ಯರ ಗ್ರ೦ಥಗಳಿಗೆ ವ್ಯಾಖ್ಯಾನ ಮತ್ತು ಅವರ ಸ್ವತ೦ತ್ರ ಗ್ರ೦ಥಗಳನ್ನು ಅವಲೋಕಿಸಿದಾಗ, ಪ೦ಡಿತರುಗಳನ್ನು ಜಯಿಸಿದಾಗ ಹಾಗೂ ವಿಷವನ್ನು ಅರಗಿಸಿಕೂ೦ಡಾಗ ಇವರಲ್ಲಿ ವಾಯ್ವಾವೇಶ ಇರುವುದು ಸ್ಮರಣೆಗೆ ತರುತ್ತದೆ.



ಪ್ರಹ್ಲಾದರಾಜರು ಹರಿಗೆ ಅತ್ಯ೦ತ ಪ್ರಿಯರು. (ಭಾಗವತ-7-4-31)

ಪರುಶುಕ್ಲತ್ರಯರು ಸ್ವಾಭಾವಿಕವಾಗಿ ಅಸುರಾವೇಶರಹಿತರು. ಆದರೆ, ಶ್ರೀಪ್ರಹ್ಲಾದರಾಜರು ವಾಯ್ವಾವೇಶದಿ೦ದ ಕೂಡಿದ ಕಾರಣ ಅಸುರಾವೇಶರಹಿತರು.



ಪ್ರಹ್ಲಾದರಾಜರ ಸ್ವರೂಪಜ್ಞಾನ:

ಪ್ರಹ್ಲಾದರಾಜರು ಮೂ ಲರೂಪವಾದ ಶ೦ಖುಕರ್ಣನ ರೂಪದಲ್ಲಿದ್ದಾಗ ಬ್ರಹ್ಮನ ಸೇವಕನಾಗಿ ಸತ್ಯಲೋಕದಲ್ಲಿ ಭಗವ೦ತನ ದರ್ಶನವನ್ನು ಅನುಭವಿಸುತ್ತಿರುವ ಕಾರಣದಿ೦ದ ಇವರು ಜ್ಞಾನಿಗಳೆ೦ಬುದು ನಿರ್ವಿವಾದ. ಎಲ್ಲಾ ದೇವತೆಗಳೂ ಶ್ರೀನೃಸಿ೦ಹನ ದರ್ಶನಕ್ಕಾಗಿ ಬ೦ದಾಗ ಬ್ರಹ್ಮನ ಬಳಿ ಅವರಿದ್ದರು. "ಪ್ರಹ್ಲಾದ೦ ಪ್ರೇಷಯಾಮಾಸ ಬ್ರಹ್ಮಾಽವಸ್ಥಿತಮ೦ತಿಕೇ ||" (ಭಾಗವತ ಸ್ಕ೦ದ 7).  ಹರಿಭಕ್ತಾಗ್ರೇಸರರೆ೦ದು ಪ್ರಹ್ಲಾದರಾಜನನ್ನು ತಿಳಿಸಲು ಕೀರ್ತಿಯಿ೦ದ ಅವರನ್ನು ಮೆರೆಸಬೇಕೆ೦ಬುದೇ ಪರಮಾತ್ಮನ ಇಚ್ಛೆ.  ಶ್ರೀರಾಘವೇ೦ದ್ರಸ್ವಾಮಿಗಳಾಗಿ ಅವತರಿಸಿದಾಗ, ಅವರು ಬ್ರಹ್ಮಕರಾರ್ಚಿತ ಶ್ರೀಮೂ ಲರಾಮದೇವರನ್ನು ಪೂಜೆ ಮಾಡಿದರು. ಇದು ಬ್ರಹ್ಮನಿಗೆ ಪ್ರಹ್ಲಾದರಲ್ಲಿರುವ ವಾತ್ಸಲ್ಯ ತೋರುತ್ತದೆ.



ಶ್ರೀಗುರುರಾಜರು ಬಿ೦ಬಭೂತರು:

1. ಬಿ೦ಬರು ಅ೦ದರೆ ಇಲ್ಲಿ ಸಾಧನೆ ಮಾಡಿಸಿ ಮೋಕ್ಷ ದಯಪಾಲಿಸುವವರು.  ನಾವುಗಳು ಪ್ರತಿಬಿ೦ಬರು. (ಭಾಗವತ 1೦ನೇ ಸ್ಕ೦ದ 22ನೇ ಶ್ಲೋಕ).

2. ಮೇ ಸರ್ವೇಷಾ೦ ಭಕ್ತಾನಾ೦ ಭವಾನ್ ಪ್ರತಿರೂಪಧೃಕ್ |

   ಪ್ರತಿಮನ್ವ೦ತರ೦ ಪ್ರಾಯಃ ಪ್ರಹ್ಲಾದಾದ್ಯಾ ಬಭೂವಿರೇ ||

ಬ್ರಹ್ಮಾದಿಗಳು ಪ್ರತಿ ಮನ್ವ೦ತರದಲ್ಲೂ ಅ೦ದರೆ ಪ್ರತಿಯುಗದಲ್ಲೂ ಅವತರಿಸುವರು.


ಯುಗೇ ಯುಗೇ ಭವ೦ತ್ಯೇತೇ ಸರ್ವೇ ದಕ್ಷಾದಯೋ ನೃಪ | (ಹರಿವ೦ಶ)



ಕೃತಯುಗದಲ್ಲವತರಿಸಿದ ಪ್ರಹ್ಲಾದರಾಜರು 28 ನೇ ದ್ವಾಪರದಲ್ಲಿ ಬಾಹ್ಲೀಕರಾಗಿ, ಮತ್ತೆ 28 ನೇ ಕಲಿಯುಗದಲ್ಲಿ ವ್ಯಾಸರಾಜರು ಮತ್ತು ಶ್ರೀರಾಘವೇ೦ದ್ರಸ್ವಾಮಿಗಳಾಗಿ ಅವತರಿಸಿರುವರು.



|| ಶ್ರೀಕೃಷ್ಣಾರ್ಪಣಮಸ್ತು ||



ಸ೦ಗ್ರಹ : ಹೆಚ್. ಜಿ. ರಾಘವೇ೦ದ್ರಾಚಾರ್ಯ, ಬೆ೦ಗಳೂರು

           ವಿದ್ವಾನ್ ಪಿ. ವಿ. ಹರಿನಾಥ್, ಬೆ೦ಗಳೂರು.

ಆಧಾರ:  ಶ್ರೀರಾಘವೇ೦ದ್ರಸ್ವಾಮಿಗಳ ವೈಶಿಷ್ಟ್ಯ.

Wednesday, 21 November 2012

ಶ್ರೀ ರಾಮಲಿಂಗೇಶ್ವರ ದೇವಾಲಯ , ಹುನಗುಂದ ಗ್ರಾಮ , ಬಾಗಲಕೋಟೆ .

ಶ್ರೀ ರಾಮಲಿಂಗೇಶ್ವರ ದೇವಾಲಯ , ಹುನಗುಂದ ಗ್ರಾಮ , ಬಾಗಲಕೋಟೆ .
ವಿಶೇಷತೆ -  ಇದರ ವಿಶೇಷತೆ ಏನು ಅಂದ್ರೆ ಇದು ಪುರಾತನ ಚಾಲುಕ್ಯ ಶೈಲಿಯಲ್ಲಿ ಕ್ರಿ.ಶ 1074ರಲ್ಲಿ ಎರಡನೇ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿತವಾದ ವಿಶಾಲ ಪ್ರಾಂಗಣ 16 ಚೌರಾಸ ಸ್ಥಂಭಗಳು ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ರಾಮಲಿಂಗೇಶ್ವರ ಇಂದಿಗೂ ಹುನಗುಂದದ ಮಾಧ್ವ ಕುಟುಂಬದಿಂದ ಪೂಜೆಗೊಳ್ಳುತ್ತಿದ್ದಾನೆ . ಇದರ ಅರ್ಚಕರು ರಾಘವೇಂದ್ರ ಸ್ವಾಮಿಗಳವರ ಮಠದ ಶಿಷ್ಯರಾದ ಹುನಗುಂದಗ್ರಾಮದ ಜೋಷಿ ಮನೆತನದವರು . ಈಗ ಸಧ್ಯ ಮೂರು ಜೋಷಿ ಮನೆತನಗಳು ಪೂಜಾ ಹೊಣೆ ಹೊತ್ತುಕೊಂಡಿವೆ . ಮತ್ತು ರುದ್ರದೇವರು ಪರಮವೈಷ್ಣವರು . ಇಲ್ಲಿ ಪರಮವೈಷ್ಣವನಿಗೆ ವೈಷ್ಣವರಿಂದಲೇ ಪೂಜೆ ಇದೆ . ಇಲ್ಲಿ ಅನೇಕ ಯತಿಗಳು,ಸಾಧು ಸಂತರು ಬಂದು ಹೋಗಿದ್ದಾರೆ ಎಂದು ನಂಬಿಕೆ ಇದೆ . 
ಇತಿಹಾಸ -ಇದು ರಾಮಾಯಣದ ಕಾಲದಲ್ಲಿ ಶ್ರೀರಾಮದೇವರು ರಾವಣನನ್ನು ಸಂಹಾರ ಮಾಡಿದಾಗ ಬ್ರಹ್ಮ ಹತ್ಯಾ ದೋಷ ಬರಬಾರದು ಎಂದು ಪ್ರಯಶ್ಚಿತ್ತಕ್ಕಾಗಿ ದಂಡಕಾರಣ್ಯ ಪ್ರದೇಶದಲ್ಲಿ ರುದ್ರದೇವರ ಲಿಂಗಗಳನ್ನು ಪ್ರತಿಷ್ಠಾಪಾನೆ ಮಾಡಿದನಂತೆ .ಈ ರಾಮಪೂಜಿತ ರುದ್ರದೇವರ ಲಿಂಗಗಳೇ ಶ್ರೀರಾಮಲಿಂಗ ಎಂದು ಪ್ರಸಿದ್ಧವಾದವು. ರಾಮೇಶ್ವರದ ಲಿಂಗವೂ ಇದಕ್ಕೆ ಉದಾಹರಣೆಯಾಗಿರಬಹುದು . ಈ ರಾಮಲಿಂಗೇಶ್ವರ ದೇವಾಲಯಗಳನ್ನು ಬಹಳ ಕಡೆ ನೋಡಬಹುದು . ಕಾಲ ಕ್ರಮೇಣ ಕೆಲವು ಪೂಜೆ ಇಲ್ಲದೆ ಹಾಗೆ ಇದ್ದರೆ ಇನ್ನು ಕೆಲವು ಶೈವರ(ಒಕ್ಕಲಿಗರು ಹಾಗು ಇನ್ನಿತರರು)  ಪಾಲಾಗಿವೆ. ಮತ್ತು ಬ್ರೀಟಿಷರ ಕಾಲದಲ್ಲಿ ಇದು ಒಮ್ಮೆ ಜೀರ್ಣ ಗೊಂಡಿತ್ತಂತೆ ಇದನ್ನು ಆಗಿನ ಸ್ವಾತಂತ್ರ್ಯ ಹೋರಾಟಗಾರರು ಈ ದೇವಸ್ಥಾನವನ್ನು( ಹುನಗುಂದದ ದೇವಸ್ಥಾನವನ್ನು) ಸ್ವಾತಂತ್ರ್ಯ ಸಂಗ್ರಾಮದ ರಹಸ್ಯ ಸಂದೇಶ ಹಾಗೂ ಸುರಂಗ ಮಾರ್ಗ ಸೂಚಿಯಾಗಿ ಬಳಸುತ್ತಿದ್ದರಂತೆ. ಬಾಗಲಕೋಟೆಯ ಇತರ ದೇವಸ್ಥಾನಗಳಿಗೆ ಸುರಂಗ ಇದೆ ಎಂದು ಇಲ್ಲಿನ ಕೆತ್ತನೆ ಸೂಕ್ಷ್ಮವಾಗಿ ಹೇಳುತ್ತದೆಯಂತೆ. ಇಲ್ಲಿ ಅನೇಕ ಕುರುಹುಗಳನ್ನು ಇಂದಿಗೂ ಕಾಣಬಹುದು . ಆದರೆ ಸಂಪೂರ್ಣ ಅರ್ಥ ತಿಳಿಯುವದು ಸಾಧ್ಯವಾಗಿಲ್ಲ . ಕಾಲಾಂತರದಲ್ಲಿ ಅನೇಕ ರಾಜರುಗಳಿಂದ ಇರ್ಲಕ್ಷ್ಯಗೊಂಡು  ಈಗ ಶಿಥಿಲ ಹಂತದಲ್ಲಿದ್ದ ಇದನ್ನು ಶ್ರೀ ವೇ.ಮೂ ಮಧ್ವಾಚಾರ್ಯ ಜೋಷಿಯವರ ಕುಟುಂಬ ಜೀರ್ಣಗೊಳಿಸಿದೆ. ಈಗ ಇದರ ಇತಿಹಾಸ ಕರ್ನಾಟಕ ಗ್ಯಾಜೆಟ್ ನಲ್ಲಿ ಲಭ್ಯವಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬುದೇ ಹುನಗುಂದ ನಿವಾಸಿಗಳ ಆಶಯ.

  ದೇವಸ್ಥಾನದ ಕೆಲವು ಚಿತ್ರಗಳು-






ರಾಮಲಿಂಗೇಶ್ವರ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಪಂಡಿತ್. ದಿ . ವೇ ಮೂ ಮಧ್ವಾಚಾರ್ಯ ಜೋಶಿಯವರು ( ನಿವೃತ್ತ ಡಿಡಿಪಿಆಯ್  ಬಿಜಾಪುರ , ಕರ್ನಾಟಕ )

Tuesday, 20 November 2012

ಚಿತ್ರದಲ್ಲಿರುವವರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಪ್ರಸ್ತುತಿ ಪೀಠ ವಿರಾಜಮಾನರಾದ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು. ಇವರು ಮಹಾ ವಿರಕ್ತರು , ಜ್ಞಾನಿಗಳು ಆಗಿದ್ದಾರೆ . ಇವರ ಪೂರ್ವಾಶ್ರಮದ ಹೆಸರು ಪಂ.ಅನಂತಾಚಾರ್ಯ ಗುಡಿ. ಇವರು ಪೂರ್ವಾಶ್ರಮದಲ್ಲಿ ಬೆಂಗಳೂರು ಮಹಾನಗರದಲ್ಲಿ ವ್ರುತ್ತಿನಿರತರಾಗಿದ್ದರು . ಇವರ ಲೌಕಿಕ ಜೀವನದ ಶಿಕ್ಷಣದಲ್ಲಿ ಔನ್ನತ್ಯ ಸಾಧಿಸಿದ್ದರು . ಇವರು LLB MBA BE ಡಿಗ್ರಿಗಳನ್ನೂ ಹೊಂದಿದ್ದರು . ಒಂದು ಬಾರಿ ಇವರ ಪೂರ್ವಾಶ್ರಮದ ಮನೆಯಲ್ಲಿ ( ಹಾವೆರಿಯಲ್ಲಿದೆ) ಶ್ರೀ ಮಠದ ಹಿಂದಿನ ಸ್ವಾಮಿಗಳಾದ ಶ್ರೀ ರಘುಪ್ರಿಯ ತೀರ್ಥರು ವೈಕುಂಠರಾಮದೇವರ ಪೂಜೆಗಾಗಿ ಬಂದಿದ್ದಾಗ ಅವರಲ್ಲಿ ಶಾಸ್ತ್ರಾಭ್ಯಾಸ ಮಾಡಬೇಕೆಂದು ನಿಶ್ಚಯಿಸಿ ಅವರೊಂದಿಗೆ 1990 ರಲ್ಲಿ ವೃತ್ತಿಯನ್ನು ತ್ಯಜಿಸಿ ನಡೆದೇ ಬಿಟ್ಟರು. ಸತತವಾಗಿ ರಾತ್ರಿ-ಹಗಲೆನ್ನದೆ ಶ್ರೀಮದಾಚಾರ್ಯರ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ ಶ್ರೀ ರಘುಪ್ರಿಯ ತೀರ್ಥರಲ್ಲಿಯೇ ಇದ್ದರು . ಮುಂದೆ ಶ್ರೀಮಠದ ಉತ್ತರಾಧಿಕಾರಿ ನೇಮಕ ವಿಷಯ ಬಂದಾಗ ಉತ್ತರಾದಿ ಮಠಾಧೀಶ ಶ್ರೀ ಸತ್ಯಪ್ರಮೋದ ತೀರ್ಥರಲ್ಲಿ , ಅವರಿಗೆ ಪ್ರೀತ್ಯಾಸ್ಪದರಾದ ರಘುಪ್ರಿಯ ತೀರ್ಥರು ಮುಂದಿಟ್ಟಾಗ ಸತ್ಯಪ್ರಮೊದರು ಅನಂತಾಚಾರ್ಯರ ಹೆಸರಿಗೆ ಸಮ್ಮತಿ ಸೂಚಿಸಿದರು . ಮುಂದೆ ಇವರೇ ಶ್ರೀಮದಕ್ಷೋಭ್ಯತೀರ್ಥರ ತಪೋಭೂಮಿ ಯಾದ
ಕೂಡಲಿ ಕ್ಷೇತ್ರದಲ್ಲಿ ಶ್ರೀ ಶ್ರೀ ರಘುವಿಜಯ ತೀರ್ಥರಾಗಿ ಶ್ರೀ ರಘುಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸಲುಹಿ ಅವರಿಗೆ ಪ್ರೀತ್ಯಸ್ಪದ ರಾದರು. ಇವರು ತಮ್ಮ ಗುರುಗಳನ್ನು ಮಗುವಿನಂತೆ ನೋಡಿಕೊಂಡಿದ್ದಾರೆ . ಇವರ ಗುರುಗಳ ಹಾಗು ಇವರ ಶ್ರಮದಿಂದ ಇಂದು ಕೂಡ್ಲಿ ಮಠ ಜನಪ್ರಿಯ ವಾಗಿದೆ. ನಿನ್ನೆ ಶ್ರೀ ರಘುವಿಜಯರು ಧಾರವಾಡಕ್ಕೆ ಭೆಟ್ಟಿ ಕೊಟ್ಟಾಗ ಅವರಲ್ಲಿ ಮಂತ್ರಾಕ್ಷತೆ ತೆಗೆದುಕೊಂಡು ಅನುಗ್ರಹ ಪಡೆದೆ. ಅವರು ಈ ಹಿಂದೊಮ್ಮೆ ನಮ್ಮ ಮನೆಯಲ್ಲಿ ವೈಕುಂಠರಾಮ ದೇವರ ಪೂಜೆ ಇದ್ದಾಗ ಹೇಳಿದ್ದು ನೆನಪಾಯಿತು ಅದನ್ನೇ ಬರೆದೆ ..... :)


The swamiji in this picture is Shri Raghuvijaya Teertha of Kudali math . He is a great scholar and highly educated . His poorvashrama name is Pt.Anantacharya Gudi . He was engineer at Bangalore city . He was a highly educated in many degrees in his poorvashrama , attained great success in loukika jnana as well dharmika .In his poorvashrama HH is holder of degrees like LLB , MBA , BE. This shows his excellence and brilliance. Once Shri Raghupriya Teertha , the former pontiff of Shri kudali math visited the haveri and has done vaikuntha rama devara pooja in Gudi acharya's house. At that time Anantacharyaru attracted by Madhwa philosophy and left his job and joined shrimatha in 1990 . And until he completes his education of brahma jnana & madhwa shastras he never noticed days and nights . Finally he completed his studies of madhwa philosophy. Then raghupriya teertha recommended Anantacharya's name for Uttaradhikari of kudali math in front of his guru shrimaduttaradi mathadheesha satyapramoda teertha . SHri satyapramoda teertha said yes. Anantacharya became Shri Raghuvijaya teertha in Tapobhumi of Akshobhya teertha Kudali . From that day He is working for rise shri matha.He served his gurugalu like a child .Now Kudali matha is well known almost all Madhwas . Yesterday blessed by Raghuvijaya teertha . When Vaikuntha ramadevara pooja was in our home Shrigalu discussed this one with us so remembered those movements and wrote here :).

Friday, 16 November 2012

 ಶ್ರೀ 1008 ಸತ್ಯಾತ್ಮ ತೀರ್ಥರೊಂದಿಗೆ ಅವರ ಪೂಜ್ಯ ಗುರುಗಳಾದ ಶ್ರೀ 1008 ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದರು. 

ಪರಮಪೂಜ್ಯ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವದಂದು ಅವರ ಚರ್ಮ ಶ್ಲೋಕವನ್ನು ಪಠಿಸಿ ಕೃತಾರ್ಥರಾಗೋಣ.

Sunday, 28 October 2012

ಮಿತಭಾಷೀ ಮ೦ತ್ರಾಲಯ ಮುನಿವರೇಣ್ಯರು
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಅಡಕವಾದ ಶ್ರೀಮಧ್ವರಾಮಾಯಣದಲ್ಲಿ "ಸು೦ದರಕಾ೦ಡ" ದ ಸ೦ಗ್ರಹವನ್ನು ಶ್ರೀಮಧ್ವಾಚಾರ್ಯರು 50 ಶ್ಲೋಕಗಳಲ್ಲಿ ಸ೦ಗ್ರಹಿಸಿದ ಏಳನೇ ಅಧ್ಯಾಯವು ಪರಮಮ೦ಗಳಕರವೆ೦ದು ಪ್ರಸಿದ್ಧಿ ಇದೆ. ಈ ಏಳನೇ ಅಧ್ಯಾಯವನ್ನು ಪಠಿಸುತ್ತ ಶ್ರೀಮುಖ್ಯಪ್ರಾಣದೇವರಿಗೆ ಅಭಿಷೇಕ ಮಾಡುವ ಸ೦ಪ್ರದಾಯವು ಇ೦ದೂ ರೂಢಿಯಲ್ಲಿದೆ.
ಇ೦ಥ 50 ಶ್ಲೋಕಗಳ ಸಾರಸ೦ಗ್ರಹವನ್ನು (ಶ್ರೀರಾಯರು) ಶ್ರೀಭಾವಸ೦ಗ್ರಹಕಾರರು ಒ೦ದೇ ಶ್ಲೋಕದಲ್ಲಿ ಸ೦ಕ್ಷಿಪ್ತವಾಗಿ ವರ್ಣಿಸಿದ್ದಾರೆ. ಸ್ಥಾಲೀಪುಲಾಕ ನ್ಯಾಯದಿ೦ದ ಶ್ರೀರಾಯರ ಸ೦ಗ್ರಹ ಚಾತುರ್ಯವನ್ನು ಭಾವುಕರು ತಿಳಿಯಬಹುದಾಗಿದೆ.
"ಯಸ್ಯ ಶ್ರೀಹನುಮಾನ್ ಅನುಗ್ರಹಬಲಾತ್ ತೀರ್ಣಾ೦ಬುದ್ಧಿರ್ಲೀಲಯಾ |
ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦ ಭ೦ಕ್ತ್ವಾ ವನ೦ ರಾಕ್ಷಸಾನ್ ||
ಅಕ್ಷಾದೀನ್ ವಿನಿಹತ್ಯ ವೀಕ್ಷ್ಯ ದಶಕ೦, ದಗ್ಧ್ವಾ ಪುರೀ೦ ತಾ೦ ಪುನಃ |
ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್ ತ೦ ರಾಮಚ೦ದ್ರ೦ ಭಜೇ ||
ಯಸ್ಯ ಶ್ರೀಹನುಮಾನ್..............ರ್ಲೀಲಯಾ " ಎ೦ಬ ಒ೦ದೇ ವಾಕ್ಯದಿ೦ದ "ರಾಮಾಯ ಶಾಶ್ವತಸುವಿಸ್ತೃತ.....ವಿವೇಶ ಲ೦ಕಾ೦" ಶ್ಲೋಕಗಳ ಸಾರವನ್ನು ಕಾಣಬಹುದು.
ಷಡ್ಗುಣೈಶ್ವರ್ಯಶಾಲಿಯಾದ, ಬಲವೀರ್ಯಗಳ ಸಾಗರನಾದ ಶ್ರೀರಾಮನನ್ನು ಶ್ರೀಹನುಮ೦ತನು ನಮಿಸಿದನು. ಮಹೇ೦ದ್ರಪರ್ವತದಿ೦ದ ಹಾರಿದ ಅರ್ಭಟಕ್ಕೆ ಸಮುದ್ರತೀರದ ಮರಗಳು ಸಮುದ್ರದಲ್ಲಿರುವ ಜಲಚರ ಪ್ರಾಣಿಗಳು ಬಲಾತ್ಕಾರದಿ೦ದ ಹನುಮ೦ತನನ್ನು ಹಿ೦ಬಾಲಿಸಿದವು. ಮಾರ್ಗದಲ್ಲಿ ಮೈನಾಕ ಪರ್ವತಾಭಿಮಾನಿಯು ಶ್ರೀಹನುಮ೦ತದೇವರಿಗೆ ವಿಶ್ರಾ೦ತಿ ಪಡೆಯಲು ವಿಜ್ಞಾಪಿಸಿದ್ದು, ಅವನ ಭಾವನೆ ಮನ್ನಿಸಿ ವಿಶ್ರಾ೦ತಿ ಪಡೆಯದೆ ಅವನನ್ನು ಅಪ್ಪಿ ಅನುಗ್ರಹಿಸಿದ್ದು, ಸುರಸಾ ಎ೦ಬ ಕನ್ನಿಕೆಯನ್ನು ಸುರಕ್ಷಿತವಾಗಿ ನು೦ಗಿ ಬಿಟ್ಟು ತನ್ನ ಬಲವನ್ನು ಪರೀಕ್ಷಿಸಿದ ದೇವತೆಗಳಿ೦ದ ಸನ್ಮಾನಿತನಾದದ್ದು. ಮು೦ದೆ ಬ್ರಹ್ಮದೇವರ ವರ ಪಡೆದ ಅಕ್ಷಕುಮಾರನನ್ನು ಸ೦ಹರಿಸಿ ಲ೦ಕಾಭಿಮಾನಿಯಾದ ಲ೦ಕೇಶ್ವರನನ್ನು ಜಯಿಸಿ ಲ೦ಕಾಪಟ್ಟಣವನ್ನು ಪ್ರವೇಶ ಮಾಡಿದ ವಿಷಯವನ್ನು ಶ್ರೀಗುರುವರೇಣ್ಯರು ಒ೦ದೇ ವಾಕ್ಯದಲ್ಲಿ ಸ೦ಗ್ರಹಿಸಿದ್ದಾರೆ. "ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦" ಎ೦ಬ ಪದಾವಳಿಯಿ೦ದ. "ಮಾರ್ಗಮಾಣೋ ಬಹಿಶ್ಚಾ೦ತ.....ದದರ್ಶ ಶಿ೦ಶುಪಾವೃಕ್ಷಮುಲಸ್ಥಿತರಮಾಕೃತಿಮ್" ಎ೦ಬ ಶ್ರೀಮದಾಚಾರ್ಯರ ಅಭಿಪ್ರಾಯವನ್ನು ಕೇವಲ ನಾಲ್ಕು ಪದಗಳಿ೦ದ ಪ್ರಭುಗಳು "ನಿಶಾಮ್ಯ" ಎ೦ಬ ಪದದಿ೦ದ ಶ್ರೀರಾಮನ ಸ೦ದೇಶ ಮತ್ತು ಮುದ್ರಿಕೆಯ ಅ೦ಗುಲೀಯಕವನ್ನು ಕೊಟ್ಟು ಚೂಡಾಮಣಿಯನ್ನು ಸ೦ಗ್ರಹಿಸಿದನು. ರಾಮದೂತನು ತನ್ನ ಆಗಮನ ಪ್ರಕಟಿಸಲು ಇಚ್ಚಿಸಿದನು. (ಆತ್ಮಾವಿಷ್ಕರಣೇ ಚಿತ್ತ೦ ಚಕ್ರೇ ಮತಿಮತಾ೦ ವರಃ) ಎ೦ಬ ವಿಷಯವನ್ನು ಶೇಷಪೂರ್ತಿಯಾಗಿಟ್ಟುಕೊಳ್ಳಬೇಕು. "ಭು೦ಕ್ತ್ವಾ ವನ೦" ಎ೦ಬ ಪದದಿ೦ದ "ಅಥ ವನಮಖಿಲ೦ ತತ್ ರಾವಣಸ್ಯಾವಲು೦ಪ್ಯ ಕ್ಷಿತಿರುಹಮಿಮಮೇಕ೦ ವರ್ಜಯಿತ್ವಾಽಶು ವೀರಃ" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಸ೦ಗ್ರಹಿಸಿದ್ದಾರೆ೦ದು ತಿಳಿಯುವುದು. "ಅಕ್ಷಾದೀನ್ ರಾಕ್ಷಸಾನ್ ವಿನಿಹತ್ಯ" ಎ೦ಬ ಪದಗಳಿ೦ದ ರಾವಣನು ಹನುಮ೦ತನನ್ನು ನಿಗ್ರಹಿಸಲು ಕಳಿಸಿದ 80 ಕೋಟಿ ಸೇನಾಪತಿಗಳನ್ನು, 80 ಸಾವಿರ ಸೇನಾಗ್ರೇಸರನ್ನೂ, 7 ಮ೦ತ್ರಿಪುತ್ರರನ್ನು, ರಾವಣನ ಕಿರಿಯ ಮಗನಾದ ಅಕ್ಷಕುಮಾರನನ್ನು ಸ೦ಹರಿಸಿದ ಶ್ರೀಹನುಮ೦ತದೇವರ ಪರಾಕ್ರಮವನ್ನು ಶ್ರೀಮತ್ಪರಿಮಳಾಚಾರ್ಯರು ಸೂಚಿಸಿದ್ದಾರೆ. "ವೀಕ್ಷ್ಯ ದಶಕ೦" ಎ೦ಬ ಪದಗಳಿ೦ದ ಇ೦ದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ವಶರಾದ೦ತೆ ನಟಿಸಿ ರಾವಣನನ್ನು ಸಭೆಯಲ್ಲಿ ಕ೦ಡು ಅವನು ಕೇಳಿದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಧೈರ್ಯದಿ೦ದ ಉತ್ತರಿಸಿದ ಶ್ರೀಹನುಮ೦ತದೇವರ ಮಹಿಮೆಯನ್ನು ಶ್ರೀರಾಯರು ಸೂಚಿಸಿದ್ದಾರೆ. "ದಗ್ಧ್ವಾ ಪುರೀ೦ ತಾ೦" ಎ೦ಬ ಪದಗಳಿ೦ದ ಶ್ರೀಗುರುವರೇಣ್ಯರು, ಅವಮಾನಿತ ರಾವಣನು ಶ್ರೀಹನುಮ೦ತದೇವರ ಬಾಲಕ್ಕೆ ಹಚ್ಚಿದ ಬೆ೦ಕಿಯಿ೦ದ ರಾವಣನನ್ನು ಲೆಕ್ಕಿಸದೆ ಸಮಸ್ತ ಲ೦ಕಾಪಟ್ಟಣವನ್ನು ಸುಟ್ಟ "ದದಾಹ ಚಾಖಿಲಾ೦ ಪುರೀ೦ ಸ್ವಪುಚ್ಛಗೇನ ವಹ್ನಿನಾ" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಭಾವಸ೦ಗ್ರಹಕಾರರು ಸ೦ಗ್ರಹಿಸಿದ್ದಾರೆ.
"ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್" ಎ೦ಬ ಪದಾವಳಿಯಿ೦ದ "ರಾಮ೦ ಸುರೇಶ್ವರಮಗಣ್ಯಗುಣಾಭಿರಾಮ೦ ಸ೦ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ | ಪ್ರಣತಿಮಸ್ಯ ಚಕಾರ ಭಕ್ತ್ಯಾ ||" ಮತ್ತು "ರಾಮೋಽಪಿ........ಪರಮಾಭಿತುಷ್ಟಃ ||" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಶ್ರೀಗುರುರಾಜರು ಸು೦ದರವಾಗಿ ಸ೦ಗ್ರಹಿಸಿದ್ದಾರೆ. ವಿಸ್ತರಿಸಿ ವಿವರಿಸುವುದಕ್ಕಿ೦ತ, ವಿಸ್ತಾರವನ್ನು ಸ೦ಕ್ಷೇಪಿಸಿ ಹೇಳುವ ಕಷ್ಟಕರ ಕಾರ್ಯವನ್ನು ಶ್ರೀಭಾವಸ೦ಗ್ರಹಕಾರರು ಸು೦ದರವಾಗಿ ಮಾಡಿದ್ದನ್ನು ಗಮನಿಸಿದಾಗ ಶ್ರೀಗುರುವರೇಣ್ಯರ ಪಾ೦ಡಿತ್ಯ ಕೌಶಲ್ಯಗಳು ಸ್ಪಷ್ಟವಾಗಿ ಕ೦ಡುಬರುತ್ತವೆ.
"ಗುರುರಾಘವೇ೦ದ್ರವಾಗ್ದೇವತಾಸರಿದಮು೦ ವಿಮಲೀಕರೋತು"

|| ಶ್ರೀರಾಘವೇ೦ದ್ರತೀರ್ಥಗುರ್ವ೦ತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಸ೦ಗ್ರಹ: ಪ. ಕೃಷ್ಣಮೂರ್ತಿ ಕಲಕೋಟಿ, ಧಾರವಾಡ

Sundara kaanda in one sloka (extracted from “Srimanmahaabhaaratha Taatparya nirnaya bhaavasangraha” By Sri Raaghavendra Swaamy contains totally 5202 verses in 32 chapters and this is the seventh sloka).
Raghavendra Swami wrote just 4 lines which is equivalent to the whole Sundarakaandam which comprises of 2885 verses spread in 68 chapters.

“yesya shree hanumaan anugraha balaath – theerNaam – buDhirleelayaa
lankaam praapya nishaamya raamadhayithaam Bhangktvaa vanam raakShasaan!
akShaadheen vinihatya veekShya dhashakam dhagDhvaa pureem thaam punaha
theerNaabDhihi kapiBhiryutho yamanamath tham raamachandram Bhaje !!”

By the strength of whose grace, Sri Hanuman play-fully crossed the sea, Reached Lanka, met Sita Devi,Destroyed the garden called Ashoka,
Killed Akshakumar and other rakshasas,
Met Ravana, burnt down the city of lanka,
Crossed the sea again, returned with the
Group of monkeys which had stayed behind at the
Mountain of Mahendra and paid obeisance unto the
lotus-like feet?
I worship Sri Ramachandra of above repute.

Source: Madhwasaints.wordpress.com

Saturday, 27 October 2012

MADHWA MATHAS AND THEIR DEITES

source : http://www.facebook.com/pages/Sri-Madhwacharya/146259025401528

The 24 Mathas (Along With Their Presiding Deites) Of The Dvaita Order,A System Established By Jagadguru Sriman Madhwacharya In The 13th Century. The Kannada Madhwa Mathas

1. Mantralaya Sri Raghavendra Swami Matha (ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ) -> Sri Moola Rama

2. Sri Uttaradi Matha (ಶ್ರೀ ಉತ್ತರಾದಿ ಮಠ) -> Sri Digvijaya Rama

3. Mulbagalu Sri Sripadaraja Matha (ಮುಲಬಾಗಿಲು ಶ್ರೀ ಶ್ರೀಪಾದರಾಜ ಮಠ) ->Sri Gopinatha Vittala

4. Sosale Sri Vyasaraja Matha (ಸೋಸಲೆ ಶ್ರೀ ವ್ಯಾಸರಾಜ ಮಠ) -> Gopala Krishna

5. Sagarakatte Sri Vyasaraja Matha (ಸಾಗರಕಟ್ಟೆ ಶ್ರೀ ವ್ಯಾಸರಾಜ ಮಠ) -> Sri Krishna

6. Kundapura Sri Vyasaraja Matha (ಕುಂದಾಪುರ ಶ್ರೀ ವ್ಯಾಸರಾಜ ಮಠ) -> Sri Vittala

7. Sri Madhva Kanva Matha (ಶ್ರೀ ಮದ್ವ ಕಣ್ವ ಮಠ) -> Sri Vittala Krishna And Venu Gopala Krishna

8. Tambehalli Sri Madhava Tirtha Matha (ತಾಮ್ಬೇಹಳ್ಳಿ ಶ್ರೀ ಮದ್ವ ತೀರ್ಥ ಮಠ) -> Sri Veera Rama

9. Kudli Sri Arya Akshobhya Tirtha Matha (ಕೂಡ್ಲಿ ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ) -> Sri Vaikunta Rama

10. Baligaru Sri Arya Akshobhya Tirtha Matha (ಬಳಿಗಾರು ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ) -> Sri Rama

11. Sri Bhimanakatte Matha (ಶ್ರೀ ಭೀಮನ ಕಟ್ಟೆ ಮಠ) -> Sri Rama

The Madwa Mathas Belonging To Gowd Saraswath Brahman Samaj – Konkani Mathas

12. Shree Kashi Math Samsthan (ಶ್ರೀ ಕಾಶಿ ಮಠ ಸಂಸ್ಥಾನ) – Sri Vedavyasa Raghupathi Narasimha

13. Shri Partagali Jeevottam Mutt (ಶ್ರೀ ಪರ್ತ್ಹೊಗಲಿ ಜೀವೋತ್ತಮ ಮಠ) – Sri Ramdev Veer Vithal

The Ashta Mathas Of Udupi – Tuluva Region Mathas :

14. Palimaru Matha (ಶ್ರೀ ಪಲಿಮಾರ್ ಮಠ)-> Sri Rama With Sita Lakshmana

15. Sri Adamaru Matha (ಶ್ರೀ ಅದಮಾರ್ ಮಠ) -> Chaturbhuja Kaliya Mardhana Krishna

16. Sri Krishnapura Matha (ಶ್ರೀ ಕೃಷ್ಣಾಪುರ ಮಠ) -> Dvibhuja Kaliya Mardhana Krishna

17. Sri Puttige Matha (ಶ್ರೀ ಪುತ್ತಿಗೆ ಮಠ) -> Sri Vittala

18. Sri Shirooru Matha (ಶ್ರೀ ಶಿರೂರ್ ಮಠ) -> Sri Vittala

19. Sode Sri Vadiraja Matha (ಸೋದೆ ಶ್ರೀ ವಾದಿರಾಜ ಮಠ)-> Sri Bhu Varaha

20. Sri Kaniyooru Matha (ಶ್ರೀ ಕಾಣಿಯೂರು ಮಠ) -> Sri Narasimha

21. Pejavara Sri Adokshaja Tirtha Matha (ಪೇಜಾವರ ಶ್ರೀ ಅಕ್ಷೋಭ್ಯ ತೀರ್ಥ ಮಠ) -> Sri Vittala

The Other Madhwa Mathas Of Tuluva Region

22. Sri Bhandarakeri Matha (ಶ್ರೀ ಬಂಡಾರಕೇರಿ ಮಠ) -> Sita Rama With Lakshmana

23. Sri Subramanya Matha (ಶ್ರೀ ಸುಬ್ರಮಣ್ಯ ಮಠ) -> Sri Sampusta Narasimha

24. Sri Chitrapura Matha (ಶ್ರೀ ಚಿತ್ರಾಪುರ ಮಠ) -> Sri Rukmini - Satyabhama Sahita Sri Krishna.

Wednesday, 24 October 2012

श्रीमद्राभिरामामितमहिमपदप्रौढपाथोरुहाली
कृष्णानिष्टामितक्ष्मापरिवृढपटलीपाटनैक प्रवीणः |
वेदव्यासोपदेशाधिकसमधिगतानन्तवेदान्तभावो 
भूयत्कीशावनीशव्रतितनुरनिलः श्रेयसे भूयसे नः  || 

ಶ್ರೀಮದ್ರಾಮಾಭಿರಾಮಾಮಿತಮಹಿಮಪದಪ್ರೌಢಪಾಥೋರುಹಾಲಿ:
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವ್ರುಢಪಟಲೀಪಾಟನಿಕಪ್ರವೀಣಃ |
ವೇದವ್ಯಾಸೋಪದೇಶಾಧಿಕಸಮಧಿಗತಾನಂತವೇದಾಂತಭಾವೋ 
ಭೂಯತ್ಕೀಷಾವನೀಶವ್ರುತಿತನುರನಿಲಃ ಶ್ರೇಯಸೇ ಭೂಯಸೇ ನಃ ||

ಶ್ರೀ ವಾದೀಂದ್ರರು ತಮ್ಮ ಗುರುಗುಣ ಸ್ತವನದಲ್ಲಿ ಹೇಳಿರುವ ಅಮೃತವಚನ-- 
ಕಾಂತಿಯುತವಾದ ಶ್ರೀರಾಮಚಂದ್ರನ ಪಾದಕಮಲಗಳಲ್ಲಿ ಭ್ರಮರದಂತಿರುವ , ಶ್ರೀಕೃಷ್ಣನ ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶ ಮಾಡುವಲ್ಲಿ ಅತ್ಯಂತ ಸಮರ್ಥನಾದ , ಶ್ರೀ ವೇದವ್ಯಾಸರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ಮತ್ತು ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾ ಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ಶ್ರೀ ವಾಯ್ವವತಾರಿಗಳಾದ ಶ್ರೀ ಹನುಮ - ಭೀಮ - ಮಧ್ವ ರೂಪಗಳಿಂದ ಅವತರಿಸಿದ ಮುಖ್ಯಪ್ರಾಣ ನಮಗೆ ಮೊಕ್ಷಾದಿಗಳನ್ನು ಕರುಣಿಸಲಿ . 

ಇದನ್ನು ನಾವು ಅರ್ಥ ಸಮೇತ ಶ್ಲೋಕವನ್ನು ಪಠಿಸಿ ಹರಿ ವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ .

Tuesday, 23 October 2012

ಶ್ರೀ 1008 ಶ್ರೀ ಸುಕೃತೀಂದ್ರ ತೀರ್ಥರ 100 ನೆ ಆರಾಧನ

ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ 1008 ಶ್ರೀ ಸುಕೃತೀಂದ್ರ ತೀರ್ಥರ 100 ನೆ ಆರಾಧನ ಮೊಹೋತ್ಸವ ಇಂದಿನಿಂದ ನಂಜನಗೂಡಿನಲ್ಲಿ ಶ್ರೀ ಸುಯತೀಂದ್ರ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಲಿದೆ . ಶ್ರೀ ಸುಕೃತೀಂದ್ರ ತೀರ್ಥರ ಬಗೆಗೆಗಿನ ಪರಿಚಯಾತ್ಮಕ ಲೇಖನ ಇದು .
     
         सुविद्वत्कमलोल्लास मार्ताण्ड सुगुणाकरम् |
          सच्छास्त्रासक्त हृदयं सुकृतीन्द्र गुरुं भजे ||

        ಸುವಿದ್ವತ್ಕಮಲೋಲ್ಲಾಸ ಮಾರ್ತಾಂಡ ಸುಗುಣಾಕರಂ |
        ಸಚ್ಚಾಸ್ತ್ರಾಸಕ್ತ ಹೃದಯಂ ಸುಕೃತೀಂದ್ರ ಗುರುಂ ಭಜೆ ||


* ಆಶ್ರಮ ನಾಮ - ಶ್ರೀ 1008 ಶ್ರೀ  ಸುಕೃತೀಂದ್ರ ತೀರ್ಥರು
 name after taking sanyasa  - shri Sukruteendra teertharu 
*ಕಾಲ - 1903-1912
Period : 1903 - 1912
*ಪೂರ್ವಾಶ್ರಮ ನಾಮ  - ವೇಣುಗೊಪಾಲಾಚಾರ್ಯರು
  name before sanyasa Venugopalacharyaru 
*ಆಶ್ರಮ ಗುರುಗಳು - ಶ್ರೀ ಸುಪ್ರಜ್ಞೆಂದ್ರ ತೀರ್ಥರು
 ashrama guru -Shri Suprajnendra teertharu 
*ವಿದ್ಯಾಗುರುಗಳು- ಶ್ರೀ ಹುಲಿ ಹನುಮಂತಾಚಾರ್ಯ  
vidyaaguru- shri Huli Hanumantacharya  

*ವೃಂದಾವನ ಸ್ಥಳ - ನಂಜನಗೂಡು 
Vrindavana Situated at : Nanjangud



ಶ್ರೀ ಸುಕೃತೀಂದ್ರ ತೀರ್ಥರು  ಪೀಠ ವಿರಾಜಮಾನರಾದ ಕಾಲ ಸುಮಾರು 1903 ರಿಂದ 1912 . ಸುಮಾರು 9 ವರ್ಷಗಳ ಕಾಲ ಪೀಠಾಧಿಪತ್ಯ ವಹಿಸಿದ್ದರು . ರಾಯರ ಕೃಪೆಗೆ ಪಾತ್ರರಾಗಿದ್ದವರು . ಇವರ ಪೂರ್ವಾಶ್ರಮದ ಹೆಸರು ವೇಣುಗೊಪಾಲಾಚಾರ್ಯರು . ಇವರ ವಿದ್ಯಾಗುರುಗಳು ಶ್ರೀ ಹುಲಿ ಹನುಮಂತಾಚಾರ್ಯರು . 
ವಿಶೇಷತೆಗಳು - 
* ಶ್ರೀಮನ್ಮಧ್ವಾಚರ್ಯರಿಗೆ ಬಹಳ ಪ್ರೀತಿಪಾತ್ರರು . ಶ್ರೀಮನ್ಮಧ್ವಜಯಂತಿಯ ದಿನವೆ ಇವರ ಪುಣ್ಯ ದಿನ.. ಇದು ಆಚಾರ್ಯರ   
   ಅನುಗ್ರಹ.
* ವಿದ್ವತ್ ಪ್ರೌಢಿಮೆ , ಸದಾಚಾರ ಸಂಪನ್ನತೆ , ಸಕಲ ಶಾಸ್ತ್ರಪಾರಂಗತ 
* ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಸಂತತಿಯಲ್ಲಿ ಜ್ಯೇಷ್ಠರು 
* ಶ್ರೀ ಗುರುರಾಜರ ಉಭಯ ವಂಶಾಬ್ಡಿ ಚಂದ್ರಮರು 
* ಪೂರ್ವಾಶ್ರಮದಿಂದಲೇ ಅಪಾರ ಪಾಂಡಿತ್ಯ , ಪವಾಡ ಪ್ರದರ್ಶನ , ಪಾಠ ಪ್ರವಚನ 
* ಟಿಪ್ಪಣಿಗಳನ್ನೂ ನೋಡದೆಯೇ ಪುಸ್ತಕಾನಪೆಕ್ಷಿತವಾಗಿ ಶಾಸ್ತ್ರ ಪಂಕ್ತಿಗಳು , ಸರ್ವಮೂಲ ಪ್ರಮೆಯಗಳು ಗಂಗಾ ಪ್ರವಾಹದಂತೆ ಹೇಳುತ್ತಿದ್ದರು .
* ಅಲ್ಪ ಜೀವಿತದಲ್ಲಿಯೇ ಅಪಾರ ಸಾಧನೆ , ವಿರಕ್ತಿ ವೈರಾಗ್ಯ ಸಂಪಾದನೆ 
* ಶ್ರೀಮುಷ್ಣಂ ಗೋಪಾಲಚಾರ್ಯ , ಸುಬ್ಬಾಚಾರ್ಯ , ಮಯಾವರ ಕೃಷ್ಣಾಚಾರ್ಯ ಮುಂತಾದ ವಾದಿ  ದಿಗ್ವಿಜಯ 
*ವಿಚಿತ್ರ ಅವಸಾನ . " ಲೌಕಿಕ ಸಂಪರ್ಕ ಸಾಕು " ಹತ್ತಿರವಿದ್ದ ಭಕ್ತರಿಗೆ " ಇಗೋ ನೋಡಿ ಪ್ರಾಣವಾಯು ನಾಭಿಯನ್ನು ಬಿಟ್ಟು ಊರ್ಧ್ವಭಾಗಕ್ಕೆ ಬಂದರು " ಎಂದು ಶ್ವಾಸಗತಿಯನ್ನು ಕ್ರಮವಾಗಿ ಹೇಳಿ ನಾರಾಯಣ ಉಪಾಸ್ಯ ಮೂರ್ತಿ ಮೂಲ ರಾಮಚಂದ್ರ ವೇದವ್ಯಾಸ ರ  ನಾಮ ಸಂಕೀರ್ತನೆ ಮಾಡುತ್ತಾ ಇಹಲೋಕ ತ್ಯಜಿಸಿದರು . 
*ಶ್ರೀ ಸುಶೀಲೆಂದ್ರ ತೀರ್ಥ( ರಿತ್ತಿ ರಾಯರೆಂದೇ ಹೆಸರಾದ ರಾಯರ ಮಠದ ಶ್ರೀ ಧೀರೇಂದ್ರ ತೀರ್ಥರ ಪಕ್ಕದಲ್ಲಿ ಸ್ಥಾನಪಡೆದ ಮಹಾನುಭಾವರು )ರಂತಹ ಪ್ರಕಾಂಡ ಪಂಡಿತರನ್ನು ರಾಯರ ಮಠಕ್ಕೆ ಕೊಟ್ಟು , ಆಶ್ರಮ ಪ್ರದಾನ ಮಾಡಿ ಯತಿಗಳನ್ನಾಗಿಸಿದ್ದು . 
           ENGLISH VERSION -
Shri Sukruteendra is a famous pontiff of shri Raghavendra swami matha . He studies all shastras under Shri Huli Hanumantacharya . His poorvaashrama name is Venugopalacharya . He was a great follower of Shri Rahavendra teertharu . 
SPECIALTY OF SHRI GALU -  
* His aradhana lies on the day of 'MADHWA JAYANTI ' . It shows that how much SHri man Madhwacharya blessed his child i.e Shri Sukruteendra teertharu .
*Venugopalacharya’s majestic personality, piety and austerity
added greater glory to the excellence of his scholarship.

*Venugopalacharya who came in the poorvashrama eldest lineage of Sri Gururaja was the eldest son.The swamiji’s unmatched brilliance arising from performance of regular poojas, imparting of knowledge in his poorvashrama itself grew more effulgent. And he was UBHAYA VAMSHABDHI CHANDRAMA of rayara parampare .
* It was a virtual feast for the scholars to listen the swamiji teach.
* And in  his tour of Tamilnadu, scholars like Srimushnam Gopalakrishnacharya, Subbarayacharya, Krishnacharya of Mayavara were amazed to hear
swamiji’s lecture.

*In his less life span he achieved a lot . 
*He was giving pravachana and teaching Sarvamoola granthas and their prameyas without refering any books or notes . That shows his ability .
*He had miraculous end . He expalined his shishyas how pranavayu is moving out of his body . Beckoning
some disciples nearby he said, “Look here. Pranadeva has left the navel and has moved upwards”. Thus narrating the different stages of the breath as it moved upwards and chanting the name of Lord Narayana, the swamiji departed from the world. This amply demonstrates the transcendency of his ascetic powers and
profoundly premonitive vision.


Monday, 22 October 2012

ಭಗವಾನ್ ವೇದವ್ಯಾಸರು ಮಾಡಿರುವ ಅಷ್ಟಾದಶ ಮಹಾ ಪುರಾನಗಳು ಎಲ್ಲರಿಗು ಗೊತ್ತಿರುವದೇ . ಅವುಗಳಲ್ಲಿ ಅನೇಕ ದೇವತೆಗಳ ಮಹಿಮೆಯನ್ನು ವರ್ಣಿಸುವ ಘಟನೆಗಳ ಚಿತ್ರಣ ಬರುವದು . ಅವುಗಳಲ್ಲಿ ಅಂದರೆ ಪುರಾಣಗಳಲ್ಲಿ 3 ವಿಧಗಳು 1) ಸಾತ್ವಿಕ 2) ರಾಜಸ 3) ತಾಮಸ ಎಂದು . ಇವುಗಳನ್ನು ವೇದಗಳನ್ನು ಅಧ್ಯಯನ ಮಾಡಿ ವೇದಗಳನ್ನೇ 4 ವಿಧಗಳಾಗಿ ವಿಂಗಡಣೆ ಮಾಡಿದ ಸಾಕ್ಷಾತ್ ವಿಷ್ಣುರೂಪಿ ವೇದವ್ಯಾಸರು ವಿಂಗಡಿಸಿದ್ದು . ಅವುಗಳಲ್ಲಿರುವ ಎಲ್ಲ ವಿಚಾರಗಳು ವೇದದಲ್ಲಿ ಹೇಳಿದ್ದು ಎಂದು ವೇದವ್ಯಾಸರು ಅನೇಕ ಸಾತ್ವಿಕ ಪುರಾಣಗಳಲ್ಲಿ ಪ್ರಮಾಣ ನೀಡಿದ್ದಾರೆ .

1) " ಇತಿಹಾಸ ಪುರಾಣಾಭ್ಯಾಂ ವೇದಸಮುಪಬೃಂಹವೇತ್ || " ( ಇತಿ ವಾಯುಪುರಾಣೆ ಉಕ್ತಂ )
2) " ವೇದಾಃ ಪ್ರತಿಷ್ಟಿತಾಃ ಸರ್ವೇ ಪುರಾಣೇ ನಾತ್ರ ಸಂಶಯಃ || " ( ಇತಿ ಸ್ಕಂದ ಪುರಾಣೇ ಉಕ್ತಂ )
3) " ಧನ್ಯಂ ಯಶಸ್ಯಮಾಯುಶ್ಯಂ ಪುಣ್ಯಂ ವೇದೈಶ್ಚ ಸಂಹಿತಂ || " ( ಇತಿ ಬ್ರಹ್ಮಾಂಡ ಪುರಾಣೇ )
4) " ಆತ್ಮಾ ಪುರಾಣಂ ವೇದಾನಾಂ || " ( ಇತಿ ನಾರದೀಯ ಪುರಾನೇ ಉಕ್ತಂ )
5) "ಪುರಾಣಂ ಪಂಚಮೋ ವೇದಃ || " ( ಇತಿ ಪದ್ಮ ಪುರಾಣೇ ) 

ಹೀಗೆ " ನಿಸ್ತಾರಾಯ ತು ಲೋಕಾನಂ ಸ್ವಯಂ ನಾರಾಯಣಃ ಪ್ರಭು: | ವ್ಯಾಸರೂಪೆಣ ಕೃತವಾನ್ ಪುರಾಣಾನಿ ಮಹೀತಲೇ " ಎಂದು ಹೇಳಿಕೊಂಡಿರುವ ವ್ಯಾಸರೇ ಹೇಳಿದ್ದಾರೆ . ಆದ್ದರಿಂದ ಸಾತ್ವಿಕ ಪುರಾಣಗಳು ಸಾರುವ ವಿಷ್ಣುಸರ್ವೊತ್ತಮತ್ವ ಸಾಧಿಸಿತು . ಶ್ರೀ ಮನ್ಮಧ್ವಾಚಾರ್ಯರು ಹೇಳಿದ್ದು ಇದನ್ನೇ . ಹರಿಃ  ಸರ್ವೋತ್ತಮಃ  ವಾಯು ಜೀವೊತ್ತಮಃ |
ಆದಾರಿಂದ ಸಾಕ್ಷಾತ್ ಪರಮಾತ್ಮನ ಅವತಾರ ವ್ಯಾಸರ ಉಕ್ತಿಯಂತೆ ಪುರಾಣಗಳನ್ನು ವೇದಗಳ ಸಾರ ಅಥವಾ ವೇದಗಳ ವರ್ಣನೆ ಎಂದು ತಿಳಿಯಬಹುದು .

ಪುರಾಣಪ್ರಪಂಚ - ಪುರಾಣಗಳಲ್ಲಿ ವಿಂಗಡಣೆ (ಪಾದ್ಮಪುರಾಣವಚನಾನಿ)


ಶ್ರೀ ಭಾಗವನ್ ವೆದವ್ಯಾಸರು ಮಹಾಪುರಾಣಗಳನ್ನು ಸಾತ್ವಿಕ-ರಾಜಸ-ತಾಮಸ ಎಂದು ವಿಂಗಡಣೆ ಮಾಡಿದ್ದಾರೋ ಅದೇ ರೀತಿ ಶಾಸ್ತ್ರಗಳಲ್ಲಿಯೂ ಮೂರು ವಿಧಗಳು ಇವೆ ಎಂದು "ಸಾತ್ವಿಕ ಪುರಾಣವಾದ" ಪಾದ್ಮ ಪುರಾಣದಲ್ಲಿ ಹೇಳಿದೆ . 

*ಸಾತ್ವಿಕ ಶಾಸ್ತ್ರ -
                     ಶಾಸ್ತ್ರಾಣ್ಯಪಿಚಸರ್ವಾಣಿ ಸಾತ್ವಿಕಾನಿ ಮತಾನಿ ವೈ |
                     ಯಾನಿ ಸಸತ್ಯವರಂ ವಿಷ್ಣುಂ ವದಂತಿ ಪರಮೆಶ್ವರಂ 
                      ತಾನಿ ಶಾಸ್ತ್ರಾಣಿ ಸರ್ವಾಣಿ ಸಾತ್ವಿಕಾನಿ ಮತಾನಿ ವೈ 
*ರಾಜಸ ಶಾಸ್ತ್ರ - 
                       ಪ್ರಜಾಪತಿಂ ಕ್ರುಶಾನುಂ ಚ ತಥಾ ದೇವಿ ಸರಸ್ವತಿಂ |
                       ಪರತ್ವೇನ ವದಚ್ಚಾಸ್ತ್ರಂ ರಾಜಸಂ ಪರಿಚಕ್ಷತೆ || 
 *ತಾಮಸ ಶಾಸ್ತ್ರ- 
                     ಯಚ್ಚಾಸ್ರಂ ಲಿಂಗಪಾರಮ್ಯಂ ವಾಮದೆವಮುಮಾಪತಿಂ |
                     ತಮಃ ಪ್ರವರ್ತಕಂ ವಕ್ತಿ ತತ್ತಾಮಸಮುದಾಹೃತಂ || 
                              - ಇತಿ ಪಾದ್ಮಪುರಾಣವಚನಾನಿ 
                      
ಯಾವ ಶಾಸ್ತ್ರಗಳು ಶ್ರೀಮನ್ನಾರಾಯಣನನ್ನು ಸರ್ವೋತ್ತಮ ಎಂದು ಸಾರುತ್ತವೆಯೋ ಅವು ಸಾತ್ವಿಕ ಶಾಸ್ತ್ರಗಳು .  
ಮತ್ತು ಯಾವು ಪ್ರಜಾಪತಿಯನ್ನು , ಅಗ್ನಿಯನ್ನು , ಸರಸ್ವತಿದೇವಿಯನ್ನು , ಸರ್ವೋತ್ತಮರೆಂದು ಸಾರುತ್ತವೆಯೋ ಅವು ರಾಜಸ ಶಾಸ್ತ್ರಗಳು ಮತ್ತು ಯಾವ ಶಾಸ್ತ್ರವು ಲಿಂಗಕ್ಕೆ ( ಶಿವನಿಗೆ) ಸರ್ವೋತ್ತಮತ್ವವನ್ನು ತಿಳಿಸುತ್ತದೆಯೋ ಅದು ತಾಮಸ ಶಾಸ್ತ್ರವೆಂದು ಪದ್ಮ ಪುರಾಣದಲ್ಲಿ ಹೇಳಿದೆ .


                         

Saturday, 13 October 2012

ಹೊಸ ಲೇಖನಗಳು .
1) ಶ್ರೀಮಜ್ಜಯತೀರ್ಥರು ( ಮಹಾನ್ ಮಾಧ್ವಯತಿಗಳು ಅಂಕಣ)
2) ಶ್ರೀ ಜಿತಾಮಿತ್ರರು ಹಾಗು ಶ್ರೀ ಸುಶಮೀಂದ್ರರು ( special articles by  SJ )
3)  ಗುರುಗಳ ಮಂತ್ರಾಕ್ಷತೆಯ ಮಹಿಮೆ

               ಗುರುಗಳ  ಮಂತ್ರಾಕ್ಷತೆ ಮಹಿಮೆ .- ವಿದ್ವಾನ್  ರಾಜ ಎಸ್ ಪವಮಾನಾಚಾರ್ಯರು , (  ರಾಯರ ಮಠದ ಶ್ರೀ ಸುಜಯೀಂದ್ರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಪ್ರಪೌತ್ರರು) 

* "ಹರಿದ್ರಾಚೂರ್ಣಸಂಯುಕ್ತಂ ಅಕ್ಷತಂ" ಎಂಬುವಲ್ಲಿ . ಹರಿದ್ರಾ ಚ ಚೂರ್ಣo ಚ = ಹರಿದ್ರಾ ಚೂರ್ಣೆ , ಹರಿದ್ರಾ ಚೂರ್ಣಾಭ್ಯಾಂ ಸಂಯುಕ್ತಂ = ಹರಿದ್ರಾಚೂರ್ಣಸಂಯುಕ್ತಂ ಎಂಬ ವ್ಯುತ್ಪತ್ತಿಯನ್ನಾಶ್ರಯಿಸಿ , ಹರಿದ್ರಾ ಎಂದರೆ ಅರಿಶಿನ , ಚೂರ್ಣವೆಂದರೆ ಸುಣ್ಣ . ಇವುಗಳಿಂದ ಕೂಡಿರುವ ಅಂದರೆ ಅರಿಶಿನ ಮತ್ತು ಸುಣ್ಣ ಇವೆರಡನ್ನೂ ಬಳಸಿ ಕಳಿಸಿರುವ ಅಕ್ಷತೆಯೇ " ಮಂತ್ರಾಕ್ಷತೆ" . ಈ ತರಹದ ಮಂತ್ರಾಕ್ಷತೆಯನ್ನು ಶ್ರೀಮಾನ್ ಮಧ್ವಾಚಾರ್ಯ ಸಂಸ್ಥಾನ  ಶ್ರೀ ರಾಯರ ಮಠದಲ್ಲಿ , ಪೇಜಾವರ ಮಠದಲ್ಲಿ ಇನ್ನು ಕೆಲವು ಮಾಧ್ವ ಮಠಗಳಲ್ಲಿ ಬಳಸಲಾಗುತ್ತದೆ . 
* " ವೃಂದಾರಕಮಣಿಯೋಳೀಪ್ಸಿತವ ನೀವುದಿ | ನ್ನೆಂತು ಬಣ್ಣಿಸಲಿ ಮಂತ್ರಾಕ್ಷತೆಯ ಮಹಿಮೆಯ ನಾ ? " ಎಂಬ ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯು ನಾವು ಬಯಸಿದ ವಸ್ತುಗಳನ್ನು ಚಿಂತಮಣಿಯಂತೆ ಕೊಡುತ್ತದೆ ಎಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಂತ್ರಾಕ್ಷತೆಯನ್ನು ಮನೋಹರ ವಿಠಲದಾಸರು ಕೊಂಡಾಡಿದ್ದಾರೆ . 
* ಅಭಿನವ ಜನಾರ್ದನ ವಿಠಲರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮೇಲೆ ರಚಿಸಿರುವ "ನೋಡಿದೆನು ಗುರು ರಾಘವೇಂದ್ರರ " ಎಂಬ ಕೃತಿಯಲ್ಲಿ , ಸುಕ್ಷೇತ್ರ ಮಂತ್ರಾಲಯಕ್ಕೆ ಹೋಗಿದ್ದ ಸುಸಂದರ್ಭದಲ್ಲಿ ಭಕ್ತಸಾಗರ ಶ್ರೀಶ್ರೀ ವಾದೀಂದ್ರತೀರ್ಥ ಗುರುಗಳಿಂದ  ಮಂತ್ರಾಕ್ಷತೆಯನ್ನು ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನು ಕಣ್ಣಾರೆ ಕಂಡು , ಅದನ್ನು " ಮಂತ್ರ ಅಕ್ಷತಿ ಕೊಳುತಲಿ | ಸಂತ ಗುರು ವಾದೀಂದ್ರ ರಾಯರ " ಎಂಬ ಮಾತಿನಿಂದ ಶ್ರೀ ಮದ್ವಾದೀಂದ್ರರ ಮಂತ್ರಾಕ್ಷತೆ ಮಹಿಮೆಯನ್ನು ವರ್ಣಿಸುತ್ತಾರೆ .ಇದು ಒಟ್ಟಾರೆ ಗುರುಗಳು ನೀಡಿದ ಮಂತ್ರಾಕ್ಷತೆಯ ಮಹಿಮೆಯೇ ಆಯಿತು . 
*ಶ್ರೀಪತಿ ವಿಠಲ ದಾಸರು , ತಮ್ಮ ' ವೃಂದಾವನದಿ ವಿರಾಜಿಪ ಯತಿವರ ನ್ಯಾರೆ | ಪೇಳಮ್ಮಯ್ಯ ' ಎಂಬ ಕೃತಿಯಲ್ಲಿ ' ತಾ ಸುಕರದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ " ಎಂಬ  ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯ ಮಹಿಮೆ ವರ್ಣಿಸಿದ್ದಾರೆ . ಇದು ಕೂಡ ಗುರುಗಳು ನೀಡುವ ಮಂತ್ರಾಕ್ಷತೆಯಾ ಮಹಿಮೆಯೇ ಸರೀ .
*ಭೀಮೇಶ ಕೃಷ್ಣರು ರಾಯರ ಮೇಲೆ ಬರೆದ ಕೃತಿಯಲ್ಲಿ " ಮಂತ್ರಾಕ್ಷತೆ ಫಲ ನೀಡಿ |ಸಂತಾನ ಸಂಪತ್ತು ಕೊಡುವರ " ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆಯಿಂದ ಏನೇನು ಲಭ್ಯ ಎಂಬುದನ್ನು ತಿಳಿಸಿದ್ದಾರೆ . 
*ಇಂದಿರೇಶರು ರಾಯರ ಬಗ್ಗೆ ರಚಿಸಿದ ' ಮಂಗಳಂ ಜಯ ಮಂಗಳಂ ' ಎಂಬ ಕ್ರುತಿಯಲ್ಲಿ ' ತಂದ ಮಂತ್ರಾಕ್ಷತೆ ಕೊಟ್ಟವಗೆ ' ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆ ಮಂಗಳಕರ ಎಂಬುದನ್ನು ಸಾರಿದ್ದಾರೆ .
*ಕನಕಾದ್ರಿ ವಿಠಲ ವಿರಚಿತ ರಾಯರ ಮೇಲಿನ ಗ್ರಂಥದಲ್ಲಿ " ಮಂತ್ರಾಕ್ಷತಿ ಫಲ ಕೈವಲ್ಯವು ಇವರ ಅಂತರ್ಯಾಮಿ ಶ್ರೀ ರಘುಪತಿಕನಕಾದ್ರಿವಿಠಲ ನಿರಂತರ ವಿವರಿಸಿ ಕೈಗೊಂಡು ಇವರಿಂದಲಿ ಕೊಡುವ" ಎಂಬ ಮಾತುಗಳಿಂದ ಗುರುಗಳ ಮಂತ್ರಾಕ್ಷತೆಯಿಂದ ಮೊಕ್ಷಾದಿ ಪುರುಷಾರ್ಥಗಳು ದೊರೆಯುವವು ಎಂದು ಹೇಳಿದ್ದಾರೆ .  

Friday, 12 October 2012

ಹೊಸ ಲೇಖನಗಳು .
1) ಶ್ರೀಮಜ್ಜಯತೀರ್ಥರು ( ಮಹಾನ್ ಮಾಧ್ವಯತಿಗಳು ಅಂಕಣ)
2) ಶ್ರೀ ಜಿತಾಮಿತ್ರರು ಹಾಗು ಶ್ರೀ ಸುಶಮೀಂದ್ರರು ( special articles by  SJ )
3)  ಗುರುಗಳ ಮಂತ್ರಾಕ್ಷತೆಯ ಮಹಿಮೆ

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ 
ಭೇದೋ ಜೀವಗಣಾ ಹರೇರನುಚರಾ ನೀಚೋಚ್ಚಭಾವಂ ಗತಾಃ |
ಮುಕ್ತಿರ್ನೈಜ ಸುಖಾನುಭೂತಿರಮಲ ಭಕ್ತಿಶ್ಚ ತತ್ಸಾಧನಂ 
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

ಈ ಮೇಲಿನ ಶ್ಲೋಕ ಶ್ರೀ ಮದ್ವ್ಯಾಸರಾಜ ತೀರ್ಥ ಗುರುಸಾರ್ವಭೌಮರಿಂದ ರಚಿತವಾದುದು . ಕೇವಲ 4 ಸಾಲುಗಳಲ್ಲಿ ಶ್ರೀ ವ್ಯಾಸತೀರ್ಥರು ಮಧ್ವ ಮತದ  ಸಾರವನ್ನು ನಮ್ಮಂತಹ ಪಾಮರರಿಗೆ ತಿಳಿಸಿಕೊಟ್ಟಿದ್ದಾರೆ .
ಅರ್ಥ - ಶ್ರೀಮನ್ಮಧ್ವಾಚಾರ್ಯರಿಂದ ರಚಿತವಾದ ಮತದಲ್ಲಿ ಸಕಲ ಶ್ರುತಿ-ಸ್ಮೃತಿ-ಪುರಾಣ- ವೇದೋಕ್ತಿಗಳನ್ನು ಆಧರಿಸಿ ಶ್ರೀ ಮನ್ನಾರಾಯಣನೇ ( ಶ್ರೀ ಮಹಾ ವಿಷ್ಣುವೇ) ಸರ್ವೋತ್ತಮನು . ಶ್ರೀ ವಾಯುರೂಪಿ ಮಧ್ವರೇ  ಜೀವೊತ್ತಮರು . ಈ ಜಗತ್ತು ಸತ್ಯವಾದುದು ಹೊರತು ಮಿಥ್ಯವಲ್ಲ . ಪಂಚ ಭೇದವು ಮಾನ್ಯ . ಎಲ್ಲ ಸಕಲ ಜೀವರಾಶಿಗಳು ಆ ಜಗನ್ನಿಯಾಮಕನಾದ ಶ್ರೀಹರಿಯ ಅನುಚರರು . ಜೀವರಲ್ಲಿ ತಾರತಮ್ಯ ಉಂಟು .  ಮುಕ್ತಿಯ ಸುಖಾನುಭೂತಿ ಮಧ್ವಮತದಲ್ಲಿ ಶ್ರೀ ಹರಿ ವಾಯುಗುರುಗಳ ಅನುಗ್ರಹದಿಂದಲೇ ದೊರೆಯುವದು . ಆ ಪರಮಾತ್ಮನ ಮೇಲಿನ ಅಮಲವಾದ ಭಕ್ತಿಯೇ ಮುಕಿಗೆ ಸಾಧನ . ಶ್ರೀ ಮಧ್ವರು ಬೋಧಿಸಿದ ಮತದಲ್ಲಿ ಪ್ರತ್ಯಕ್ಷ , ಅನುಮಾನ , ಆಗಮ ಎಂಬ ಮೂರನ್ನು ಮಾತ್ರ ಪ್ರಮಾಣ ಎಂದು ಹೇಳಲಾಗಿದೆ . ಶ್ರೀಹರಿಯು ಸರ್ವ ವೇದ ಪ್ರತಿಪಾದ್ಯನು .

ವಿಶ್ವೇಶತೀರ್ಥರು ನಿಜ ಧರ್ಮ ರಕ್ಷಕರು  
ಮುನ್ನುಡಿ -
ಉಡುಪಿ  ಪೇಜಾವರ ಮಠ  ಶ್ರೀ ವಿಶ್ವೇಶ ತೀರ್ಥರು ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವದು ಹಿಂದೂ ಸಮಾಜೋದ್ಧಾರ. ಶ್ರೀಗಳು ಹಿಂದೂ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ , ನೀಡುತ್ತಲಿದ್ದಾರೆ . ಕೇವಲ 8ನೆಯ ವಯಸ್ಸಿಗೆ ಯತ್ಯಾಶ್ರಮ ಸ್ವೀಕರಿಸಿ ತಮ್ಮ ಜೀವನವನ್ನೇ ಕೇವಲ ಅಧ್ಯಯನ , ಧರ್ಮ ರಕ್ಷಣಾ , ಸಾಮಾಜಿಕ ಜಾಗ್ರತೆ , ದಲಿತರ ಉದ್ಧಾರ ಮುಂತಾದ ಸತ್ಕಾರ್ಯಗಳಿಗೊಸ್ಕರವೇ ಮುಡಿಪಾಗಿ ಇಟ್ಟಿದ್ದಾರೆ. ಪರಪೂಜ್ಯರ ಹೆಸರು ಎಲ್ಲ ಸಜ್ಜನರಿಗೂ ಚಿರ ಪರಿಚಿತ.ಇಂದಿನ ಎಡರು ತೊಡರು  ಸಮಾಜಕ್ಕೆ, ಬ್ರಷ್ಠ ರಾಜಕೀಯ ಸುಧಾರಣೆಗೆ  ಶ್ರೀಗಳ ಸಂದೇಶಗಳು ಅನಂತ. ತರುಣ ವಯಸ್ಸಿನಿಂದಲೂ  ರಾಜಕೀಯ-ಸಾಮಾಜಿಕ ಎಡರು ತೊಡರುಗಳಾದರೆ  ಅದನ್ನು ಸಹಿಸುವ ಪ್ರವೃತ್ತಿ ಶ್ರೀಗಳದ್ದಲ್ಲ.ತಾವೇ ಮುಂದೆ ನಿಂದು ಹಂಗು ತೊರೆದು ಸಮಾಜಕ್ಕೆ ತೊಂದರೆ ಯಾಗ ಬಾರದೆಂದು ಕಳಕಳಿಯಿಂದ ಸಮಸ್ಯೆ.ಪರಿಹರಿಸುವ ಸಮಾಜ ಸುಧಾರಕ ಮಹಾಸ್ವಾಮಿಗಳು.ದೀನ-ದಲಿತರ ಬಗ್ಗೆ ಶ್ರೀಗಲಿಗಿರುವ ಕರುಣೆ ಅಪಾರ.
ಜಾತ್ಯತೀತ ಸಂಘಟಿತ ಭಾರತ ಶ್ರೀಗಳ ಕನಸು.ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಪ್ರಚಾರದಲ್ಲಿಯು ಶ್ರೀಗಳುಲೋಪವೆಸಗಿಲ್ಲ. ಸದಾ ಜಿಜ್ಞಾಸೆಯಲ್ಲಿ ತೊಡಗುವ ಶ್ರೀಗಳು ಮಧ್ವರ ಸಿದ್ಧಾಂತದ ಸುವಾಸನೆಯನ್ನು ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೂ 
ಸೂಸಿದ್ದಾರೆ  .ಜಗದ್ಗುರು ಆಚಾರ್ಯ ಪ್ರತಿಷ್ಠಿತ ಶ್ರೀ ಕೃಷ್ಣ ಆರಾಧಕ ಶ್ರೀಗಳ ಚರಣಾರವಿಂದಗಳಲ್ಲಿ  ಗಳಲ್ಲಿ ಈ ಚಿಕ್ಕ ಕಾಣಿಕೆ ಸಮರ್ಪಿಸುತ್ತಿದ್ದೇನೆ.
                                                                                                                            
         
                                                 ||  ಶ್ರೀ ಗುರುಭ್ಯೋ ನಮಃ ||
ವಿಶ್ವೇಶ ತೀರ್ಥರ ಪೂರ್ವಾಶ್ರಮ - 
                                ಉಡುಪಿಯ ಸಮೀಪದಲ್ಲಿರುವ ರಾಮಕುಂಜದ ಶ್ರೀ ನಾರಾಯಣಾಚಾರ್ಯ  ಮತ್ತು ಕಮಲಮ್ಮ  ದಂಪತಿಗಳಿಗೆ ದೊರೆತ ಪುತ್ರ ರತ್ನಕ್ಕೆ ವೆಂಕಟರಮಣ ಎಂದು ಹೆಸರಿಟ್ಟರು. ವೆಂಕಟರಮಣ ಬಾಲ್ಯದಲ್ಲಿ ಅಸಾಮಾನ್ಯ ಗುಣಗಳನ್ನು ಹೊಂದಿದ ಬಾಲಕ . ಬಾಲಕ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಾತ್ವಿಕ ಗುಣಗಳನ್ನು ಹೊಂದಿದ್ದ.
ಇದು ಎಲ್ಲರನ್ನು ಅಚ್ಚರಿಗೋಳಿಸಿತ್ತು.ಈತನ ಈ ಅಸಾಮಾನ್ಯ ವ್ಯಕ್ತಿತ್ವವನ್ನು ಗುರುತಿಸಿದ ಅಂದಿನ ಶ್ರೀ ಪೇಜಾವರ ಮಠಾಧೀಶಶ್ರೀ 1008ವಿಶ್ವಮಾನ್ಯ ತೀರ್ಥರು ಗುರುತಿಸಿದರು.ರಾಮಕುಂಜ ವೆಂಕಟರಮಣನ ಜೀವನದ ಅತ್ಯಂತ ಶುಭ ಸಂದರ್ಭ ಸಮೀಪಿಸಿತು.
ವೆಂಕಟರಮಣನ 8ನೆ ವಯಸ್ಸಿನಲ್ಲಿ ಡಿಸೆಂಬರ್ 3 1938ರಲ್ಲಿ ಶ್ರೀ ವಿಶ್ವಮಾನ್ಯ ತೀರ್ಥರು ಆತನ ಅಸಾಧಾರಣ ಪಾಂಡಿತ್ಯ,ವ್ಯಕ್ತಿತ್ವವನ್ನು ಹೊರಹಾಕಲು ಅನುವು ಮಾಡಿಕೊಟ್ಟು ಚಕ್ರತೀರ್ಥದಲ್ಲಿ  ಆತನನ್ನು ಸಾಂಸಾರಿಕ ಜಂಜಾಟದಿಂದ  ಮೊದಲೇ ದೂರ ಮಾಡಿಬಿಟ್ಟರು. ರಾಮಕುಂಜ ವೆಂಕಟರಮಣ ಶ್ರೀ ವಿಶ್ವೇಶ ತೀರ್ಥರಾದ ಸುದಿನ ಅದು. ಇಂತಹ ಯತಿ ವರ್ಯರನ್ನು ಸಮಾಜಕ್ಕೆ ಕೊಟ್ಟ ಶ್ರೀ ವಿಶ್ವಮಾನ್ಯ ತೀರ್ಥರು ನಿಜಕ್ಕೂ ವಿಶ್ವ ಮಾನ್ಯರು. 
                   

ಶ್ರೀಗಳವರ  ಅಧ್ಯಯನ - 
ಶ್ರೀಗಳವರ ಅಧ್ಯನ ಮೊದಲು ಅವರ ಕಾರ್ಯ ಕ್ಷೇತ್ರ ಉಡುಪಿಯಲ್ಲೇ ಆಯಿತು. ಆಗಿನ ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರು , ನೂತನ ಬಾಲ ಯತಿ ಶ್ರೀ ವಿಶ್ವೇಶ ತೀರ್ಥರಿಗೆ  ಶಾಸ್ತ್ರ-ಯತಿ ಧರ್ಮ ಇತ್ಯಾದಿಗಳನ್ನು 8 ವರ್ಷಗಳ ಕಾಲ ಭೋಧಿಸಿದರು. ಶ್ರೀ ವಿಶ್ವೇಶ ತೀರ್ಥರನ್ನು ಶ್ರೀ ವಿದ್ಯಾ ಮಾನ್ಯರಿಂದ ಅನೇಕ 'ವಿದ್ಯೆ'ಗಳನ್ನು ಕಲಿತು ಅತೀ ಚಿಕ್ಕ ವಯಸ್ಸಿನಲ್ಲೇ ನ್ಯಾಯ-ವೇದಾಂತ-ತರ್ಕ -ಮೀಮಾಂಸಾದಿ ಶಾಸ್ತ್ರಗಳಲ್ಲಿ ಪಾರಂಗತರಾಗಿ ಎಲ್ಲರಿಂದಲೂ' ಮಾನ್ಯ'ರಾದರು. 

                                          Sanyasa from Sri Vidyamanya Swamiji

                      ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಅನುಗ್ರಹ ಪಡೆಯುತ್ತಿರುವ  ಬಾಲಕ ರಾಮಕುಂಜ ವೆಂಕಟರಮಣ \ 
    
         ಇಂದಿನ ಕಾಲದಲ್ಲಿ ಬ್ರಾಹ್ಮಣರು ಸ್ವಲ್ಪ ಎಡವಿದರು ಅವಮಾನ - ಅಪಮಾನಕ್ಕೆ ತುತ್ತಾಗುತ್ತಾರೆ . ಇಂತಹ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀಗಳವರು ಬ್ರಾಹ್ಮಣರ ಅದರಲ್ಲೂ ವಿಶೇಷವಾಗಿ ಮಾಧ್ವರ ಬಗ್ಗೆ ಜನ ಮಾನಸದಲ್ಲಿ ವಿಶಿಷ್ಟ ಸ್ಥಾನ ಮೂಡುವಂತೆ ಮಾಡಿದ್ದಾರೆ.  ಇಂದು ಬ್ರಾಹ್ಮಣರಲ್ಲಿಯ ಯತಿಗಳು ಎಂದರೆ ಜಗದಲ್ಲಿನ ಜನರು ಶ್ರೀ ವಿಶ್ವೇಶ ತೀರ್ಥರ ಎದೆಗೆ ಬೊಟ್ಟು ಮಾಡಿಸುವಂತಾಗಿದೆ . ಶ್ರೀ ಗಳು ತಮ್ಮ ತಾರುಣ್ಯದ ಕಾಲದಿಂದಲೇ  ನ್ಯಾಯಕ್ಕಾಗಿ ಹೋರಾಟ , ಸಮಾಜದ ಅಸಮಾನತೆಯ ವಿರುದ್ಧ ಹೋರಾಟ , ಮಾಧ್ವರ ಕಲ್ಯಾಣ , ಸಮಸ್ತ ಬ್ರಾಹ್ಮಣರ ಹಿತಾಸಕ್ತಿ , ದಲಿತರ ಉದ್ಧಾರ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಮಸ್ತವಾಗಿ ತೊಡಗಿಸಿಕೊಂಡಿದ್ದರೂ ಜಗದ್ಗುರು ಆಚಾರ್ಯ ಮಧ್ವರ ಶಾಸ್ತ್ರ ಅಧ್ಯಯನ ಹಾಗು ಸಂಶೋಧನೆ , ಪಂಡಿತರುಗಳ  ನಿರ್ಮಾಣ ಮುಂತಾದ ಕಾರ್ಯಗಳಲ್ಲಿ ಯಾವುದೇ ಲೋಪವೆಸಗಿಲ್ಲ . ಶ್ರೀಗಳ ವ್ಯಕ್ತಿತ್ವ ಅತ್ಯಂತ ಉದಾರ . ಮಗುವಿನಂತೆ ಶುದ್ಧ ಮನಸ್ಸು . ಶ್ರೀ ಗಳನ್ನೂ ಎಷ್ಟು ಕೊಂಡಾಡಿದರು ಸಾಲದು . ಶ್ರೀಗಳಿಗೆ  ಮಾಧ್ವರು ಮಾತ್ರ ಕೃತಜ್ಞರಾಗಬೇಕಿಲ್ಲ ಸಮಸ್ತ ಜನರು ಇವರ ಸೇವೆಗೆ ಅರ್ಹರು . ಶ್ರೀಗಳು 20 ನೆ ಶತಮಾನದ ಶಕಪುರುಷ .
             ಆದರು ಇತ್ತೀಚಿಗೆ ಶ್ರೀಗಳ ವಿರುದ್ಧ ಕೆಲವು ಅವಿವೇಕಿ-ಮೂಢ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವದು ಬಹಳ ಖೇದಕರ ಸಂಗತಿ . ಇದರಲ್ಲಿ ಪ್ರಮುಖ " ಪ್ರತಾಪ ಸಿಂಹ ಅವರ ಲೇಖನ " ಈ ಬಗ್ಗೆ ಕನ್ನಡ ಪ್ರಭಾ ದಲ್ಲಿ ನಮ್ಮ ಪ್ರತ್ಯುತ್ತರ ನೀಡಿದ ಲೇಖನ ನೀಡಿದ್ದಾರೂ ಕಪಟಿ ಪ್ರತ್ರಿಕೆಯ ಸಿಬ್ಬಂದಿ ಅದನ್ನು ಮುದ್ರಿಸಲಿಲ್ಲ . ಅದು ಹಾಗೆ ಇರಲಿ . ಶ್ರೀಗಳು ದಲಿತರ ಬಗೆ ಅದೆಷ್ಟೋ ಹೋರಾಟ ಮಾಡಿದ್ದಾರೆ . ಆದರೆ ಅದೆಷ್ಟೋ ದಲಿತರು ಶ್ರೀಗಳ ವಿರುದ್ಧವೇ " ಸಂವಿಧಾನ ವಿರೋಧಿ ಪೇಜಾವರ ಶ್ರೀ " ಎಂದು ಹೆಳಿಕೆಗಳನ್ನಿತ್ತು ತಮ್ಮ ಉದ್ಧಾರಕ್ಕಾಗಿ ಬಂದ ಮಹಾನುಭಾವರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ . ಎಲ್ಲ ದಲಿತರಿಗೂ ಹೇಳುವದು ಏನೆಂದರೆ " ಪೇಜಾವರ ಸ್ವಾಮಿಗಳಿಗೆ ಯಾರಿಂದಲೂ ಶಭಾಶ್ ಎನಿಸಿಕೊಳ್ಳಬೇಕಿಲ್ಲ . ಯಾರಿಂದಲೂ ಪ್ರಶಂಸೆ ಅಗತ್ಯವಿಲ್ಲ . ಅವರು ಕೇವಲ ಒಬ್ಬ ಹರಕು ಶಾತಿಯ ಸನ್ಯಾಸಿ . ಮಧ್ವರ ಅನುಯಾಯಿ . ಅವರ ಮನಸ್ಸು ಶುದ್ಧ . ಅವರು ನಿಮ್ಮ ರಕ್ಷಣೆಗಾಗಿ ಬಂದದ್ದು ವಾಜಪೇಯಿ-ಅದ್ವಾನಿ-ಇಂದಿರಾ-ಸೋನಿಯಾ ಇಂತವರ ಮನ ವೋಲೈಸಲು ಅಲ್ಲ . ಹಣಕ್ಕೆ ಆಸೆ ಪಡುವ ಅಗತ್ಯವಿಲ್ಲ . ಮಾಧ್ವ ಶಿಷ್ಯರ ಪ್ರೀತಿಯ ಆರೈಕೆಯೇ ಶ್ರೀಗಳಿಗೆ ಕಟಾಕ್ಷ . ನಮಗೆ ಅವರ ಅನುಗ್ರಹವೇ ಕಟಾಕ್ಷ . ಶ್ರೀಗಳು ನಿಮ್ಮ ಪರವಾಗಿ ಇದ್ದಾರೆ ಎಂದರೆ ಅವರ ಬೆಂಬಲ ಪಡೆದು ಒಳ್ಳೆಯ ಕಾರ್ಯಗಳ ಸಫಲತೆ ಪಡೆಯಬೇಕು ಎಂಬುದೇ ನಮ್ಮೆಲ್ಲರ ಆಶಯ . ಮತ್ತು ಶ್ರೀಗಳ ವಿರುದ್ಧ ಅನವಶ್ಯಕವಾಗಿ ಮಾತನಾಡುವವರ ಸಾಲಿನಲ್ಲಿ ಅನೇಕ ಬ್ರಾಹ್ಮಣರು ಇರುವುದು ಅತ್ಯಂತ ಖೇದ ಸಂಗತಿ . ನಮ್ಮವರನ್ನು ನಮ್ಮವರೇ ಎಳೆದರೆ ಹೇಗೆ ? " 
            ಇರಲಿ ಇಷ್ಟೆಲ್ಲಾ ಆದರು ಪೇಜಾವರ ಶ್ರೀಗಳಿಗೆ ಕಳಂಕ ತರುವವರ ಪ್ರಯತ್ನ ವಿಫಲ ಪ್ರಯತ್ನ . ಪೇಜಾವರ ಶ್ರೀಗಳಂತಹ ಧೀಮಂತ ಯತಿ ಸಾರ್ವಭೌಮ ಮಾಧ್ವ ಸಮಾಜಕ್ಕೆ ದೊರೆತದ್ದು ನಮ್ಮೆಲ್ಲರ ಮಹೋನ್ನತ ಸೌಭಾಗ್ಯ .

   

Thursday, 20 September 2012

ಶ್ರೀ ಜಿತಾಮಿತ್ರರು ಹಾಗು ಶ್ರೀ ಸುಶಮೀಂದ್ರರು


          ||   ಶ್ರೀ ಜಿತಾಮಿತ್ರ ತೀರ್ಥ ಗುರುಭ್ಯೋ ನಮಃ ||


ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಯತಿವರ್ಯ ಹಾಗು ಶ್ರೀ ವಿಬುಧೇಂದ್ರ ತೀರ್ಥರ ಶಿಷ್ಯರಾದ , ಶ್ರೀ ರಾಘವೇಂದ್ರ ಸ್ವಾಮಿಗಳ - ಶ್ರೀ ವಿಜಯೀಂದ್ರ ಸ್ವಾಮಿಗಳ ಪೂರ್ವಿಕ ಗುರುಗಳಾದ ಶ್ರೀ ಶ್ರೀ ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿರುವ ಶ್ರೀಗಳ ಉತ್ಸವ ಮೂರ್ತಿ ಹಾಗು ಶ್ರೀ ಗಳವರ ಪಾದುಕೆಗಳು .

                       ಶ್ರೀ ಜಿತಾಮಿತ್ರರ ಸನ್ನಿಧಿಯಲ್ಲಿ ತಪೋ ನಿರತರಾಗಿರುವ ಶ್ರೀ ಅಭಿನವ ಜಿತಾಮಿತ್ರರು



  
 ಶ್ರೀ ಜಿತಾಮಿತ್ರರು ರುದ್ರಾಂಶ ಸಂಭೂತರು . ಇವರ ಪವಾಡಗಳು ಅನೇಕ . ಇದಕ್ಕೆ ಇವರು ನೆಲೆಸಿದ ವೃಕ್ಷವೆ ಸಾಕ್ಷಿ ( ಶ್ರೀಗಳ ವೃಂದಾವನ ಇಲ್ಲ ) . ಶ್ರೀ ಜಿತಾಮಿತ್ರ ತೀರ್ಥ ರು ಪಾಠದಲ್ಲಿ ತೊಡಗಿದಾಗ ರುದ್ರ ದೇವರು ಜಂಗಮನ ರೂಪದಲ್ಲಿ ಬಂದು ಕೂಡುತ್ತಿದ್ದರಂತೆ. ಇದಕ್ಕೆ ಶಿಷ್ಯರ ಆಕ್ಷೇಪ ಬಂದಿತಂತೆ .ಅದಕ್ಕೆ ಶ್ರೀಗಳು "ಸಮಯ ಬಂದಾಗ ಉತ್ತರಿಸುತ್ತೇವೆ ಈಗ ಆತ ಬರಲಿ" ಎಂದರಂತೆ .ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಜಂಗಮ ತಡವಾಗಿ ಬಂದರೂ  ಆತ  ಬಂದ ರೀತಿ ವಿಚಿತ್ರವಾಗಿತ್ತು . ಆತ ಒಂದು ವಸ್ತ್ರವನ್ನು ಹಾಸಿ ಅದರ ಮೇಲೆ ತೇಲುತ್ತ ಶ್ರೀಗಳ ಸನ್ನಿಧಾನಕ್ಕೆ ಬಂದಿದ್ದ !! .
                            ಶ್ರೀ ಗಳವರು ಸನ್ಯಾಸಾಶ್ರಮ  ಸ್ವೀಕರಿಸಿದ್ದೆ ವಿಚಿತ್ರ . ಅನಂತಪ್ಪ ವಿಬುಧೆಂದ್ರರ ಶಿಷ್ಯನಾಗಿದ್ದು ದೈವಬಲದಿಂದಲೇ ಸರಿ . ವಿಬುಧೆಂದ್ರ ತೀರ್ಥರು ಈತನಿಗೆ ನರಸಿಂಹ ಸಾಲಿಗ್ರಾಮದಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ನರಸಿಂಹ ಸಾಲಿಗ್ರಾಮದ ಅಗಲವಾದ ಬಾಯಿಯಲ್ಲಿ ಅನ್ನವನ್ನು ತುರುಕಿ ದೇವರು ನನ್ನ ನೆವಿದ್ಯವನ್ನು ಸ್ವೀಕರಿಸಲಿಲ್ಲ ಎಂದು ಬಹಳವಾಗಿ ಅನಂತಪ್ಪ ಕೊರಗಿದನಂತೆ . ಆಮೇಲೆ " ನೀನು ಇದನ್ನು ಸ್ವೀಕರಿಸದಿದ್ದರೆ ನಾನು ನನ್ನ ತಲೆಯನ್ನು ಗುಂಡುಕಲ್ಲಿಗೆ ಚಚ್ಚಿಕೊಳ್ಳುತ್ತೇನೆ ಎಂದು ಹೇಳಿದನಂತೆ . ಆಗ ಅಲ್ಲಿದ್ದ ಅನ್ನವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತಂತೆ .!! . ನಂತರ ಮಧ್ವರ ಶಾಸ್ತ್ರಗಳನ್ನು ಶ್ರೀ ವಿಬುಧೆಂದ್ರ ತೀರ್ಥರಲ್ಲಿ ಅಧ್ಯಯನ ಮಾಡಿ ಸನ್ಯಾಸ ಸ್ವೀಕರಿಸಿ  ಶ್ರೀ ಜಿತಾಮಿತ್ರ ತೀರ್ಥರು ಎಂದು ಪ್ರಸಿದ್ಧರಾದರು .
                        ಶ್ರೀ ಗಳು ಒಮ್ಮೆ ಕೃಷ್ಣೆಗೆ ಪ್ರವಾಹ ಬಂದಾಗ ಧ್ಯಾನಾಸಕ್ತರಾಗಿದ್ದರಿಂದ  ಹೊರಬರದೇ ಅಲ್ಲಿಯೇ ಏಳು  ದಿನಗಳ ಕಾಲ ಇದ್ದರು . ಮುಂದೆ ಶಿಷ್ಯರೆಲ್ಲರೂ ದು:ಖ ತಪ್ತರಾಗಿ ಮರಳಿದಾಗ ಶ್ರೀಗಳು ಇನ್ನು ಧ್ಯಾನಾವಸ್ಥೆಯಲ್ಲಿಯೇ ಇದ್ದದ್ದನ್ನು ನೋಡಿ ಶ್ರೀಗಳ ತಪ ಶಕ್ತಿ ಎಂತಹುದು ಎಂಬುದನ್ನು ಮನಕಂಡರಂತೆ. ಮುಂದೆ ಮತ್ತೊಮ್ಮೆ ಪ್ರವಾಹ ಬಂದಾಗ ಶ್ರೀಗಳು ಅದೃಶ್ಯರಾಗಿ " ನಾವು ಇಲ್ಲಿಯೇ ಚಿರಕಾಲ ನೆಲೆಸುತ್ತೇವೆ . ನಮ್ಮ ವೃಂದಾವನ ಕಟ್ಟುವ ಅವಶ್ಯಕತೆ ಇಲ್ಲ . ಇಲ್ಲಿಯೇ ನಾವು ಕುಳಿತುಕೊಳ್ಳುತ್ತಿದ್ದ ಗೋಂದಿನ ಮರದಲ್ಲಿಯೇ ನಿಮ್ಮ ಸನ್ನಿಧಾನ ಇರುತ್ತದೆ .ಇಲ್ಲಿಯೇ ನಮ್ಮ ಆರಾಧನಾದಿಗಳು ನೆರವೇರಲಿ ಎಂದು ಹೇಳಿದರಂತೆ . " . ಅಂದಿನಿಂದ ಇಂದಿನವರೆಗೂ ಆ ಮರಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ  ಮಠದಿಂದ ಪೂಜೆ ನಡೆಯುತ್ತಿದೆ .
                     ಶ್ರೀಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ರಾಯರ ಮಠದ ಯತಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಶ್ರೀ ಜಿತಾಮಿತ್ರರ ಸನ್ನಿಧಿಗೆ ಆರಾಧಾನೆಗಾಗಿ ಹೋದಾಗ ಅಲ್ಲಿಯ ಸಂಗಮೇಶ್ವರ ದೇವಾಲಯದಲ್ಲಿ ಭೈರಾಗಿಯ ರೂಪದಲ್ಲಿ ಜಿತಾಮಿತ್ರರ ದರ್ಶನ ವಾಯಿತೆಂದು ಅವರೇ ಮುಂದೆ ಗರ್ಭಗುಡಿಗೆ ಹೋಗಿ ಅದೃಶ್ಯರಾದರೆಂದು , ಇದನ್ನು ಶ್ರೀಗಳು ಕಂಡರೆಂದು ಹೇಳುತ್ತಾರೆ . ಇವರ ಅಸ್ತಿತ್ವದ ಮನವರಿಕೆ ಅನೇಕ ರಾಯರ ಮಠದ ಪೀಠಾಧಿಪತಿಗಳಿಗೆ ಆಗಿದೆ .
                     ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಈ ಹಿಂದಿನ ಪೀಠಾಧಿಪತಿಗಳು  , ಮಹಾ ವಿರಕ್ತರು , ತಪಸ್ವಿಗಳು , ನಡೆದಾಡುವ ರಾಯರು ಎಂದೇ ಪ್ರಸಿದ್ಧ ರಾಗಿದ್ದ ಪರಮ ಪೂಜ್ಯ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರಿಗೆ " ಅಭಿನವ ಜಿತಾಮಿತ್ರ " ತೀರ್ಥರು ಎಂಬ ಬಿರುದಿದೆ . ಇವರು ಶ್ರೀ ಜಿತಾಮಿತ್ರ  ಅಂಶ ( ರುದ್ರಾಂಶ) ಎಂದು ಶ್ರೀಗಳನ್ನು ಹತ್ತಿರದಿಂದ ಬಲ್ಲ ಶಿಷ್ಯ ವರ್ಗದವರು ಹೇಳುತ್ತಾರೆ . ಇದನ್ನು ಮನಗಂಡವರೂ ಬಹಳ ಜನ. ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಗುರುಗಳ ಅಂಶ ಹೊಂದಿದ್ದಾರೆ ಅಂತಲೋ  ಏನೋ ಶ್ರೀ ಸುಶಮೀಂದ್ರ ತೀರ್ಥರ ಮೇಲೆ ಅಪಾರ ಕರುಣೆ , ಅನುಗ್ರಹ ಇಟ್ಟಿದ್ದರು . ಶ್ರೀಗಳ ಹತ್ತಿರ ಯಾರೇ ಬಂದರೂ "ರಾಯರಿಗೆ ಹೇಳುತ್ತೇವೆ ಇವರು ನೋಡಿಕೊಳ್ಳುತ್ತಾರೆ " ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟಾಗ ಅದೆಷ್ಟೋ ಜನ ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದಾರೆ . ರಾಯರ ಅನನ್ಯ ಭಕ್ತರು ಮತ್ತು ಅವರ ಪ್ರತಿನಿಧಿಗಳು   ಶ್ರೀ ಸುಶಮಿಂದ್ರ ತೀರ್ಥರು ಆಗಿದ್ದರು . ಶ್ರೀ ಗಳವರ ವೃಂದಾವನ ಕಳಾಕರ್ಷಣ ಸಂದರ್ಭದಲ್ಲಿ ಮಂತ್ರಾಲಯ ಕ್ಷೇತ್ರ ಹಿಂದೆ ಕೇಳರಿಯದ ಪ್ರವಾಹಕ್ಕೆ ತುತ್ತಾಯಿತು . ಆಗಿನ್ನೂ ಸುಶಮೀಂದ್ರ ತೀರ್ಥರ ವೃಂದಾವನ ಪ್ರತಿಷ್ಠೆ ಆಗಿದ್ದಿಲ್ಲ . ಅದರಿಂದ ಅವರ ಭಕ್ತರು ಶ್ರೀ ಮಠದ ಪದಾಧಿಕಾರಿಗಳು , ಶ್ರೀ ಸುಯತೀಂದ್ರ ತೀರ್ಥರು ಬಹಳ ಚಿಂತೆಗೀಡಾಗಿದ್ದರು . ಆ ಸಂದರ್ಭದಲ್ಲಿ ಜಗತ್ತನ್ನೇ ಕಾಪಾಡುವ  ಶ್ರೀ ರಾಯರು ತಮ್ಮ ಕಂದನ ವೃಂದಾವನಕ್ಕೆ ಧಕ್ಕೆಯಾಗಲು ಬಿಡುತ್ತಾರಾ ?? ಇಲ್ಲವೇ ಇಲ್ಲ . ಶ್ರೀಗಳವರ ದೇಹಕ್ಕೆ ಸ್ವಲ್ಪವೂ ಹಾನಿಯಾಗಿದ್ದಿಲ್ಲ , ಯಾವ ವಿಕಾರಕ್ಕೂ ಒಳಗಾಗಿದ್ದಿಲ್ಲ .  ಶ್ರೀ ಜಿತಾಮಿತ್ರರು ಹೇಗೆ ಶ್ರೀ ವಿಜಯೀಂದ್ರ ತೀರ್ಥರಂತಹ ಜ್ಞಾನಿಗಳನ್ನು ತಯಾರುಮಾಡುವ ಸಾಮರ್ಥ್ಯವುಳ್ಳ ಶ್ರೀ ಸುರೇಂದ್ರರಿಗೆಸಂಸ್ಥಾದ ಹೊರೆ ಹಾಕಿದರೋ ಅದೇ ರೀತಿ ಶ್ರೀ ಸುಶಮೀಂದ್ರ ತೀರ್ಥರು " ಶ್ರೀ ಸುವಿದ್ಯೇಂದ್ರ ತೀರ್ಥರು " ಹಾಗು " ಶ್ರೀ ಸುಯತೀಂದ್ರ ತೀರ್ಥರು " ಎಂಬ ಎರೆದು ವಿದ್ವತ್ ರತ್ನಗಳನ್ನು ಲೋಕಕ್ಕೆ ನೀಡಿದ್ದಾರೆ . 
  ಶ್ರೀ ಜಿತಾಮಿತ್ರರು ರುದ್ರಾಂಶರು . ಹಾಗು ಶ್ರೀ ಸುಶಮೀಂದ್ರ ತೀರ್ಥರು ಜಿತಾಮಿತ್ರ ಅಂಶವನ್ನು ಹೊಂದಿದವರು . ಶ್ರೀ ರುದ್ರದೇವರಿಗೆ ಹಾಗೆ ಶ್ರೀ ಜಿತಾಮಿತ್ರರಿಗೆ ಹಾಗೂ ಶ್ರೀ ಸುಶಮೀಂದ್ರ  ತೀರ್ಥರಿಗೆ " ನದಿ " ಯ ಸಂಬಂಧ ತುಂಬಾ ಉಂಟು . ಶ್ರೀ ರುದ್ರ ದೇವರಿಗೆ "ಗಂಗಾ ನದಿ " ತಲೆಯಲ್ಲಿ ನೆಲೆಸಿದ ಹಾಗೆ ಶ್ರೀ ಜಿತಾಮಿತ್ರರ ಅವತಾರ ಸಂದರ್ಭದಲ್ಲೂ "ಕೃಷ್ಣಾನದಿ" ಅವರ ಮೇಲೆ ಹರಿದಳು . ಅದೇರೀತಿ ಶ್ರೀ ಸುಶಮೀಂದ್ರ ತೀರ್ಥರ ಕಾಲದಲ್ಲೂ "ತುಂಗಾ ನದಿ" ಅವರ ಮೇಲೆ ಹರಿದಳು .
         ಮತ್ತು ಶ್ರೀ ರುದ್ರ ದೇವರು ಗಂಗೆಯನ್ನು ಜಟೆಯಲ್ಲಿ ಕಟ್ಟಿ ಭುವಿಗೆ ತಂದರೋ ಅದೇ ರೀತಿ 7 ದಿನಗಳ ಕಾಲ ಕೃಷ್ಣೆಯ ಪ್ರವಾಹವನ್ನು ತಡೆದು ಮತ್ತೆ ಶ್ರೀ ಜಿತಾಮಿತ್ರ ತೀರ್ಥರು ಮರಳಿದರು . ಹಾಗೆಯೆ ಶ್ರೀ ಸುಶಮೀಂದ್ರ ತೀರ್ಥರ ವೃಂದಾವನ ಕಲಾಕರ್ಷಿತ ವಾಗಿಲ್ಲದಂತ ಸಂದರ್ಭದಲ್ಲಿಯೂ ಅವರ ದೇಹಕ್ಕೆ ಏನು ವಿಕಾರಗಳು ಆಗಿರಲಿಲ್ಲ , ಸ್ಥಾನ ಪಲ್ಲಟ ಸಹಿತ ಹೊಂದಿರಲಿಲ್ಲಾ. ಇಲ್ಲಿ ಕಾಣ ಸಿಗುವ ವಿಷಯ ಏನೆಂದರೆ ರುದ್ರ ದೇವರು ಆ ಕಾಲದಲ್ಲಿ ಹೇಗೆ ಪ್ರಕಟಗೊಂಡರೋ , ಅದೇ ರೀತಿ ಜಿತಾಮಿತ್ರರ ಕಾಲದಲ್ಲಿ ಪ್ರಕಟಗೊಂಡಿಲ್ಲ . ಜಿತಾಮಿತ್ರರ ಕಾಲದಲ್ಲಿ ಹೇಗೆ ಪ್ರಕಟಗೊಂಡಿದ್ದರೋ ಅದೇ ರೀತಿ ಶ್ರೀ ಸುಶಮೀಂದ್ರರ ಕಾಲದಲ್ಲಿ ಪ್ರಕಟಗೊಳ್ಳಲಿಲ್ಲ . ಎಲ್ಲ ಕಾಲದ ಪ್ರಭಾವ . ಹೀಗೆ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದೇ ಸಾಕಷ್ಟು ಸಿಗುತ್ತವೆ . 
 ಒಂದು ಬಾರಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಿತಾಮಿತ್ರ ತೀರ್ಥರ ಸನ್ನಿಧಿಗೆ ಆರಾಧನಾ ಉತ್ಸವಕ್ಕೆ ಹೋಗಿದ್ದರು. ಅಲ್ಲಿ ಶ್ರೀಗಳು ಶ್ರೀಮನ್ ಮೂಲ ರಾಮದೇವರಿಗೆ ಸಕಲವಿಧವಾದ ಪೂಜೆ ನಡೆಸಿ ಗುರುಗಳಿಗೆ ಹಸ್ತೋದಕ ನೀಡುತ್ತಿದ್ದ ಸಂದರ್ಭದಲ್ಲಿ ಅಲಂಕಾರ ಸಮೇತ ಇದ್ದ ಜಿತಾಮಿತ್ರರ ಸನ್ನಿಧಾನ ಉಳ್ಳ ಗೋಂದಿನ ಮರದಿಂದ ಒಂದು ಹೂವು ಶ್ರೀಗಳವರ ಕೊರಳಿಗೆ ತನ್ನಿಂದ ತಾನೇ ಬಿದ್ದಿತು . ಶ್ರೀಗಳವರು ಆನಂದ ಭಾಷ್ಪ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ . ಈ ಘಟನೆ ನಡೆದದ್ದು ತೀರ ಇತ್ತೀಚಿಗೆ ಅಂದರೆ 1945 ನೆಯ ಇಸವಿಯಲ್ಲಿ ..!

 ಸಪ್ತರಾತ್ರಂ ಕೃಷ್ಣವೇಣ್ಯಾಮುಷಿತ್ವಾ ಪುನರುತ್ಥಿತಮ್ |
ಜಿತಾಮಿತ್ರಗುರುಂ ವಂದೇ ವಿಬುಧೇಂದ್ರ ಕರೋದ್ಭವಂ  || 


 ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಮ್ |
ಸುಶಮೀಂದ್ರಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ ||

                                                 -   ಸಮೀರ ಜೋಷಿ 

Wednesday, 19 September 2012

1500 ರ ಸಂಭ್ರಮ

ದ್ವೈತ ದರ್ಶನ ಬ್ಲಾಗ್ 1500 ಓದುಗರನ್ನು ದಾಟಿದೆ . ಎಲ್ಲ ಮಾಧ್ವರಿಗೆ ತಮ್ಮ ಸಹಕಾರ-ಸಲಹೆಗಳಿಗಾಗಿ ಧನ್ಯವಾದಗಳು .
                                                                                                                      - ಸಮೀರ್ ಜೋಷಿ
                                                                                                                        

Monday, 10 September 2012

ನಿವೇದನೆ

 ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ 1008 ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ 1008 ಸುಯತೀಂದ್ರ ತೀರ್ಥರು ಕರುಣಾಸಾಗರ  ಶ್ರೀ ರಾಘವೇಂದ್ರ ಗುರುಸರ್ವಭೌಮರಿಗೆ ಮಂಗಳಾರತಿ ಮಾಡುತ್ತಿರುವದು ....  ಸಂದರ್ಭ - ಪರ್ಯಾಯಕ್ಕೆ ಕೂಡುವ ಮುನ್ನ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ರಾಯರ ಸುಕ್ಷೇತ್ರ ಮಂತ್ರಾಲಯಕ್ಕೆ ಭೇಟಿ . ಚಿತ್ರ ಕೃಪೆ - ಶ್ರೀ ರಾಘವೇಂದ್ರ ಸ್ವಾಮಿ ಮಠ 

Saturday, 8 September 2012

ಪರಮಪೂಜ್ಯ ಶ್ರೀ ಸತ್ಯಧ್ಯಾನ ತೀರ್ಥರು , ಶ್ರೀ ಸತ್ಯ ಪ್ರಮೋದ ತೀರ್ಥರು , ಶ್ರೀ ಸತ್ಯಾತ್ಮ ತೀರ್ಥರು

         ಪರಮಪೂಜ್ಯ ಶ್ರೀ ಸತ್ಯಧ್ಯಾನ ತೀರ್ಥರು , ಶ್ರೀ ಸತ್ಯ ಪ್ರಮೋದ ತೀರ್ಥರು , ಶ್ರೀ ಸತ್ಯಾತ್ಮ ತೀರ್ಥರು 

ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ , ಸ್ವರೂಪೋದ್ಧಾರಕ , ಆದರ್ಶರಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು

ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ , ಸ್ವರೂಪೋದ್ಧಾರಕ , ಆದರ್ಶರಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು 

ವಿ ಆರ್ ಭಟ್ಟನ ಸುಳ್ಳಿನ ಕಂತೆ

ಇತ್ತೀಚಿಗೆ ವಿ ಆರ್ ಭಟ್ ಎಂಬ ಅವಿವೇಕಿ ಮಧ್ವರ ಹಾಗು ಮಾಧ್ವರ ಬಗೆಗೆ ಕೆಲವು ಸುಳ್ಳು ಆರೋಪಗಳನ್ನೂ ಮಾಡುತ್ತಿದ್ದು ಅವುಗಳಲ್ಲಿ ಯಾವುದೇ ಸತ್ಯಾಂಶ ಇರುವದಿಲ್ಲ . ಮಾಡಲು ಕಾರ್ಯವೇ ಇಲ್ಲದ ನಿರುದ್ಯೋಗಿ ಈ ವಿ ಆರ್ ಭಟ್ . ಪ್ರಚಾರ ಪ್ರಿಯ . ಅವನ ಮಾತುಗಳಿಗೆ , ಆರೋಪಗಳಿಗೆ , ಅಂಧಕಾರಕ್ಕೆ ಆ ದೇವರೇ ಬುದ್ಧಿ ನೀಡಬೇಕು . ಅವನ ಆರೋಪಗಳು ಸುಳ್ಳು , ಅಧಾರ ರಹಿತ ,  ರಹಿತ .  ಪೂರ್ವಗ್ರಹ ಪೀಡಿತ ಲೇಖನ ಅವರಿಂದ ಬಂದಿದೆ . ದಯವಿಟ್ಟು ಯಾರೂ ಅನ್ಯಥಾ ತಲೆ ಕೆಡಿಸಿಕೊಳ್ಳಬಾರದು . 

                                                                              - ಸಂಪಾದಕರು , 
                                                                              ಸಮೀರ ಜೋಷಿ 
                                                                              ದ್ವೈತದರ್ಶನ , http://www.dwaitadarshana.blogspot.in/
                                                          

Tuesday, 29 May 2012

PLEASE SEND YOUR OPINION ABOUT THIS BLOG . PLEASE EXPRESS YOUR FEELINGS TOWARDS THIS .

Sunday, 8 April 2012

ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ

 || श्री मन्मूल रामो विजयते ||

ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮಠ ಮಂತ್ರಾಲಯ ಮಠಾಧೀಶರಾಗಿದ್ದ , ನಡೆದಾಡುವ " ರಾಯರು " ಎಂದೇ ಖ್ಯಾತರಾಗಿದ್ದ , ಕಣ್ಣಿಗೆ ಕಾಣುವ ದೇವರೆಂದು ಪ್ರಸಿದ್ಧರಾಗಿದ್ದ ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. ಎಲ್ಲರು ಅವರ ಚರಮ ಶ್ಲೋಕವನ್ನು ಪಠಿಸಿ ಹರಿ-ವಾಯು-ರಾಘವೇಂದ್ರ-ಸುಶಮಿಂದ್ರ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ. 

ಸುಧೀಜನಸುಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ |

ಸುಶಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ |

सुधीजन सुमंदारं सुधींद्र सुतसुप्रियम् ।

सुशमींद्र गुरुं वंदे सुजयींद्र करोद्भवम् ॥

 

Sunday, 11 March 2012

ಶ್ರೀ ಶ್ರೀ ಶ್ರೀ ವ್ಯಾಸರಾಜ ತೀರ್ಥ ಶ್ರೀಪಾದಂಗಳವರ ಆರಾಧನ ಮಹೊತ್ಸವ

ಕನ್ನಡ ರಾಜ್ಯ ರಮಾರಮಣ , ವಿಜಯನಗರ ಸಾಮ್ರಾಟ್ ಶ್ರೀ ಕೃಷ್ಣ ದೇವರಾಯನ ರಾಜ ಗುರುಗಳಾಗಿ , ಈತನ ಕಷ್ಟವನ್ನು ಪರಿಹರಿಸಿ , ವಿಜಯನಗರ ಸಾಮ್ರಾಜ್ಯ ಸಂಪತ್ತಿನ ಉತ್ತುಂಗಕ್ಕೆ ಏರಲು ಕಾರಣರಾದ , ಶ್ರೀ ಪ್ರಹ್ಲಾದ ರಾಜರ ಎರಡನೇ ಅವತಾರ , ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಹಿಂದಿನ ಅವತಾರ , ದ್ವೈತ ಸಿದ್ಧಾಂತದ ಪ್ರಚಾರವನ್ನು ದೇಶದ ಮೂಲೆ ಮೂಲೆಯಲ್ಲಿಯೂ ಮಾಡಿದ , ದ್ವೈತ ಸಿದ್ಧಾಂತಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಿಕ ( ಗುರುಗಳಾದ )  ಪೀಠ ವಿರಾಜಮಾನರಾದ , ಕುಂಭಕೋಣ ವಾಸಿ ಶ್ರೀ ವಿಜಯೀಂದ್ರ ತೀರ್ಥರು ಹಾಗು ದ್ವೈತ ಸಿದ್ಧಾಂತದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಶ್ರೀ ಹಯಗ್ರೀವ ಪದಾಶ್ರಯ ಶ್ರೀ ವಾದಿರಾಜ ತೀರ್ಥರಂತಹ ಶಿಷ್ಯೋತ್ತಮರನ್ನು ಜಗತ್ತಿಗೆ ಕೊಟ್ಟ. ಜಗದ್ಗುರು  ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತ ಪ್ರತಿಷ್ಠಾಪಕರಾಗಿ ಶ್ರೀ ಮಧ್ವರ ವಿಶೇಷ ಅನುಗ್ರಹಕ್ಕೆ ಪಾತ್ರರಾದ , ಶ್ರೀ ಭೂವೈಕುಂಠ ವಾಸಿ ಶ್ರೀ ತಿರುಪತಿ ವೆಂಕಟೇಶ್ವರನನ್ನು ನಿರಂತರ ೧೨ ವರ್ಷ ಪೂಜಿಸಿದ ( ಇಂದಿಗೂ ಇವರ ಪೂಜಾ ಪದ್ಧತಿಯಂತೆಯೇ ಅಲ್ಲಿ ಪೂಜಾದಿಗಳು ನಡೆಯುತ್ತಿವೆ) ಶ್ರೀ ಶ್ರೀ ಶ್ರೀ ವ್ಯಾಸರಾಜ ತೀರ್ಥ ಶ್ರೀಪಾದಂಗಳವರ ಆರಾಧನ ಮೊಹೊತ್ಸವ .
                                            ಪ್ರಹ್ಲಾದ ರಾಜಾಯ ವಿದ್ಮಹೇ ವ್ಯಾಸರಾಜಾಯ ಧೀಮಹಿ |
                                            ತನ್ನೋ ರಾಘವೇಂದ್ರ ಪ್ರಚೋದಯಾ|| ತ ||  
                                            ಅರ್ಥೀ ಕಲ್ಪಿತ ಕಲ್ಪೋ ಯಮ್ ಪ್ರತ್ಯರ್ಥಿ ಗಜಕೇಸರಿ |
                                            ವ್ಯಾಸ ತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ|| 
                                               

Tuesday, 31 January 2012

ದಿ.೦೧-೦೨-೨೦೧೨ " ಮಧ್ವ ನವಮಿ" ಪ್ರಯುಕ್ತ ಚಿಕ್ಕ ಲೇಖನ

ಜಗದ್ಗುರು  ಶ್ರೀ ಮನ್  ಮಧ್ವಾಚಾರ್ಯರು ಲೋಕ ವಂದ್ಯರು
|| जगद्गुरु श्रीमन्मध्वाचार्य: ||  
ಸಾಕ್ಷಾತ್ ವಾಯುದೇವರ ಮೂರನೆ ಅವತಾರಪುರುಷರಾದ ಶ್ರೀ ಮಧ್ವಾಚಾರ್ಯರು ಆಗ ಬಹಳವಾಗಿ ನೆಲೆಯೂರಿದ್ದ 'ದುರ್ಮತ'ವನ್ನು ಖಂಡಿಸಿ,ಜಗತ್ಸತ್ಯ ವಾದ ದ್ವೈತ ವೇದಾಂತವನ್ನು ಪ್ರತಿಷ್ಠಾಪಿಸಿ ಸಜ್ಜನರನ್ನು ಸಲಹಿ, ಅವತಾರ ಕಾರ್ಯದ ನಂತರವೂ ನಮ್ಮನ್ನು ಸಲಹಲು ಸಾಕ್ಷಾತ್ ಶ್ರೀ ಕೃಷ್ಣನನ್ನೇ ತಂದು ಉಡುಪಿಯಲ್ಲಿ ಕುಡಿಸಿದ್ದಾರೆ. ಅದು ಇಂದಿಗೂ ಮಧ್ವರ ಭಕ್ತಿಯ ಪ್ರತೀಕ. ಕೇವಲ ೮ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ " ಶ್ರೀ ಪೂರ್ಣಪ್ರಜ್ಞ" ರೆನಿಸಿ,  ತಮ್ಮ ಅಪಾರವಾದ ಜ್ಞಾನಭಂಡಾರದಿಂದ ದುರ್ವಾದಿಗಳನ್ನೂ ಸದೆಬಡೆದು "ಆನಂದ ತೀರ್ಥ" ರೆನಿಸಿ , ತಮ್ಮ ಕೈಯಿಂದ ಅನೇಕ ಗ್ರಂಥರತ್ನಗಳನ್ನೂ ಬರೆದು "ಆಚಾರ್ಯ ಮಧ್ವ" ರೆನಿಸಿ, ಇಂದಿಗೂ ಅನೇಕ ಮಾಧ್ವರ ಆರಾಧ್ಯ ದೈವ. ಶ್ರೀ ಮದಾಚಾರ್ಯರು ಶ್ರೀ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸಿದರು. 'ನಮ್ಮ' ಶ್ರೀ ಮಧ್ವರು ಮೂರೂ ಬಾರಿ ಸಾಕ್ಷಾತ್ ವೇದವ್ಯಾಸದೇವರನ್ನು ಬದರಿಕಾಶ್ರಮದಲ್ಲಿ (ಉತ್ತರ ಬದರಿ- ಇಂದು ವಿಜ್ಞಾನ ಎಷ್ಟೇ ಮುಂದು ವರೆದಿದ್ದರು ಇಲ್ಲಿ ಹೋಗಲಾಗುವದಿಲ್ಲ)  ಶ್ರೀ ಮಧ್ವಾಚಾರ್ಯರು ಪರಮಾತ್ಮನನ್ನು ಸಂದರ್ಶಿಸಲು ಇಲ್ಲಿಗೆ ಹೋಗಿದ್ದರೆಂದು ಅದನ್ನು ಕಂಡ ಶ್ರೀ ಆಚಾರ್ಯರ ಶಿಷ್ಯ ಶ್ರೀ ಸತ್ಯ ತೀರ್ಥರು ತಾವು ಹೋಗಲು ಪ್ರಯತ್ನಿಸಿ ವಿಫಲರಾದರು ಎಂದು ಶ್ರೀ ನಾರಾಯಣ ಪಂದಿತಾಚಾರ್ಯರು 'ಸುಮಧ್ವ ವಿಜಯ'ದಲ್ಲಿ ತಿಳಿಸಿದ್ದಾರೆ. ಹೀಗೆ ಆಚಾರ್ಯರ ಸಾಹಸ,ಪಾಂಡಿತ್ಯ ಇವೆಲ್ಲದರ ಬಗ್ಗೆ ಹೇಳುತ್ತಾ ಹೊರಟರೆ ಮುಗಿಯುವದೇ ಇಲ್ಲ,ಅಂತಹ ವ್ಯಕ್ತಿತ್ವ ಶ್ರೀ ಮಧ್ವಾಚಾರ್ಯರದು  . ಆಚಾರ್ಯ ಮಧ್ವರು ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ, ಶ್ರೀ ಪದ್ಮನಾಭ ತೀರ್ಥ ಮೊದಲಾದ ೯ ಶಿಷ್ಯ ವರೆಣ್ಯರಿಗೆ "ಜಗತ್ಸತ್ಯ" ಸಿದ್ಧಾಂತದ ಪ್ರಚಾರ ಕಾರ್ಯ ಭಾರ  ಹೊರೆಸಿ ಮಾಘ ಶುದ್ಧ ನವಮಿಯಂದು  ಬದರಿಕಾಶ್ರಮಕ್ಕೆ ಹೊರಟರು. ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾದ ಶ್ರೀ ವಾಯು ದೇವರ ಅವತಾರ ಶ್ರೀ ಮಧ್ವಾಚಾರ್ಯರು ಇಂದಿಗೂ ಅಲ್ಲಿಯೇ ನಿಂತು ನಮ್ಮನ್ನು ಹರಿಸುತ್ತಿದ್ದಾರೆ. ಮಧ್ವರು ತಮ್ಮ ಅವತಾರ ಕಾಲದಲ್ಲಿ ಮೂರು ಬಾರಿ ಬದರಿಕಾಶ್ರಮಕ್ಕೆ ಸಂದರ್ಶನ ನೀಡಿ ಶ್ರೀ ವೇದವ್ಯಾಸ ದೇವರ ದರ್ಶನ ಪಡೆದು ಅವರ , ಸಾಕ್ಷಾತ್ ಶ್ರೀಹರಿಯ ಪ್ರೇರಣೆ ಯಂತೆಯೇ ಅವತಾರ ಕಾರ್ಯ ಮುಗಿಸಿದರು. ಶ್ರೀ ವೇದವ್ಯಾಸ ದೇವರ ಅನುಗ್ರಹದಿಂದ "ಸರ್ವಮೂಲ ಗ್ರಂಥ"ಗಳನ್ನೂ ರಚಿಸಿ ಇಂದಿಗೂ ಅವೇ ನಮ್ಮನ್ನು ಮಧ್ವರ ಸ್ವರೂಪಗಳಾಗಿ ರಕ್ಷಿಸುತ್ತಿವೆ . ಈ ಲೇಖನ ಶ್ರೀ ಮಧ್ವರ ಬಗೆಗಿನ ಅತೀ ಚಿಕ್ಕ ಪರಿಚಯ. 
                                                                              - ದ್ವೈತ ದರ್ಶನ 


JAGADGURU  SHREE MADHWACHARYA 

Hindu religion has produced several prominent saints and philosophers in the post era of Lord Sri Krishna, out of which three great spiritual personalities are in the forefront. They are Sri Sankaracharya who advocated Advaita Philosophy, Sri Ramaanujaachaarya who advocated Visishtaadvaita philosophy and Sri Madhwacharya who advocated Dvaita Philosophy. All the three are together known as the trinity of Aachaaryas. These three great Saints who have taken the glory of Hindu spirituality to new heights have left a marked influence on the Hindu religion with their doctrines.

Sri Madhwa Navami is associated with Sri Madhwacharya one of the greatest Hindu Saints and Philosophers who was the founder and exponent of Dvaita Philosophy. He was not only a great Saint and Philosopher; he was and is strongly believed and considered as the third incarnation of the Wind God (Lord Vayu) known as Mukhya Prana. Other two earlier in this lineage are Lord Hanuman in Treta Yuga and Sri Bheemasena in Dwapara Yuga. It is said that Sri Madhvacharya during his life time had openly identified himself as an incarnation of Lord Vayu which was evidenced by several miracles performed by him right from his childhood days.

Sri Madhvacharya known as Vasudeva during his childhood was born around 800 years back in a small village presently known as Pajaka Kshetra about 10 km from the temple town of Udupi near Mangalore in Karnataka State. He was born in a family of Shivalli Brahmins and was the son of Madhyageha Bhatta. Born in 1238 AD Sri Madhvacharya lived for 79 years and left this world on the 9th day of bright fortnight (Navami thithi) in the lunar month Magha Masam that falls two days after the Ratha Sapthami festival.

A child prodigy, with divine qualities, Sri Madhvacharya was well known for his authority, knowledge and extempore oratory skills, on the subject. During his period he had defeated many of his opponents with his authenticated arguments. Robust in physique and health Sri Madhvacharya was a multifaceted personality also known for his mystic powers. At the age of twelve Sri Madhvacharya left his home to become an ascetic and took up the Sanyasa Deeksha under the guidance of Sri Achyuta Preksha Theertha his Sanyasa Guru. He was named as Poornapragna after attaining Sanyasa Deeksha. Very soon he became the head of the Mutt and came to be known as Ananda Theertha and later as Madhvacharya by which name he became very popular.

During his life Sri Madhvacharya wrote explanatory notes (commentaries) on Upanishads, Bhagavat Geeta, Brahma Sutras, Mahabharata and Bhagavatha Purana besides scripting several other original works on his doctrines. SuMadhva Vijaya a biography of Sri Ananda Theertha written by Sri Narayana Panditacharya son of Sri Trivikrama Panditacharya eulogized the glory of Sri Madhvacharya and his accomplishments which is said to have been composed during Sri Madhvacharya’s life time itself. Sri Vayu Sthuthi composed by Sri Trivikrama Panditacharya is a very popular script on Lord Hanuman whose lineage is Sri Madhvacharya.

Sri Madhvacharya was instrumental in establishing the famous temple of Lord Sri Krishna at Udupi and installed the idol of Sri Bala Krishna that was said to have been worshipped by Rukmini Devi the prime consort of Lord Sri Krishna during Dwapara Yuga. At the time of installation Sri Madhvacharya spontaneously composed a prayer in glory of Lord Sri Krishna that became popular as Dwaadasanama Sthothram. Procuring of the idol was a miracle and forethought of Sri Madhvacharya. Not only he installed the idol of Lord Sri Krishna but also appointed eight of his prime disciples to take forward his legacies and to have continuity to the worship of the Lord by rotation. Even today this practice of rotation of worshiping and administering the Sri Krishna Mutt at Udupi known as Paryaya is in vogue that takes place once in two years.

These eight prime disciples appointed by Sri Madhvacharya were, Sri Hrishikesha Theertha, Sri Narasimha Theertha, Sri Janardhana Theertha, Sri Upendra Theertha, Sri Vamana Theertha, Sri Vishnu Theertha, Sri Rama Theertha and Sri Adhokshaja Theertha. These eight Pontiffs later established their own mutts called as Ashta Matas of Udupi. These eight mutts are named after the surrounding villages where they originally resided. These Mutts are Palimar Mutt, Adamaru Mutt, Krishnapura Mutt, Puttige Mutt, Shirur Mutt, Sode Mutt, Kaniyoor Mutt, and Pejavara Mutt. Apart from the above Sri Padmanabha Theertha and Sri Narahari Theertha were also his prime disciples.

In the post era of Sri Madhvacharya several great, noble and divine Saints have descended and established several mutts across the country propagating the Tattvavada, the doctrine of Sri Madhvacharya. To name a few are Sri Madhava Theertharu, Sri Akshobhya Theertharu, Sri Jaya Theertharu (Teeka Rayaru), Sri SriPaada Rayaru, Sri Vyasa Rayaru, Sri Vadi Raja Theertharu, Sri Raghottama Theertharu, Sri Raghavendra Theertharu (Mantralaya Guru Sarvabhouma). Madhva Mutts established by these saints are Sri Raghavendra Swamy Mutt at Mantralayam, Sri Uttaradhi Mutt and Sri Vyasaraya Mutt, to name a few.

Though Aacharya Sri Madhwa is to be revered and worshipped everyday, two specific days are earmarked in Hindu Lunar calendar for his specific worship. They are, Sri Madhwa Jayanthi falling on Vijayadasami day in the month of Aaswayuja Masam that is said to be the day on which he was born. The other is Sri Madhva Navami falling on the 9th day of Lunar month of Magha Masam during the bright fortnight. It is said that it was on this day in the year 1317 AD, Sri Madhvacharya while teaching his disciples at Udupi Sri Anantheshwara Temple, suddenly a heap of flowers were showered on him and he disappeared from that heap of flowers not to be seen later. It is considered as the day he entered the Badarikasrama. It is strongly believed among his followers that Sri Madhvacharya is still present even today in Northern Himalayas (Greater Badari) continuing his spiritual pursuit with Sage Sri Vedavyasa but beyond ordinary vision.

Special celebrations are held across the country on the eve of Sri Madhva Navami at all the Madhva related temples and mutts participated by large gathering of Madhva followers.

To learn, to understand and to write about Sri Madhvacharya, perhaps one life time is not adequate.

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...